ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಝಿರೋ ಚಿತ್ರದ ನಂತರ ಒಮ್ಮೆಲೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡರು. ಬಳಿಕ ಅವರ ಬಹುನಿರೀಕ್ಷಿತ ‘ಪಠಾಣ್‘ (Pathaan) ಇನ್ನೇನು ತೆರೆಕಾಣಲು ಸಿದ್ಧಗೊಳ್ಳುತ್ತಿದೆ. ಇದರ ನಡುವೆ ಶಾರುಖ್ ಅಭಿಮಾನಿಗಳಿಗೆ ಸಂತಸ ನೀಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು, ಶಾರುಖ್ ಅವರ ಮುಂದಿನ ಚಿತ್ರದ ಕುರಿತು ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲೀ (Atlee) ಅವರ ನಿರ್ದೇಶನದಲ್ಲಿ ಶಾರುಖ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ಇದೀಗ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದುದ್ದು, ಈ ಬಾರಿ ಬಾಲಿವುಡ್ ಬಾದ್ಶಾ ‘ಜವಾನ್ ‘ (Jawan) ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಟೀಸರ್ ಸಹ ರಿಲೀಸ್ ಆಗಿದೆ.
‘ಜವಾನ್‘ ಅವತಾರ ತಾಳಿದ ಬಾಲಿವುಡ್ ಕಿಂಗ್ ಖಾನ್:
ರೆಡ್ ಚಿಲ್ಲಿ ಎಂಟರ್ ಟೈನ್ಮೆಂಟ್ ನಿರ್ಮಾಣದಲ್ಲಿ ‘ಜವಾನ್‘ ಚಿತ್ರ ಸೆಟ್ಟೇರಿದ್ದು, ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್ ಅಟ್ಲೀ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸ್ಟಾರ್ ಜೋಡಿಯಲ್ಲಿ ಚಿತ್ರ ಮೂಡಿಬರುತ್ತಿರುವುದಕ್ಕೆ ಈಗಾಗಲೇ ಸಿನಿಮಾದ ಮೇಲೆ ಸಖತ್ ಕ್ರೇಜ್ ಉಂಟಾಗಿದೆ. ಇದಲ್ಲದೇ ಇದೇ ಮೊದಲ ಬಾರಿಗೆ ಜವಾನ್ ಚಿತ್ರದ ಮೂಲಕ ಶಾರುಖ್ ಖಾನ್ ಫ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಟಯಟಲ್ ಟೀಸರ್ ಬಿಡುಗಡೆಯಾಗಿದ್ದು, ಶಾರುಖ್ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಅಟ್ಲೀ ನಿರ್ದೇಶನದ ಮೇಳೆ ಹೆಚ್ಚಿನ ನಿರೀಕ್ಷೆ:
ರಾಜಾ ರಾಣಿ, ತೇರಿ, ಮೆರ್ಸೆಲ್, ಬಿಗಿಲ್ ಸಿನಿಮಾಗಳ ಮೂಲಕವೇ ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿರುವ ನಿರ್ದೇಶಕ ಅಟ್ಲೀ, ಇದೀಗ ಬಾಲಿವುಡ್ಗೂ ಕಾಲಿಟ್ಟದ್ದಾರೆ. ಇನ್ನು, ಅಟ್ಲಿ ಸಿನಿಮಾ ಅಂದರೆ ಅಲ್ಲಿ ಕಮರ್ಷಿಯಲ್ ಅಂಶಗಳೇ ಹೈಲೈಟ್ ಆಗಿರುತ್ತದೆ. ಈವರೆಗೆ ಬಾಲಿವುಡ್ಗೆ ಮಾತ್ರ ಸೀಮಿತವಾಗಿದ್ದ ಕಿಂಗ್ ಖಾನ್ ಈ ಚಿತ್ರದ ಮೂಲಕ ಫ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ.
ರಗಡ್ ಲುಕ್ ನಲ್ಲಿ ಶಾರುಖ್:
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೈಟಲ್ ಟೀಸರ್ ಎಲ್ಲಡೆ ಸಂಚಲನ ಮೂಡಿಸಿದೆ. ಟೀಟರ್ ನಲ್ಲಿ ಕಿಂಗ್ ಖಾನ್ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಮುಖಕ್ಕೆ ಗೋಣಿ ಚೀಲವನ್ನು ಮುಖಕ್ಕೆ ಸುತ್ತಿಕೊಂಡಿದ್ದಾರೆ. ಅಲ್ಲದೇ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರಲಿದ್ದು, ಶಾರುಖ್ ಖಾನ್ ಅವರಿಗೆ ಬಿಗ್ ಬ್ರೇಕ್ ತಂದುಕೊಡಬಹುದೆಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಟೀಸರ್ ಮೂಲಕ ಶಾರುಖ್ ಓರ್ವ ಯೋಧನ ಪಾತ್ರದಲ್ಲಿ ಅಥವಾ ಡಾನ್ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ.
ಫ್ಯಾನ್ ಇಂಡಿಯಾ ಚಿತ್ರದಲ್ಲಿ ಶಾರುಖ್:
ಇನ್ನು, ಜವಾನ್ ಚಿತ್ರದ ಮೂಲಕ ಶಾರುಖ್ ಖಾನ್ ಅವರು ಫ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ. ಚಿತ್ರವು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಈ ಮೂಲಕ ಬಾಲಿವುಡ್ ನ ಮೊದಲ ಸ್ಟಾರ್ ನಟರೊಬ್ಬರು ಫ್ಯಾನ್ ಇಂಡಿಯಾ ಸಿನಿಮಾ ಮಾಡಿದಂತಾಗುತ್ತದೆ.
ಇದನ್ನೂ ಓದಿ: Mannat House: ಈ ಒಂದೇ ಕಾರಣಕ್ಕೆ ಶಾರುಖ್ ಖಾನ್ಗೆ ‘ಮನ್ನತ್’ ಬಂಗಲೆಯ ಡಿಸೈನ್ ಬಗ್ಗೆ ಹೆಚ್ಚು ಕಾಳಜಿಯಂತೆ
2023ರ ಜೂನ್ 2ಕ್ಕೆ ಚಿತ್ರ ಬಿಡುಗಡೆ:
ಸದ್ಯ ಪಠಾಣ್ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಶಾರುಖ್ ಖಾನ್. ಇದರ ನಡುವೆ ಜವಾನ್ ಚಿತ್ರದ ಕೆಲಸದಲ್ಲಿಯೂ ಬಾಗಿಯಾಗಿದ್ದಾರೆ. ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕವನ್ನೂ ಘೋಷಿಸಿದೆ. 2023ರ ಜೂನ್ 2ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ಸಧ್ಯ ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಚಿತ್ರವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ