ಆ ಹಳ್ಳಿ ಹುಡುಗನಿಗಾಗಿ ಬಾಲಿವುಡ್ ಸೆಲೆಬ್ರಿಟಿಗಳ ಹುಡುಕಾಟ; ಅಷ್ಟಕ್ಕೂ ಕಾರಣವೇನು?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಆತ್ಮಹತ್ಯೆ ಪ್ರಕರಣ, ಚಿತ್ರರಂಗಕ್ಕೆ ಕಪ್ಪುಚುಕ್ಕೆಯಂತಾಗಿದೆ. ಸ್ವಜನಪಕ್ಷಪಾತದಿಂದಾಗಿ ಅರ್ಥಾತ್ ನೆಪೋಟಿಸ್ಮ್ನಿಂದಾಗಿ ಬಾಲಿವುಡ್ನಲ್ಲಿ ಹೊಸಬರಿಗೆ ಎಂಟ್ರಿಯೇ ಇಲ್ಲದಂತಾಗಿದೆ. ಪ್ರಾರಂಭದಲ್ಲಿ ಸುಶಾಂತ್ ಸಿಂಗ್​ಗೆ ಬಂದಿದ್ದ 7 ಅವಕಾಶಗಳನ್ನು ನಿರ್ದೇಶಕರು, ನಿರ್ಮಾಪಕರು ತಮ್ಮ ಸಂಬಂಧಿಗಳು, ಗೆಳೆಯರ ಮಕ್ಕಳಿಗೆ ನೀಡಿದ್ದೇ ಅವರ ಆತ್ಮಹತ್ಯೆಗೆ ಕಾರಣ ಎಂಬ ಆರೋಪಗಳೂ ಕೇಳಿಬಂದಿವೆ. ಅದರ ಬೆನ್ನಲ್ಲೇ ಬಿಟೌನ್ ಸ್ಟಾರ್ಸ್ ಹೊಸ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

news18-kannada
Updated:June 30, 2020, 8:41 AM IST
ಆ ಹಳ್ಳಿ ಹುಡುಗನಿಗಾಗಿ ಬಾಲಿವುಡ್ ಸೆಲೆಬ್ರಿಟಿಗಳ ಹುಡುಕಾಟ; ಅಷ್ಟಕ್ಕೂ ಕಾರಣವೇನು?
ಡಾನ್ಸ್​ ಮಾಡಿದ ಹುಡುಗ
  • Share this:
ಇದಕ್ಕೆ ಉತ್ತಮ ಉದಾಹರಣೆ ಜಾರ್ಖಂಡ್​​ನ ರಾಂಚಿಯ ಪುಟ್ಟ ಬಾಲಕ ಆಕಾಶ್. ಹೌದು, ಕೇವಲ 8 ವರ್ಷದ ಪುಟಾಣಿ ಆಕಾಶ್ ಇವತ್ತು ಬಾಲಿವುಡ್​ಗೆ ಬಾಲಿವುಡ್ಡೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಆತನ ತಂದೆ ಕ್ಷೌರಿಕರಾಗಿದ್ದು, ರಾಂಚಿಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಾರೆ. ಆಕಾಶ್ ಅವರದು ಬಡ ಕುಟುಂಬವಾಗಿದ್ದು ಈಗಲೂ ಮಣ್ಣಿನ ಮನೆಯಲ್ಲೇ ವಾಸ ಮಾಡುತ್ತಿದ್ದಾರೆ. ಇಂತಹ ಆಕಾಶ್​ಗಾಗಿ ಬರೋಬ್ಬರಿ ಮೂರು ದಿನಗಳ ಕಾಲ ಬಿಟೌನ್​​ನ ಘಟಾನುಘಟಿ ದಿಗ್ಗಜರೂ ಹುಡುಕಾಟ ನಡೆಸಿದ್ದರು ಅಂದರೆ ನಂಬಲೇಬೇಕು. ಅದಕ್ಕೆ ಕಾರಣ, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಆಕಾಶ್ ಡ್ಯಾನ್ಸ್ ಮಾಡುತ್ತಿರುವ ಎರಡು ನಿಮಿಷಗಳ ವಿಡಿಯೋ.

ಇಷ್ಟು ಸಣ್ಣ ವಯಸ್ಸಿಗೇ ತಾಳಕ್ಕೆ ತಕ್ಕಂತೆ, ಹಲವು ವರ್ಷಗಳ ತರಬೇತಿ ಪಡೆದರೂ ಸರಿಯಾಗಿ ಮಾಡಲಾಗದ ಕಷ್ಟಕರ ಸ್ಟೆಪ್​ಗಳನ್ನು, ಸ್ಟಂಟ್​ಗಳನ್ನು ಕೇವಲ 8 ವರ್ಷದ ಆಕಾಶ್ ಲೀಲಾಜಾಲವಾಗಿ ಮಾಡಿದ್ದ. ಬಾಲಿವುಡ್​ನ ಬೆಸ್ಟ್ ಡ್ಯಾನ್ಸರ್​ಗಳಲ್ಲಿ ಒಬ್ಬರಾದ ಹಿರಿಯ ನಟ ಗೋವಿಂದಾ ಅವರ ಫ್ಯಾನ್ ಆಗಿರುವ ಆಕಾಶ್, ಅವರಂತೆಯೇ ಎಕ್ಸ್ಪ್ರೆಷನ್ಸ್ ಕೂಡ ಕೊಡುತ್ತಾನೆ. ಈ ವಿಡಿಯೋ ಶೇರ್ ಮಾಡಿದ್ದ ಬಾಲಿವುಡ್​ನ ಖ್ಯಾತ ಚಿತ್ರಸಾಹಿತಿ ಮನೋಜ್ ಮುಂಟಶಿರ್.ಈ ಹುಡುಗ ಎಲ್ಲಿನವನು ಹುಡುಕಿಕೊಡಿ. ಆತನ ಶಿಕ್ಷಣ ಹಾಗೂ ನೃತ್ಯತರಬೇತಿಯ ಸಂಪೂರ್ಣ ಖರ್ಚನ್ನು ನಾನು ಭರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದು, 18 ಲಕ್ಷ ಬಾರಿ ವೀಕ್ಷಣೆಯಾಗಿತ್ತು.ಭಾರತದಾದ್ಯಂತ ಈ ಹುಡುಗನಿಗಾಗಿ ಸೋಷಿಯಲ್ ಮೀಡಿಯಾ ಮಂದಿ ಹುಡುಕಾಡತೊಡಗಿದರು.ಜತೆಗೆ ಆಕಾಶ್ ಡ್ಯಾನ್ಸ್ ಮಾಡುತ್ತಿರುವ ಇದೇ ವಿಡಿಯೋವನ್ನು ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ ಕೂಡ ಶೇರ್ ಮಾಡಿದ್ದರು. ತಾವೂ ಕೂಡ ಈ ಹುಡುಗನ ಸಂಪೂರ್ಣ ಖರ್ಚು ಭರಿಸುವುದಾಗಿ ಭರವಸೆ ನೀಡಿದ್ದರು. ಅದಾದ ಕೆಲವೇ ತಾಸುಗಳಲ್ಲಿ ಕೆಜಿಎಫ್ 2 ಚಿತ್ರದಲ್ಲಿ ನಟಿಸುತ್ತಿರುವ ಮಸ್ತ್ ಮಸ್ತ್ ಹುಡುಗಿ ಬಾಲಿವುಡ್​ನ ಮಾದಕ ಬ್ಯೂಟಿ ರವೀನಾ ಟಂಡನ್ ಕೂಡ ಆಕಾಶ್ ವಿಡಿಯೋ ಶೇರ್ ಮಾಡಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಹೀಗೆ ಬಾಲಿವುಡ್ ಮಂದಿ ನಾ ಮುಂದು ತಾ ಮುಂದು ಅಂತ ಆಕಾಶ್ ಬೆಂಬಲಕ್ಕೆ ನಿಂತರು. ಕೊನೆಗೆ ಮನೋಜ್ ಮುಂಟಶಿರ್ಗೆ ಆಕಾಶ್ ಸಿಕ್ಕಿದ್ದು, ದೂರವಾಣಿ ಕರೆಯ ಮೂಲಕ ಮಾತನಾಡಿದ್ದಾರೆ.


ಮನೋಜ್ ಅವರು ಆಕಾಶ್​ಗೆ ಮುಂಬೈಗೆ ಬರುವಂತೆ ಆಮಂತ್ರಿಸಿದ್ದು, ಅದಕ್ಕೆ ಆತ ಸದ್ಯ ಊರಿನಲ್ಲಿ ತನ್ನ ಟೀಚರ್ ಬಳಿಯೇ ತರಬೇತಿ ಪಡೆಯವುದುಗಾಗಿ ತಿಳಿಸಿದ್ದಾನೆ. ಹೀಗಾಗಿಯೇ ಊರಿನಲ್ಲೇ ಆತನ ಶಿಕ್ಷಣ ಹಾಗೂ ತರಬೇತಿಯ ಖರ್ಚನ್ನು ಭರಿಸುವುದಾಗಿ ಮನೋಜ್ ಆಕಾಶ್ ಪೋಷಕರ ಬಳಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಒಂದು ಒಬ್ಬ ಬಡ ಬಾಲಕನ ಭವಿಷ್ಯವನ್ನೇ ಬದಲಿಸಿದೆ.

First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading