Tere Bina: ಲಾಕ್​ಡೌನ್​ನಲ್ಲಿ ಸಲ್ಮಾನ್​​-ಜಾಕ್ವೆಲಿನ್​ ರೊಮಾನ್ಸ್: ವಿಡಿಯೋ ವೈರಲ್​..!

Salman Khan and Jacqueline Fernandez: ​ಈಗ ಜಾಕ್ವೆಲಿನ್ ಫರ್ನಾಂಡಿಸ್​​ ಹಾಗೂ ಸಲ್ಮಾನ್​ ಖಾನ್​ರ ರೊಮ್ಯಾಂಟಿಕ್​ ವಿಡಿಯೋ ಒಂದು ಹರಿದಾಡುತ್ತಿದೆ. ಲಾಕ್​ಡೌನ್​ನಲ್ಲಿ ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ. ಅಷ್ಟಕ್ಕು ಏನದು ರೊಮ್ಯಾಂಟಿಕ್​ ವಿಡಿಯೋ ಅಂತೀರಾ..?

Anitha E | news18-kannada
Updated:May 12, 2020, 9:24 PM IST
Tere Bina: ಲಾಕ್​ಡೌನ್​ನಲ್ಲಿ ಸಲ್ಮಾನ್​​-ಜಾಕ್ವೆಲಿನ್​ ರೊಮಾನ್ಸ್: ವಿಡಿಯೋ ವೈರಲ್​..!
ಸಲ್ಮಾನ್​ ಖಾನ್​ ಹಾಗೂ ಜಾಕ್ವೆಲಿನ್​
  • Share this:
ಸಲ್ಮಾನ್​ ಹಾಗೂ ಜಾಕ್ವೆಲಿನ್​ ಸದ್ಯ ಪನ್ವೇಲ್​ ತೋಟದ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಲಾಕ್​ಡೌನ್​ ಆದಾಗಿನಿಂದ ಸಲ್ಮಾನ್​ ಖಾನ್​ ಪನ್ವೇಲ್​ನಲ್ಲೇ ಇದ್ದಾರೆ. ಸಲ್ಮಾನ್​ ಜೊತೆ ಅವರ ಕುಟುಂಬದವರು, ಜಾಕ್ವೆಲಿನ್ ಫರ್ನಾಂಡಿಸ್​ ಹಾಗೂ ಅವರ ಸ್ನೇಹಿತರೂ ಇದ್ದಾರೆ.

ಈ ಹಿಂದೆ ಪನ್ವೇಲ್​ನಲ್ಲಿರುವ ತೋಟದ ಮನೆಯಲ್ಲೇ ಜಾಕ್ವೆಲಿನ್ ಅವರ ಫೋಟೋಶೂಟ್ ಸಹ ಆಗಿತ್ತು. ಖ್ಯಾತ ಬಜಾರ್ ನಿಯತಕಾಲಿಕೆಯ ಮುಖಪುಟಕ್ಕಾಗಿ ಜಾಕ್ವೆಲಿನ್​​ಗಾಗಿ ಅಲ್ಲಿಂದಲೇ ಸಲ್ಮಾನ್​ ಖಾನ್​ರ ಕುದುರೆ ಜೊತೆ ಪೋಸ್​ ಕೊಟ್ಟಿದ್ದರು.

Jacqueline Fernandez Shoots for Magazine Cover at Salman Khans Farmhouse
ಬಜಾರ್​ ನಿಯತಕಾಲಿಕೆಯ ಮುಖಪುಟದ ಫೋಟೋಶೂಟ್


 

​ಈಗ ಜಾಕ್ವೆಲಿನ್ ಫರ್ನಾಂಡಿಸ್​​ ಹಾಗೂ ಸಲ್ಮಾನ್​ ಖಾನ್​ರ ರೊಮ್ಯಾಂಟಿಕ್​ ವಿಡಿಯೋ ಒಂದು ಹರಿದಾಡುತ್ತಿದೆ. ಲಾಕ್​ಡೌನ್​ನಲ್ಲಿ ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ. ಅಷ್ಟಕ್ಕು ಏನದು ರೊಮ್ಯಾಂಟಿಕ್​ ವಿಡಿಯೋ ಅಂತೀರಾ..? ಅದು ತೇರೆ ಬಿನಾ ಹಾಡು.....! ಲಾಕ್​ಡೌನ್​ನಲ್ಲೇ ಈ ಹಾಡನ್ನು ರಿಲೀಸ್ ಮಾಡಲಾಗಿದೆ.



ಸಲ್ಮಾನ್​ ಹಾಗೂ ಜಾಕ್ವೆಲಿನ್​​​ ನಟಿಸಿರು ಈ ರೊಮ್ಯಾಂಟಿಕ್​ ಟ್ರ್ಯಾಕ್​ ತೇರೆ ಬಿನಾ ಹಾಡನ್ನು ಸಲ್ಲು ಸ್ನೇಹಿತರೇ ಬರೆದಿದ್ದಾರಂತೆ. ಈ ಹಾಡು ಯಾವ ಸಿನಿಮಾದಲ್ಲೂ ಫಿಟ್ ಆಗದ ಕಾರಣದಿಂದ ಇದನ್ನು ಹೀಗೆ ಚಿತ್ರೀಕರಿಸಲಾಗಿದೆಯಂತೆ.ಇದನ್ನೂ ಓದಿ: ಲಾಕ್​ಡೌನ್​ನಲ್ಲೇ ಕುಟುಂಬದೊಂದಿಗೆ ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನ್​..!

ಈ ಹಾಡಿನಲ್ಲಿ ಜಾಕಿ​ ಹಾಗೂ ಸಲ್ಮಾನ್​ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಸಲ್ಮಾನ್​ ಖಾನ್​ ಹಾಡಿರುವ ಈ ಹಾಡನ್ನು ಕೇವಲ ನಾಲ್ಕು ದಿನಗಳಲ್ಲಿ ಕಡಿಮೆ ಉಪಕರಣಗಳನ್ನು ಬಳಸಿ ಶೂಟ್​ ಮಾಡಲಾಗಿದೆಯಂತೆ. ಇದನ್ನು ಕೇವಲ ಯೂಟ್ಯೂಬ್​ನಲ್ಲಿ ಮಾತ್ರ ರಿಲೀಸ್​ ಮಾಡಲಾಗಿದೆ.

 Rana Daggubati-Miheeka Bajaj: ರಾಣಾ ದಗ್ಗುಬಾಟಿಯನ್ನು ವರಿಸಲಿರುವ ಹುಡುಗಿ ಇವರೇ ..!
First published: May 12, 2020, 9:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading