ದೀಪಿಕಾ-ರಣವೀರ್​ ಇನ್ನೂ ಒಂದು ವರ್ಷ ಇರಬೇಕು ದೂರ-ದೂರ..!

ಈಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನವ ದಂಪತಿ ದೀಪ್​ವೀರ್​ಗೆ ವಿರಹ ವೇದನೆ ತಪ್ಪಿದ್ದಲ್ಲ. ಅದರಲ್ಲೂ ಇವರಿಬ್ಬರೂ ಇನ್ನೂ ಒಂದು ವರ್ಷ ಜತೆಯಲ್ಲಿ ಇರುವ ಹಾಗೆ ಇಲ್ಲವಂತೆ...

Anitha E | news18
Updated:January 6, 2019, 12:56 PM IST
ದೀಪಿಕಾ-ರಣವೀರ್​ ಇನ್ನೂ ಒಂದು ವರ್ಷ ಇರಬೇಕು ದೂರ-ದೂರ..!
ಸಾಮಾನ್ಯವಾಗಿ ಜೀವನದಲ್ಲೂ ಎಲ್ಲರೂ ಒಂದೊಂದಕ್ಕೆ ವ್ಯಸನಕ್ಕೊಳಗಾಗಿರುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ.
  • News18
  • Last Updated: January 6, 2019, 12:56 PM IST
  • Share this:
ಪ್ರೀತಿಸಿ ಇತ್ತೀಚೆಗೆಷ್ಟೆ ಮದುವೆಯಾದ ಬಾಲಿವುಡ್​ ಸೆಲೆಬ್ರಿಟಿ ಜೋಡಿ ದೀಪಿಕಾ-ರಣವೀರ್​ಗೆ ಇನ್ನೂ ಒಂದು ವರ್ಷ ವಿರಹ ವೇದನೆ ತಪ್ಪಿದ್ದಲ್ಲ. ಹೌದು ಅವರು ಇನ್ನೂ ಒಂದು ವರ್ಷ ದೂರ-ದೂರವೇ ಇರಬೇಕಂತೆ. ಅದು ಏಕಂತೀರಾ ಈ ವರದಿ ಓದಿ...

ಇದನ್ನೂ ಓದಿ: ಹಾಲಿವುಡ್​ ಸ್ಟಾರ್​ಗಳನ್ನೇ ಹಿಂದಿಕ್ಕಿ 2018ರ 'ಮೋಸ್ಟ್​ ಹ್ಯಾಂಡ್​ಸಮ್​ ಹೀರೋ' ಪಟ್ಟ ಗಿಟ್ಟಿಸಿಕೊಂಡ ಹೃತಿಕ್​ ರೋಷನ್​..!

ತೆರೆ ಮೇಲೆ ರೊಮ್ಯಾನ್ಸ್​ ಮಾಡುತ್ತಿದ್ದ ಈ ಜೋಡಿ, ಇನ್ನು ಅವರ ಹಳೇ ಸಿನಿಮಾಗಳನ್ನು ನೋಡಿಯೇ ತೃಪ್ತಿ ಪಟ್ಟುಕೊಳ್ಳಬೇಕಿದೆ. ಹೌದು, ವಿವಾಹವಾಗಿ ಒಂದೇ ಮನೆಯಲ್ಲಿರುವ ಈ ಪ್ರಣಯದ ಹಕ್ಕಿಗಳು ತೆರೆ ಮೇಲೆ ಮತ್ತೆ ರೊಮ್ಯಾನ್ಸ್​ ಮಾಡೋಕೆ ಒಂದು ವರ್ಷ ಕಾಯಬೇಕಿದೆ.

ಹೀಗೆಂದು ಖುದ್ದು ರಣವೀರ್​ ಸಿಂಗ್​ ಹೇಳಿದ್ದಾರೆ. ಹೌದು ಆನ್​ಸ್ಕ್ರೀನ್​ ಹಿಟ್​ ರೊಮ್ಯಾಂಟಿಕ್​ ಜೋಡಿಯಾಗಿರುವ ದೀಪ್​ವೀರ್​ ಇನ್ನೂ ಒಂದು ವರ್ಷದವರೆಗೆ ಜೊತೆಯಲ್ಲಿ ನಟಿಸುವುದಿಲ್ಲವಂತೆ. ಈ ವರ್ಷದಲ್ಲಿ ಯಾವುದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲು ಈ ಜೋಡಿ ಸಹಿ ಹಾಕಿಲ್ಲವಂತೆ.

ಇದನ್ನೂ ಓದಿ: 'ಅನಂತು V/S​ ನುಸ್ರತ್'​ ಚಿತ್ರಕ್ಕೂ ತಟ್ಟಿದ ಐಟಿ​ ದಾಳಿಯ ಬಿಸಿ

'ಯಾರಾದರೂ ಸಿನಿಮಾ ನಿರ್ಮಾಪಕರು ಒಳ್ಳೆಯ ಕತೆಯೊಂದಿಗೆ ನಮ್ಮೊಂದಿಗೆ ಸಿನಿಮಾ ಮಾಡಲು ಬಂದರೆ ಸಾಕು. ದೀಪಿಕಾ ಜತೆ ಅಭಿನಯಿಸಲು ಕಾತುರನಾಗಿದ್ದೇನೆ' ಎಂದಿದ್ದಾರೆ ರಣವೀರ್ ಸಿಂಗ್​.

First published: January 6, 2019, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading