'ಸಂಜು' ಸಿನಿಮಾದ ಅಬ್ಬರಕ್ಕೆ 'ಬಾಹುಬಲಿ-2' ದಾಖಲೆ ಧೂಳಿಪಟ

news18
Updated:July 3, 2018, 7:55 PM IST
'ಸಂಜು' ಸಿನಿಮಾದ ಅಬ್ಬರಕ್ಕೆ 'ಬಾಹುಬಲಿ-2' ದಾಖಲೆ ಧೂಳಿಪಟ
news18
Updated: July 3, 2018, 7:55 PM IST
ಖ್ಯಾತ ನಿರ್ದೇಶಕ ರಾಜ್​ ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಚಿತ್ರ ಹೊಸ ಇತಿಹಾಸ ನಿರ್ಮಿಸಿದೆ.  ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ 'ಸಂಜು' ಇದೀಗ 'ಬಾಹುಬಲಿ-2' ಚಿತ್ರದ ದಾಖಲೆಯನ್ನು ಮುರಿದು ಬಾಕ್ಸಾಫೀಸ್​ನಲ್ಲಿ ಮುನ್ನುಗ್ಗುತ್ತಿದೆ.

ಬಿಡುಗಡೆಯಾದ ಮೊದಲ ದಿನವೇ 35 ಕೋಟಿ ಕಲೆಕ್ಷನ್ ಮಾಡಿದ ರಣಬೀರ್ ಕಪೂರ್ ಅಭಿನಯದ ಈ ಚಿತ್ರವು ಕೇವಲ 3 ದಿನಗಳಲ್ಲಿ 120 ಕೋಟಿಗಳಿಸಿತ್ತು. ಈ ಮೂಲಕ ಮೊದಲ ವಾರಲ್ಲಿ 106.47 ಕೋಟಿ ಗಳಿಸಿದ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ರೇಸ್​-3 ಚಿತ್ರದ ದಾಖಲೆಯನ್ನು ಧೂಳಿಪಟ ಮಾಡಿತ್ತು.

ನಟ ಸಂಜಯ್ ದತ್ ಜೀವನದ ಏರಿಳಿತವನ್ನು ತಿಳಿಸುವ ಸಂಜು ಸಿನಿಮಾದ ನಾಲ್ಕನೇ ದಿನದ ಕಲೆಕ್ಷನ್ ಬಾಲಿವುಡ್​​ನ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಇತಿಹಾಸ ಸೇರುವಂತೆ ಕಾಣುತ್ತಿದೆ.


Loading...

ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಹಿಂದಿ ಅವರತಣಿಕೆ ಒಂದು ದಿನದಲ್ಲಿ 46.50 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತ್ತು. ಆದರೆ, ಭಾನುವಾರ 'ಸಂಜು' ಚಿತ್ರ 46.71 ಕೋಟಿ ಗಳಿಸಿ 'ಬಾಹುಬಲಿ 2' ಸಿನಿಮಾದ ದಾಖಲೆಯನ್ನು ಅಳಿಸಿ ಹಾಕಿದೆ.  ಚಿತ್ರದ ಒಟ್ಟಾರೆ ಕಲೆಕ್ಷನ್ 145.41 ಕೋಟಿ ದಾಟಿದ್ದು, ಶೀಘ್ರದಲ್ಲೇ ಬಾಲಿವುಡ್​ ಚಿತ್ರರಂಗದಲ್ಲಿ 'ಸಂಜು' ಸಿನಿಮಾ ಹಲವಾರು ಹೊಸ ದಾಖಲೆಗಳನ್ನು ಬರೆಯಲಿದೆ ಎನ್ನಲಾಗುತ್ತಿದೆ.


ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಚಿತ್ರವು ನಾಲ್ಕನೇ ಸ್ಥಾನದಲ್ಲಿದ್ದು, 'ಸಂಜು'ವಿನ ಭರ್ಜರಿ ಓಟವು ಈ ದಾಖಲೆಯನ್ನು ಶೀಘ್ರದಲ್ಲೇ ಮುರಿಯುವ ನಿರೀಕ್ಷೆಯಿದೆ.


ಸದ್ಯ ಒಂದೇ ಭಾಷೆಯಲ್ಲಿ ತೆರೆಕಂಡಿರುವ 'ಸಂಜು' ಸಿನಿಮಾ ಮುಂದಿನ ದಿನಗಳಲ್ಲಿ ಚೀನಾ ಸೇರಿದಂತೆ ಹಲವಾರು ಭಾಷೆಗಳಿಗೆ ಡಬ್ ಆಗಲಿದ್ದು, ಇದರಿಂದ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಸದ್ಯ ಗಳಿಕೆಯಲ್ಲಿ  ಮೊದಲ ಸ್ಥಾನದಲ್ಲಿರುವ ಅಮೀರ್ ಖಾನ್ ಅಭಿನಯದ 'ದಂಗಲ್​' ಚಿತ್ರದ ದಾಖಲೆಯನ್ನು 'ಸಂಜು' ಬ್ರೇಕ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಭಾರತೀಯ ಸಿನಿಮಾಗಳು :

ದಂಗಲ್ (2016) -1988 ಕೋಟಿ

ಬಾಹುಬಲಿ 2 -(2017) -1776 ಕೋಟಿ

ಭಜರಂಗಿ ಭಾಯಿಜಾನ್ (2015) 900 ಕೋಟಿ

ಸಿಕ್ರೆಟ್ ಸೂಪರ್ ಸ್ಟಾರ್ (2017) 850ಕೋಟಿ

ಪಿಕೆ (2014) - 743 ಕೋಟಿ

Source- BOLLYMOVIEREVIEWZ
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...