Kangana Ranaut: 'ನಮ್ಮ ಚಿತ್ರಮಂದಿರಗಳನ್ನು ಕದಿಯುತ್ತಿದ್ದೀರಾ' ಹಾಲಿವುಡ್​ಗೇ ಆವಾಜ್ ಹಾಕಿದ ಕ್ವೀನ್ ಕಂಗನಾ!

Kangana Ranaut on Hollywood: ನೀವು ನಮ್ಮ ಸಿನಿಮಾಗಳ ಕೆಲ ಸನ್ನಿವೇಶಗಳನ್ನ ಮಾತ್ರ ಕದಿಯುತ್ತಿಲ್ಲ. ನಮ್ಮ ಚಿತ್ರಮಂದಿರಗಳನ್ನು ಕದಿಯಲು ಯತ್ನಿಸುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ದಾರೆ.

ಕಂಗನಾ ರನೌತ್

ಕಂಗನಾ ರನೌತ್

 • Share this:
  Kangana Ranaut Angry: ಸದಾ ಒಂದಲ್ಲಾ ಒಂದು ವಿವಾದಕ್ಕೆ ಒಳಗಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಸಿಡಿಮಿಡಿಗೊಂಡಿದ್ದಾರೆ. ಹಾಲಿವುಡ್ ನ ಖ್ಯಾತ ಸ್ಟಾರ್ ರ್‍ಯಾನ್ ರೆನಾಲ್ಡ್ಸ್ (Ryan Reynolds) ವಿರುದ್ಧ ನಟಿ ಕಂಗನಾ ರಾಣಾವತ್ ಹರಿಹಾಯ್ದಿದ್ದಾರೆ. 'ನೀವು ನಮ್ಮ ಚಿತ್ರಮಂದಿರಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದೀರಿ, ಹಾಲಿವುಡ್ ಚಿತ್ರಗಳನ್ನು ಇಲ್ಲಿ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಳಿಸಿ, ನಮ್ಮ ಚಿತ್ರಗಳಿಗೆ ಹೊಡೆತ ಬೀಳುವಂತೆ ಮಾಡುತ್ತಿದ್ದೀರಾ' ಎಂದು ಹಾಲಿವುಡ್ ನಟ ರ್‍ಯಾನ್ ರೆನಾಲ್ಡ್ಸ್ (Ryan Reynolds) ವಿರುದ್ಧ 'ಲೇಡಿ ಟೈಗರ್'(Lady Tiger) ಕಿಡಿಕಾರಿದ್ದಾರೆ. ಹಾಲಿವುಡ್ ನಟ ರ್‍ಯಾನ್ ರೆನಾಲ್ಡ್ಸ್ (Ryan Reynold) ಅಭಿನಯದ 'ಫ್ರೀ ಗಾಯ್' (Free Guy) ಸಿನಿಮಾ ಈಗಾಗಲೇ ಸೆಪ್ಟೆಂಬರ್ 17ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನ ನಟ ಒಂದು ವಿಡಿಯೋವನ್ನು ಮಾಡಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿರುವ ಕಂಗನಾ ರಾಣಾವತ್ ರ್‍ಯಾನ್ ವಿರುದ್ಧ ಕೋಪಗೊಂಡಿದ್ದಾರೆ.

  ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಹೆಚ್ಚಿನ ಕ್ರೇಜ್ ಇದೆ. ಹೀಗಾಗಿ ಹಾಲಿವುಡ್ ನಟರು ಕೂಡ ತಮ್ಮ ಸಿನಿಮಾಗಳನ್ನು ನೋಡುವಂತೆ ಭಾರತೀಯರನ್ನ ಪ್ರೇರೇಪಿಸುತ್ತಾರೆ. ಅದರಂತೆ ರ್‍ಯಾನ್ ರೆನಾಲ್ಡ್ಸ್ (Ryan Reynolds) ಅಭಿನಯದ 'ಫ್ರೀ ಗಾಯ್' (Free Guy) ಸಿನಿಮಾವನ್ನ ನೋಡುವಂತೆ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ರ್‍ಯಾನ್ ತಮ್ಮ ಸಿನಿಮಾವನ್ನ ಬಾಲಿವುಡ್ ಸಿನಿಮಾಗೆ ಹೋಲಿಕೆ ಮಾಡಿಕೊಂಡಿದ್ದರು. ಬಾಲಿವುಡ್ ಸಿನಿಮಾಗಳಂತೆ ಈ ಸಿನಿಮಾದಲ್ಲೂ ಲವ್, ರೋಮ್ಯಾನ್ಸ್, ಕ್ರೇಜಿ ವಿಲನ್, ಡ್ಯಾನ್ಸ್ ಎಲ್ಲವೂ ಇವೆ ಎಂದು ನಟ ಹೇಳಿಕೊಂಡಿದ್ದರು. ನಾವು ಬಾಲಿವುಡ್ ಸಿನಿಮಾಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಕೆಲವೊಂದು ಬಾಲಿವುಡ್ ಸಿನಿಮಾದ ಸನ್ನಿವೇಶಗಳನ್ನು ಕದ್ದಿದ್ದೇವೆ. ಇದರಲ್ಲಿ ನಮಗೆ ಯಾವುದೇ ಸಂಕೋಚವೂ ಇಲ್ಲ ಎಂದು ರ್‍ಯಾನ್ ಹೇಳಿಕೊಂಡಿದ್ದರು.

  ಇದನ್ನೂ ಓದಿ: Koo Appನಲ್ಲಿ ನಂ 1 ಸ್ಥಾನಕ್ಕೇರಿದ Kangana Ranaut: 1 ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದಾರೆ ಬಾಲಿವುಡ್​ ಕ್ವೀನ್​

  ಇದಕ್ಕೆ ಉತ್ತರ ನೀಡಿರುವ ಕಂಗನಾ ರಣಾವತ್ ನೀವು ನಮ್ಮ ಸಿನಿಮಾಗಳ ಕೆಲ ಸನ್ನಿವೇಶಗಳನ್ನ ಮಾತ್ರ ಕದಿಯುತ್ತಿಲ್ಲ. ನಮ್ಮ ಚಿತ್ರಮಂದಿರಗಳನ್ನು ಕದಿಯಲು ಯತ್ನಿಸುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆಯೂ ಕೂಡ ನಟಿ ಹಾಲಿವುಡ್ ಸಿನಿಮಾಗಳ ಬಗ್ಗೆ ಮಾತನಾಡಿದರು. ತಮ್ಮ ಅಭಿನಯದ 'ತಲೈವಿ' (Thalaivii) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದರು. ನಮ್ಮವರೇ ಹಾಲಿವುಡ್ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಈಗಾಗಲೇ ಹಾಲಿವುಡ್ ಸಿನಿಮಾಗಳು ನಮ್ಮ ಸಿನಿಮಾಗಳ ಮೇಲೆ ದಾಳಿ ಮಾಡುತ್ತಿವೆ. ಹೀಗೆ ಮುಂದುವರೆದರೆ ನಮ್ಮ ಸಿನಿಮಾಗಳನ್ನು ನೋಡುವವರು ಇರುವುದೇ ಇಲ್ಲ. ನಮ್ಮ ಜನ ಮೊದಲು ನಮ್ಮ ಸಿನಿಮಾಗಳನ್ನು ನೋಡುವುದನ್ನು ಕಲಿಯಬೇಕು. ನಮ್ಮ ಸಿನಿಮಾವನ್ನು ನೋಡಿ ಎಂಜಾಯ್ ಮಾಡಬೇಕು. ಅದು ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಹೀಗೆ ಯಾವುದೇ ಭಾಷೆಯಾಗಿದ್ದರೂ ನಮ್ಮ ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡಿ ಎಂದು ಹೇಳಿದ್ದರು.

  ಇದನ್ನೂ ಓದಿ: Kangana Ranut: ಬಾಲಿವುಡ್​ ಕ್ವೀನ್​ ಕಂಗನಾಗೆ ಭಯ ಹುಟ್ಟಿಸುತ್ತಿವೆಯಾ ಹಾಲಿವುಡ್​ ಸಿನಿಮಾಗಳು..!

  ಇತ್ತೀಚೆಗೆ ತುಂಡು ಉಡುಗೆ ತೊಟ್ಟು ಕಂಗನಾ ರಾಣಾವತ್: ವಿವಾದಕ್ಕೆ ಸಿಲುಕಿದ್ದರು. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧದ ಚರ್ಚೆ ಜೋರಾಗಿತ್ತು. ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ನಟಿಗೆ ಭಾರತೀಯರು ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ತಮಿಳುನಾಡು ಕಂಡ ಅದ್ಭುತ ನಟಿ ಹಾಗೂ ಮಾಜಿ ಸಿಎಂ ಜಯಲಲಿತಾ ಅವರ ಬಯೋಪಿಕ್ ನಲ್ಲಿ ಕಂಗನಾ ನಟಿಸಿದ್ದರು. 'ತಲೈವಿ' ಎಂಬ ಸಿನಿಮಾ ಸೆಪ್ಟೆಂಬರ್ 10ರಂದು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಮಿಂಚಿದ್ದರು. ಕಂಗನಾ ಅಭಿನಯಕ್ಕೆ ಫ್ಯಾನ್ಸ್ ಬಹುಪರಾಕ್ ಹೇಳಿದ್ರು.

  (ವರದಿ: ವಾಸುದೇವ್ ಎಂ)
  Published by:Soumya KN
  First published: