Priyanka Chopra: ಮೊಮ್ಮಗಳನ್ನು ಫೇಸ್‍ಟೈಮ್‍ನಲ್ಲಷ್ಟೇ ನೋಡುತ್ತಿದ್ದೇನೆ, ಇನ್ನೂ ಭೇಟಿ ಸಾಧ್ಯವಾಗಿಲ್ಲ ಎಂದ ಪ್ರಿಯಾಂಕ ತಾಯಿ

ಪ್ರಿಯಾಂಕಾ ಮತ್ತು ನಿಕ್ ಜೋನಾಸ್, ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯಿಯ ಮೂಲಕ ಪಡೆದ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಅವರೀಗ ಮುದ್ದಾದ ಹೆಣ್ಣು ಮಗುವಿನ ಹೆಮ್ಮೆಯ ಪೋಷಕರು.

ಪ್ರಿಯಾಂಕ ಚೋಪ್ರಾ ಮತತ್ಉ ಮಧು ಚೋಪ್ರಾ

ಪ್ರಿಯಾಂಕ ಚೋಪ್ರಾ ಮತತ್ಉ ಮಧು ಚೋಪ್ರಾ

  • Share this:
ಹಿಂದೆಲ್ಲಾ ವಿದೇಶಿ ವ್ಯಕ್ತಿಗಳನ್ನು ಮದುವೆಯಾದ ಬಾಲಿವುಡ್ ( Bollywood) ನಟಿಯರು ಸಾಮಾನ್ಯವಾಗಿ ಮುಖ್ಯವಾಹಿನಿಯಿಂದ ದೂರವಾಗಿ ಬದುಕುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಪ್ರಿಯಾಂಕಾ ಚೋಪ್ರಾ, ಸೋನಮ್ ಕಪೂರ್ (Sonam Kapoor) ಅವರಂತಹ ಬಾಲಿವುಡ್ ನಾಯಕಿಯರು ವಿದೇಶದಲ್ಲಿ ನೆಲೆಸಿದ್ದರೂ, ಭಾರತೀಯ ಸಿನಿಮಾ ಪ್ರೇಮಿಗಳ ಮನಸ್ಸಿಂದ ದೂರ ಹೋಗಿಲ್ಲ ಮತ್ತು ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರುತ್ತಾರೆ ಕೂಡ. ಉದಾಹರಣೆಗೆ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಮಗುವಿನ ಸಂಗತಿಯನ್ನೇ ತೆಗೆದುಕೊಳ್ಳಿ. ಪ್ರಿಯಾಂಕಾ ಮತ್ತು ನಿಕ್ ಜೋನಾಸ್ (Nick Jonas), ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯಿಯ ಮೂಲಕ ಪಡೆದ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಅವರೀಗ ಮುದ್ದಾದ ಹೆಣ್ಣು ಮಗುವಿನ ಹೆಮ್ಮೆಯ ಪೋಷಕರು.

ಪುಟ್ಟ ಕಂದಮ್ಮ ಜೀವನವನ್ನು ಪ್ರವೇಶಿಸಿದಾಗಿನಿಂದ, ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಇಬ್ಬರೂ, ಲಾಸ್ ಏಂಜೆಲ್ಸ್‍ನಲ್ಲಿ ಆಕೆಯ ಆರೈಕೆಯಲ್ಲಿ ನಿರತರಾಗಿದ್ದಾರೆ. ಆದರೆ, ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಅವರಿಗೆ ಮಾತ್ರ ಇನ್ನೂ ತಮ್ಮ ಮೊಮ್ಮಗಳನ್ನು ಕಾಣುವ ಭಾಗ್ಯ ಒದಗಿ ಬಂದಿಲ್ಲವಂತೆ. ಮಗುವಿನ ಆರೋಗ್ಯದ ದೃಷ್ಟಿಯಿಂದ ಮತ್ತು ಕೋವಿಡ್ -19 ಪರಿಸ್ಥಿತಿಯ ಕಾರಣದಿಂದ ಅವರು ತಮ್ಮ ಮೊಮ್ಮಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ, ಆದರೆ ಆದಷ್ಟು ಬೇಗ ಭೇಟಿ ಆಗುವ ಆಶಯವಿದೆ ಎಂದು ಅವರು ಇತ್ತೀಚೆಗೆ ಹೇಳಿದ್ದರು.

ಜನವರಿಯಲ್ಲಿ ತಾಯಿಯಾದ ಪ್ರಿಯಾಂಕ:

ಜನವರಿ ತಿಂಗಳಲ್ಲಿ, ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ತಮ್ಮ ಮಗುವಿನ ಜನನದ ಸಂಗತಿಯನ್ನು ಘೋಷಿಸಿದರು. ಆಗ ಅವರು, ಮಗು ಬಾಡಿಗೆ ತಾಯಿಯ ಮೂಲಕ ಜನಿಸಿತು ಎಂಬ ಮಾಹಿತಿಯನ್ನಷ್ಟೇ ನೀಡಿದ್ದರು, ಆದರೆ ಮಗುವಿನ ಲಿಂಗವನ್ನು ಬಹಿರಂಗಪಡಿಸಿರಲಿಲ್ಲ. ಅದಾಗಿ ಕೆಲವು ದಿನಗಳ ಬಳಿಕ ಪ್ರಿಯಾಂಕಾ ಅವರ ಸಂಬಂಧಿ ಮೀರಾ ಚೋಪ್ರಾ, ಅದು ಹೆಣ್ಣು ಮಗು ಎಂಬುದನ್ನು ಖಚಿತಪಡಿಸಿದ್ದರು.

ಇದನ್ನೂ ಓದಿ: Priyanka Chopra: ಪ್ರಿಯಾಂಕ, ನಿಕ್‌ ಮಗುವಿನ ಫೋಟೋ ವೈರಲ್​! ಇವ್ರದ್ದಲ್ಲಾ ಅಂದ್ರೆ ಮತ್ತಿನ್ಯಾರದ್ದು ಈ ಪಾಪು?

ಮೊಮ್ಮಗಳ ಮುಖವನ್ನು ನೋಡಲಾಗಲಿಲ್ಲ:

ಗುರುವಾರ ಮಾಧ್ಯಮವೊಂದು ನಡೆಸಿದ ಇನ್‍ಸ್ಟಾಗ್ರಾಂ ಲೈವ್ ಸೆಶನ್‍ನಲ್ಲಿ, ಮಧು ಚೋಪ್ರಾ ಅವರಿಗೆ ಮೊಮ್ಮಗಳ ಕುರಿತ ಪ್ರಶ್ನೆಗಳನ್ನು ಕೇಳಲಾಯಿತು. ಆ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ನಾನು ಅವಳನ್ನು ನೋಡಿಲ್ಲ. ನಾನು ಇಲ್ಲಿದ್ದೇನೆ ಮತ್ತು ಅವಳು ಲಾಸ್ ಏಂಜೆಲೀಸ್‌ನಲ್ಲಿದ್ದಾಳೆ. ನಾವು ಯಾವಾಗಲಾದರು ಒಮ್ಮೆ ಫೇಸ್‍ಟೈಮ್‍ನಲ್ಲಿ ನೋಡುತ್ತೇವೆ. ಅವಳು ಸಂತೋಷ ಮತ್ತು ಉಲ್ಲಾಸದಿಂದ ಇದ್ದಾಳೆ ಎಂದು ನನಗನಿಸುತ್ತದೆ. ಸದ್ಯಕ್ಕೆ ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ. ಆದರೆ ನಾನು ಈ ವರ್ಷದ ಮಧ್ಯ ಭಾಗದಲ್ಲಿ ಹೋದಾಗ ಮತ್ತು ಅವಳನ್ನು ಭೇಟಿ ಆದಾಗ, ಇದಕ್ಕೆ ನಾನು ಇನ್ನಷ್ಟು ಚೆನ್ನಾಗಿ ಉತ್ತರಿಸಲು ಸಾಧ್ಯವಾಗಬಹುದು” ಎಂದು ಮಧು ಚೋಪ್ರಾ ಹೇಳಿದರು.

ತನ್ನ ಮೊಮ್ಮಗಳು ಭಾರತಕ್ಕೆ ಪ್ರಯಾಣಿಸುವ ದಿನವನ್ನು ಎದುರು ನೋಡುತ್ತಿರುವುದಾಗಿ ಹೇಳಿದ ಮಧು ಚೋಪ್ರಾ, ನಾನು ಯಾವಾಗಲೂ ನಿರೀಕ್ಷಿಸುತ್ತೇನೆ. ಎಂದಿಗೂ ಅಸಾಧ್ಯವೆನ್ನಬೇಡಿ. ಇದು ಅವಳ ದೇಶ, ಅವಳು ಬರಬಹುದು ಎಂದಿದ್ದಾರೆ.

ಇದನ್ನೂ ಓದಿ: Priyanka Chopra: ಮಗಳಿಗೆ ಮುದ್ದಾದ ಹೆಸರು ಹುಡುಕ್ತಿದ್ದಾರಂತೆ ಪ್ರಿಯಾಂಕಾ ಚೋಪ್ರಾ-ನಿಕ್​!

ಅಜ್ಜಿ ಆಗಬೇಕು ಎಂದು ಕಾಯುತ್ತಿದ್ದೆ:

ಹಾಗೂ ತಾನು ಬಹಳ ದೀರ್ಘ ಕಾಲದಿಂದ ಅಜ್ಜಿ ಆಗಬೇಕು ಎಂದು ಕಾಯುತ್ತಿದ್ದೆ ಎಂದು ತನಗಿದ್ದ ಕನಸನ್ನು ಹಂಚಿಕೊಂಡರು. ಅದು ಅತ್ಯಂತ ಸಂತೋಷದಾಯಕವಾಗಿದೆ..! ನನ್ನ ಹೃದಯ ಹೇಗೆ ಮಿಡಿಯುತ್ತಿದೆ ಎಂದು ನಿಮಗೆ ಹೇಳಲಾಗುತ್ತಿಲ್ಲ. .ಅದಕ್ಕಾಗಿ ತುಂಬಾ ದೀರ್ಘ ಸಮಯದಿಂದ ಕಾಯುತ್ತಿದ್ದೆ ಎಂದು ನನಗೆ ಅನಿಸುತ್ತಿದೆ. ಅದು ಈಗ ಈಡೇರಿದೆ ಮತ್ತು ನನಗೆ ನನ್ನ ಖುಷಿಯನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೀಗ ಪ್ರಿಯಾಂಕಾ ಮತ್ತು ನನ್ನ ಮಗ ನೆನಪಿಗೇ ಬರುತ್ತಿಲ್ಲ. ನಾನು ಕೇವಲ ನನ್ನ ಪುಟ್ಟ ಕಂದಮ್ಮನ ಬಗ್ಗೆಯಷ್ಟೇ ಯೋಚಿಸುತ್ತಿದೇನೆ ಎಂದು ಮಧು ಚೋಪ್ರಾ ಅವರು ತಮ್ಮ ಖುಷಿಯನ್ನು ಹಂಚಿಕೊಂಡರು.

ಸಾಲು ಸಾಲು ಸಿನಿಮಾಗಳಲ್ಲಿ ಪಿಗ್ಗಿ ಬ್ಯೂಸಿ:

ಪ್ರಿಯಾಂಕಾ ಚೋಪ್ರ ಅವರು ಕೊನೆಯದಾಗಿ, ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅವರು, ಸಿಟಡೆಲ್, ಜೀಲೇ ಝರಾ ಮತ್ತು ಎಂಡಿಂಗ್ ತಿಂಗ್ಸ್ ಮುಂತಾದ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಅವರು ಭಾರತಕ್ಕೆ ಭೇಟಿ ನೀಡುವ ಯೋಜನೆಗಳ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
Published by:shrikrishna bhat
First published: