Prabhas: ಧೂಮ್​ ಸರಣಿ ಸಿನಿಮಾದಲ್ಲಿ ಪ್ರಭಾಸ್​: ಬಾಲಿವುಡ್​ನ ಖ್ಯಾತ ನಿರ್ಮಾಪಕನಿಂದ ಡಾರ್ಲಿಂಗ್​ಗೆ ಸಿಕ್ಕಿದೆ ನೂರು ಕೋಟಿ ಬಂಪರ್​ ಆಫರ್..!

Dhoom Series Movie: ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆದಿತ್ಯ ಚೋಪ್ರಾ ಪ್ರಭಾಸ್​ಗೆ ಒಂದು ದೊಡ್ಡ ಆಫರ್​ ಕೊಟ್ಟಿದ್ದಾರಂತೆ. ವಿಲನ್​ ಪಾತ್ರದಲ್ಲಿ ಅಭಿನಯಿಸೋಕೆ ನೂರು ಕೋಟಿ ಸಂಭಾವನೆ ಕೊಡುವುದಾಗಿ ಹೇಳಿದ್ದಾರಂತೆ.

Anitha E | news18-kannada
Updated:December 4, 2019, 11:58 AM IST
Prabhas: ಧೂಮ್​ ಸರಣಿ ಸಿನಿಮಾದಲ್ಲಿ ಪ್ರಭಾಸ್​: ಬಾಲಿವುಡ್​ನ ಖ್ಯಾತ ನಿರ್ಮಾಪಕನಿಂದ ಡಾರ್ಲಿಂಗ್​ಗೆ ಸಿಕ್ಕಿದೆ ನೂರು ಕೋಟಿ ಬಂಪರ್​ ಆಫರ್..!
ಒಂದು ಕಡೆ ಸ್ಯಾಂಡಲ್​ವುಡ್​ನ ರಾಬರ್ಟ್​ ಹಾಗೂ ಯುವರತ್ನ ಚಿತ್ರತಂಡ ಕರೋನಾ ಭೀತಿಯಿಂದಾಗಿ ವಿದೇಶದಲ್ಲಿ ಪ್ಲಾನ್​ ಮಾಡಿದ್ದ ತಮ್ಮ ಸಿನಿಮಾದ ಹಾಡುಗಳ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಆದರೆ ಪ್ರಭಾಸ್​ ಮಾತ್ರ ಚಿತ್ರೀಕರಣಕ್ಕಾಗಿ ಯುರೋಪ್​ನತ್ತ ತೆರಳಿದ್ದಾರೆ.  
  • Share this:
ಟಾಲಿವುಡ್​ನ ಸಾಕಷ್ಟು ನಾಯಕ ನಟರು ಈಗಾಗಲೇ ಬಾಲಿವುಡ್​ ಸಿನಿಮಾಗಳಲ್ಲಿ ನಾಯಕರಾಗಿ ಮಿಂಚಿದ್ದಾರೆ. ವೆಂಕಟೇಶ್​, ನಾಗಾರ್ಜುನ, ಚಿಂರಜೀವಿ, ರಾಣಾ ಸೇರಿದಂತೆ ಸಾಕಷ್ಟು ಮಂದಿ ಬಿ-ಟೌನ್​ನಲ್ಲೂ ಹೀರೋಗಳಾಗಿ ಖಾತೆ ರೆದಾಗಿದೆ. ಈಗ ಯಂಗ್​ ರೆಬೆಲ್​ ಸ್ಟಾರ್​ ಸರದಿ.

ಬಹು ಭಾಷಾ ಸಿನಿಮಾಗಳ ಮೂಲಕ ಈಗಾಗಲೇ ಬಾಲಿವುಡ್​ ಪ್ರೇಕ್ಷಕರಿಗೆ ಪರಿಚಿತರಾಗಿದ್ದರೂ, ಪ್ರಭಾಸ್​ ಇನ್ನೂ ನೇರವಾಗಿ ಹಿಂದಿ ಸಿನಿಮಾದಲ್ಲಿ ಅಭಿನಯಿಸಿಲ್ಲ. ಅಭಿನಯಿಸೋಕೆ ಆಫರ್​ ಬಂದರೂ ಯಂಗ್​ ರೆಬೆಲ್​ ಸ್ಟಾರ್​ ಸದ್ಯ ತೆಲುಗು ಸಿನಿಮಾಗಳ ಮೇಲೆ ಫೋಕಸ್​ ಮಾಡುತ್ತಿದ್ದಾರಂತೆ.

Prabhas in Sahoo
'ಸಾಹೋ'ದಲ್ಲಿ ಪ್ರಭಾಸ್ ಲುಕ್​


ಇತ್ತೀಚೆಗೆ ಅವರ ಅಭಿನಯದ 'ಸಾಹೋ' ಹಿಂದಿ ಹಾಗೂ ತೆಲುಗಿನಲ್ಲಿ ತೆರೆಕಂಡು ಬಾಕ್ಸಾಫಿಸ್​ನಲ್ಲಿ ಮುಗ್ಗರಿಸಿತ್ತು. ಆದರೆ ಹಿಂದಿಯಲ್ಲಿ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಮಾನಿಗಳ ಬಳಗ ಮತ್ತಷ್ಟು ದೊಡ್ಡದಾಗಿದೆ.

Jhon in Dhoom Movie
'ಧೂಮ್​' ಸಿನಿಮಾದಲಲ್ಲಿ ಜಾನ್​


ಪ್ರಭಾಸ್​ಗಾಗಿಯೇ ಬಾಲಿವುಡ್ ನಿರ್ದೇಶಕರು ಹಾಗೂ ನಿರ್ಮಾಪಕರು ಕತೆ ಸಿದ್ಧಪಡಿಸಿಕೊಳ್ಳುತ್ತಿದ್ದಾರಂತೆ. ರಾಧಾಕೃಷ್ಣ ಕುಮಾರ್​ ನಂತರ ಕೊರಟಾಲ ಶಿವ ಅವರ ಸಿನಿಮಾಗೆ ಓಕೆ ಮಾಡಿದ್ದಾರಂತೆ.

Young rebel star starrer Prabhas Saaho movie will be releasing in amazon prime 
'ಸಾಹೋ' ಚಿತ್ರದ ಪೋಸ್ಟರ್​
ಹೀಗಿರುವಾಗಲೇ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆದಿತ್ಯ ಚೋಪ್ರಾ ಪ್ರಭಾಸ್​ಗೆ ಒಂದು ದೊಡ್ಡ ಆಫರ್​ ಕೊಟ್ಟಿದ್ದಾರಂತೆ. ವಿಲನ್​ ಪಾತ್ರದಲ್ಲಿ ಅಭಿನಯಿಸೋಕೆ ನೂರು ಕೋಟಿ ಸಂಭಾವನೆ ಕೊಡುವುದಾಗಿ ಹೇಳಿದ್ದಾರಂತೆ. ಅದು ಸಹ 'ಧೂಮ್​' ಸರಣಿ ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ಅಭಿನಯಿಸೋಕೆ ಈ ಆಫರ್​ ಕೊಡಲಾಗಿದೆ ಎನ್ನಲಾಗುತ್ತಿದೆ.

'ಧೂಮ್​' ಸರಣಿ ಸಿನಿಮಾಗಳನ್ನು ನೋಡಿದರೆ, ಅದರಲ್ಲಿ ವಿಲನ್​ ಸಿನಿಮಾದ ನಾಯಕನಾಗಿರುತ್ತಾನೆ. ಇನ್ನು ಪ್ರಭಾಸ್​ ಅಭಿನಯದ 'ಸಾಹೋ' ಹಾಗೂ 'ಬಾಹುಬಲಿ' ನೋಡಿದ ನಂತರ ಆ್ಯಕ್ಷನ್​ ಸಿನಿಮಾಗಾಗಿ ಪ್ರಭಾಸ್​ಗೆ ಆದಿತ್ಯ ಚೋಪ್ರಾ ಈ ಆಫರ್​ ನೀಡಿದ್ದಾರಂತೆ.

ಇದನ್ನೂ ಓದಿ: DBoss Darshan: ರಣ್​ವಿತ್ ಶೆಟ್ಟಿಯನ್ನು ಎತ್ತಿ ಮುದ್ದಾಡಿದ ಡಿಬಾಸ್​ ದರ್ಶನ್​

ಈ ಕುರಿಂತಂತೆ ಪ್ರಭಾಸ್​ರಿಂದ ಯಾವುದೇ ಉತ್ತರ ಸಿಕ್ಕಿಲ್ಲವಂತೆ. ಪ್ರಭಾಸ್​ ಸದ್ಯ ರಾಧಾಕೃಷ್ಣ ಕುಮಾರ್​ ಅವರ 'ಜಾನ್​' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರಂತೆ.

 

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!


 
First published: December 4, 2019, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading