Shamita Shetty: ಬಾಲಿವುಡ್​ನಲ್ಲಿ ಮತ್ತೊಂದು ಸ್ಟಾರ್​ ಜೋಡಿ ನಡುವೆ ಬ್ರೇಕಪ್, ಶಿಲ್ಪಾ ಶೆಟ್ಟಿ ತಂಗಿ ಬಾಳಲ್ಲಿ ಬಿರುಕು

ಬಾಲಿವುಡ್​ನಲ್ಲಿ (Bollywood) ಮತ್ತೊಂದು ಸ್ಟಾರ್​ ಜೋಡಿ ನಡುವೆ ಬ್ರೇಕಪ್ ಆಗಿದೆ. ಹೌದು, ನಟಿ ಶಮಿತಾ ಶೆಟ್ಟಿ ಹಾಗೂ  (Shamita Shetty)ಮತ್ತು ರಾಕೇಶ್ ಬಾಪಟ್ (Raqesh Bapat) ನಡುವೆ ಬ್ರೇಕಪ್​ ಆಗಿರುವುದಾಗಿ ತಿಳಿದುಬಂದಿದೆ.

ಶಮಿತಾ ಮತ್ತು ರಾಕೇಶ್

ಶಮಿತಾ ಮತ್ತು ರಾಕೇಶ್

  • Share this:
ಬಾಲಿವುಡ್​ನಲ್ಲಿ (Bollywood) ಮತ್ತೊಂದು ಸ್ಟಾರ್​ ಜೋಡಿ ನಡುವೆ ಬ್ರೇಕಪ್ ಆಗಿದೆ. ಹೌದು, ನಟಿ ಶಮಿತಾ ಶೆಟ್ಟಿ ಹಾಗೂ  (Shamita Shetty) ಮತ್ತು ರಾಕೇಶ್ ಬಾಪಟ್ (Raqesh Bapat) ನಡುವೆ ಬ್ರೇಕಪ್​ ಆಗಿರುವುದಾಗಿ ಸ್ವತಃ ರಾಕೇಶ್ ಬಾಪಟ್ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಕುರಿತು ಶಮಿತಾ ಶೆಟ್ಟಿ ಸಹ ಇನ್ಸ್ಟಾಗ್ರಾಂ ಸ್ಟೋರಿ ಹಾಕಿದ್ದು, ಇಬ್ಬರ ನಡುವೆ ಬ್ರೇಕಪ್ ಆಗಿದ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಶಮಿತಾ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಇನ್ನು, ಬಿಗ್ ಬಾಸ್ OTT ಮೊದಲ ಸೀಸನ್‌ನಲ್ಲಿ ಶಮಿತಾ ಶೆಟ್ಟಿ  ಮತ್ತು ರಾಕೇಶ್ ಬಾಪಟ್ ನಡುವಿನ ಸ್ನೇಹವು ನಿಧಾನವಾಗಿ ಪ್ರೀತಿಗೆ ತಿರುಗಿತ್ತು.

ಬ್ರೇಕಪ್ ಅಧಿಕೃತಗೊಳಿಸಿದ ರಾಕೇಶ್ ಬಾಪಟ್:

ಹೌದು, ಹಿಂದಿಯ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲಿ ಭೇಟಿಯಾದ ಶಮಿತಾ ಶೆಟ್ಟಿ  ಮತ್ತು ರಾಕೇಶ್ ಬಾಪಟ್ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಅಲ್ಲದೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಇಬ್ಬರೂ ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಈ ಜೋಡಿಯ ಫೋಟೋವನ್ನು ಸಖತ್ ವೈರಲ್ ಸಹ ಮಾಡಿದ್ದರು. ಆದರೆ ಕೆಲ ದಿನಗಳ ಹಿಂದೆ ಇವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಅದಕ್ಕೆ ಇದೀಗ ಸ್ಪಷ್ಟ ಉತ್ತರ ದೊರಕಿದೆ.

ಬ್ರೇಕಪ್ ಕುರಿತು ಇನ್ಸ್ಟಾಗ್ರಾಂ ಪೋಸ್ಟ್ ಹಾಕಿರುವ ರಾಕೇಶ್ ಬಾಪಟ್, ‘ನಾನು ಶಮಿತಾ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ವಿಧಿಯು ನಮ್ಮ ಹಾದಿಗಳನ್ನು ಅತ್ಯಂತ ಅಸಾಮಾನ್ಯ ಸಂದರ್ಭದಲ್ಲಿ ಭೇಟಿ ಮಾಡಿಸಿತು. ಎಲ್ಲಾ ಪ್ರೀತಿಗಾಗಿ ಶಾರಾ ಕುಟುಂಬಕ್ಕೆ ತುಂಬಾ ಧನ್ಯವಾದಗಳು. ಜೊತೆಗೆ ಖಾಸಗಿ ವ್ಯಕ್ತಿಯಾಗಿರುವುದರಿಂದ, ನಾನು ಪ್ರತ್ಯೇಕಗೊಳ್ಳುವ ಮಾರ್ಗಗಳನ್ನು ಸಾರ್ವಜನಿಕವಾಗಿ ಘೋಷಿಸಲು ಬಯಸುವುದಿಲ್ಲ. ಆದರೆ ಈ ವಿಷಯವನ್ನು ಹೇಳಿಕೊಳ್ಳಬೇಕಿತ್ತು. ವೈಯಕ್ತಿಕವಾಗಿಯೂ ನಮ್ಮ ಮೇಲೆ ನಿಮ್ಮ ಪ್ರೀತಿ ಹೀಗೆ ಮುಂದುವರೆಯುತ್ತದೆ ಎಂದು ನಂಬುತ್ತೇನೆ. ಈ ಸಂಗೀತದ ವೀಡಿಯೋ ನಿಮ್ಮೆಲ್ಲರಿಗೂ ಸಮರ್ಪಿಸಲಾಗಿದೆ‘ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಅಂದ್ರೆ ವಿಕ್ಟರಿ ರೋಣ, ಪ್ರೀ ರಿಲೀಸ್​ ಇವೆಂಟ್​ನಲ್ಲಿ ಸ್ಟಾರ್​ಗಳ ದಂಡು

ಬ್ರೇಕಪ್ ಸುಳಿವು ನೀಡಿದ್ದ ಶಮಿತಾ:

ಇನ್ನು, ಕೆಲ ದನಿಗಳ ಹಿಂದೆ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ನಡುವಿನ ಬ್ರೇಕಪ್ ಕುರಿತು ಶಮಿತಾ ಪೋಸ್ಟ್ ಒಂದನ್ನು ಹಾಕುವ ಮೂಲಕ ಸುಳಿವು ನೀಡಿದ್ದರು. ಅವರು, ‘ನಾನು ನನ್ನ ವೃತ್ತಿಜೀವನದಲ್ಲಿ ಮಾಡಬಾರದ ತಪ್ಪುಗಳನ್ನು ಮಾಡಿದ್ದೇನೆ. ನಾನು ಇಂದಿಗೂ ವಿಷಾದಿಸುತ್ತೇನೆ. ಅಲ್ಲದೇ ಅತ್ಯುತ್ತಮ ಸಂಬಂಧಗಳು ಸಹ ಕೊನೆಗೊಳ್ಳುತ್ತವೆ‘ ಎಂದು ಬರೆದುಕೊಳ್ಳುವ ಮೂಲಕ ಬ್ರೇಕಪ್ ಕುರಿತು ಮೊದಲೇ ಸುಳಿವು ನೀಡಿದ್ದರು. ಇದೀಗ ಅದು ಸ್ಪಷ್ಟವಾಗಿದೆ.

ಟ್ರೋಲ್​ ಮಾಡುವವರ ಕುರಿತು ನೇರವಾಗಿ ಮಾತನಾಡಿದ್ದ ರಾಕೇಶ್:

ಕೆಲ ದಿನಗಳ ಹಿಂದೆ ಶಮಿತಾ ಬ್ರೇಕಪ್ ಕುರಿತು ಸುಳಿವು ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಕುರಿತು ಸಖತ್ ಟ್ರೋಲ್​ ಆಗಿದ್ದವು. ಇದರ ಕುರಿತು ಮಾತನಾಡಿರುವ ರಾಕೇಶ್​, ‘ಯಾರು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ? ಯಾರು ಯಾರಿಗೆ ಮೋಸ ಮಾಡುತ್ತಿದ್ದಾರೆ? ಯಾರು ಏನು ಧರಿಸುತ್ತಾರೆ? ಯಾರ ಕುಟುಂಬ ಉತ್ತಮ ಅಥವಾ ಕೆಟ್ಟದು? ಇದೆಲ್ಲದರ ಬದಲು, ನೀವು ವಾಸಿಸುವ ಜಗತ್ತಿನಲ್ಲಿ ನಿಮ್ಮ ಉದ್ದೇಶ ಮತ್ತು ಕೊಡುಗೆ ಏನು ಎಂದು ನೋಡಬೇಕು.

ಇದನ್ನೂ ಓದಿ: Actor Nandu: ರಣವೀರ್​ ಬೆತ್ತಲೆ ಬೆನ್ನಲ್ಲೇ ಶುರುವಾಯ್ತು ಹೊಸ ಟ್ರೆಂಡ್​, ಕ್ಯಾಮರಾ ಮುಂದೆ ಸಿಕ್​ಸಿಕ್ಕವರೆಲ್ಲಾ ಬಟ್ಟೆ ಬಿಚ್ಚತಾವ್ರೆ

ನಿಮ್ಮ ಗುರಿಗಳೇನು? ನಾನು ಹೇಗೆ ಉಳಿಸಬಹುದು ಮತ್ತು ಹೂಡಿಕೆ ಮಾಡಬಹುದು? ನೀವು ಯಾವ ಕೌಶಲ್ಯಗಳನ್ನು ಕಲಿಯಬಹುದು? ನಾವು ನಮ್ಮ ಮನಸ್ಸನ್ನು ಬದಲಾಯಿಸಬಹುದೇ? ಇದು ಕಷ್ಟವೇ? ನೀವು ನನ್ನನ್ನು ಪ್ರೀತಿಸಿದರೆ ಇದನ್ನು ಪ್ರಯತ್ನಿಸಿ ಮತ್ತು ನೀವು ಅದನ್ನು ಪ್ರೀತಿಸುತ್ತೀರಿ' ಎಂದು ರಾಕೇಶ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಆದರೆ ಇಂದು ಇಬ್ಬರ ನಡುವಿನ ಬ್ರೇಕಪ್ ಕುರಿತು ಸ್ಪಷ್ಟಪಡಿಸಿದ್ದಾರೆ.
Published by:shrikrishna bhat
First published: