Karisma Kapoor ಮೇಲೆ ಬಿದ್ದ ಕಲೀರಾ, ನಟಿಗೆ ಎರಡನೇ ಮದುವೆ ಯೋಗ?

ವಧುವಿನ ಕಲೀರಾ (Kaleera) ಕರೀಷ್ಮಾ ಮೇಲೆ ಬಿತ್ತಂತೆ. ಕರೀಷ್ಮಾಗಂತೂ ಇದರಿಂದ ಖುಷಿಯೋ ಖುಷಿ. ಅವರು ಶನಿವಾರ ಈ ಮದುವೆಯ ಕೆಲವೊಂದು ಸಂತಸದ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಕರೀಷ್ಮಾ ಕಪೂರ್

ಕರೀಷ್ಮಾ ಕಪೂರ್

  • Share this:
ಬಾಲಿವುಡ್‍ನ ಲವ್‍ಬರ್ಡ್ಸ್‌ ಆಗಿದ್ದ ಆಲಿಯಾ ಭಟ್ (Alia Bhatt) ಮತ್ತು ರಣ್‍ಬೀರ್ ಕಪೂರ್ (Ranbir Kapoor) ಈಗ ಸತಿಪತಿಯಾಗಿದ್ದಾರೆ. ಏಪ್ರಿಲ್ 14 ರಂದು ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಅವರ ಮದುವೆ ನಡೆಯಿತು. ಈ ಮದುವೆಯಲ್ಲಿ, ಅವರ ಸ್ನೇಹಿತರ ಮತ್ತು ಸಹೋದರ ಸಹೋದರಿಯರ ಉತ್ಸಾಹ ಮುಗಿಲೇರಿತ್ತು. ಅದರಲ್ಲೂ, ನಟಿ ಕರೀಷ್ಮಾ ಕಪೂರ್ (Karisma Kapoor) ಸಂತೋಷಕ್ಕೆ ಪಾರವೇ ಇರಲ್ಲಿಲ್ಲ. ಕರಿಷ್ಮಾ ಕಪೂರ್, ರಣ್‍ಬೀರ್ ಕಪೂರ್ ಅವರ ದೊಡ್ಡಪ್ಪನ ಮಗಳು. ಸಹೋದರನ ಮದುವೆ ಎಂದರೆ, ಸಂತೋಷ ಸಹಜವೇ. ಆದರೆ ಇಲ್ಲಿ ಕರೀಷ್ಮಾರ ಸಂತೋಷ ದುಪ್ಪಟ್ಟಾಗಲು ಇನ್ನೊಂದು ಕಾರಣವಿತ್ತು. ಯಾಕಂತೀರಾ? ವಧುವಿನ ಕಲೀರಾ (Kaleera) ಕರೀಷ್ಮಾ ಮೇಲೆ ಬಿತ್ತಂತೆ. ಕರೀಷ್ಮಾಗಂತೂ ಇದರಿಂದ ಖುಷಿಯೋ ಖುಷಿ. ಅವರು ಶನಿವಾರ ಈ ಮದುವೆಯ ಕೆಲವೊಂದು ಸಂತಸದ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವರು ತನ್ನ ಮಗ ಕಿಯಾನ್ ಜೊತೆ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಕರಿಷ್ಮಾ ಮೇಲೆ ಬಿದ್ದ ಕಲೀರಾ:

ಅವರು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಫೋಟೋಗಳಲ್ಲಿ ಮೊದಲನೆಯದ್ದರಲ್ಲಿ, ಕರೀಷ್ಮಾ ತನ್ನ ಮೇಲೆ ಬಿದ್ದ ಕಲೀರಾವನ್ನು ಕ್ಯಾಮರಾಗೆ ತೋರಿಸುತ್ತಾ ಪೋಸ್ ಕೊಟ್ಟಿರುವುದನ್ನು ಕಾಣಬಹುದು. ಆ ಪೋಟೋದಲ್ಲಿ ನಗುಮುಖದ ಕರೀಷ್ಮಾ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಇನ್ನೊಂದು, ಪೋಟೋದಲ್ಲಿ, ತನ್ನ ಮೇಲೆ ಬಿದ್ದ ಕಲೀರಾವನ್ನು ನೆರೆದವರ ಮುಂದೆ ಎತ್ತಿ ತೋರಿಸುತ್ತಿರುವುದನ್ನು ಮತ್ತು ಅವರೆಲ್ಲರೂ ಇದರಿಂದ ಸಂತೋಷಗೊಂಡಿರುವುದನ್ನು ಕಾಣಬಹುದು.






ಈ ಫೋಟೋದಲ್ಲಿ ಕರಣ್ ಜೋಹರ್ , ರಣ್‍ಬೀರ್ ಕಪೂರ್ ಅವರ ಸಹೋದರಿ ರಿಧಿಮಾ ಕಪೂರ್ ಸಹಾನಿ, ಆಕಾಂಕ್ಷಾ ರಂಜನ್ ಕಪೂರ್ ಮತ್ತು ಆಲಿಯಾ ಭಟ್‌ ಸ್ನೇಹಿತರು ಕೂಡ ಇದ್ದಾರೆ. ಈ ಎಲ್ಲಾ ಫೋಟೋಗಳನ್ನು, ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡ ಕರಿಷ್ಮಾ ಕಪೂರ್, “ಇನ್‍ಸ್ಟಾಗ್ರಾಂ ವರ್ಸಸ್ ರಿಯಾಲಿಟಿ. ಸ್ನೇಹಿತರೇ ಕಲೀರಾ ನನ್ನ ಮೇಲೆ ಬಿತ್ತು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Alia Bhatt ಮದುವೆಗೆ ಎಲ್ರೂ ವಿಶ್ ಮಾಡಿದ್ರು, ಆದ್ರೆ ಅವನೊಬ್ಬನ ಹಾರೈಕೆ ಮುಂದೆ ಇನ್ಯಾವ್ದೂ ಇಲ್ಲ ಬಿಡಿ!

ಏನಿದು ಕಲೀರಾ?:

ಪಂಜಾಬಿ ಮದುವೆಯಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ, ವಧು ಚಿನ್ನದ ಆಭರಣಗಳನ್ನು ಸಿಕ್ಕಿಸಲಾದ, ಮದುವೆಯ ಬಳೆಗಳನ್ನು ತೊಟ್ಟಿರುತ್ತಾಳೆ. ಅದನ್ನು ಕಲೀರಾ ಎನ್ನುತ್ತಾರೆ. ವಧು ತನ್ನ ಕೈಗಳನ್ನು ಎತ್ತಿ, ಸ್ನೇಹಿತರು ಮತ್ತು ಸಹೋದರಿಯರ ಮೇಲೆ ಅಲ್ಲಾಡಿಸಿದಾಗ, ಯಾರ ಮೇಲೆ ಬಳೆಗಳಲ್ಲಿ ಇರುವ ಕಲೀರಾ ಬೀಳುತ್ತದೆಯೋ, ಮುಂದಿನ ದಿನಗಳಲ್ಲಿ ಅವರಿಗೆ ಕಂಕಣ ಭಾಗ್ಯವಿದೆ ಎಂದು ನಂಬಲಾಗುತ್ತದೆ.

ನವ ಜೋಡಿಗೆ ಶುಭ ಕೋರಿದ್ದ ಕರಿಷ್ಮಾ:

ಈ ಮೊದಲು ಕರೀಷ್ಮಾ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ, ಆಲಿಯಾ ಮತ್ತು ರಣಬೀರ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಅವರಿಬ್ಬರ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದರು. “ಸುಂದರ ಜೋಡಿಗೆ ಅಭಿನಂದನೆ. ನೀವಿಬ್ಬರು ಜೀವನ ಪರ್ಯಂತ ಸಂತೋಷವಾಗಿರಿ ಎಂದು ಹಾರೈಸುತ್ತೇನೆ” ಎಂದು ಬರೆದಿದ್ದರು. ಅವರು, ರಣಬೀರ್ ಮತ್ತು ತಮ್ಮ ತಂದೆ ರಣಧೀರ್ ಕಪೂರ್ ಅವರು ಜೊತೆಗಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.

ಇದನ್ನೂ ಓದಿ: Ranbir-Alia: ವೈರಲ್​ ಆಯ್ತು ಹೊಸ ರಣಬೀರ್​-ಆಲಿಯಾ ಫೋಟೋ! ಮದುವೆ ಚಿತ್ರ ಅಂತೂ ಅಲ್ಲ, ಮತ್ತಿನ್ನೇನು? ನೀವೇ ನೋಡಿ

90 ರ ದಶಕದಲ್ಲಿ ಬಾಲಿವುಡ್‍ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಕರೀಷ್ಮಾ ಕಪೂರ್, ಹಿರಿಯ ನಟ ರಣಧೀರ್ ಕಪೂರ್ ಮತ್ತು ನಟಿ ಬಬಿತಾ ಅವರ ಮಗಳು. ರಣಬೀರ್ ಮತ್ತು ಆಲಿಯಾ ಮದುವೆಯಲ್ಲಿ, ಕರೀಷ್ಮಾ ಅವರು ಸಹೋದರಿ, ನಟಿ ಕರೀನಾ ಕಪೂರ್ ಕೂಡ ತಮ್ಮ ಪತಿ ಸೈಫ್ ಅಲಿಖಾನ್ ಮತ್ತು ಇಬ್ಬರು ಮಕ್ಕಳ ಜೊತೆ ಭಾಗವಹಿಸಿದ್ದರು.

ಉದ್ಯಮಿ ಸಂಜಯ್ ಕಪೂರ್ ಜೊತೆ ವಿಚ್ಚೇಧನ:

ಈ ಮೊದಲು ಕರೀಷ್ಮಾ ಕಪೂರ್ ಅವರು , ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು. ಕರೀಷ್ಮಾ ಅವರಿಗೆ ಸಮೈರಾ ಎಂಬ ಮಗಳು ಮತ್ತು ಕಿಯಾನ್ ಎಂಬ ಮಗನಿದ್ದಾನೆ. 2016 ರಲ್ಲಿ ಸಂಜಯ್ ಕಪೂರ್ ಅವರಿಂದ ಕರೀಷ್ಮಾ ವಿಚ್ಚೇದನ ಪಡೆದರು. ಮಕ್ಕಳಿಬ್ಬರು ಕರೀಷ್ಮಾ ಕಪೂರ್ ಜೊತೆಗೆ ವಾಸವಿದ್ದಾರೆ. ಜಾಹಿರಾತು ಮತ್ತು ವೆಬ್ ಸರಣಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಅವರು ಈಗಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
Published by:shrikrishna bhat
First published: