Cannes 2019: ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ಗಾಗಿ ಹತ್ತು ದಿನಗಳಲ್ಲಿ 5 ಕೆ.ಜಿ. ತೂಕ ಇಳಿಸಿಕೊಂಡ ಕಂಗನಾ..!

Cannes 2019: ನೋಡಲು ಸಪೂರವಾಗಿರುವ ನಟಿ ಕಂಗನಾ ದೇಹದ ತೂಕವನ್ನು ಇಳಿಸಿಕೊಳ್ಳುವ ಅಗತ್ಯ ಇತ್ತಾ ಅನ್ನೋ ಪ್ರಶ್ನೆಯನ್ನು ತುಂಬಾ ಜನ ಕೇಳುತ್ತಿದ್ದಾರೆ. ಹೌದು, ಕಂಗನಾ ಸಪೂರವಾಗಿಯೇ ಇದ್ದರು. ಆದರೆ ಈ ಹಿಂದೆ ಸಿನಿಮಾವೊಂದಕ್ಕೆ ತೂಕ ಹೆಚ್ಚಿಸಿಕೊಂಡಿದ್ದ ಕಂಗನಾ ಈಗ ಸೀರೆ ಉಡಲು ತೂಕ ಇಳಿಸಿಕೊಂಡಿದ್ದಾರೆ.

Anitha E | news18
Updated:May 17, 2019, 7:03 PM IST
Cannes 2019: ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ಗಾಗಿ ಹತ್ತು ದಿನಗಳಲ್ಲಿ 5 ಕೆ.ಜಿ. ತೂಕ ಇಳಿಸಿಕೊಂಡ ಕಂಗನಾ..!
ತೂಕ ಇಳಿಸಿಕೊಂಡ ಕಂಗನಾ
Anitha E | news18
Updated: May 17, 2019, 7:03 PM IST
ಬಾಲಿವುಡ್ ಕ್ವೀನ್ ಕಂಗನಾ ಸದ್ಯ ಎರಡು ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಅದು ಕಾನ್ಸ್​ನಲ್ಲಿ ಸೀರೆಯುಟ್ಟಿದ್ದು ಹಾಗೂ  10 ದಿನದಲ್ಲಿ 5 ಕೆಜಿ ತೂಕ ಇಳಿಸಿಕೊಂಡಿದ್ದಕ್ಕಾಗಿ. ಕಂಗನಾ ಈ ಪರಿ ತೂಕ ಇಳಿಸಿಕೊಂಡಿದ್ದು ಕೇವಲ ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ನ ರೆಡ್​ ಕಾರ್ಪೆಟ್​ ಮೇಲೆ ಕ್ಯಾಟ್​ ವಾಕ್​ ಮಡೋಕೆ ಅಂತೆ.

ಕಂಗನಾ ನೋಡಲು ಸಪೂರವಾಗಿಯೇ ಇದ್ದಾರೆ. ಹೀಗಿರುವಾಗ ಅವರು ದೇಹದ ತೂಕವನ್ನು ಇಳಿಸಿಕೊಳ್ಳುವ ಅಗತ್ಯ ಇತ್ತಾ ಅನ್ನೋ ಪ್ರಶ್ನೆಯನ್ನು ತುಂಬಾ ಜನ ಕೇಳುತ್ತಿದ್ದಾರೆ. ಹೌದು, ಕಂಗನಾ ಸಪೂರವಾಗಿಯೇ ಇದ್ದರು. ಆದರೆ ಈ ಹಿಂದೆ ಕಂಗನಾ 'ಪಂಗಾ' ಎಂಬ ಸಿನಿಮಾ ಮಾಡುತ್ತಿದ್ದು, ಅದಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದರಂತೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮೇಲೆ ಕತ್ರಿನಾ ಕೈಫ್ ಕಣ್ಣು: ಪಂಜಾಬಿ ಮದುವೇಲಿ ಕುಣಿದು ಕುಪ್ಪಳಿಸಿದ ಜೋಡಿ !

'ಪಂಗಾ' ಸಿನಿಮಾದಲ್ಲಿ ಅವರು ಕಬಡ್ಡಿ ಆಟಗಾರ್ತಿಯಾಗಿ ಅಭಿನಯಿಸಿದ್ದು, ಅದಕ್ಕಾಗಿ ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಸೇವಿಸುವ ಮೂಲಕ ತೂಕವನ್ನು ಹೆಚ್ಚಿಸಿಕೊಂಡಿದ್ದರಂತೆ. ಆದರೆ ಈಗ ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾರತೀಯ ಶೈಲಿಯಲ್ಲಿ ಸೀರೆಯುಡಲು ಅವರು ತೂಕ ಇಳಿಸಿಕೊಂಡಿದ್ದಾರೆ.

 





ಮಾಡರ್ನ್ ಲುಕ್‍ನಲ್ಲಿ ಮಿಂಚೋ ಕಂಗನಾ ರಜಪೂತ ಹೆಣ್ಣು. ಭಾರತೀಯ ಸಂಸ್ಕಂತಿಯನ್ನು ಹೆಚ್ಚು ಪ್ರೀತಿಸೋ ನಟಿ. ಈ ಕಾರಣಕ್ಕಾಗಿಯೇ ಭಾರತೀಯ ನಾರಿಯ ಲುಕ್‍ನಲ್ಲಿ ಕಂಗನಾ ಮಿಂಚಿದ್ದಾರೆ. ಇದ್ಯ ಅವರ ಸೀರೆಯುಟ್ಟಿರುವ ಫೋಟೋ ವೈರಲ್​ ಆಗುತ್ತಿದೆ.



ಹತ್ತು ದಿನಗಳಲ್ಲಿ 5 ಕೆ.ಜಿ. ತೂಕ ಇಳಿಸಿಕೊಳ್ಳಲು ಕಂಗನಾ ಡಯಟ್​ ಜತೆಗೆ ಫಿಟ್​ನೆಸ್​ ತರಬೇತುದಾರನ ಸಹಾಯದಿಂದ ಬೆವರು ಹರಿಸಿದ್ದಾರೆ. ಇದರ ಪರಿಣಾಮವೇ ಇಷ್ಟು ಕಡಿಮೆ ಸಮಯದಲ್ಲಿ ಮಾಡಲಾಗದ್ದನ್ನು ಸಾಧಿಸಿ ತೋರಿಸಿದ್ದಾರೆ ಕಂಗನಾ.



 

ಸದ್ಯ ಕಂಗನಾ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‍ನಲ್ಲಿ ನಟಿಸುತ್ತಿದ್ದು, ಜಯಲಲಿತಾ ಪಾತ್ರಕ್ಕಾ ತೂಕ ಹೆಚ್ಚಿಸಿಕೊಳ್ಳುವ ಬದಲು ತೂಕ ಇಳಿಸಿಕೊಂಡಿರುವುದು ಅಚ್ಛರಿ ಮೂಡಿಸಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

 Cannes 2019: ಕಾನ್ಸ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಸ್ಟೈಲಿಶ್​ ಆಗಿ ಕಾಂಜೀವರಂ ಸೀರೆಯುಟ್ಟು ಮಿಂಚಿದ ಕಂಗನಾ..!

First published:May 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...