Ramayan: ಬಾಲಿವುಡ್​ನಲ್ಲಿ 500 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿಗೆ ರಾಮಾಯಣ..!

Ramayan: ಬಾಲಿವುಡ್​ನಲ್ಲಿ ನಿರ್ಮಾಣಗೊಳ್ಳಲಿದೆ 500 ಕೋಟಿ ಬಜೆಟ್​ನಲ್ಲಿ ರಾಮಾಯಣ. ಬೆಳ್ಳಿ ಪರದೆ ಮೇಲೆ ರಾಮಾಯಣವನ್ನು ತರಲು ಸಿದ್ಧರಾಗುತ್ತಿದ್ದಾರೆ ನಿತೇಶ್​ ತಿವಾರಿ ಹಾಗೂ ರವಿ ಉದಯ್ವಾರ್. ಈ ಚಿತ್ರ ಲೈವ್​ ಆ್ಯಕ್ಷನ್​ ಟ್ರಿಯಾಲಜಿಯಾಗಲಿದ್ದು, 3Dಯಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗುತ್ತದೆಯಂತೆ.

Anitha E | news18
Updated:August 1, 2019, 4:35 PM IST
Ramayan: ಬಾಲಿವುಡ್​ನಲ್ಲಿ 500 ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿಗೆ ರಾಮಾಯಣ..!
ಬಾಲಿವುಡ್​ ರಾಮಾಯಣದಲ್ಲಿ ಹೃತಿಕ್​-ದೀಪಿಕಾ
  • News18
  • Last Updated: August 1, 2019, 4:35 PM IST
  • Share this:
ಭಾರತದ ಮಹಾಕಾವ್ಯಗಳಾದ 'ಮಹಾಭಾರತ' ಹಾಗೂ 'ರಾಮಾಯಣ'ದ ಬಗ್ಗೆ ಈಗಾಗಲೇ ಕಿರುತೆರೆಯಲ್ಲಿ ಧಾರಾವಾಹಿಗಳು ಬಂದು ಪ್ರೇಕ್ಷಕರ ಮನ ಗೆದ್ದಿವೆ. ಈಗ ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕ ಮುನಿರತ್ನ ಕನ್ನಡದಲ್ಲಿ 'ಮಹಾಭಾರತ'ದಲ್ಲಿ ಬರುವ ಒಂದು ಪ್ರಸಂಗ 'ಕುರುಕ್ಷೇತ್ರ'ವನ್ನು ಸಿನಿಮಾ ಮಾಡಲಾಗಿದೆ. ಈಗ ಬಾಲಿವುಡ್​ನಲ್ಲಿ 'ರಾಮಾಯಣ' ಕುರಿತಾದ ಚಿತ್ರ ಸೆಟ್ಟೇರಲಿದೆ.

ನಿತೇಶ್​ ತಿವಾರಿ ಹಾಗೂ ರವಿ ಉದಯ್ವಾರ್​ ಅವರು ಸೇರಿಕೊಂಡು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಲೈವ್​ ಆ್ಯಕ್ಷನ್​ ಟ್ರಿಯಾಲಜಿಯಾಗಲಿದೆ. ಜತೆಗೆ 3Dಯಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗುತ್ತದೆಯಂತೆ.

ಹೃತಿಕ್​ ಹಾಗೂ ದೀಪಿಕಾ


ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆಯಾಗಲಿದೆ ರಾಮಾಯಣ

ಬಾಲಿವುಡ್​ನಲ್ಲಿ ಚಿತ್ರೀಕರಣಗೊಳ್ಳಲಿರುವ ಸಿನಿಮಾವನ್ನು ತೆಲುಗು ಹಾಗೂ ತಮಿಳಿನಲ್ಲೂ ಡಬ್​ ಮಾಡಿ ರಿಲೀಸ್​ ಮಾಡಲಾಗುವುದು ಎನ್ನಲಾಗುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇದರಲ್ಲಿ ರಾಮ-ಸೀತೆಯಾಗಿ ಹೃತಿಕ್​ ರೋಷನ್​ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: 'ಕೆ.ಜಿ.ಎಫ್'. ನಂತರ ತೆಲುಗಿನ ಸ್ಟಾರ್​ ನಿರ್ದೇಶಕನೊಂದಿಗೆ ಕೆಲಸ ಮಾಡಲಿರುವ ರಾಕಿಂಗ್​ ಸ್ಟಾರ್ ಯಶ್​..!

ತಾರಾಬಳಗದ ಕುರಿತು ಸಿನಿ ತಂಡ ಇನ್ನೂ ಯಾವುದೇ ಬಹಿರಂಗ ಪ್ರಕಟಣೆ ಮಾಡಿಲ್ಲ. ಆದರೆ ಈ ಪಾತ್ರಕ್ಕೆ ದೀಪಿಕಾ ಹಸಿರು ನಿಶಾನೆ ತೋರಿಸಿದರೆ, ಇದು ಹೃತಿಕ್​ ಜತೆ ಅವರ ಮೊದಲ ಸಿನಿಮಾ ಆಗಲಿದೆ.ಇದನ್ನೂ ಓದಿ: Kurukshetra: ಕರ್ನಾಟಕಕ್ಕೆ ಇರುವುದು ಒಬ್ಬನೇ ದುರ್ಯೋಧನ ಎಂದು ಡಿಬಾಸ್​ರನ್ನು ಕೊಂಡಾಡಿದ ರವಿಮಾಮ

ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಈ ಕುರಿತಂತೆ ಚಿತ್ರತಂಡ ಹೃತಿಕ್​ ಜತೆ ಮಾತುಕತೆ ನಡೆಸಿದ್ದು, ಇದಕ್ಕೆ 'ಸೂಪರ್​ 30' ನಟ ಒಪ್ಪಿಗೆ ಸೂಚಿಸಿದ್ದಾರಂತೆ. ಇನ್ನು ಅಲ್ಲು ಅರವಿಂದ್​, ನಿಮಿತ್​ ಮಲ್ಹೋತ್ರ ಹಾಗೂ ಮಧು ಮಂತೇನಾ ಅವರ ಹೆಸರುಗಳು ಸಹ  ನಿರ್ಮಾಪಕರ ಪಟ್ಟಿಯಲ್ಲಿವೆ ಎಂದು ಹೇಳಲಾಗುತ್ತಿದೆ.

HBD Kiara Advani: 27ನೇ ವಸಂತಕ್ಕೆ ಕಾಲಿಟ್ಟ ನಟಿ ಕಿಯಾರ ಅಡ್ವಾಣಿಯ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳು..!


 
First published: August 1, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading