ದೇಶದೆಲ್ಲೆಡೆ ಕೋವಿಡ್ ಸೋಂಕು ಕಡಿಮೆಯಾಗಿದ್ದು, ದೈನಂದಿನ ಜೀವನಕ್ಕೆ ಜನಸಾಮಾನ್ಯರು ಈಗಾಗಲೇ ಮರಳಿದ್ದಾರೆ. ಸರ್ಕಾರ ಕೂಡ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಕೆ ಮಾಡುವ ಮೂಲಕ ಎಲ್ಲಾ ಉದ್ಯಮಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಸಿನಿ ಉದ್ಯಮ ಬಹುದಿನಗಳಿಂದ ಎದುರು ನೋಡುತ್ತಿದ್ದ ಚಿತ್ರರಂಗ ತೆರೆಯಲು ಕೂಡ ಈಗಾಗಲೇ ಮಹಾರಾಷ್ಟ್ರದಲ್ಲಿ ಅನುಮತಿ ನೀಡಿದ್ದು, ಕರ್ನಾಟಕದಲ್ಲಿ ಕೂಡ ಈ ಬಗ್ಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗಲಿದೆ. ಇದೇ ಹಿನ್ನಲೆ ಥಿಯೇಟರ್ ರಿಲೀಸ್ಗೆ ಕಾಯುತ್ತಿದ್ದ ಬಿಗ್ ಬಜೆಟ್ ಚಿತ್ರಗಳು (Big Budget Movies) ಒಟ್ಟೊಟ್ಟಿಗೆ ಬಿಡುಗಡೆಯಾಗುವ ಮೂಲಕ ತೆರೆ ಮೇಲೆ ಸ್ಟಾರ್ ವಾರ್ (star War) ನಡೆಯುವ ಸಾಧ್ಯತೆ ಇದೆ.
ಅಂದ ಹಾಗೇ ಬಿಡುಗಡೆಗೆ ಸಿದ್ಧವಾಗಿರುವ ಬಿಗ್ ಬಜೆಟ್ ಸಿನಿಮಾಗಳು ಯಾವುವ. ಯಾವ ನಟರು ಹಿರಿತೆರೆ ಮೇಲೆ ಸ್ಟಾರ್ ವಾರ್ ಮಾಡಲು ಸಿದ್ಧರಾಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಾಲಿವುಡ್ ಮಾರ್ವೆಲ್ ಜೊತೆ ಹೊಡೆದಾಡಲಿರುವ ಸೂರ್ಯವಂಶಿ
ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಕ್ಲೋ ಜಾವೊ ಅವರಿಂದ ಮಾರ್ವೆಲ್ಸ್ ಸ್ಟುಡಿಯೋಸ್ ಬಿಗ್ಗಿ ಎಟರ್ನಲ್ಸ್ ಈ ಬಾರಿ ದೀಪಾವಳಿಗೆ ತೆರೆಗೆ ಬರಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ, ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಈ ಕುರಿತು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದು, ದೀಪಾವಳಿಗೆ ಸೂರ್ಯವಂಶಿ ಧೂಳೆಬ್ಬಿಸುವ ಸಾಧ್ಯತೆ ಇದೆ.
ಇನ್ನು ಇದರ ಜೊತೆಗೆ ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಅಭಿನಯದ ಅಂತಿಮ್: ದಿ ಫೈನಲ್ ಟ್ರುಥ್ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಣವೀರ್ ಸಿಂಗ್ ಜೊತೆ ಸ್ಪರ್ಧೆಗಿಳಿಯಲಿದ್ದಾರೆ ಅಲ್ಲು ಅರ್ಜುನ್
ಟಾಲಿವುಡ್ನ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಭಾರೀ ನಿರೀಕ್ಷೆ ಮೂಡಿಸಿರುವ ಪುಷ್ಪಾ ಸಿನಿಮಾ ಕ್ರಿಸ್ಮಸ್ಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ವರ್ಷಾಂತ್ಯದ ವೇಳೆಗೆ ಕಪಿಲ್ ದೇವ್ ಜೀವನಾಧರಿತ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಕೂಡ ಅಭಿಮಾನಿಗಳ ಮೋಡಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಕ್ರಿಸ್ಮಸ್ ಗೂ ಮುನ್ನ ಅಂದರೆ ಡಿ. 22ರಂದು ದಿ ಮ್ಯಾಟ್ರಿಕ್ಸ್ ಫ್ರಾಂಚೈಸ್ ನಾಲ್ಕನೇ ಸರಣಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು , ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
ಅಜಿತ್, ಪ್ರಭಾಸ್ಗೆ ಟಕ್ಕರ್ ಕೊಡುತ್ತಾರಾ ಮಹೇಶ್ ಬಾಬು
ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯದ ವಲಿಮೈ 2022ರ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಬಾಹುಬಲಿ ನಟ ಪ್ರಭಾಸ್-ಪೂಜಾ ಹೆಗ್ಡೆ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಕೂಡ ಸಿನಿಮಾ ಮಂದಿರಕ್ಕೆ ಬರಲು ಸಿದ್ಧತೆ ನಡೆಸಿದೆ. ಇನ್ನು ವಿಶೇಷ ಪೋಸ್ಟರ್ ಮೂಲಕವೇ ಅಭಿಮಾನಿಗಳ ಮೋಡಿ ಮಾಡಿರುವ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರಿ ವಾರಿ ಪಾಟು ಕೂಡ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.
ಅಮೀರ್ ಖಾನ್ ಲಾಲ್ ಚಡ್ಡಾಗೆ ವಿಲನ್ ಆಗಲಿದ್ದಾರೆ ಜಾನ್ ಅಬ್ರಹಾಂ
ಜಾನ್ ಅಬ್ರಹಾಂ , ದಿಶಾ ಪಟಾನಿ ಅಭಿನಯದ ಸಸ್ಪೆನ್ಸ್ ಥ್ರಿಲರ್ ಆಕ್ಷನ್ ಚಿತ್ರ ಎಕ್ ವಿಲನ್ ರಿಟರ್ನ್ 2022ರ ಪ್ರೇಮಿಗಳ ದಿನದಂದು ತೆರೆ ಕಾಣುವ ಸಾಧ್ಯತೆ ಇದೆ, ಇದೇ ವೇಳೆ ಅಮೀರ್ ಖಾನ್, ಕರೀನಾ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಕೂಡ ಸಿನಿ ರಸಿಕರಿಗೆ ರಸದೌತಣ ನೀಡಲು ಸಿದ್ದವಾಗಿದೆ.
ಇದನ್ನು ಓದಿ: 3 ತಿಂಗಳ ಇಂಗ್ಲೆಂಡ್ ಪ್ರವಾಸದ ಬಳಿಕ ಮತ್ತೆ ಶೂಟಿಂಗ್ಗೆ ಮರಳಿದ ಅನುಷ್ಕಾ ಶರ್ಮಾ; ಫೋಟೋಗಳು ವೈರಲ್
ಬ್ಯಾಟ್ ಮ್ಯಾನ್- ಬಚ್ಚನ್ ಪಾಂಡೆ
ನಿರ್ದೇಶಕ ಮ್ಯಾಟ್ ರೀವ್ಸ್, ರಾಬರ್ಟ್ ಪ್ಯಾಟಿನ್ಸನ್ ನ ಬ್ಯಾಟ್ಮ್ಯಾನ್ 2022ರ ಮಾರ್ಚ್ 4ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಇದೇ ದಿನದಂದು ಅಕ್ಷಯ್ ಕುಮಾರ್, ಕೃತಿ ಸನೋನ್ ಅಭಿನಯದ ಬಚ್ಚನ್ ಪಾಂಡೆ ಜನರನ್ನು ಮನರಂಜಿಸಲಿದೆ.
ಕೆಜಿಎಫ್- ಚಾಪ್ಟರ್2 ಮುಂದೆ ಗೆಲ್ಲತ್ತಾ ಬೆಡಿಯಾ
ಇಡೀ ದೇಶದ ಸಿನಿ ರಸಿಕರೇ ಎದುರು ನೋಡುತ್ತಿರುವ ಸ್ಯಾಂಡಲ್ವುಡ್ ನಟ ಯಶ್ ಅಭಿಯನದ ಕೆಜಿಎಫ್ 2 ಕಡೆಗೂ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಹಲವು ಬಾರಿ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿರುವ ಚಿತ್ರತಂಡ 2022ರ ಏಪ್ರಿಲ್ಗೆ ಬರುವುದು ಪಕ್ಕಾ ಎಂದಿದೆ. ಇದೇ ಸಂದರ್ಭದಲ್ಲಿ ಬಾಲಿವುಡ್ನ ಹಾರಾರ್ ಕಾಮಿಡಿ ಬೆಡಿಯಾ ಕೂಡ ಬಿಡುಗಡೆಯಾಗಲಿದೆ.
ಇದನ್ನು ಓದಿ: ನಕ್ಕರೆ ಅಪ್ಪನಂತೆಯೇ ಕಾಣುತ್ತಾಳೆ ಸ್ಯಾಂಡಲ್ವುಡ್ ಅಧ್ಯಕ್ಷನ ಮಗಳು Punya
ಮೇಡೇ- ಹಿರೋಪತಿ-2
ಒಳ್ಳೆ ಹಿಟ್ಗೆ ಕಾಯುತ್ತಿರುವ ಟೈಗರ್ ಶ್ರಾಫ್ ಅಭಿನಯದ ಹಿರೋಪತಿ 2 2022ರ ಏಪ್ರಿಲ್ 29ರಂದು ಬಿಡುಗಡೆಯಾಗಲಿದೆ. ಇದೇ ದಿನದಂದು ಬಿಗ್ಬಿ ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಅಭಿನಯದ ಮೇಡೇ ಕೂಡ ಬಿಡುಗಡೆಯಾಗಲಿದೆ
ಆದಿಪುರುಷ್- ರಕ್ಷಾ ಬಂಧನ್
ರಾಮಯಾಣದ ಕಥಾ ಹಂದರ ಹೊಂದಿರು ಪ್ರಭಾಸ್ ಅಭಿಯನಯದ ಆದಿಪುರುಷ್ ಮುಂದಿನ ವರ್ಷ ಆಗಸ್ಟ್ 11ರಂದು ಬಿಡುಗಡೆ ದಿನಾಂಕ ಘೋಷಿಸಿದೆ. ಇದೇ ದಿನದಂದು ಅಕ್ಷಯ್ ಕುಮಾರ್ ಅಭಿಯನದ ರಕ್ಷಾ ಬಂಧನ್ ಕೂಡ ಬಿಡುಗಡೆಯಾಗಲಿದೆ
ವಿಕ್ರಂ ವೇದಾಗೆ ಮಿಷನ್ ಇಂಪಾಸಿಬಲ್ ಆಗತ್ತಾ?
ಈಗಾಗಲೇ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಕಾಲಿವುಡ್ ವಿಕ್ರಂ ವೇದಾ ಹಿಂದ ರಿಮೇಕ್ ಚಿತ್ರಕ್ಕೆ ಹಾಲಿವುಡ್ನ ಪ್ರಖ್ಯಾತಿ ಸರಣಿಯ ಮಿಷನ್ ಇಂಪಾಸಿಬಲ್ ಸೆಡ್ಡು ಹೊಡೆಯಲಿದೆ. 2022ರ ಸೆಪ್ಟೆಂಬರ್ 30ರಂದು ಮಿಷನ್ ಇಂಪಾಸಿಬಲ್ 7 ಬಿಡುಗಡೆಯಾದರೆ, ಸೈಫ್ ಆಲಿ ಖಾನ್, ಹೃತಿಕ್ ರೋಷನ್ ಅಭಿನಯದ ವಿಕ್ರಂ ವೇದಾ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ