‘ಕೆಜಿಎಫ್ 2’ನಲ್ಲಿ ಸಂಜಯ್ ದತ್ ನಟಿಸ್ತಾರಾ?; ಹೌದು ಅಂತಾರೆ ಯಶ್!
‘ಕೆಜಿಎಫ್ 2’ನಲ್ಲಿ ಬಾಲಿವುಡ್ ಹೀರೋ ಸಂಜಯ್ ದತ್ ನಟಿಸಲಿದ್ದಾರೆ ಎನ್ನುವ ಮಾತುಗಳಿದ್ದವು. ಆದರೆ, ಆ ಬಗ್ಗೆ ಚಿತ್ರದ ಯಾರೊಬ್ಬರೂ ಸ್ಪಷ್ಟನೆ ನೀಡಿರಲಿಲ್ಲ. ಈಗ ಈ ವಿಚಾರವನ್ನು ಯಶ್ ಖಚಿತಪಡಿಸಿದ್ದಾರೆ. ಸಂಜಯ್ ದತ್ ಚಾಪ್ಟರ್ 2ನಲ್ಲಿ ನಟಿಸೋದು ಬಹುತೇಕ ಖಚಿತವಂತೆ.
‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್’ ಚಾಪ್ಟರ್ 1 ಚಿತ್ರ ಹಲವು ದಾಖಲೆಗಳನ್ನು ಬರೆದಿದೆ. ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 200 ಕೋಟಿ ರೂ. ಗಳಿಕೆ ಮಾಡಿದ ಹೆಮ್ಮೆ ‘ಕೆಜಿಎಫ್’ ಚಿತ್ರದ್ದು. ಸದ್ಯ ಎಲ್ಲರ ದೃಷ್ಟಿ ‘ಕೆಜಿಎಫ್ 2’ ಮೇಲೆ ನೆಟ್ಟಿದೆ. ಈಗಾಗಲೇ ಚಿತ್ರದ ಶೂಟಿಂಗ್ಗೆ ಸಿದ್ಧತೆ ಕೂಡ ನಡೆಯುತ್ತಿದೆ. ಈ ನಡುವೆ ಯಶ್ ಒಂದಷ್ಟು ವಿಚಾರಗಳನ್ನು ಖಚಿತಪಡಿಸಿದ್ದಾರೆ. ಇದು ಯಶ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
‘ಕೆಜಿಎಫ್ 2’ನಲ್ಲಿ ಬಾಲಿವುಡ್ ಹೀರೋ ಸಂಜಯ್ ದತ್ ನಟಿಸಲಿದ್ದಾರೆ ಎನ್ನುವ ಮಾತುಗಳಿದ್ದವು. ಆದರೆ, ಆ ಬಗ್ಗೆ ಚಿತ್ರದ ಯಾರೊಬ್ಬರೂ ಸ್ಪಷ್ಟನೆ ನೀಡಿರಲಿಲ್ಲ. ಈಗ ಈ ವಿಚಾರವನ್ನು ಯಶ್ ಖಚಿತಪಡಿಸಿದ್ದಾರೆ. ಸಂಜಯ್ ದತ್ ಚಾಪ್ಟರ್ 2ನಲ್ಲಿ ಅಭಿನಯಿಸುವುದು ಬಹುತೇಕ ಖಚಿತವಂತೆ.
‘ಕೆಜಿಎಫ್ 1’ ಚಿತ್ರದಲ್ಲೂ ಸಂಜಯ್ ನಟಿಸಬೇಕಿತ್ತು ಎನ್ನುವ ಯಶ್, “ನಾವು ಸಂಜಯ್ ದತ್ಗೆ ‘ಕೆಜಿಎಫ್’ನಲ್ಲಿ ನಟಿಸುವಂತೆ ಕೋರಿಕೊಂಡಿದ್ದೆವು. ಆದರೆ, ಡೇಟ್ ಹೊಂದಾಣಿಕೆಯಾಗದ ಕಾರಣ ಅವರು ನಟಿಸಲು ಸಾಧ್ಯವಾಗಿಲ್ಲ. ಈಗ ಚಾಪ್ಟರ್ 2ನಲ್ಲಿ ಪ್ರಮುಖ ವಿಲನ್ ಪಾತ್ರ ನಿರ್ವಹಿಸಲು ಅಪ್ರೋಚ್ ಮಾಡಿದ್ದೇವೆ. ಅವರು ಈ ಆಫರ್ ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ,” ಎನ್ನುತ್ತಾರೆ.
ಇದನ್ನೂ ಓದಿ: TRAILER: 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು': 'ಯಜಮಾನ'ನ ಮಾಸ್ ಎಂಟ್ರಿಸಂಜಯ್ ದತ್ ಬಾಲಿವುಡ್ ಚಿತ್ರಗಳಲ್ಲಿ ಮಾತ್ರ ಬಣ್ಣ ಹಚ್ಚಿದ್ದಾರೆ. ಅವರು ಈವರೆಗೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಒಂದೊಮ್ಮೆ ಅವರು, ‘ಕೆಜಿಎಫ್ 2’ನಲ್ಲಿ ಬಣ್ಣ ಹಚ್ಚಿದ್ದೇ ಆದಲ್ಲಿ ಕನ್ನಡದ ಚಿತ್ರರಂಗದ ಮೂಲಕ ಅವರು ದಕ್ಷಿಣ ಭಾರತಕ್ಕೆ ಬಂದಂತಾಗುತ್ತದೆ.
‘ಕೆಜಿಎಫ್’ ಸ್ಥಳೀಯ ಸಿನಿಮಾ ಎನ್ನುವ ಕಾರಣಕ್ಕೆ ಸಂಜಯ್ ದತ್ ನಟಿಸಲು ಸಾಧ್ಯವಿಲ್ಲ ಎಂದಿದ್ದರಂತೆ. ಆದರೆ, ಈಗ ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಕೆಜಿಎಫ್ ತಂದ ಪ್ರಯತ್ನ ಮೆಚ್ಚಿಕೊಂಡಿರುವ ಅವರು, ಚಾಪ್ಟರ್ 2ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬುದು ಮೂಲಗಳ ಮಾಹಿತಿ. ಕ್ರಿಸ್ಮಸ್ ಹಬ್ಬದ ನಿಮಿತ್ತ ಈ ಚಿತ್ರ ಡಿ.21ರಂದು ತೆರೆಗೆ ಬಂದಿತ್ತು. ಐದು ಭಾಷೆಗಳಲ್ಲಿ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ತೆರೆಮೇಲೆ ಮತ್ತೆ ರಂಜಿಸಲಿದೆ 'ಚುಟುಚುಟು' ಜೋಡಿ; 'ಅವತಾರ ಪುರುಷನಿ'ಗೆ ಕೊನೆಗೂ ಸಿಕ್ಕಳು ಬೆಡಗಿ

Loading...
Loading...