ಬಾಲಕೋಟ್​ ದಾಳಿಯ ನೈಜ ಕಥೆ ಈಗ ಸಿನಿಮಾ ಪರದೆ ಮೇಲೆ; ಹೀರೋ ಯಾರು ಗೊತ್ತಾ?

ಆದಿತ್ಯಧಾರ್ ನಿರ್ದೆಶನದಲ್ಲಿ ಮೂಡಿಬಂದ​ ‘ಉರಿ; ದಿ ಸರ್ಜಿಕಲ್​ ಸ್ಟ್ರೈಕ್​‘ ನೈಜ ಕಥಾಹಂದರದ ಸಿನಿಮಾ ಆಗಿತ್ತು. ಈ ಸಿನೆಮಾವು ಬಾಲಿವುಡ್​ ದೊಡ್ಡ ಸೆನ್ಸೆಷನ್​ ಸೃಷ್ಠಿಸಿತ್ತು. ನಾಯಕ ವಿಕಿ ಕೌಶಲ್​ ಅಭಿನಯದಲ್ಲಿ ​​ಅಭಿನದಿಂದ ಮೂಡಿಬಂದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 342 ಕೋಟಿ ರೂಪಾಯಿ ಬಾಚಿಕೊಂಡು ದಾಖಲೆ ನಿರ್ಮಿಸಿತ್ತು. ಇದೀಗ ನೈಜ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಬೇಡಿಕೆಯಿದೆ ಎಂದು ಬಾಲಿವುಡ್​ ಮನಗಂಡಿದ್ದು, ಅಂತಹದೇ ಸಿನಿಮಾವೊಂದು ತೆರೆಯ ಮೇಲೆ ತರಲು ಸಿದ್ಧಪಡಿಸಲಾಗುತ್ತಿದೆ.

news18
Updated:August 23, 2019, 9:19 PM IST
ಬಾಲಕೋಟ್​ ದಾಳಿಯ ನೈಜ ಕಥೆ ಈಗ ಸಿನಿಮಾ ಪರದೆ ಮೇಲೆ; ಹೀರೋ ಯಾರು ಗೊತ್ತಾ?
ಬಾಲಕೋಟ್​
  • News18
  • Last Updated: August 23, 2019, 9:19 PM IST
  • Share this:
ಇತ್ತೀಚೆಗೆ ಬಾಲಿವುಡ್​ನಲ್ಲಿ ನೈಜ ಕಥಾಹಂದರದ ಸಿನಿಮಾಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬಯೋಪಿಕ್​ ಆಧಾರಿತ ಸಿನಿಮಾಗಳತ್ತ ನಿರ್ದೆಶಕರು ಮುಖ ಮಾಡುತ್ತಿದ್ದಾರೆ.

ಆದಿತ್ಯಧಾರ್ ನಿರ್ದೆಶನದಲ್ಲಿ ಮೂಡಿಬಂದ​ ‘ಉರಿ; ದಿ ಸರ್ಜಿಕಲ್​ ಸ್ಟ್ರೈಕ್​‘ ನೈಜ ಕಥಾಹಂದರದ ಸಿನಿಮಾ ಆಗಿತ್ತು. ಈ ಸಿನೆಮಾವು ಬಾಲಿವುಡ್​ ದೊಡ್ಡ ಸೆನ್ಸೆಷನ್​ ಸೃಷ್ಠಿಸಿತ್ತು. ನಾಯಕ ವಿಕಿ ಕೌಶಲ್​ ಅಭಿನಯದಲ್ಲಿ ​​ಅಭಿನದಿಂದ ಮೂಡಿಬಂದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 342 ಕೋಟಿ ರೂಪಾಯಿ ಬಾಚಿಕೊಂಡು ದಾಖಲೆ ನಿರ್ಮಿಸಿತ್ತು. ಇದೀಗ ನೈಜ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಬೇಡಿಕೆಯಿದೆ ಎಂದು ಬಾಲಿವುಡ್​ ಮನಗಂಡಿದ್ದು, ಅಂತದೇ ಸಿನಿಮಾವೊಂದು ತೆರೆಯ ಮೇಲೆ ಮೂಡಲು ಸಿದ್ಧವಾಗುತ್ತಿದೆ.

ಇದನ್ನೂ ಓದಿ: ಇ.ಡಿ ಬಂಧನದಿಂದ ರಕ್ಷಣೆ ಪಡೆದ ಪಿ.ಚಿದಂಬರಂ; ಕಾಂಗ್ರೆಸ್​ ನಾಯಕನಿಗೆ ಸುಪ್ರೀಂನಲ್ಲಿ ಮೊದಲ ಜಯ

ಉರಿ ಚಿತ್ರದಂತೆಯೇ, ನೈಜ ಕಥಾ ಹಂದರವನ್ನು ಹೊಂದಿದ್ದ ಬಾಲಾಕೋಟ್​ ದಾಳಿಯ ಸಿನೆಮಾವನ್ನು ತೆರೆಗಪ್ಪಳಿಸಲು ಬಾಲಿವುಡ್​ ತಯಾರಿ ನಡೆಸುತ್ತಿದೆ. ಈ ಕುರಿತಂತೆ ಬಾಲಿವುಡ್​ ಟ್ರೇಡ್​ ಅನಾಲಿಸ್ಟ್​ ತರುಣ್​ ಆದರ್ಶ್​ ಟ್ವೀಟ್​ ಮಾಡಿದ್ದಾರೆ. ವಿವೇಕ್​ ಒಬೆರಾಯ್​ ಬಾಲಾಕೋಟ್​ ಸಿನೆಮಾವನ್ನು ಕೈಗೆತ್ತಿಕೊಂಡಿದ್ದು, ಬಾಲಕೋಟ್​; ದಿ ಟ್ರೂ ಸ್ಟೋರಿ ಎಂದು ಹೆಸರಿಡಲಾಗಿದೆ ಎಂದು ಹೇಲಿದ್ದಾರೆ. ಈ ಸಿನೆಮಾ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ತೆರಕಾಣಲಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಇದೇ ವರ್ಷ ಬಾಲಾಕೋಟ್​ ಸಿನಿಮಾ ಸೆಟ್ಟೇರಲಿದೆ. ವಿಶೇಷವೆಂದರೆ ಈ ಸಿನಿಮಾವನ್ನು ಜಮ್ಮು, ಕಾಶ್ಮೀರ, ದಿಲ್ಲಿ ಮತ್ತು ಆಗ್ರಾದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ.

First published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading