Good Newws Collection: ಅಕ್ಷಯ್​ ಕುಮಾರ್​ಗೆ ಗುಡ್​ ನ್ಯೂಸ್​: 200 ಕೋಟಿ ಕ್ಲಬ್​ಗೆ ಎಂಟ್ರಿ ಕೊಟ್ಟ ಸಿನಿಮಾ ​

Good Newws Collection: ಕರೀನಾ ಕಪೂರ್​, ಅಕ್ಷಯ್​ ಕುಮಾರ್​, ದಿಲ್​ಜಿತ್​ ದೋಸಾಂಜ್​, ಹಾಗೂ ಕಿಯಾರಾ ನಟಿಸಿರುವ 'ಗುಡ್​ ನ್ಯೂಸ್​' ಚಿತ್ರ ಕಳೆದ ವರ್ಷ ಅಂದರೆ ಡಿ. 27ಕ್ಕೆ ತೆರೆಕಂಡಿತ್ತು. ಇದೇ ವೇಳೆ ಸ್ಟಾರ್ ನಟರ ಸಿನಿಮಾಗಳು ತೆರೆಕಂಡಿದ್ದು, ಅವುಗಳನ್ನೆಲ್ಲ ಹಿಂದಿಕ್ಕಿ 'ಗುಡ್​ ನ್ಯೂಸ್​' ನೂರು ಕೋಟಿ ಕ್ಲಬ್​ ಸೇರಿತ್ತು.

'ಗುಡ್​ ನ್ಯೂಸ್'​ ಸಿನಿಮಾದ ಪೋಸ್ಟರ್​

'ಗುಡ್​ ನ್ಯೂಸ್'​ ಸಿನಿಮಾದ ಪೋಸ್ಟರ್​

  • Share this:
ಅಕ್ಷಯ್​ ಕುಮಾರ್ ಈಗ ಏನೇ ಮುಟ್ಟಿದರೂ ಅದು ಚಿನ್ನವಾಗುತ್ತಿದೆ. ಅವರು ಮಾಡುತ್ತಿರುವ ಸಿನಿಮಾಗಳೆಲ್ಲ ಬಾಕ್ಸಾಫಿಸ್​ನಲ್ಲಿ ರೇಸ್​ ಕುದುರೆಯಂತೆ ಓಡುತ್ತಿವೆ. 2019-2020 ಅಕ್ಷಯ್​ಗೆ ಅದೃಷ್ಟ ತಂದುಕೊಟ್ಟ ವರ್ಷ ಎಂದರೆ ತಪ್ಪಾಗದು.

ಹೌದು, ಕರೀನಾ ಕಪೂರ್​, ಅಕ್ಷಯ್​ ಕುಮಾರ್​, ದಿಲ್​ಜಿತ್​ ದೋಸಾಂಜ್​, ಹಾಗೂ ಕಿಯಾರಾ ನಟಿಸಿರುವ 'ಗುಡ್​ ನ್ಯೂಸ್​' ಚಿತ್ರ ಕಳೆದ ವರ್ಷ ಅಂದರೆ ಡಿ. 27ಕ್ಕೆ ತೆರೆಕಂಡಿತ್ತು. ಇದೇ ವೇಳೆ ಸ್ಟಾರ್ ನಟರ ಸಿನಿಮಾಗಳು ತೆರೆಕಂಡಿದ್ದು, ಅವುಗಳನ್ನೆಲ್ಲ ಹಿಂದಿಕ್ಕಿ 'ಗುಡ್​ ನ್ಯೂಸ್​' ನೂರು ಕೋಟಿ ಕ್ಲಬ್​ ಸೇರಿತ್ತು.

Good Newwz Trailer2 is getting good response from Movie lovers,
'ಗುಡ್​ ನ್ಯೂಸ್​' ಸಿನಿಮಾದಲ್ಲಿ ಅಕ್ಷಯ್ ಹಾಗೂ ಕರೀನಾ ಕಪೂರ್​


ಆದರೆ ಹೊಸ ವರ್ಷದ ಆರಂಭದಲ್ಲೇ ಇದೇ ಸಿನಿಮಾ ಅಕ್ಷಯ್​ ಕುಮಾರ್​ ಅವರಿಗೆ ಮತ್ತೊಮ್ಮೆ ಲಕ್ಕಿ ಎಂದು ಸಾಬೀತಾಗಿದೆ. ಸಿನಿಮಾ ಬಿಡುಗಡೆಯಾಗಿ 24 ದಿನಕ್ಕೆ 200 ಕೋಟಿ ಕ್ಲಬ್​ ಸೇರಿದೆ.



ಈ ಸಿನಿಮಾ ಬಿಡುಗೆಎಯಾದ 6 ದಿನಕ್ಕೆ ನೂರು ಕೋಟಿ ಗಳಿಸಿತ್ತು. ಹಾಲಿವುಡ್​ ಹಾಗೂ ಬಾಲಿವುಡ್​ನ ಹಲವಾರು ಸಿನಿಮಾಗಳಿಗೆ ಟಕ್ಕರ್​ ಕೊಟ್ಟು ಇನ್ನು ಸಹ ಯಶಸ್ವಿ ಪ್ರದರ್ಶನ ಕಾಣುತ್ತಿದೆ 'ಗುಡ್​ನ್ಯೂಸ್​'.

ಇದನ್ನೂ ಓದಿ: Suhana Khan: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ ಶಾರುಖ್​ ಖಾನ್​ ಮಗಳ ಸೆಲ್ಫಿ..!

ಕಾಮಿಡಿ ಹಾಗೂ ಎಮೋಷನ್​ ಡ್ರಾಮಾ ಆಗಿರುವ 'ಗುಡ್​ ನ್ಯೂಸ್​'ನಲ್ಲಿ ಮಕ್ಕಳನ್ನು ಪಡೆಯುವ ಸಲುವಾಗ ಐವಿಎಫ್​ ಸೆಂಟರ್​ಗೆ ಹೋಗುವ ಇಬ್ಬರು ದಂಪತಿಗಳು... ಒಬ್ಬರ ವೀರ್ಯ ಮತ್ತೊಬ್ಬರ ಗರ್ಭ ಸೇರುತ್ತದೆ. ವೈದ್ಯರು ಮಾಡು ಎಡವಟ್ಟು ಹೇಗೆ ಈ ದಂಪತಿಗಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಎನ್ನುವುದೇ ಈ ಸಿನಿಮಾದ ಹೈಲೈಟ್​.

Priyanka Chopra: ಸೀರೆಯುಟ್ಟು ನೆಟ್ಟಿಗರ ಮನ ಗೆದ್ದ ಪ್ರಿಯಾಂಕಾ ಚೋಪ್ರಾ..!


 
First published: