ಸ್ಯಾಂಡಲ್ವುಡ್ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ದರ್ಶನ್. ಅಭಿಮಾನಿಗಳು ದಾಸನನ್ನು ಎಷ್ಟು ಪ್ರೀತಿಸುತ್ತಾರೋ ಅದರ ದುಪ್ಪಟ್ಟು ಪ್ರೀತಿಯನ್ನು ನಟ ದರ್ಶನ್ ತನ್ನ ಅಭಿಮಾನಿಗಳಿಗೆ ತೋರಿಸುತ್ತಾರೆ. ಅಂತಹ ಅಭಿಮಾನಿಗಳ ಪ್ರೀತಿಯನ್ನು ಹೊಂದಿರುವ ಚಾಲೆಂಜಿಗ್ ಸ್ಟಾರ್ ಬಗ್ಗೆ ಬಾಲಿವುಡ್ ಪ್ರಖ್ಯಾತ ನಟ, ನಿರ್ದೇಶಕರೊಬ್ಬರು ಸಂದರ್ಶನದಲ್ಲಿ ಕೊಂಡಾಡಿದ್ದಾರೆ.
ಹೌದು. ಗೋಲ್ಮಾಲ್ 3 , ಸಿಂಗಂ, ಬೋಲ್ ಬಚ್ಚನ್, ಚೆನ್ನೈ ಎಕ್ಸ್ಪ್ರೆಸ್, ದಿಲ್ವಾಲೆ, ಸಿಗಂ ರಿಟನ್ಸ್, ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರೋಹಿತ್ ಶೆಟ್ಟಿ ಸಂದರ್ಶನ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಬಗ್ಗೆ ಮತ್ತು ಅವರನ್ನು ಪ್ರೀತಿಸುವ ಅಭಿಮಾನಿಗಳ ಬಗ್ಗೆ ಹೇಳಿದ್ದಾರೆ.
ಸಂದರ್ಶನಕಾರನ ಬಳಿ ಮಾತನಾಡುತ್ತಿದ್ದ ರೋಹಿತ್ ಶೆಟ್ಟಿ ‘ನಾನೊಂದು ವಿಡಿಯೋ ನೋಡಿದೆ. ಕನ್ನಡದ ನಟನ ಹೆಸರು ತಿಳಿದಿಲ್ಲ. ಅವರ ಹುಟ್ಟುಹಬ್ಬದ ದಿನ ರಾತ್ರಿ ಹನ್ನೆರಡು ಗಂಟೆಯಿಂದ ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆವರೆಗೆ ಆ ನಟನ ಮನೆಯ ಮುಂದೆ ಸಾವಿರಾರು ಜನರು ಅವರನ್ನು ನೋಡಲು ಕಾದು ನಿಂತಿದ್ದರು. ಆ ನಟ ಕೂಡ ಬಹುಶಃ ಅಂದು ಸಾವಿರ ಕೇಕ್‌ಗಳನ್ನು ಕತ್ತರಿಸಿರಬೇಕು, ಅಭಿಮಾನಿಗಳು ಎಷ್ಟು ನಟರನ್ನು ಪ್ರೀತಿಸುತ್ತಾರೋ ಹಾಗೆ ನಟರು ಕೂಡ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಇದೊಂದು ಒಳ್ಳೆಯ ಉದಾಹರಣೆ. ಹೀಗಾಗಿ ಸಿನಿಮಾ ಚೆನ್ನಾಗಿ ಇರಲಿ, ಇರದೇ ಇರಲಿ ಅಭಿಮಾನಿಗಳು ಸಿನಿಮಾ ನೋಡ್ತಾರೆ. ಇದಕ್ಕೆಲ್ಲ ಕಾರಣ ಅವರ ಫ್ಯಾನ್ಸ್. ಇಂತಹ ತುಂಬು ಅಭಿಮಾನಿಗಳನ್ನು ಹೊಂದುವುದು ಸಣ್ಣ ವಿಚಾರವಲ್ಲ‘ ಎಂದಿದ್ದಾರೆ.
ನಿರ್ದೇಶಕ ರೋಹಿತ್ ಶೆಟ್ಟಿ ಮಾತನಾಡಿರುವ ಈ ವಿಡಿಯೋ ಹಳೇಯದಾಗಿದ್ದು, ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ. ದರ್ಶನ್ ಫ್ಯಾನ್ ಪೇಜ್ಗಳಲ್ಲೂ ಈ ವಿಡಿಯೋ ಹರಿದಾಡುತ್ತಿದೆ. ಮತ್ತೊಂದೆಡೆ ಫೆ. 16 ರಂದು ನಟ ದರ್ಶನ್ ಅವರ ಹುಟ್ಟುಹಬ್ಬವಿದ್ದು ಅವರ ಅಭಿಮಾನಿಗಳು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆ ನೀಡಿದ ಮುನ್ಸೂಚನೆಯಂತಿದೆ.
ಇದನ್ನೂ ಓದಿ: ಜಾವಾ ಪರಾಕ್ ಬೈಕ್ ಮಾರುಕಟ್ಟೆಗೆ; ಬೆಲೆಯೆಷ್ಟು ಗೊತ್ತಾ?
ಇದನ್ನೂ ಓದಿ: Rachita Ram: ಮದುವೆ ತಯಾರಿಯಲ್ಲಿ ಡಿಂಪಲ್ ಕ್ವೀನ್ ಫುಲ್ ಬ್ಯುಸಿ!