ಕೋಟಿ ದುಡಿದರೇನಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಈ ಬಾಲಿವುಡ್​ ಸ್ಟಾರ್​ಗಳು!

Bollywood Stars: ಸೆಲೆಬ್ರಿಟಿ ಜೀವನ ಶೈಲಿಗೂ, ಬಾಡಿಗೆ ಮನೆಗೂ, ಫ್ಲ್ಯಾಟ್​ಗಳ ವಾತಾವರಣಕ್ಕೂ ಯಾವ ರೀತಿಯ ನಂಟು ಅನ್ನೋದನ್ನ ಈ ಲೇಖನದಲ್ಲಿ ನೋಡೋಣ ಬನ್ನಿ. ಜೊತೆಗೆ ಯಾವೆಲ್ಲಾ ಸ್ಟಾರ್ಸ್ ಬಾಡಿಗೆ ಮನೆಗೆ ಹೊಂದಿಕೊಂಡಿದ್ದಾರೆ ಅನ್ನೋ ಸಣ್ಣ ಇಣುಕು ನೋಟ ಇಲ್ಲಿದೆ.

ಸನ್ನಿ ಲಿಯೋನ್- ಹೃತಿಕ್ ರೋಷನ್​- ಜಾಕ್ವೆಲಿನ್

ಸನ್ನಿ ಲಿಯೋನ್- ಹೃತಿಕ್ ರೋಷನ್​- ಜಾಕ್ವೆಲಿನ್

  • Share this:

ಸೆಲೆಬ್ರಿಟಿಗಳ ಜೀವನ ಶೈಲಿ ಯಾವತ್ತಿಗೂ ಸಾಮಾನ್ಯರಿಗೆ ಒಂದು ಅಚ್ಚರಿ. ಅದರಲ್ಲೂ ಕೋಟಿ ಕೋಟಿ ದುಡಿಯುವ ಸ್ಟಾರ್ಸ್​​ ತಮ್ಮ ಮನೆಯನ್ನು ಹೇಗೆ ಇಟ್ಟುಕೊಂಡಿದ್ದಾರೆ..? ಏನೆಲ್ಲಾ ಲಕ್ಷುರಿಗಳೊಂದಿಗೆ ನೆಮ್ಮದಿ ಕಂಡುಕೊಂಡಿದ್ದಾರೆ ಎನ್ನುವುದು ಕುತೂಹಲದ ಸಂಗತಿ. ಈ ನಿಟ್ಟಿನಲ್ಲಿ ಕೆಲವರು ತಮ್ಮ ಮನೆಯ ಹೋಂ ಟೂರ್ ಮಾಡಿ ಸಾಮಾಜಿಕ ಮಾಧ್ಯಮದಲ್ಲೂ ಹಂಚಿಕೊಂಡಿದ್ದಾರೆ. ಅವರ ಜಿಮ್, ಸ್ವಿಮ್ಮಿಂಗ್ ಪೂಲ್, ಟೆರೇಸ್​​ ಜೊತೆಗೆ ಆಧುನಿಕ ಹೈಟೆಕ್ ಮನೆಯ ವಿನ್ಯಾಸಗಳು ಅಚ್ಚರಿಗೊಳಿಸುತ್ತವೆ.


ಆದರೆ ಇದೆಲ್ಲದ್ದಕ್ಕಿಂತಲೂ ಆಶ್ಚರ್ಯ ಅನ್ನಿಸುವುದು ಅವರು ತಮ್ಮ ಸ್ವಂತ ಮನೆಯಲ್ಲಿರುವುದಕ್ಕಿಂತಲೂ ಬಾಡಿಗೆ ಮನೆ ಇಲ್ಲವೇ ಫ್ಲ್ಯಾಟ್​​ಗಳಲ್ಲಿ ವಾಸ ಮಾಡುವುದು. ಸೆಲೆಬ್ರಿಟಿ ಜೀವನ ಶೈಲಿಗೂ, ಬಾಡಿಗೆ ಮನೆಗೂ, ಫ್ಲ್ಯಾಟ್​ಗಳ ವಾತಾವರಣಕ್ಕೂ ಯಾವ ರೀತಿಯ ನಂಟು ಅನ್ನೋದನ್ನ ಈ ಲೇಖನದಲ್ಲಿ ನೋಡೋಣ ಬನ್ನಿ. ಜೊತೆಗೆ ಯಾವೆಲ್ಲಾ ಸ್ಟಾರ್ಸ್ ಬಾಡಿಗೆ ಮನೆಗೆ ಹೊಂದಿಕೊಂಡಿದ್ದಾರೆ ಅನ್ನೋ ಸಣ್ಣ ಇಣುಕು ನೋಟ ಇಲ್ಲಿದೆ.


ರಿಚಾ ಚಡ್ಡಾ ಮತ್ತು ಅಲಿ ಫಜಲ್


2020 ರಲ್ಲಿ ಹೊಸ ಅಪಾರ್ಟ್​​ಮೆಂಟ್​ಗೆ ತೆರಳಿರುವ ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಸ್ಕ್ವೇರ್ ಫೀಟ್ ಇಂಡಿಯಾದ ಪ್ರಕಾರ ಪ್ರತಿ ತಿಂಗಳು 3 ಲಕ್ಷ ರೂಪಾಯಿ ಬಾಡಿಗೆ ಇದ್ದು, ಎರಡನೇ ಮತ್ತು ಮೂರನೇ ವರ್ಷದಲ್ಲಿ ಅದರ ಮೊತ್ತ ಏರಿಕೆಯಾಗಲಿದೆ.


ಕತ್ರೀನಾ ಕೈಫ್


ಕತ್ರೀನಾ ಕೂಡ ಬಾಂದ್ರಾದ ಫ್ಲ್ಯಾಟ್​​ನಲ್ಲಿ ವಾಸ್ತವ್ಯ ಹೂಡಿದ್ದು, ಈ ಮನೆಗೆ ಪ್ರತಿ ತಿಂಗಳು 15 ಲಕ್ಷ ಬಾಡಿಗೆ ಎಣಿಸುತ್ತಿದ್ದಾರೆ. ಆಶ್ಚರ್ಯ ಆದ್ರೂ ಇದು ವಾಸ್ತವ ಅಂತಾರೆ ಬಾಲಿವುಡ್ ಪಂಡಿತರು.


ಸನ್ನಿ ಲಿಯೋನ್


ಸನ್ನಿ ಲಿಯೋನ್ ಈ ಮೊದಲು ಸೆಲಿನಾ ಜೆಟ್ಲಿಯ ಪೆಂಟ್​ಹೌಸ್​​ ಅನ್ನು ಭೋಗ್ಯಕ್ಕೆ ಪಡೆದುಕೊಂಡು ತಮ್ಮ ಪತಿ ಡೇನಿಯಲ್ ವೆಬರ್ ಜೊತೆಗೆ ವಾಸ ಮಾಡುತ್ತಿದ್ದರು ಎನ್ನುತ್ತವೆ ವರದಿಗಳು. ತೀರಾ ಇತ್ತೀಚಿನ ವರದಿಗಳ ಪ್ರಕಾರ ಸ್ಪ್ಲಿಟ್ಸ್ ವಿಲ್ಲಾ ನಿರೂಪಕಿ ಸದ್ಯ ಜುಹುವಿನಲ್ಲಿ ನೆಲೆ ಕಂಡುಕೊಂಡಿದ್ದಾರೆ.


ನವಾಜುದ್ದೀನ್ ಸಿದ್ದಿಕಿ


2014 ರಲ್ಲಿ ಹಿಂದೂಸ್ತಾನ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ತಾವು ಬಾಡಿಗೆ ಮನೆಯಲ್ಲಿ ನೆಮ್ಮದಿಯಿಂದ ಇರುವುದಾಗಿ ತಿಳಿಸಿದ್ದರು. ಆ ನಂತರ ಅವರ ವಾಸ್ತವ್ಯ ಬದಲಿಸಿದ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಒಬ್ಬ ಸ್ಟಾರ್ ಮತ್ತು ಕಲಾವಿದನ ನಡುವಿನ ವ್ಯತ್ಯಾಸ ಬಜೆಟ್ ಮತ್ತು ಚಿತ್ರದ ಪ್ರಸ್ತುತತೆಯಾಗಿರುತ್ತದೆ ಎಂದಿದ್ದರು.


ಹೃತಿಕ್ ರೋಷನ್


ಕತ್ರೀನಾ ಕೈಫ್ ಅವರ ಬ್ಯಾಂಗ್ ಬ್ಯಾಂಗ್ ಸಿನಿಮಾದ ಕೋ ಸ್ಟಾರ್​ ಹೃತಿಕ್​ ರೋಷನ್ ಕೂಡ ಅವರಂತೆಯೇ ಬಾಡಿಗೆ ಮನೆಯೇ ಚೆಂದ ಎನ್ನುತ್ತಿದ್ದಾರೆ. ತಿಂಗಳಿಗೆ 8.25 ಲಕ್ಷ ರೂ. ಬಾಡಿಗೆ ನೀಡಿ ಅಪಾರ್ಟ್​​ಮೆಂಟ್​​ನಲ್ಲಿ ವಾಸವಿದ್ದಾರೆ ಹೃತಿಕ್. ಅಂದ ಹಾಗೆ ನಟ ಅಕ್ಷಯ್ ಕುಮಾರ್ ಮತ್ತು ಹೃತಿಕ್ ಇಬ್ಬರೂ ಅಕ್ಕ ಪಕ್ಕದ ಮನೆಯವರಂತೆ.


ಜಾಕ್ವೆಲಿನ್ ಫರ್ನಾಂಡೀಸ್


ಮನೆ ಹುಡುಕುವ ಗೋಳು ಸಾಮಾನ್ಯನಿಗೆ ಮಾತ್ರವಲ್ಲ, ಸಿನಿಮಾ ಸ್ಟಾರ್ಸ್​​ಗೂ ತಪ್ಪಿದ್ದಲ್ಲ. ಈ ಮಾತು ಜಾಕ್ವೆಲಿನ್​​ ಫರ್ನಾಂಡಿಸ್​ ಅವರಿಗೆ ಸಲ್ಲುತ್ತದೆ. ಈ ನಟಿ ಒಂದಷ್ಟು ಸಮಯದವರೆಗೆ ಮನೆಯ ಹುಡುಕಾಟದಲ್ಲಿದ್ದರು. ಆ ನಂತರ ನಟಿ ಪ್ರಿಯಾಂಕ ಚೋಪ್ರಾ ಅವರ ಹಳೆಯ ಮುಂಬೈ ಅಪಾರ್ಟ್​​ಮೆಂಟ್​ಗೆ​​ ಬಂದು ಸೇರಿದರು. ಈ ಮನೆಯ ಬಾಲ್ಕನಿ ಸಾಕಷ್ಟು ವಿಶೇಷತೆ ಒಳಗೊಂಡಿದೆ. ಸಮುದ್ರದ ವ್ಯೂ ಇದ್ದು, ಮನಸ್ಸಿಗೆ ಪ್ರಶಾಂತತೆ ನೀಡುತ್ತದೆ. ಇದರ ಬಾಡಿಗೆ ಮೊತ್ತ ತಿಂಗಳಿಗೆ 6.78 ಲಕ್ಷ ರೂ ಗಳಾಗಿದೆ.


ಸಾಮಾನ್ಯವಾಗಿ ಸ್ಟಾರ್ಸ್ ಅಂದ್ರೆ ಸಿಕ್ಕಾಪಟ್ಟೆ ಹಣವಿರುವವರು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಇದೇ ಹಿನ್ನೆಲೆಯಲ್ಲಿ ಅವರ ಮನೆ ಕೂಡ ಆರ್ಥಿಕ ಸ್ಥಿತಿಗೆ ಹಿಡಿದ ಕನ್ನಡಿಯಾಗಿರುತ್ತದೆ. ಆದರೆ ಬಾಲಿವುಡ್‌ನಲ್ಲಿ ಕೋಟ್ಯಂತರ ಸಂಪಾದನೆ ಮತ್ತು ಅತ್ಯುತ್ತಮ ಬ್ರ್ಯಾಂಡ್‌ಗಳನ್ನು ಅನುಮೋದಿಸಿದರೂ, ಈ ಸೆಲೆಬ್ರಿಟಿಗಳು ಬಾಡಿಗೆ ಅಪಾರ್ಟ್‌ಮೆಂಟ್‌ಗಳ ನಿರ್ಧಾರ ಮಾತ್ರ ಪ್ರಶ್ನೆಯನ್ನು ಹುಟ್ಟುವುದಂತೂ ಸುಳ್ಳಲ್ಲ.


First published: