Raveena Tandon: ಅಷ್ಟು ವಯಸ್ಸಾದ್ರೂ `ಉಪೇಂದ್ರ' ನಾಯಕಿ ರವೀನಾ ಬ್ಯೂಟಿಫುಲ್ ಆಗಿರೋಕೆ ಇದೇ ಕಾರಣವಂತೆ

ನಟಿ ರವೀನಾ ಟಂಡನ್ ಅವರಿಗೆ ಸಧ್ಯ 47 ಹರೆಯ. ಆದರೆ ನಟಿ ರವೀನಾ ಟಂಡನ್ ಈಗಲೂ ಸಖತ್ ಫಿಟ್ ಮತ್ತು ಯಂಗ್ ಆಗಿ ಕಾಣುತ್ತಾರೆ. ಹಾಗಾದರೆ ನಟಿ ರವೀನಾ ಟಂಡನ್ ಯಾವ ಡಯಟ್ ಪ್ಲಾನ್ ಫಾಲೋ ಮಾಡುತ್ತಿದ್ದಾರೆ ಎಂದು ಇಲ್ಲಿ ತಿಳಿಯೋಣ.

ನಟಿ ರವೀನಾ ಟಂಡನ್

ನಟಿ ರವೀನಾ ಟಂಡನ್

  • Share this:
    ಬಾಲಿವುಡ್‌ (Bollywood) ಸಿನಿ ರಂಗದಲ್ಲಿ 90 ರ ದಶಕ ಸಾಕಷ್ಟು ಪ್ರಸಿದ್ಧಿ (Famous) ಪಡೆದಿತ್ತು. ಚಿತ್ರಗಳು (Movies), ನಟ-ನಟಿಯರು ಮತ್ತು ಹಾಡುಗಳಿಂದ ಸಾಕಷ್ಟು ಫೇವರಿಟ್ ಆಗಿತ್ತು. ಅದರಲ್ಲಿ 90 ರ ದಶಕದ ಪ್ರಸಿದ್ಧ ನಟಿಯರಲ್ಲಿ ರವೀನಾ ಟಂಡನ್ (Actress Raveena Tandon) ಕೂಡ ಒಬ್ಬರು. ಟಿಪ್ ಟಿಪ್ ಬರ್ಸಾ ಪಾನಿ ಹಾಡಿನಲ್ಲಿ ಅವರ ನೃತ್ಯವನ್ನು ಜನರು ಇನ್ನೂ ಮರೆಯದೇ ನೆನಪಿಸಿಕೊಳ್ಳುತ್ತಾರೆ. ರವೀನಾ ಟಂಡನ್ ಅವರಿಗೆ ಸಧ್ಯ 47 ಹರೆಯ. ಆದರೆ ನಟಿ ರವೀನಾ ಟಂಡನ್ ಈಗಲೂ ಸಖತ್ ಫಿಟ್ ಮತ್ತು ಯಂಗ್ ಆಗಿ ಕಾಣುತ್ತಾರೆ. ತಮ್ಮ ಫಿಟ್‌ನೆಸ್‌ನಿಂದ ಇಂದಿನ ಯುವ ನಟಿಯರಿಗೂ ಠಕ್ಕರ್ ನೀಡುವಂತೆ ಇದ್ದಾರೆ.

    ಯಂಗ್ ಮತ್ತು ಬ್ಯೂಟಿಫುಲ್ ನಟಿ ರವೀನಾ ಟಂಡನ್

    ನಟಿ ರವೀನಾ ಟಂಡನ್ 47 ವರ್ಷ ವಯಸ್ಸಿನಲ್ಲೂ ತುಂಬಾ ಯಂಗ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಹಾಗಾದರೆ ನಟಿ ರವೀನಾ ಟಂಡನ್ ಯಾವ ಡಯಟ್ ಪ್ಲಾನ್ ಫಾಲೋ ಮಾಡುತ್ತಿದ್ದಾರೆ ಎಂದು ಇಲ್ಲಿ ತಿಳಿಯೋಣ.

    ನೀವು ಸಹ 47 ನೇ ವಯಸ್ಸಿನಲ್ಲಿ ಯಂಗ್ ಆಗಿ ಮತ್ತು ಫಿಟ್ ಆಗಿ ಕಾಣಲು ಬಯಸಿದರೆ ನೀವೂ ಸಹ ನಟಿ ರವೀನಾ ಟಂಡನ್ ಅವರ ಫಿಟ್‌ನೆಸ್‌ ಸೀಕ್ರೆಟ್ ಫಾಲೋ ಮಾಡಬಹುದು. ನಟಿ ರವೀನಾ ಟಂಡನ್ ಇಂದಿಗೂ ತಮ್ಮ ಸೌಂದರ್ಯ ಕಾಪಾಡಿಕೊಂಡು ಬಂದಿರುವ ರಹಸ್ಯ ಮತ್ತು ಆಹಾರ ಕ್ರಮ ಏನು ಎಂಬುದನ್ನು ನಾವು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವನೆ ಮಾಡಿದ್ರೆ ಮೂಳೆಗಳು ಗಟ್ಟಿಯಾಗುತ್ತೆ

    ನಟಿ ರವೀನಾ ಟಂಡನ್ ಯಂಗ್ ಆಗಿ ಕಾಣುವ ರಹಸ್ಯವೇನು?

    ನಟಿ ರವೀನಾ ಟಂಡನ್, ತಮ್ಮ ಮಕ್ಕಳೊಂದಿಗೆ ಮನೆಯ ಟೆರೇಸ್‌ನಲ್ಲಿ ವರ್ಕೌಟ್ ಮಾಡಲು ಇಷ್ಟ ಪಡುತ್ತಾರೆ. ಮತ್ತು ವರ್ಕೌಟ್‌ಗೆ ಜಿಮ್‌ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ರವೀನಾ ಅವರು ತಮ್ಮ ಸಂದರ್ಶನವೊಂದರಲ್ಲಿ

    ಅವರು ಸಾಕಷ್ಟು ಹಣ್ಣುಗಳು ಮತ್ತು ಪ್ರೋಬಯಾಟಿಕ್‌ ಪದಾರ್ಥ ಸೇವಿಸುವುದಾಗಿ ಹೇಳಿದ್ದಾರೆ. ಇದು ಅವರ ವಯಸ್ಸನ್ನು ತುಂಬಾ ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

    ಮೊಸರಿನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಲ್ಯಾಕ್ಟಿಕ್ ಆಮ್ಲ, ಒಮೆಗಾ 3 ಕೊಬ್ಬಿನಾಮ್ಲಗಳು ಕಂಡು ಬರುತ್ತವೆ. ಇದು ಚರ್ಮದ ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಮೊಸರು ಮತ್ತು ಹಣ್ಣುಗಳು ರೋಗ ನಿರೋಧಕ ಶಕ್ತಿ ಮತ್ತು ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ.

    ನಟಿ ರವೀನಾ ಟಂಡನ್ ದೈನಂದಿನ ಆಹಾರ ಕ್ರಮವೇನು?

    ಅನೇಕ ಪದಾರ್ಥಗಳನ್ನು ಬೆರೆಸಿ ತಿನ್ನಲು ಇಷ್ಟ ಪಡುತ್ತೇನೆ ಎಂದು ನಟಿ ಹೇಳಿದ್ದಾರೆ. ಅಲ್ಲದೆ ಅವಳು ಯಾವುದೇ ರೀತಿಯ ಆಹಾರ ಸೇವಿಸುವುದನ್ನು ತ್ಯಜಿಸುವುದಿಲ್ಲ. ಅವಳ ದೈನಂದಿನ ಆಹಾರದಲ್ಲಿ ಸರಳವಾದ ಬೇಳೆ, ಭಜಿ, ರೊಟ್ಟಿ ಮತ್ತು ಮೊಸರು ಸೇರಿದೆ. ರವೀನಾಗೆ ಮೊಸರು ಎಂದರೆ ತುಂಬಾ ಇಷ್ಟ. ಮೊಸರು ಹೊಟ್ಟೆಯನ್ನು ತಂಪಾಗಿಸುವುದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

    ಕಷಾಯ

    ರವೀನಾ ಅವರು ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿ ತಯಾರಿಸಿದ ಕಷಾಯ ಸೇವನೆ ಮಾಡಿದ್ದಾರೆ. ಮನೆಯಲ್ಲಿ ತಯಾರಿಸಿದ ಕಷಾಯ ತಯಾರಿಸಲು, ರವೀನಾ ಅವರು ತಮ್ಮ ಜಮೀನಿನ ಸಾವಯವ ಅರಿಶಿನ, ಲವಂಗ, ಶುಂಠಿ, ಕರಿಮೆಣಸು, ಕೇರಂ ಬೀಜ ಮತ್ತು ಸ್ವಲ್ಪ ತುಪ್ಪ ಬಳಸುತ್ತಾರೆ. ಈ ಟಾನಿಕ್ ರವೀನಾಳನ್ನು ಕ್ರಿಯಾಶೀಲವಾಗಿ ಮತ್ತು ಫಿಟ್ ಆಗಿಡಲು, ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

    ಚೀಸ್ ಮತ್ತು ಬೆಣ್ಣೆ

    ನಟಿ ರವೀನಾ ಟಂಡನ್ ಗೆ ಚೀಸ್ ಮತ್ತು ಬೆಣ್ಣೆ ಎಂದರೆ ತುಂಬಾ ಇಷ್ಟ. ಈ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತಾರೆ.

    ಇದನ್ನೂ ಓದಿ: ಪ್ರೊಟೀನ್ ಭರಿತ ಪದಾರ್ಥ ಸೇವನೆ ಮಾಡಿದ್ರೆ ಅಸ್ಥಿಸಂಧಿವಾತ ಸಮಸ್ಯೆ ನಿವಾರಣೆಯಾಗುತ್ತೆ

    ಈಜುವುದು  

    ರವೀನಾ ಈಜು, ಯೋಗ ಮತ್ತು ಕಾರ್ಡಿಯೋ ಮಾಡುತ್ತಾರೆ. ತನ್ನ ಮನೆಯಲ್ಲಿಯೇ ವರ್ಕೌಟ್ ಮಾಡುತತಾರೆ. ಸಾಮಾಜಿಕ ಮಾಧ್ಯಮದಲ್ಲಿ ರವೀನಾ ಯೋಗ ಮಾಡುವ ವೀಡಿಯೊ ಹಂಚಿಕೊಂಡಿದ್ದಾರೆ.
    Published by:renukadariyannavar
    First published: