News18 India World Cup 2019

ಕಲಾವಿದರ ಜಾತಕ ನೋಡಿಯೇ ಕೆಲಸ ನೀಡುವುದಂತೆ ನಿರ್ದೇಶಕಿ ಏಕ್ತಾ ಕಪೂರ್​​!


Updated:August 21, 2018, 3:28 PM IST
ಕಲಾವಿದರ ಜಾತಕ ನೋಡಿಯೇ ಕೆಲಸ ನೀಡುವುದಂತೆ ನಿರ್ದೇಶಕಿ ಏಕ್ತಾ ಕಪೂರ್​​!

Updated: August 21, 2018, 3:28 PM IST
ನ್ಯೂಸ್​ 18 ಕನ್ನಡ

ಮುಂಬೈ(ಆ.21): ಟಿವಿ ಕ್ವೀನ್​ ಎಂದೇ ಪ್ರಸಿದ್ಧರಾಗಿರುವ ಏಕ್ತಾ ಕಪೂರ್​ರವರ ಧಾರವಅಹಿಗಳು ಈ ದಿನಗಳಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಅಲ್ಲದೇ ಟಿಆರ್​ಪಿ ತಂದುಕೊಡುವಲ್ಲೂ ಮುಂಚೂಣಿಯಲ್ಲಿವೆ. ಆದರೆ ಇದಕ್ಕಾಗಿ ಏಕ್ತಾ ಅದೆಷ್ಟು ಶ್ರಮ ಪಡುತ್ತಿದ್ದಾರೆಂಬ ವಿಚಾರ ನಿಮಗೆ ತಿಳಿದಿದೆಯಾ? ಇಲ್ಲಿದೆ ನೋಡಿ ಕುತೂಹಲಕಾರಿ ವಿಚಾರ

ವಾಸ್ತವವಾಗಿ ಏಕ್ತಾ ಕಪೂರ್​ ಪ್ರೇಕ್ಷಕರಿಗೆ ಇಷ್ಟವಾಗುವ ಕಥೆ ಹಾಗೂ ಪಾತ್ರವನ್ನು ಆಸಕ್ತಿದಾಯವಾಗಿಸುವ ಜೊತೆಗೆ ಜ್ಯೋತಿಷ್ಯಕ್ಕೂ ಹೆಚ್ಚು ಮಹತ್ವ ನೀಡುತ್ತಾರೆ. ಏಕ್ತಾರವರಿಗೆ ಸಂಬಂಧಿಸಿದ ಉನ್ನತ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಏಕ್ತಾರವರುರವರು ತಮ್ಮ ಸಿನಿಮಾ ಹಾಗೂ ಧಾರಾವಾಹಿಗಳ ನಟ/ನಟಿಯರನ್ನು ಅವರ ಜಾತಕ ಹಾಗೂ ಶುಭ ಗಳಿಗೆ ನೋಡಿ ಆಯ್ಕೆ ಮಾಡುತ್ತಾರಂತೆ. ಒಂದು ವೇಳೆ ನಟ/ನಟಿಯರ ಸಮಯ ಒಳ್ಳೆಯದಿದ್ದರೆ ಸಿನಿಮಾ ಹಾಗೂ ಧಾರಾವಾಹಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಅವರ ಧಾರಾವಾಹಿಗಳ ಯಶಸ್ಸಿನ ಹಿಂದಿನ ರಹಸ್ಯವಂತೆ.

ಈ ವಿಚಾರ ಕೊಂಚ ವಿಚಿತ್ರವೆನಿಸಿದರೂ ನಿಜ. 'ಅಜರ್​', 'ಎ ಫ್ಲೈಯಿಂಗ್​ ಜೆಟ್​', 'ಹಾಫ್​ ಗರ್ಲ್​ ಫ್ರೆಂಡ್​' ನಂತಹ ಸಿನಿಮಾಗಳು ಒಂದರ ಹಿಂದೆ ಒಂದು ತೋಪು ಹಿಡಿದ ಬಳಿಕ ಇದೀಗ ನಿರ್ಮಾಪಕಿ ಏಕ್ತಾ ಕಪೂರ್​ ಸಿನಿಮಾ ನಿರ್ಮಾಣದಲ್ಲೂ ಬಹಳಷ್ಟು ಯೋಚಿಸಿ ಆಯ್ಕೆ ಮಾಡುತ್ತಾರೆ. ತಮ್ಮೆಲ್ಲಾ ಧಾರಾವಾಹಿಗಳ ಹೆಸರು ಹಾಗೂ ಕಲಾವಿದರ ಜಾತಕ ನೋಡಿಯೇ ಕೆಲಸ ಆರಂಭಿಸುವ ಏಕ್ತಾ ತಮ್ಮ ಮುಂದಿನ ಸಿನಿಮಾ 'ಲೈಲಾ-ಮಜ್ನು' ಸಿನಿಮಾದ ಪ್ರ,ಮುಖ ಕಲಾವಿದರನ್ನು ಜಾತಕ ನೋಡಿಯೇ ಆಯ್ಕೆ ಮಾಡಿದ್ದಾರಂತೆ.

ಇನ್ನು ಇಮ್ತಿಯಾಜ್​ ಅಲಿಯವರ ಮೇಲ್ವಿಚಾರಣೆ ಹಾಗೂ ಅವರ ಸಹೋದರ ಸಾಜಿದ್​ ಅಲಿಯವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ 'ಲೈಲಾ-ಮಜ್ನು' ಸಿನಿಮಾದ ಪ್ರಮುಖ ಪಾತ್ರ ನಿಭಾಯಿಸಿದ ಅವಿನಾಶ್​ ತಿವಾರಿ ಹಾಗೂ ತೃಪ್ತಿ ಡಿಮ್ರಿಯವರನ್ನು ಜಾತಕ ನೋಡಿಯೇ ಆಯ್ಕೆ ಮಾಡಿದ್ದರೆನ್ನಲಾಗಿದೆ. ಇನ್ನು ಏಕ್ತಾರವರ ಕೆಲಸ ಕಾರ್ಯದೊಂದಿಗೆ ಈ ಕಲಾವಿದ ಜಾತಕ ಅದೆಷ್ಟು ಹೊಂದಿಕೊಳ್ಳುತ್ತದೆ ಎಂದರೆ ನಿರ್ಮಾಪಕ/ನಿರ್ದೇಶಕಿ ಏಕ್ತಾ ತಮ್ಮ ಮೂರು ಸಿನಿಮಾಗಳಿಗೆ ಇವರನ್ನೇ ಆಯ್ಕೆ ಮಾಡಿದ್ದಾರೆನ್ನಲಾಗಿದೆ.

ಇನ್ನು ಏಕ್ತಾ ಕಪೂರ್​ರವರ ತೆರೆ ಕಾಣಲಿರುವ 'ಲೈಲಾ-ಮಜ್ನು' ಸಿನಿಮಾ ಅದೆಷ್ಟು ಯಶಸ್ವಿಯಾಗುತ್ತದೆ ಎಂಬುವುದು ಸಮಯವೇ ನಿರ್ಧರಿಸಲಿದೆ. ಆದರೀಗ ಏಕ್ತಾರವರು ಜ್ಯೋತಿಷ್ಯದ ಮೇಲಿಟ್ಟಿರುವ ನಂಬಿಕೆ ಅವಿನಾಶ್​ರವರಿಗೆ ಲಾಭ ತಂದುಕೊಟ್ಟಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಅವಿನಾಶ್​ರವರು ಕಳೆದ 15 ವರ್ಷಗಳಿಂದ ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ತಮ್ಮದೇ ಛಾಪು ಮೂಡಿಸಲು ಅದೆಷ್ಟು ಹೋರಾಟ ಮಾಡುತ್ತಿದ್ದಾರೆಂಬುವುದು ಗಮನಾರ್ಹ. ಅವರು ಹಲವಾರು ಜಾಹೀರಾತು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...