• Home
 • »
 • News
 • »
 • entertainment
 • »
 • Drishyam 2 Collection: ಬಾಲಿವುಡ್‍ನಲ್ಲಿ ದೃಶ್ಯಂ 2 ಹೊಸ ಸಂಚಲನ, ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್!

Drishyam 2 Collection: ಬಾಲಿವುಡ್‍ನಲ್ಲಿ ದೃಶ್ಯಂ 2 ಹೊಸ ಸಂಚಲನ, ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್!

ದೃಶ್ಯಂ 2, ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್!

ದೃಶ್ಯಂ 2, ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್!

ಅಜಯ್ ದೇವಗನ್  ಅವರು ಅಭಿನಯಿಸಿರುವ ದೃಶ್ಯಂ 2 ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮೂರೇ ದಿನಕ್ಕೆ 64 ಕೋಟಿ ಬಾಚಿಕೊಂಡಿದೆ. ಭಾನುವಾರ ಅತ್ಯುತ್ತಮ ಕಲೆಕ್ಷನ್ ಪಡೆದಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದೆ.

 • News18 Kannada
 • Last Updated :
 • Mumbai, India
 • Share this:

  ವಿಜಯ್ ಸಲ್ಗಾಂವ್ಕರ್ ಆಗಿ ಅಜಯ್ ದೇವಗನ್  (Ajay Devgn)  ಅವರು ಅಭಿನಯಿಸಿರುವ ದೃಶ್ಯಂ 2 (Drishyam 2) ಬಾಲಿವುಡ್​ನಲ್ಲಿ (Bollywood)  ಸಂಚಲನ ಸೃಷ್ಟಿಸುತ್ತಿದೆ. ಮೂರೇ ದಿನಕ್ಕೆ 64 ಕೋಟಿ (64 Crore) ಬಾಚಿಕೊಂಡಿದೆ. ಭಾನುವಾರ ಅತ್ಯುತ್ತಮ ಕಲೆಕ್ಷನ್ (Collection) ಪಡೆದಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಚಿತ್ರದ ಮೂಲಕ ಅಜಯ್ ದೇವಗನ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾವೂ ಮಲಯಾಳಂನ ದೃಶ್ಯಂ 2 ಚಿತ್ರದ ಹಿಂದಿ ರಿಮೇಕ್. ಉತ್ತರ ಭಾರತದ ಅಭಿಮಾನಿಗಳು ಚಿತ್ರವನ್ನು ನೋಡುತ್ತಿದ್ದಾರೆ, ಮೊದಲ ವೀಕೆಂಡ್‍ನಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರಕಿದೆ. ಅಭಿಷೇಕ್ ಪಾಠಕ್ ನಿರ್ದೇಶಿಸಿದ, ದೃಶ್ಯಂ 2 ನಲ್ಲಿ ತಬು, ಅಕ್ಷಯ್ ಖನ್ನಾ, ಇಶಿತಾ ದತ್ತಾ, ಶ್ರಿಯಾ ಸರನ್ ಮತ್ತು ಸೌರಭ್ ಶುಕ್ಲಾ ಸಹ ನಟಿಸಿದ್ದಾರೆ.


  ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್!
  ದೃಶ್ಯಂ 2 ನಲ್ಲಿ ನಟ ಅಜಯ್ ದೇವಗನ್ ಅದ್ಭುತವಾಗಿ ನಟಿಸಿದ್ದಾರೆ. ಆದ ಕಾರಣ ಚಿತ್ರವು ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತಿದೆ. ವೀಕೆಂಡ್ ಆದ ಕಾರಣ ಶನಿವಾರ, ಭಾನುವಾರ ಒಳ್ಳೆ ಕಲೆಕ್ಷನ್ ಆಗಿದೆ. ದೃಶ್ಯಂ 2 ಚಿತ್ರವು ಮೂರೇ ದಿನಕ್ಕೆ 64 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಮತ್ತಷ್ಟು ಕೋಟಿಗಳನ್ನು ಬಾಚುವ ನಿರೀಕ್ಷೆಯಲ್ಲಿದೆ.


  ಅಭಿಷೇಕ್ ಪಾಠಕ್ ನಿರ್ದೇಶಿಸಿದ, ದೃಶ್ಯಂ 2 ನಲ್ಲಿ ತಬು, ಅಕ್ಷಯ್ ಖನ್ನಾ, ಇಶಿತಾ ದತ್ತಾ, ಶ್ರಿಯಾ ಸರನ್ ಮತ್ತು ಸೌರಭ್ ಶುಕ್ಲಾ ಸಹ ನಟಿಸಿದ್ದಾರೆ. ಅಜಯ್‍ನ ಸಿನಿಮಾದಲ್ಲಿ ತನ್ನ ಕುಟುಂಬವನ್ನು ಹೇಗೆ ಕಾಪಾಡಬೇಕು. ಕೊಲೆ ಪ್ರಕರಣವನ್ನು ಪುನಃ ತೆರೆಯುವುದನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಸುತ್ತ ಇದು ಸುತ್ತುತ್ತದೆ.


  ಇದನ್ನೂ ಓದಿ: Megastar Chiranjeevi: 'ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ' ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ 


  ಮೊದಲ ದಿನದ ಕಲೆಕ್ಷನ್ ಎಷ್ಟು?
  ದೃಶ್ಯಂ 2 ಚಿತ್ರವು ಮೊದಲನೇ ದಿನ 15.38 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಎರಡನೇ ದಿನ ಅಂದ್ರೆ ಶನಿವಾರ ಬರೋಬ್ಬರಿ 21.59 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ ಅಂದ್ರೆ ಭಾನುವಾರ 27.17 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಈ ಮೂಲಕ ಈವರೆಗಿನ ಒಟ್ಟು ಕಲೆಕ್ಷನ್ 64.14 ಕೋಟಿ ರೂಪಾಯಿ.


  ದೃಶ್ಯಂ 2


  ದೃಶ್ಯಂ 2 ಮೊದಲ ಭಾಗವನ್ನು 2020 ರಲ್ಲಿ, ಲಿವರ್ ಸಿರೋಸಿಸ್‍ನಿಂದ ನಿಧನರಾದ ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದಾರೆ. ಅಭಿಷೇಕ್ ಪಾಠಕ್ ಅವರು 2015 ರ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದರು. ಆದ್ದರಿಂದ ದೃಶ್ಯಂ 2 ಅನ್ನು ನಿರ್ದೇಶಿಸಲು ಆಯ್ಕೆ ಮಾಡಿದರು. ಮೂಲ ದೃಶ್ಯವನ್ನು ನಕಲು ಮಾಡದಿರುವುದು ಯೋಗ್ಯವಾದ ರೀಮೇಕ್ ಮಾಡುವ ಕೀಲಿಯಾಗಿದೆ ಎಂದು ಅಭಿಷೇಕ್ ಹೇಳಿದ್ದಾರೆ.


  ಸಿನಿಮಾದ ಥೀಮ್ ಏನು?
  ತನ್ನ ಮಾನ. ಪ್ರಾಣ ಉಳಿಸಿಕೊಳ್ಳಲು ಒಂದು ಕೊಲೆ ನಡೆಯುತ್ತೆ. ಆ ಕೊಲೆಯನ್ನು ನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು  ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಎಲ್ಲಾವನ್ನೂ ಪ್ಲ್ಯಾನ್ ಮಾಡಿ ಮುಚ್ಚಿ ಹಾಕುತ್ತಾನೆ.


  ಸಿಕ್ಕಿ ಹಾಕಿಕೊಂಡ್ರೆ ಯಾವ ರೀತಿ ಬಚಾವ್ ಆಗಬೇಕು ಎಂದಬುದನ್ನು ಹೇಳಿ ಕೊಟ್ಟಿರುತ್ತಾನೆ. ಇದು ದೃಶ್ಯಂ ಮೊದಲ ಭಾಗದಲ್ಲಿ ಇದೆ. ದೃಶ್ಯಂ 2 ನಲ್ಲಿ ಆ ಕೊಲೆ ಕೇಸ್ ಮತ್ತೆ ಓಪನ್ ಆಗುತ್ತದೆ. ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಕಥೆ.


  ಇದನ್ನೂ ಓದಿ: Kamal Haasan: ಕಾಂತಾರ ವೀಕ್ಷಿಸಿದ ಕಮಲ್ ಹಾಸನ್, ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಹೇಳಿದ್ದೇನು? 


  ಬಾಲಿವುಡ್‍ಗೆ ಜೀವ ಕೊಟ್ಟ ದೃಶ್ಯಂ 2
  ಸೌತ್ ಸಿನಿಮಾಗಳ ಅಬ್ಬರದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಂದಿ ಸಿನಿಮಾಗಳು ಅಷ್ಟಾಗಿ ಓಡ್ತಾ ಇರಲಿಲ್ಲ. ಈಗ 'ದೃಶ್ಯಂ 2' ಚಿತ್ರ ಸೂಪರ್ ಹಿಟ್ ಆಗಿ ಓಡ್ತಾ ಇದೆ. ಬಿ ಟೌನ್ ಸದ್ಯ ಹೊಸ ಹೊಸ ಚಿತ್ರಗಳನ್ನು ನಿರ್ದೇಶನ ಮಾಡುವ ಹಾದಿಯಲ್ಲಿದೆ.

  Published by:Savitha Savitha
  First published: