• Home
  • »
  • News
  • »
  • entertainment
  • »
  • Kantara Film RGV Review: ಸೂಪರ್ ಸ್ಟಾರ್ ಇದ್ರೆ ಜನ ಥಿಯೇಟರ್​​ಗೆ ಬರಲ್ಲ! ಕಾಂತಾರ ನೋಡಿ ಆರ್​ಜಿವಿ ಹೇಳಿದ್ದೇನು?

Kantara Film RGV Review: ಸೂಪರ್ ಸ್ಟಾರ್ ಇದ್ರೆ ಜನ ಥಿಯೇಟರ್​​ಗೆ ಬರಲ್ಲ! ಕಾಂತಾರ ನೋಡಿ ಆರ್​ಜಿವಿ ಹೇಳಿದ್ದೇನು?

ನೀವು ಕಾಂತಾರ ನೋಡಿ-ಹೇಳಿದ್ದು ಆರ್​ಜಿವಿ

ನೀವು ಕಾಂತಾರ ನೋಡಿ-ಹೇಳಿದ್ದು ಆರ್​ಜಿವಿ

ಸೂಪರ್ ಸ್ಟಾರ್ ಇದ್ರೆ ಸಿನಿಮಾ ಗೆಲ್ಲುತ್ತದೆ. ಮನಮೋಹಕ ವಿಎಫ್​ಎಕ್ಸ್ ಇದ್ರೆ ಸಿನಿಮಾ ಸಕ್ಸಸ್ ಆಗುತ್ತದೆ. ಜನ ಥಿಯೇಟರ್​​ಗೆ ಬರ್ತಾರೆ ಅನ್ನೋ ನಂಬಿಕೆ ಇದೆ. ಆದರೆ ಕಾಂತಾರ ಸಿನಿಮಾ ಅದನ್ನೆಲ್ಲ ಸುಳ್ಳು ಮಾಡಿದೆ ಎಂದಿದ್ದಾರೆ ರಾಮ್​ ಗೋಪಾಲ್ ವರ್ಮಾ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ (Kantara Cinema) ಸಿನಿಮಾ ಎಲ್ಲ ರೆಕಾರ್ಡ್​ ಗಳನ್ನ ಮುರಿದು ಮುನ್ನುಗುತ್ತಿದೆ. ಎಲ್ಲ ಭಾಷೆಯಲ್ಲೂ ಕಮಾಲ್ ಮಾಡುತ್ತಿದೆ. ಈ ಹಿಂದೆ ಇದ್ದ ಸಿನಿಮಾ (Cinema Making) ಮೇಕಿಂಗ್ ಫಾರ್ಮುಲಾ ಕೂಡ ಈ ಮೂಲಕ ಚೇಂಜ್ ಆಗಿದೆ ಅನ್ನೋ ಅಭಿಪ್ರಾಯವೂ ಬಂದಿದೆ. ವಿಶೇಷ ಚಿತ್ರಗಳ ನಿರ್ದೇಶನಕ್ಕೆ ಹೆಸರಾದ ರಾಮ್ (RGV) ಗೋಪಾಲ್ ವರ್ಮಾ, ಫ್ಯಾಷನ್​ದಂತಹ ಚಿತ್ರ ಕೊಟ್ಟ ಡೈರೆಕ್ಟರ್ ಮಧುರ್ (Madhur Bhandarkar) ಭಂಡಾರ್ಕರ್ ಈಗ ಈ ಚಿತ್ರ ವೀಕ್ಷಿಸಿದ್ದಾರೆ. ತಮ್ಮದೇ ಶೈಲಿಯಲ್ಲಿಯೇ ಚಿತ್ರವನ್ನ ಕೊಂಡಾಡಿದ್ದಾರೆ. ಕಾಂತಾರ ಸಿನಿಮಾ ಈ ಹಿಂದಿನ ಸಿನಿಮಾ ಮೇಕಿಂಗ್ ಗೆಲುವಿನ ಫಾರ್ಮುಲಾ ಚೇಂಜ್ ಮಾಡಿದೆ ಅಂತಲೇ ಹೇಳಿಕೊಂಡಿದ್ದಾರೆ. ಮಧುರ್ ಭಂಡಾರ್ಕರ್ ಚಿತ್ರದ ಪ್ರತಿ ವಿಭಾಗವನ್ನೂ ಹೊಗಳಿದ್ದಾರೆ.


ಕನ್ನಡದ ಕಾಂತಾರ ಕಮಾಲ್-ಬಾಲಿವುಡ್ ಫುಲ್ ಬೋಲ್ಡ್
ಕನ್ನಡದ ಕಾಂತಾರ ಸಿನಿಮಾದ ಖ್ಯಾತಿ ದೇಶ-ವಿದೇಶದಲ್ಲೂ ಪಸರಿಸಿದೆ. ಸಿನಿಮಾ ಪ್ರೇಮಿಗಳು ಚಿತ್ರವನ್ನ ಮೆಚ್ಚಿಕೊಂಡಾಡಿದ್ದಾರೆ. ಸಿನಿಮಾ ಪ್ರೇಮಿಗಳಲ್ಲಿ ಹೊಸದೊಂದು ಉತ್ಸಾಹವನ್ನೂ ತುಂಬಿದೆ.


ಕಂಟೆಂಟ್ ಆಧರಿಸಿದ ಸಿನಿಮಾ ನಿರೀಕ್ಷೆ ಮಾಡೋರಿಗೆ, ಕಾಂತಾರ ಸಿನಿಮಾ ಹೆಚ್ಚಿನ ಕಥೆಯನ್ನೆ ಕೊಟ್ಟು ಬಿಟ್ಟಿದೆ. ಒಳ್ಳೆ ಸಿನಿಮಾಗಳನ್ನ ಮಾಡಬೇಕು ಅನ್ನೋ ಸಿನಿಮಾ ಮೇಕರ್ ಗಳಲ್ಲೂ ಗೆಲುವಿನ ಹೊಸ ಹಾದಿಯನ್ನ ಕನ್ನಡದ ಕಾಂತಾರ ಈಗ ತೋರಿಸಿಕೊಟ್ಟಿದೆ.


Bollywood director Madhur Bhandarkar and Ram Gopal Varma Talks About Kannada Film Kantara
ಕನ್ನಡದ ಕಾಂತಾರ ಕಮಾಲ್-ಬಾಲಿವುಡ್ ಫುಲ್ ಬೋಲ್ಡ್


ಕಾಂತಾರ ಸಿನಿಮಾ ನೋಡಿ ರಾಮ್​ ಗೋಪಾಲ್ ವರ್ಮಾ ಹೇಳಿದ್ದೇನು?
ಸಿನಿಮಾರಂಗದಲ್ಲಿ ಒಂದು ನಂಬಿಕೆ ಇದೆ. ಸೂಪರ್ ಸ್ಟಾರ್ ಇದ್ರೆ ಸಿನಿಮಾ ಗೆಲ್ಲುತ್ತದೆ. ಒಳ್ಳೆ ಪ್ರೋಡಕ್ಷನ್ ಇದ್ದರೂ ಸಹ ಸಿನಿಮಾ ಹಿಟ್ ಆಗುತ್ತದೆ. ಮನಮೋಹಕ ವಿಎಫ್​ಎಕ್ಸ್ ಇದ್ರೆ ಸಿನಿಮಾ ಸಕ್ಸಸ್ ಆಗುತ್ತದೆ. ಜನರ ಥಿಯೇಟರ್​​ಗೆ ಬರ್ತಾರೆ ಅನ್ನೋ ನಂಬಿಕೆ ಇದೆ.ಆದರೆ ಕಾಂತಾರ ಸಿನಿಮಾ ಈ ಎಲ್ಲ ನಂಬಿಕೆಯನ್ನ ಸುಳ್ಳು ಮಾಡಿದೆ. ದೊಡ್ಡ ಹೆಸರು ಇಲ್ಲದೇ ಇರೋ ಕಾಂತಾರ ಚಿತ್ರ ಗೆದ್ದು ಬೀಗುತ್ತಿದೆ. ಈ ಹಿಂದಿನ ಎಲ್ಲ ಫಾರ್ಮುಲಾಗಳನ್ನ ಕಾಂತಾರ ಬ್ರೇಕ್ ಮಾಡಿದೆ ಅಂತಲೇ ವರ್ಮಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.


ಕಾಂತಾರ ಸಿನಿಮಾದಲ್ಲಿ ಕಥೆನೆ ಹೀರೋ, ಅದು ಸೂಪರ್ ಹೀರೋ ಅಂದ್ರು ತಪ್ಪಿಲ್ಲ. ಕಲಾವಿದರ ಅಗಾಧ ಪ್ರತಿಭೆ ಕೂಡ ಆ ಕಥೆಗೆ ಪೂರಕವಾಗಿಯೇ ಇದೆ. ಇಷ್ಟೆಲ್ಲ ಇದ್ದ ಕಾಂತಾರ ಸಿನಿಮಾ ಜನರಿಗೆ ಹೊಸ ರೀತಿಯಲ್ಲಿಯೇ ಮನರಂಜನೆ ಕೊಡ್ತಿದೆ. ಒಂದು ಸೆಳೆತವನ್ನೂ ಹುಟ್ಟುಹಾಕಿದೆ.


ಇದನ್ನೂ ಓದಿ: Vicky and Katrina: ವಿಕ್ಕಿ- ಕತ್ರಿನಾ ಮದುವೆ ಬಳಿಕದ ಜೀವನ ಹೀಗಿದ್ಯಂತೆ; ಪತಿ ಬಗ್ಗೆ ಹೇಳಿದ್ದೇನು?


ಫ್ಯಾಷನ್ ಡೈರೆಕ್ಟರ್ ಮಧುರ್ ಭಂಡಾರ್ಕರ್ ಏನಂತಾರೆ?
ಬಾಲಿವುಡ್​ ಅಂಗಳದಲ್ಲಿ ಹೊಸ ರೀತಿಯ ಸಿನಿಮಾ ಮಾಡಿದವರಲ್ಲಿ ಮಧುರ್ ಭಂಡಾರ್ಕರ್ ಕೂಡ ಒಬ್ಬರು. ಇವರ ಸಿನಿಮಾಗಳು ವಿವಾದ ಎಬ್ಬಿಸಿದ್ದೇ ಹೆಚ್ಚು. ಆದರೂ ಸಿನಿಮಾದಲ್ಲಿ ಕಂಟೆಂಟ್ ಇರುತ್ತಿತ್ತು. ಅಂತಹ ಚಿತ್ರಗಳನ್ನ ಕೊಟ್ಟ ಮಧುರ್ ಭಂಡಾರ್ಕರ್ ಕನ್ನಡದ ಕಾಂತಾರ ಸಿನಿಮಾ ಒಪ್ಪಿಕೊಂಡಿದ್ದಾರೆ. ತಮ್ಮ ಟ್ವಿಟ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ."ಕಾಂತಾರ ಸಿನಿಮಾದ ಪ್ರತಿ ವಿಭಾಗವನ್ನ ಸೂಪರ್ ಆಗಿದೆ. ಒಳ್ಳೆ ಕ್ಯಾಮೆರಾ ವರ್ಕ್ ಇದೆ. ರಿಷಬ್ ಶೆಟ್ಟಿ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಹಿನ್ನೆಲೆ ಸಂಗೀತವೂ ಮೋಹಕವಾಗಿಯೇ ಇದೆ. ಚಿತ್ರದ ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸುತ್ತದೆ. ಇಷ್ಟೊಂದು ಒಳ್ಳೆ ಸಿನಿಮಾ ಕೊಟ್ಟ ಇಡೀ ತಂಡಕ್ಕೆ ಗುಡ್ ಲಕ್"


ಇಷ್ಟೊಂದು ಒಳ್ಳೆ ಮಾತುಗಳನ್ನ ಆಡೋಕೆ ಸುಮ್ನೆ ಸಾಧ್ಯವಿಲ್ಲ ಬಿಡಿ. ಸಿನಿಮಾ ಮಾಡಿದವ್ರಿಗೆ ಆ ಬಗ್ಗೆ ಗೊತ್ತಿರುತ್ತದೆ. ಅದರಂತೆ ಕನ್ನಡದ ಕಾಂತಾರ ಚಿತ್ರವನ್ನ ಹೊಗಳಿದ ಮಧುರ್ ಭಂಡಾರ್ಕರ್ ಒಬ್ಬ ಸಿನಿಮಾ ನಿರ್ದೇಶಕರೂ ಹೌದು, ಒಬ್ಬ ಪತ್ರಕರ್ತರೂ ಹೌದು, ಹೀಗಾಗಿ ಇವರ ಮಾತುಗಳನ್ನ ಯಾವುದೇ ಅನುಮಾನಗಳಿಲ್ಲದೇ ನಂಬಬಹುದು.


ಇನ್ನು ರಾಮ್​​ಗೋಪಾಲ್ ವರ್ಮಾ ಅವರ ಸಿನಿಮಾ ಪ್ರೀತಿ ಗೊತ್ತೇ ಇದೆ. ಅವರ ಸಿನಿಮಾ ಮೇಕಿಂಗ್ ಆಗ ಹೇಗಿತ್ತು. ಈಗ ಹೇಗಿದೆ ಅನ್ನೋ ಸತ್ಯವೂ ಎಲ್ಲರಿಗೂ ತಳಿದಿದೆ. ಹೀಗಿರೋವಾಗ ವರ್ಮಾ ಕೂಡ ಕಾಂತಾರ ಸಿನಿಮಾ ಮೆಚ್ಚಿಕೊಂಡು ತಮ್ಮ ಮನದ ಮಾತುಗಳನ್ನ ಟ್ವಿಟರ್ ನಲ್ಲಿ ಬರೆದುಕೊಂಡು, ಸೂಪರ್ ಸ್ಟಾರ್​ಗಳಿಗೂ ಟಾಂಗ್ ಕೊಟ್ಟಂತೆ ಬರೆದಿದ್ದಾರೆ.


ಇದನ್ನೂ ಓದಿ: Rishab Shetty Video Viral: ರಿಷಬ್ ಶೆಟ್ಟಿಯ ಆ ವೀಡಿಯೋ ವೈರಲ್! ಗಾಯಕ ಅಲೋಕ್ ಹಂಚಿಕೊಂಡ ವೀಡಿಯೋದಲ್ಲಿ ಏನಿದೆ ಗೊತ್ತೆ?


ಉಳಿದಂತೆ ಕಾಂತಾರ ಎಲ್ಲ ಭಾಷೆಯಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದಿದೆ. ಅದೇ ರೀತಿ ಒಳ್ಳೆ ಕಲೆಕ್ಷನ್ ಮೂಲಕ ಓಡ್ತಾನೇ ಇದೆ. ಈ ಮೂಲಕ ಕಾಂತಾರ ತನ್ನ ಸಕ್ಸಸ್ ಯಾತ್ರೆಯನ್ನ ಎಲ್ಲೆಡೆ ಆರಂಭಿಸಿ ಬಿಟ್ಟಿದೆ.

First published: