ಬಾಲಿವುಡ್ (Bollywood) ಖ್ಯಾತ ನಿರ್ದೇಶಕ ಕರಣ್ ಜೋಹರ್ (Karan Johar) ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಸಾಕಷ್ಟು ಸಿನಿಮಾಗಳ ನಿರ್ದೇಶನದ ಜೊತೆಗೆ ಜನಪ್ರಿಯ ಕಾಫಿ ವಿತ್ ಕರಣ್ (Koffee with karan) ಟಿವಿ ಕಾರ್ಯಕ್ರಮ ನಡೆಸಿಕೊಂಡುತ್ತಾ ಬಂದಿದ್ದಾರೆ. ಅವರ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಸಾಗುತ್ತಾ ಬಂದಿದೆ. ಅಂದಹಾಗೆಯೇ ಕರಣ್ ಸಾಕಷ್ಟು ನಟರನ್ನು ಬಾಲಿವುಡ್ಗೆ ಪರಿಚಯಿಸಿದವರು ಅದರಲ್ಲಿ ಒಬ್ಬರು ನಟಿ ದೀಪಿಕಾ (Deepika Padukone) ಅವರ ಗಂಡ ರಣ್ವೀರ್ ಸಿಂಗ್ (Ranveer Singh). ಬಾಲಿವುಡ್ ಖ್ಯಾತ ನಟ ಎನಿಸಿಕೊಂಡಿರುವ ಸ್ಟೈಲೀಶ್ ಮ್ಯಾನ್ ರನ್ವೀರ್ ಸಿಂಗ್ ಬಗ್ಗೆ ಕರಣ್ ಮನಬಿಚ್ಚಿ ಮಾತನಾಡಿದ್ದಾರೆ. ಅಂದರೆ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೂಲಕ ಹಾಡಿಹೊಗಲಿದ್ದಾರೆ. ಅಂದಹಾಗೆಯೇ ಕರಣ್ ಏನು ಹೇಳಿದ್ದಾರೆ ಇಲ್ಲಿದೆ ನೋಡೋಣ..
ಕರಣ್ ಜೋಹರ್ ಸದಾ ಸುದ್ದಿಯಲ್ಲಿರುತ್ತಾರೆ. ಏನಾದರೊಂದು ಸಂಗತಿಯನ್ನು ಬಿಚ್ಚಿಡುವ ಮೂಲಕ ಅಥವಾ ಹೊಸ ಸಿನಿಮಾವನ್ನು ಘೋಷಣೆ ಮಾಡುವ ಮೂಲಕ ಕರಣ್ ಜೋಹರ್ ಪ್ರತಿ ದಿನ ಹೆಡ್ಲೈನ್ ಆಗುತ್ತಾ ಇರುತ್ತಾರೆ. ಈಗ ಅಂಥದ್ದೇ ಮತ್ತೊಂದು ಸುದ್ದಿಯಲ್ಲಿದ್ದಾರೆ. ಅದೇನೆಂದರೆ ನಟ ರಣ್ವೀರ್ ಸಿಂಗ್ಗೆ ಐ ಲವ್ ಯೂ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಂಲ್ಲಿ ಕರಣ್ ಜೋಹರ್ ಅವರು ರಣ್ವೀರ್ ಸಿಂಗ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಸಿಕ್ಕಾಗ ನಡೆದುಕೊಳ್ಳುವ ರೀತಿಯ ಬಗ್ಗೆ ಹೇಳಿದ್ದಾರೆ.
ಮೊದಲೇ ಹೇಳಿದಂತೆ ರಣವೀರ್ ಸಿಂಗ್ ಅವರು ಕರಣ್ ಜೋಹರ್ ಅವರ ಗರಡಿಯಲ್ಲಿ ಬಂದ ನಟ ಹಾಗಿದ್ದಾಗ ಗೌರವ ಇದ್ದೇ ಇರುತ್ತದೆ. ಆದರೆ ಕರಣ್ ಮಾತ್ರ ರಣವೀರ್ ಅವರು ನನ್ನನ್ನು ಸ್ಪೆಷಲ್ ಆಗಿ ಟ್ರೀಟ್ ಮಾಡುತ್ತಾರೆ. ಜನರು ಅವರ ಬಗ್ಗೆ ತೋರಿಸುವ ಪ್ರೀತಿ ಕಾಳಜಿಗೆ ನಾನು ಫಿದಾ ಆಗಿದ್ದೇನೆ. ಐ ಲವ್ ಯೂ ರಣವೀರ್ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ: Malaika Arora: ಮಲೈಕಾ ಮಾದಕ ನೋಟಕ್ಕೆ ಎದೆ ಬಡಿತ ಜೋರಾಗಿದೆ ಅಂದ್ರು ಪಡ್ಡೆ ಹುಡುಗ್ರು! ನೀವೂ ನೋಡಿ ಅನಾರ್ಕಲಿಯ ಹೊಸ ಅವತಾರ
ರಣವೀರ್ ಸಿಂಗ್ ಅವರನ್ನು ಹತ್ತಿರದಿಂದ ಮತ್ತು ದೂರದಿಂದ ಕಂಡ ವ್ಯಕ್ತಿಯಲ್ಲಿ ಕರಣ್ ಜೋಹರ್ ಕೂಡ ಒಬ್ಬರು. ಸದಾ ನಗುತ್ತಾ ತನ್ನವರನ್ನು ಪ್ರೀತಿಸುತ್ತಾ. ಎಲ್ಲೇ ಇದ್ದರು ಗುರುತಿಸಿ ಹತ್ತಿರಬಂದು ಮಾತನಾಡುವ ಸೌಜನ್ಯ ರಣವೀರ್ನಲ್ಲಿದೆ. ಅಷ್ಟೇ ಏಕೆ ಸಾಕಷ್ಟು ಅಭಿಮಾನಿಗಳನ್ನು ನಟ ರಣವೀರ್ ಹೊಂದದಿದ್ದಾರೆ. ಇದಕ್ಕೆ ರಣವೀರ್ ನನಗೆ ತುಂಬಾ ಇಷ್ಟ. ಸೆಲೆಬ್ರಿಟಿಯಾದರೂ ಯಾವುದೇ ಅಹಂಕಾರವಿಲ್ಲದೆ ಮಾತನಾಡಿಸುತ್ತಾರೆ. ನೀನು ಬೆಳೆದಿರುವ ‘ಬಾಚಾ’ವನ್ನು ಎಂದಿಗೂ ಕಳೆದುಕೊಳ್ಳಲು ಹೋಗಬೇಡ. ಐ ಲವ್ ಯೂ ರಣವೀರ್ ಎಂದು ಕರಣ್ ಇನ್ಸ್ಟಾಗ್ರಾಣಲ್ಲಿ ಬರೆದು ಹಾಕಿದ್ದಾರೆ.
ಇದನ್ನೂ ಓದಿ: Ismart Jodi: ನನ್ನ ದುಡಿಮೆಯಲ್ಲೇ ನನ್ನ ಗಂಡ ಕೂತು ತಿನ್ನುತ್ತಾನೆ! ಹೀಗ್ಯಾಕೆ ಅಂದ್ರು ಈ ನಟಿ?
ಕರಣ್ ಸಾಕಷ್ಟು ನಟರನ್ನು ಬಾಲಿವುಡ್ಗೆ ಪರಿಚಯಿಸಿದ್ದಾರೆ. ರಣವೀರ್ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಏಳು ಬೀಳುಗಳನ್ನು ಕಾಣುತ್ತಾ ಇಂದು ಬಾಲಿವುಡ್ನಲ್ಲಿ ತಮ್ಮದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ದೀಪಿಕಾ ಪಡುಕೋಣೆ ಅವರ ಪ್ರೀತಿಯನ್ನು ಗಿಟ್ಟಿಸಿಕೊಂಡು ಆಕೆಗೆ ಗಂಡನಾಗಿದ್ದಾರೆ. ಸದ್ಯ ಬಾಲಿವುಡ್ನಲ್ಲಿ ಸದಾ ಟ್ರೆಂಡಿಂಗ್ನಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ-ನಿಕ್, ಆಲಿಯಾ-ರಣ್ಬೀರ್ ಕಪೂರ್ ಈ ಜೋಡಿಗಳೊಂದಿಗೆ ದೀಪಿಕಾ ಮತ್ತು ರಣಬೀರ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
ಐಪಿಎಲ್ನಲ್ಲೂ ರಣವೀರ್ ಸ್ಟೆಪ್ ಹಾಕಿದ್ರು
ಹೌದು. ಈ ಬಾರಿಯ ಐಪಿಎಲ್ ಪಂದ್ಯದಲ್ಲೂ ರಣವೀರ್ ಸ್ಟೆಪ್ ಹಾಕಿದ್ರು. ಅಷ್ಟು ಮಾತ್ರವಲ್ಲದ ಕನ್ನಡದ ನಟ ರಾಕಿ ಬಾಯ್ ಅಂದ್ರೆ ಯಶ್ ಅವರ ಕೆಜಿಎಫ್ ಹಾಡಿದೆ ಇವರು ಡ್ಯಾನ್ಸ್ ಮಾಡಿದ್ರು. ಈ ಡ್ಯಾನ್ಸ್ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಭದಲ್ಲಿ ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ