Karan Johar: ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ಯಶ್​ಗೆ ಆಹ್ವಾನ, ಬಾಲಿವುಡ್​ನಲ್ಲಿ ಹೆಚ್ಚುತ್ತಿದೆ ರಾಕಿ ಭಾಯ್ ಹವಾ

ರಾಕಿಂಗ್ ಸ್ಟಾರ್ ಯಶ್ ಅವರನ್ನು ಇದೀಗ ಬಾಲಿವುಡ್ ನಿರ್ಮಾಪಕ ಕರಣ್ ಜೋಹಾರ್ (Karan Johar) ಅವರು ತಮ್ಮ ಹುಟ್ಟುಹಬ್ಬಕ್ಕೆ (Birthday) ಆಹ್ವಾನ ಮಾಡಿದ್ದಾರಂತೆ.

ಯಶ್ ಮತ್ತು ಕರಣ್ ಜೋಹಾರ್

ಯಶ್ ಮತ್ತು ಕರಣ್ ಜೋಹಾರ್

  • Share this:
ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ಕೆಜಿಎಫ್ 2 (KGF 2) ಸಕ್ಸಸ್​ ನಲ್ಲಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಯಶ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅದಲ್ಲದೇ ಬಾಲಿವುಡ್ ನಲ್ಲಂತೂ ರಾಕಿ ಬಾಯ್ ಹವಾ ಆಕಾದೆತ್ತರಕ್ಕೇ ತಲುಪಿದೆ ಎಂದರೂ ತಪ್ಪಾಗಲಾರದು, ಇದೀಗ ಯಶ್ ಅವರ ಹಿರಿಮೆಗೆ ಮತ್ತೊಂದು ಗರಿಮೆ ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಅವರನ್ನು ಇದೀಗ ಬಾಲಿವುಡ್ ನಿರ್ಮಾಪಕ ಕರಣ್ ಜೋಹಾರ್ (Karan Johar) ಅವರು ತಮ್ಮ ಹುಟ್ಟುಹಬ್ಬಕ್ಕೆ (Birthday) ಇನ್ವಾಯ್ಟ್ ಮಾಡಿದ್ದಾರಂತೆ. ಹೌದು, ಬಾಲಿವುಡ್​ನ ಖ್ಯಾತ್ ನಿರ್ದೆಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಅವರು ಮೇ 25ರಂದು 50 ವಸಂತಕ್ಕೆ ಕಾಲಿಡಲಿದ್ದಾರೆ.

ಹೀಗಾಗಿ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಿಕೊಳ್ಳಲು ನಿರ್ಧರಿಸಿದ್ದು, ಅನೇಕ ಸ್ಟಾರ್​ ಗಳನ್ನು ತಮ್ಮ ಬರ್ತಡೇ ಪಾರ್ಟಿಗೆ ಆಹ್ವಾನಿಸಿದ್ದಾರಂತೆ. ಅದರಲ್ಲಿಯೂ ಕನ್ನಡದ ರಾಕಿಂಗ್ ಸ್ಟಾರ್ ಅವರನ್ನೂ ಆಹ್ವಾನಿಸಿದ್ದಾರೆ. ಅದಲ್ಲದೇ ಅವರು ಅನೇಕ ದಕ್ಷಿಣ ಭಾರತದ ನಟ, ನಿರ್ದೇಶಕರನ್ನೂ ಆಹ್ವಾನಿದ್ದಾಗಿ ತಿಳಿದುಬಂದಿದೆ.

ಕರಣ್ ಜೋಹಾರ್ ಹುಟ್ಟುಹಬ್ಬ್ಕಕೆ ಸೌತ್ ಸ್ಟಾರ್​ ಗಳ ದಂಡು:

ಇನ್ನು, ಬಾಲಿವುಡ್​ ನಲ್ಲಿ ಕರಣ್ ಜೋಹಾರ್ ಹುಟ್ಟುಹಬ್ಬದ ಪಾರ್ಟಿ ಎಂದರೆ ಅದೆನೋ ವಿಶೇಷ ಎಂಬಂತಾಗಿದೆ. ಅದಕ್ಕಾಗಿ ಯಾರೊಬ್ಬರೂ ಸಹ ಮಿಸ್ ಮಾಡದೆಯೇ ಅವರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಕರಣ್ ಬರ್ತಡೇ ಪಾರ್ಟಿ ಮತ್ತಷ್ಟು ವಿಶೇಷವಾಗಿರಲಿದೆ. ಏಕೆಂದರೆ, ಈ ಬಾರಿ ಅವರ ಹುಟ್ಟುಹಬ್ಬದಂದು ನಮ್ಮ ರಅಕಿ ಬಾಯ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅವರಿಗೂ ಸಹ ಪಾರ್ಟಿಗೆ ಆಹ್ವಾನವಿದೆ. ಯಶ್ ಮಾತ್ರವಲ್ಲದೇ ಸೌತ್ ಇಂಡಸ್ಟ್ರಿಯಿಂದ ನಿರ್ದೇಶಕ ಪ್ರಶಾಮತ್ ನೀಲ್, ತೆಲುಗು ನಿರ್ದೇಶಕ ರಾಜಮೌಳಿ, ನಟ ಜೂನಿಯರ್ ಎನ್​ಟಿಆರ್​ ಸೇರಿದಂತೆ ದೊಡ್ಡ ಬಳಗವನ್ನೇ ಆಹ್ವಾನಿಸಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Shikhar Dhawan: ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ ಗಬ್ಬರ್ ಸಿಂಗ್, ಈ ವರ್ಷವೇ ಫಿಲ್ಮಂ ಬಿಡುಗಡೆಯಂತೆ

50ನೇ ವಸಂತಕ್ಕೆ ಕಾಲಿಡುತ್ತಿರು ಕರಣ್ ಜೋಹಾರ್​:

ಬಾಲಿವುಡ್​ ನ ಖ್ಯಾಥ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಕರನ್ ಜೋಹಾರ್ ಮೇ 25ರಂದು 1972ರಂದು ಜನಿಸಿದರು. ನಿರ್ಮಾಪಕ ಯಶ್ ಜೋಹರ್ ಅವರ ಮಗ , ಅವರು ರೊಮ್ಯಾಂಟಿಕ್ ಹಾಸ್ಯ-ನಾಟಕ ಕುಚ್ ಕುಚ್ ಹೋತಾ ಹೈ (1998) ನೊಂದಿಗೆ ನಿರ್ದೇಶನದ ಚೊಚ್ಚಲ ಪ್ರವೇಶ ಮಾಡಿದರು. ಇದಾದ ನಂತರ ಅವರು ಈವರೆಗೆ ಸರಿ ಸುಮಾರು 10ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಕಾಫಿ ವಿತ್ ಕರಣ್ ಶೋ ಮೂಲಕ ಮತ್ತಷ್ಟು ಹೆಚ್ಚು ಖ್ಯಾತರಾದರು. ಇದೀಗ ಅವರು ತಮ್ಮ 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಕೆಜಿಎಫ್ 2 ಚಿತ್ರಕ್ಕೆ ಸಾಥ್ ನೀಡಿದ್ದ ಕರಣ್:

ಇನ್ನು, ಕರಣ್ ಜೋಹಾರ್ ಮತ್ತು ಯಶ್ ನಡುವೆ ಒಳ್ಳೆಯ ಬಾಂದವ್ಯವಿದೆ. ಹೀಗಾಗಿ ಕರಣ್ ಕೆಜಿಎಪ್ 2 ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಹೋಸ್ಟ್ ಮಾಡಿದ್ದರು. ಇದೇ ಅವರು ಮೊದಲು ನಿರೂಪಕರಾಗಿ ನಡೆಸಿಕೊಟ್ಟ ದಕ್ಷಿಣ ಬಾರತದ ಚಿತ್ರವಾಗಿದೆ. ಹೀಗಾಗಿ ಯಶ್ ಮತ್ತು ನೀಲ್ ಈ ಬಾರಿ ಕರಣ್ ಅವರ ಹುಟದ್ಟುಹಬ್ಬದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: KGF Chapter 2: ಸಿನಿರಂಗದಲ್ಲಿ ಬಂಗಾರದ ಬೆಳೆ ತೆಗೆದ 'ಕೆಜಿಎಫ್‌-2'! 1000 ಕೋಟಿ ಗಳಿಸಿದ 2ನೇ ಭಾರತೀಯ ಸಿನಿಮಾ

ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್​ 2:

ಕೆಜಿಎಫ್​ ಚಾಪ್ಟರ್​  2 ದಿನೇ ದಿನೇ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಇದೀಗ ಚಿತ್ರವು ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡುವ ಮೂಲಕ  ಕನ್ನಡದಲ್ಲಿ ಸಾವಿರ ಕೋಟಿ ಕಲೆಕ್ಷನ್​ ಮಾಡಿದ ಮೊದಲ ಚಿತ್ರವಾಗಿದ್ದು, ರಾಜಾಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್​ 2 ಅಲಂಕರಿಸಿದೆ.
Published by:shrikrishna bhat
First published: