• Home
  • »
  • News
  • »
  • entertainment
  • »
  • Dhaakad Trailer: ಧಾಕಡ್ ಚಿತ್ರದ 2ನೇ ಟ್ರೈಲರ್ ಬಿಡುಗಡೆ, ರಾ ಏಜೆಂಟ್ ಆಗಿ ಕಾಣಿಸಿಕೊಂಡ ಕಂಗನಾ

Dhaakad Trailer: ಧಾಕಡ್ ಚಿತ್ರದ 2ನೇ ಟ್ರೈಲರ್ ಬಿಡುಗಡೆ, ರಾ ಏಜೆಂಟ್ ಆಗಿ ಕಾಣಿಸಿಕೊಂಡ ಕಂಗನಾ

ಧಾಡಕ್ ಚಿತ್ರ

ಧಾಡಕ್ ಚಿತ್ರ

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ‘ಧಾಕಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ‘ಧಾಕಡ್’ ಚಿತ್ರದ 2ನೇ ಟ್ರೈಲರ್ ರಿಲೀಸ್ ಆಗಿದೆ.

  • Share this:

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಬಹುನಿರೀಕ್ಷಿತ ‘ಧಾಕಡ್’ (Dhaakad) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ‘ಧಾಕಡ್’ ಚಿತ್ರದ 2ನೇ ಟ್ರೈಲರ್ (Trailer) ರಿಲೀಸ್ ಆಗಿದೆ. ಟ್ರೈಲರ್ ನಲ್ಲಿ ಕಂಗನಾ ಸಖತ್ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಂಪೂರ್ಣ ಟ್ರೈಲರ್ ರಕ್ತಸಿಕ್ತತೆಯಿಂದ ಕೂಡಿದೆ. ಅಲ್ಲದೇ ಬಿಡುಗಡೆಯಾಗಿ ಕೆಲ ಸಮಯದಲ್ಲಿಯೇ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಾನವ ಕಳ್ಳಸಾಗಣೆ ಕಾರ್ಟೆಲ್ ಅನ್ನು ನಡೆಸುತ್ತಿರುವ ಅರ್ಜುನ್ ರಾಂಪಾಲ್ (Arjun Rampal) ಅವರ ರುದ್ರವೀರ್ ಅನ್ನು ಸೆರೆಹಿಡಿಯಲು ಕಂಗನಾ (Kangana Ranaut) ಏಜೆಂಟ್ ಅಗ್ನಿ ಎಂಬ ಗೂಢಚಾರಿಕೆಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಂಬಂಧದ ಟ್ರೈಲರ್ ಸೂಪರ್ ಆಗಿದದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.


2ನೇ ಟ್ರೈಲರ್ ಬಿಡುಗಡೆ:


ಇಂದು ಧಾಡಕ್ ಚಿತ್ರ 2ನೇ ಟ್ರೈಲರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ರಾ ಏಜೆಂಟ್ ಆಗಿ ಕಾಣಿಸಿಕೊಂಡಿರುವ ಕಂಗನಾ ಆ್ಯಕ್ಟಿಂಗ್ ಸಖತ್ ಮಜವಾಗಿದೆ. ಅಲ್ಲದೇ ಸೂಪರ್ ಆ್ಯಕ್ಷನ್ ಸೀನ್ ಗಳಿಂದ ಟ್ರೈಲರ್ ಕೂಡಿದ್ದು, ಚಿತ್ರದ ನಿರೀಕ್ಷೆಯನ್ನು ಇನ್ನೊಂದು ಲೇವಲ್ ಗೆ ಕರೆದುಕೊಂಡು ಹೋಗಿದೆ. ಇದಲ್ಲದೇ ಟ್ರೈಲರ್ ನಲ್ಲಿ ವಿಭಿನ್ನ ವಿಭಿನ್ನ ಗೆಟಪ್ ಗಳಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ.
ಮೊದಲ ಟ್ರೈಲರ್ ಗೆ ಸ್ಟಾರ್​ ಗಳಿಂದ ಮೆಚ್ಚುಗೆ:


ಇನ್ನು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಮೊದಲ ಟ್ರೈಲರ್ ಗೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿತ್ತು. ಅಲ್ಲದೇ ಸ್ಟಾರ್ ನಟರುಗಳೂ ಸಹ ಉತತ್ಮವಾಗಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ರಾಮ್ ಗೋಪಾಲ್ ವರ್ಮಾ, ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ಅವರುಗಳನ್ನು 10 ಬಾರಿ ಗುಣಿಸಿದಂತೆ ಕಂಗನಾ ರನೌತ್ ಕಾಣುತ್ತಿದ್ದಾರೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: Sunny Leone: ಇಂದು ಪಡ್ಡೆ ಹೈಕ್ಳ ದೇವತೆ ಸನ್ನಿ ಹುಟ್ಟುಹಬ್ಬ, ಮಂಡ್ಯದಲ್ಲಿ ಕೇಕ್​ ಕತ್ತರಿಸಿ ಹಬ್ಬ ಮಾಡಿದ ಫ್ಯಾನ್ಸ್​!


ಇವರುಗಳಲ್ಲದೇ ಸಲ್ಮಾನ್ ಖಾನ್ ಶುಭಕೋರಿದ್ದು, ನನ್ನ ದಬಂಗ್ ಹೀರೋಗೆ ಧನ್ಯವಾದ. ಚಿತ್ರರಂಗದಲ್ಲಿ ನಾನು ಒಂಟಿ ಎಂದು ಇನ್ಯಾವತ್ತೂ ಹೇಳುವುದಿಲ್ಲ. ಇಡೀ ‘ಧಾಕಡ್’ ಚಿತ್ರತಂಡದಿಂದ ನಿಮಗೆ ಥ್ಯಾಂಕ್ಸ್‘ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


‘ಧಾಕಡ್’ ಚಿತ್ರದ ಬಗ್ಗೆ ಕಂಗನಾ ಹೇಳಿದ್ದು ಹೀಗೆ:


ಇನ್ನೂ ಇವರ ಮುಂಬರುವ ‘ಧಾಕಡ್’ ಚಿತ್ರದ ಬಗ್ಗೆ ಮಾತನಾಡಿದ ನಟಿ ಕಂಗನಾ ರಣಾವತ್ ಅವರು "ನಮ್ಮ ಬಾಲಿವುಡ್ ಸಿನೆಮಾಗಳಲ್ಲಿ, ನಿಜವಾದ ಅರ್ಥದಲ್ಲಿ ನಾಯಕಿಯರು ಆ್ಯಕ್ಷನ್ ದೃಶ್ಯಗಳನ್ನು ಪ್ರದರ್ಶಿಸುವುದು ತುಂಬಾನೇ ವಿರಳವಾಗಿವೆ. ‘ಧಾಕಡ್’ ಚಿತ್ರದಲ್ಲಿ ನನಗೆ ಈ ಪಾತ್ರ ಸಿಕ್ಕಿದ್ದಕ್ಕೆ, ಹಾರ್ಡ್‌ಕೋರ್ ಕಮರ್ಷಿಯಲ್ ಚಿತ್ರದಲ್ಲಿ ಒಬ್ಬ ಮಹಿಳೆಯನ್ನು ಆ್ಯಕ್ಷನ್ ನಾಯಕಿಯಾಗಿ ದೃಶ್ಯೀಕರಿಸುವ ಧೈರ್ಯವನ್ನು ಯಾರೋ ಮಾಡಿದ್ದನ್ನು ನೋಡಿ ನನಗೆ ಸಂತೋಷವಾಯಿತು. ನಾನು ಧೈರ್ಯವನ್ನು ಪ್ರದರ್ಶಿಸುವ ಮತ್ತು ನನ್ನ ನಟನೆಯ ಕೌಶಲ್ಯಗಳನ್ನು ಇನ್ನಷ್ಟು ತೋರಿಸಿಕೊಳ್ಳುವ ಅವಕಾಶಗಳನ್ನು ಬಿಡುವುದಕ್ಕೆ ಇಷ್ಟ ಪಡುವುದಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Kangana Ranaut: ಜನರು ಹರಡೋ ವದಂತಿಗಳಿಂದ ಕಂಗನಾ ಮದ್ವೆಯಾಗ್ತಿಲ್ವಂತೆ! ನಟಿ ಹೇಳಿರೋದೇನು?


ಕಂಗನಾ ಒಬ್ಬ ಅಸಾಧಾರಣ ನಟಿ:


ಧಾಕಡ್ ಚಿತ್ರದ ಸಹನಟ ಅರ್ಜುನ್ ರಾಂಪಾಲ್ ಅವರು ಕಂಗನಾ ಅವರ ಬಗ್ಗೆ ಮಾತನಾಡುತ್ತಾ "ಕಂಗನಾ ಒಬ್ಬ ಅಸಾಧಾರಣ ನಟಿ ಎಂದು ನಾನು ಹೇಳಬಲ್ಲೆ. ಅವಳು ಏನೇ ಮಾಡಿದರೂ ಅದು ಪಾತ್ರಕ್ಕಾಗಿ, ಆದರೆ ಅವಳು ನಿಜ ಜೀವನದಲ್ಲಿ ಹಾಗಲ್ಲ. ನಿಜ ಜೀವನದಲ್ಲಿ, ಅವಳು ತುಂಬಾ ಪ್ರೀತಿಪಾತ್ರಳು ಮತ್ತು ತುಂಬಾ ದೈವಭಕ್ತಿಯುಳ್ಳವಳು" ಎಂದು ಹೇಳಿದರು.

Published by:shrikrishna bhat
First published: