ಬಾಲಿವುಡ್ ಬಾಯ್ಜಾನ್ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಇದೀಗ ಸುದ್ದಿಯಲ್ಲಿದ್ದಾರೆ. ರೆಸ್ಟೋರೆಂಟ್ನಲ್ಲಿ ಕುಳಿತು ಪ್ಲೇಟ್ಗಳನ್ನು ಒಡೆದು ಹಾಕುವ ಮೂಲಕ ಎಲ್ಲರನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ ಆಹಾರ ಸೇವಿಸುವ ತಟ್ಟೆಯನ್ನು ಅರ್ಪಿತಾ ಖಾನ್ ಯಾಕೆ ಹೊಡೆದು ಹಾಕಿದರು ಗೊತ್ತಾ? ಆ ಕಾರಣ ಕೇಳಿದ್ರೆ ಅಚ್ಚರಿ ಆಗೋದರಲ್ಲಿ ನೋ ಡೌಟ್!.
ಹೌದು. ಸದ್ಯ ದುಬೈನಲ್ಲಿ ಇರುವ ಅರ್ಪಿತಾ ಖಾನ್ ರೆಸ್ಟೋರೆಂಟ್ ಒಂದರಲ್ಲಿ ಕುಳಿತು ತಟ್ಟೆಗಳನ್ನು ಒಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಸುಮ್ಮನೆ ಪ್ಲೇಟ್ ಒಡೆದಿದ್ದಲ್ಲ. ಅದಕ್ಕೂ ಒಂದು ಕಾರಣವಿದೆ!. ಗ್ರೀಕ್ ಸಂಪ್ರದಾಯದ ಪ್ರಕಾರ ಪ್ಲೇಟ್ ಒಡೆದರೆ ದುಷ್ಟಶಕ್ತಿ ನಿವಾರಣೆಯಾಗುತ್ತಂತೆ. ಹಾಗಾಗಿ ಅರ್ಪಿತಾ ಖಾನ್ ಹೋಗಿದ್ದ ರೆಸ್ಟೋರೆಂಟ್ನಲ್ಲೂ ಪ್ಲೇಟ್ ಒಡೆಯಲು ಅವಕಾಶ ನೀಡಲಾಗಿತ್ತು. ಅದಕ್ಕಾಗಿ ಅರ್ಪಿತಾ ಈ ರೀತಿ ಮಾಡಿದ್ದಾರೆ.
ಇನ್ನು ವಿಶ್ವದಾದ್ಯಂತ ಇರುವ ಅನೇಕ ಗ್ರೀಕ್ ರೆಸ್ಟೋರೆಂಟ್ಗಳಲ್ಲಿ ಪ್ಲೇಟ್ ಒಡೆಯಲು ಅವಕಾಶ ನೀಡಲಾಗುತ್ತದೆ.ಅದರಂತೆ ಅರ್ಪಿತಾ ಖಾನ್ ಮತ್ತು ಆಕೆಯ ಸ್ನೇಹಿತರು ಸುಮಾರು ಪ್ಲೇಟ್ಗಳನ್ನು ಒಡೆದು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ