ಫಿಟ್ನೆಸ್​ ಕ್ಷೇತ್ರದಲ್ಲಿ ಹಣ ಹೂಡಿ ದುಪ್ಪಟ್ಟು ಗಳಿಕೆ ಮಾಡುತ್ತಿರುವ ಬಾಲಿವುಡ್​ ಸೆಲೆಬ್ರಿಟಿಗಳು..!

ಸೆಲೆಬ್ರಿಟಿಗಳಿಗೆ ಫಿಟ್​ನೆಸ್​ ಅದನ್ನೋದು ಜೀವನ ಅವಿಭಾಜ್ಯ ಅಂಗವಾಗುವುದರ ಜತೆಗೆ ಹಣ ಮಾಡಿಕೊಡುವ ಮಷಿನ್​ ಸಹಾಗಿದೆ. ಅದಕ್ಕೆ ಕೆಲವರು ಫಿಟ್ನೆಸ್ ಅನ್ನೇ ವ್ಯವಹಾರಿಕವಾಗಿ ಮಾಡಿಕೊಂಡಿದ್ದಾರೆ. ತಾವೇ ಸ್ವತಃ ಫಿಟ್ನೆಸ್ ಸೆಂಟರ್ ಅಥವಾ ಫಿಟ್ನೆಸ್ ಎಕ್ವಿಕ್‍ಪ್‍ಮೆಂಟ್ ಬ್ರ್ಯಾಂಡ್ ಮೂಲಕ ಸೈಡ್‍ ಬ್ಯುಸಿನೆಸ್ ಮಾಡ್ತಿದ್ದಾರೆ. ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

Anitha E | news18
Updated:June 28, 2019, 1:04 PM IST
ಫಿಟ್ನೆಸ್​ ಕ್ಷೇತ್ರದಲ್ಲಿ ಹಣ ಹೂಡಿ ದುಪ್ಪಟ್ಟು ಗಳಿಕೆ ಮಾಡುತ್ತಿರುವ ಬಾಲಿವುಡ್​ ಸೆಲೆಬ್ರಿಟಿಗಳು..!
ಸಲ್ಮಾನ್​ ಖಾನ್​ ಮತ್ತು ಸುನೀಲ್​ ಶೆಟ್ಟಿ
  • News18
  • Last Updated: June 28, 2019, 1:04 PM IST
  • Share this:
ಈ ಸಿನಿಮಾ ನಟರಿಗೆ ಜಿಮ್​ ಹಾಗೂ ವರ್ಕೌಟ್ ಎಲ್ಲ ಈಗ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಫಿಟ್ನೆಸ್ ಕಾಪಾಡಿಕೊಳ್ಳಬೇಕು ಅಂದ್ಕೊಂಡಿರೋ ಸ್ಟಾರ್ ನಟನಟಿಯರು ಊಟ, ನಿದ್ದೆ ಬೇಕಾದ್ರೂ ಬಿಡ್ತಾರೆ. ಆದರೆ ಜಿಮ್ ವರ್ಕೌಟ್ ಅಂತೂ ಒಂದು ದಿನವೂ ತಪ್ಪಿಸಲ್ಲ. ಅಷ್ಟರ ಮಟ್ಟಿಗೆ ಸೆಲೆಬ್ರಿಟಿಗಳಿಗೆ ಜಿಮ್ ಕ್ರೇಜ್ ಇದೆ.

ಇನ್ನು ಕೆಲವರು ಫಿಟ್ನೆಸ್ ಅನ್ನೇ ವ್ಯವಹಾರಿಕವಾಗಿ ಮಾಡಿಕೊಂಡಿದ್ದಾರೆ. ತಾವೇ ಸ್ವತಃ ಫಿಟ್ನೆಸ್ ಸೆಂಟರ್ ಅಥವಾ ಫಿಟ್ನೆಸ್ ಎಕ್ವಿಕ್‍ಪ್‍ಮೆಂಟ್ ಬ್ರ್ಯಾಂಡ್ ಮೂಲಕ ಸೈಡ್‍ ಬ್ಯುಸಿನೆಸ್ ಮಾಡ್ತಿದ್ದಾರೆ. ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

sudeep
ಸಲ್ಮಾನ್-ಸುದೀಪ್​


ಸಿನಿಮಾಗಳಲ್ಲಿ ಶರ್ಟ್ ಬಿಚ್ಚಿ, ಸಿಕ್ಸ್ ಪ್ಯಾಕ್ ತೋರಿಸಿ, ಯುವ ಜನತೆಯಲ್ಲಿ ಫಿಟ್ನೆಸ್ ಕಿಚ್ಚು ಹೊತ್ತಿಸಿದ ನಟರಲ್ಲಿ ಸಲ್ಮಾನ್ ಮೊದಲ ಸಾಲಲ್ಲಿ ನಿಲ್ತಾರೆ. ಇಂತಹ ಸಲ್ಮಾನ್ ಫಿಟ್ನೆಸ್ ಫೀಲ್ಡ್​ನಲ್ಲಿ ಓರ್ವ ಯಶಸ್ವೀ ಬ್ಯುಸಿನೆಸ್​ ಮ್ಯಾನ್​. 'ಬೀಯಿಂಗ್ ಸ್ಟ್ರಾಂಗ್' ಹೆಸರಿನಲ್ಲಿ ಜಿಮ್ ಎಕ್ವಿಪ್‍ಮೆಂಟ್‍ಗಳನ್ನ ದೇಶದಾದ್ಯಂತ ಇರೋ ಜಿಮ್‍ಗಳಿಗೆ ಪೂರೈಸೋ ಕೆಲಸ ಮಾಡ್ತಿದ್ದಾರೆ.


ಇನ್ನು ಫಿಟ್ನೆಸ್ ರಂಗದಲ್ಲಿರುವ ಮತ್ತೊರ್ವ ಬಾಲಿವುಡ್‍ನ ನಟ ಅಂದರೆ, ಅದು ಸುನೀಲ್ ಶೆಟ್ಟಿ. ಸ್ಕ್ರೀನ್ ಮೇಲೆ ಫಿಟ್ ಅಂಡ್ ಫೈನ್ ಆಗಿ ಕಾಣುವ ಸುನೀಲ್ ಶೆಟ್ಟಿ, ದೇಶದಾದ್ಯಂತ ತಮ್ಮದೇ ಆದ ಸಾಕಷ್ಟು ಚೈನ್​ ಆಫ್​ ಜಿಮ್‍ಗಳನ್ನ ಹೊಂದಿದ್ದಾರೆ.

ಇದಿಷ್ಟೇ ಅಲ್ಲದೆ ನಟ ಹೃತಿಕ್ ರೋಷನ್ ಸಹ ಫಿಟ್‍ನೆಸ್ ಕ್ಷೇತ್ರದಲ್ಲಿ ಸಾಕಷ್ಟು ಹಣ ತೊಡಗಿಸಿದ್ದಾರೆ. 'ಕ್ಯೂರ್' ಎಂಬ ಬ್ರ್ಯಾಂಡ್‍ನ ಪಾಲುದಾರರಾಗಿರೋ ಹೃತಿಕ್, 'ಕಲ್ಟ್ ಫಿಟ್​' ಎಂಬ ಸಾಕಷ್ಟು ಜಿಮ್ ಸೆಂಟರ್​ಗಳನ್ನ ಹೊಂದಿದ್ದಾರೆ. ನಟಿಯರಾದ ಶಿಲ್ಪಾಶೆಟ್ಟಿ, ಬಿಪಾಶಾ ಬಸು ಸಹ ಫಿಟ್ನೆಸ್‍ಗೆ ಸಂಬಂಧಿಸಿದ ಪ್ರೊಡಕ್ಟ್‍ಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಯುವ ಜನತೆಯಲ್ಲಿ ಫಿಟ್ನೆಸ್ ಕಾಳಜಿ ಹೆಚ್ಚಿಸ್ತಿದ್ದಾರೆ. ಜತೆಗೆ ತಮ್ಮ ದುಡಿಮೆಯನ್ನ ಸಹ ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ.

ವೈರಲ್​ ಆಗುತ್ತಿವೆ ಕ್ರೇಜಿಸ್ಟಾರ್​ ನಾಯಕಿಯಾಗಿದ್ದ ಸ್ನೇಹಾರ ಲೆಟೆಸ್ಟ್​ ಚಿತ್ರಗಳು..!

First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ