• Home
  • »
  • News
  • »
  • entertainment
  • »
  • Amitabh Bachchan: ವಿಪರೀತಗಳು ಎಂದೂ ಉಳಿಯಲ್ಲ, ಬಿಗ್​ ಬಿ ಹೀಗೆ ಹೇಳಿದ್ಯಾಕೆ?

Amitabh Bachchan: ವಿಪರೀತಗಳು ಎಂದೂ ಉಳಿಯಲ್ಲ, ಬಿಗ್​ ಬಿ ಹೀಗೆ ಹೇಳಿದ್ಯಾಕೆ?

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್

ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಅವರು ಎಡಗಾಲಿಗೆ ಪೆಟ್ಟು ಆಗಿತ್ತಂತೆ. ರಕ್ತನಾಳ ಕಟ್ ಆಗಿದ್ದರಿಂದ ವಿಪರೀತ ರಕ್ತ ಹೋಗಿತ್ತಂತೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊಲಿಗೆ ಹಾಕಿಸಲಾಗಿದೆ.

  • Share this:

    ಬಾಲಿವುಡ್ (Bollywood) ನ ಬಿಗ್ ಬಿ, ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್  (Amitabh Bachchan) ಅವರು ಆಸ್ಪತ್ರೆಗೆ (Hospital) ಸೇರಿದ್ರು. ಅಯ್ಯೋ, ಅಕ್ಟೋಬರ್ 11ರಂದು 80ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ನಟನಿಗೆ ಏನಾಯ್ತಪ್ಪಾ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ರು. ಶೂಟಿಂಗ್ ವೇಳೆ ಅವರು ಎಡಗಾಲಿಗೆ ಪೆಟ್ಟು ಆಗಿತ್ತಂತೆ. ರಕ್ತನಾಳ ಕಟ್ ಆಗಿದ್ದರಿಂದ ವಿಪರೀತ ರಕ್ತ ಹೋಗಿತ್ತಂತೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊಲಿಗೆ ಹಾಕಿಸಲಾಗಿದೆ. ಈಗ ಸಂಪೂರ್ಣ ರೆಸ್ಟ್ (Rest) ಮಾಡಲು ಡಾಕ್ಟರ್ (Doctor) ಸೂಚಿಸಿದ್ದಾರೆ. ಒತ್ತಡ ಹಾಕುವಂತಿಲ್ಲ, ನಡೆಯುವಂತಿಲ್ಲ ಎಂದು ಕೂಡ ವೈದ್ಯರು ಸಲಹೆ ನೀಡಿದ್ದಾರೆ ಎಂದು ಸ್ವತಃ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.


    ಶೂಟಿಂಗ್ ವೇಳೆ ಎಡಗಾಲಿಗೆ ಪೆಟ್ಟು
    ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಅವರಿಗೆ ಎಡಗಾಲಿಗೆ ಪೆಟ್ಟಾಗಿ ರಕ್ತನಾಳ ಕಟ್ ಆಗಿ ಹೊಲಿಗೆ ಹಾಕಿಸಲಾಗಿದೆ. ಒಂದು ಲೋಹದ ತುಂಡು ನನ್ನ ಎಡ ಕಾಲಿಗೆ ತಗುಲಿ ನೋವುಂಟು ಮಾಡಿದೆ. ಅದಕ್ಕೆ ವೈದ್ಯರು ಹೊಲಿಗೆ ಹಾಕಿ ಓಡಾಡಬೇಡಿ ಎಂದಿದ್ದಾರೆ. ಕೌನ್ ಬನೇಗಾ ಕರೋಡ್‍ಪತಿ ಹೋಸ್ಟ್​ಗೆ ಟ್ರೆಡ್‍ಮಿಲ್‍ನಲ್ಲಿಯೂ ಸಹ ಆಯಾಸಪಡಬೇಡಿ ಅಥವಾ ನಡೆಯಲು ಪ್ರಯತ್ನಿಸಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.


    ಅಮಿತಾಭ್ ಬಚ್ಚನ್ ಬರೆದುಕೊಂಡಿರುವುದು ಏನು?
    'ವಿಪರೀತಗಳು ಎಂದಿಗೂ ಉಳಿಯುವುದಿಲ್ಲ. ಅವು ನಾಶವಾಗುತ್ತವೆ ಅಥವಾ ಅಳಿಸಲಾಗದ ಗುರುತು ಬಿಡುತ್ತವೆ. ದೇಹದ ಮೇಲೆ ಅದು ಮುಜುಗರದ ಸಂಗತಿಯಾಗಿದೆ. ಅದರಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ನನಗೆ ಸಹಾಯ ಮಾಡಿ ದೇವರೇ' ಎಂದು ಬ್ಲಾಗ್ ನಲ್ಲಿ ಬಚ್ಚನ್ ಬರೆದುಕೊಂಡಿದ್ದಾರೆ.


    ಸಿನಿಮಾ ರಂಗದಲ್ಲಿ ಅಮಿತಾಭ್ ಬಚ್ಚನ್ ಅವರ ಅನುಭವ ಅಪಾರ. 53 ವರ್ಷಗಳಿಗಿಂತಲೂ ಹೆಚ್ಚು ಕಾಲ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಹುಡುಗರಂತೆ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಎಷ್ಟೋ ಜನರಿಗೆ ಅವರು ಮಾದರಿ ಆಗಿದ್ದಾರೆ.


    ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಿಂದ ಮಯೂರಿ ಔಟ್, ಭಾವುಕರಾಗಿ ಹೇಳಿದ್ದೇನು?


    ಅಮಿತಾಭ್ ಬಚ್ಚನ್ ಬೇಗ ಚೇತರಿಸಿಕೊಳ್ಳಲಿ


    ಅಮಿತಾಭ್ ಬಚ್ಚನ್ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಪ್ರಾರ್ಥಿಸಿದ್ದಾರೆ. ಈ ಹಿಂದೆ ಎರಡು ಬಾರಿ ಅಮಿತಾಭ್ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈಗ ಕಾಲಿಗೆ ಪೆಟ್ಟು ಮಾಡಿಕೊಂಡಿರುವುದು ಬೇಸರದ ಸಂಗತಿ. ಇಂಥ ಎಷ್ಟೇ ಅಡೆತಡೆಗಳು ಬಂದರೂ ಅಮಿತಾಭ್ ಅವರು ಕುಗ್ಗುವುದಿಲ್ಲ. ಪ್ರತಿ ಬಾರಿಯೂ ಅವರು ಹೊಸ ಹುಮ್ಮಸ್ಸಿನೊಂದಿಗೆ ಕೆಲಸಕ್ಕೆ ಮರಳುತ್ತಾರೆ. ಅದು ಅನೇಕರಿಗೆ ಸ್ಫೂರ್ತಿ ತುಂಬುತ್ತದೆ.


    bollywood bigg b amitabh bachchan, amitabh bachchan said he had received stitches, cut vein on left calf, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶೂಟಿಂಗ್​ ವೇಳೆ ಅಮಿತಾಭ್​ ಬಚ್ಚನ್​ ಕಾಲಿಗೆ ಗಾಯ, ಅಮಿತಾಭ್​ ಬಚ್ಚನ್ ಗೆ ನಡೆಯಲೇಬೇಡಿ ಅಂತ ಸಲಹೆ ನೀಡಿದ ವೈದ್ಯರು, kannada news, karnataka news,
    ಅಮಿತಾಭ್ ಬಚ್ಚನ್


    ಪುನೀತ ಪರ್ವಕ್ಕೆ ವಿಶ್


    ಅಮಿತಾಭ್ ಇತ್ತೀಚಿಗಷ್ಟೆ ಅದ್ದೂರಿಯಾಗಿ ನಡೆದ ಪುನೀತ ಪರ್ವಕ್ಕೆ ವಿಶ್ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಕಾರ್ಯಕ್ರಮದಲ್ಲಿ ಅಮಿತಾಭ್​ ಬಚ್ಚನ್ ಕೂಡ ಹಾಜರಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಂತ ಸುಮ್ಮನಿರದ ಅಮಿತಾಭ್ ಪ್ರೀತಿಯ ವಿಶ್ ಕಳುಹಿಸಿದ್ದರು. ಪುನೀತ್ ರಾಜ್ ಕುಮಾರ್ ಬಗ್ಗೆ ಪ್ರೀತಿಯ ಮಾತುಗಳನ್ನು ಹಾಗೂ ಗಂಧದ ಗುಡಿಗೆ ಶುಭಾಶಯವನ್ನು ವಿಡಿಯೋ ಮೂಲಕ ಕಳುಹಿಸಿದ್ದರು.


    bollywood bigg b amitabh bachchan, amitabh bachchan said he had received stitches, cut vein on left calf, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶೂಟಿಂಗ್​ ವೇಳೆ ಅಮಿತಾಭ್​ ಬಚ್ಚನ್​ ಕಾಲಿಗೆ ಗಾಯ, ಅಮಿತಾಭ್​ ಬಚ್ಚನ್ ಗೆ ನಡೆಯಲೇಬೇಡಿ ಅಂತ ಸಲಹೆ ನೀಡಿದ ವೈದ್ಯರು, kannada news, karnataka news,
    ಅಮಿತಾಭ್ ಬಚ್ಚನ್


    ಇದನ್ನೂ ಓದಿ: BBK Season 09: ಪಿಕ್‍ನಿಕ್ ಸ್ಪಾಟ್ ಅಲ್ಲ ಎಂದ ಸ್ಥಳಕ್ಕೆ ಕ್ಯಾಪ್ಟನ್ ಆಗಿ ಬಲಗಾಲಿಟ್ಟು ಬಂದ ಸಾನ್ಯಾ ಐಯ್ಯರ್! 


    ಸದ್ಯ ಬಿಗ್ ಬಿ ಕಿರುತೆರೆಯಲ್ಲಿ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮ ನಡೆಸಿಕೊಡುವುದರ ಜೊತೆಗೆ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

    Published by:Savitha Savitha
    First published: