Sunny Leone: ಮಾದಕ ಮದನಾರಿಗೆ ಹುಟ್ಟುಹಬ್ಬದ ಸಂಭ್ರಮ: ಸನ್ನಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ವಿಡಿಯೋ

Happy Birthday Sunny Leone: ನೀನು ನನ್ನ ಜೀವನ, ನನ್ನ ಮನಸ್ಸಲ್ಲಿ ಬರುವ ಎಲ್ಲವನ್ನೂ ಹೇಳಬಯಸುತ್ತೇನೆ. ನೀನು ಶ್ರೇಷ್ಠ ಪತ್ನಿ, ತಾಯಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಪೂರ್ತಿ ಮತ್ತು ಆದರ್ಶ. ಯಾರೇನೇ ಹೇಳಿದರೂ ನೀನು ಅಂಜಲಿಲ್ಲ.

Sunny Leone

Sunny Leone

 • Share this:
  ಬಾಲಿವುಡ್​ನ ಮಾದಕ ಮದನಾರಿ ಸನ್ನಿ ಲಿಯೋನ್​ಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ. ಮಕ್ಕಳೊಂದಿಗೆ ಯುಎಸ್​ಎನಲ್ಲಿರುವ ಸೇಸಮ್ಮ ನಿನ್ನೆಯಿಂದಲೇ ಶುಭಾಶಯದ ಮಹಾಪೂರ ಹರಿದು ಬರುತ್ತಿವೆ. ಹೊಸ ವಸಂತಕ್ಕೆ ಕಾಲಿಟ್ಟ ಪತ್ನಿಗೆ ಪತಿ ಡೇನಿಯಲ್ ವೆಬರ್ ವಿಶೇಷವಾಗಿ ವಿಶ್ ಮಾಡಿದ್ದು, ಸನ್ನಿ ಲಿಯೋನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ.

  ಹುಟ್ಟುಹಬ್ಬದ ಶುಭಾಶಯಗಳು ಬೇಬಿ!!! ನೀನು ನನ್ನ ಜೀವನ, ನನ್ನ ಮನಸ್ಸಲ್ಲಿ ಬರುವ ಎಲ್ಲವನ್ನೂ ಹೇಳಬಯಸುತ್ತೇನೆ. ನೀನು ಶ್ರೇಷ್ಠ ಪತ್ನಿ, ತಾಯಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಪೂರ್ತಿ ಮತ್ತು ಆದರ್ಶ. ಯಾರೇನೇ ಹೇಳಿದರೂ ನೀನು ಅಂಜಲಿಲ್ಲ. ನಿನ್ನ ಜೀವನದ ಹಾದಿಯಲ್ಲಿ ನೀನು ಸಾಗುತ್ತಿರುವೆ. ನಿನ್ನ ಮೇಲೆ ನನಗೆ ಹೆಮ್ಮೆ ಇದೆ. ಐ ಲವ್ ಯು ಸೋ ಮಚ್, ಲವ್ ಯು ಬೇಬಿ ಲವ್ ಎಂದು ವೆಬರ್​ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

  ಕನ್ನಡದಲ್ಲಿ ಸೇಸಮ್ಮಳಾಗಿ ಸೊಂಟ ಬಳುಕಿಸಿದ್ದ ಸನ್ನಿ ಅಮೆರಿಕಾದಿಂದಲೇ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ. ನಾನು ನಿಮ್ಮೆಲ್ಲರ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಸನ್ನಿ ಲಿಯೋನ್ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.   
  View this post on Instagram
   

  Thank you so much for all the birthday wishes everyone!! I am so lucky you are all a part of my life! Xoxo


  A post shared by Sunny Leone (@sunnyleone) on


  ನೀಲಿ ಚಿತ್ರತಾರೆಯಾಗಿ ಮಿಂಚಿದ್ದ ಸನ್ನಿ ಲಿಯೋನ್ 2012ರಲ್ಲಿ ಜಿಸ್ಮ್​-2 ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಅಶ್ಲೀಲ ಸಿನಿಮಾಗಳಿಂದ ದೂರ ಉಳಿದ ನಟಿ ಬಿಟೌನ್​ನಲ್ಲಿ ಮಾದಕ ಮೈಮಾಟದಿಂದ ನೆಲೆ ಕಂಡುಕೊಂಡರು. ಸದ್ಯ ರಂಗೀಲಾ, ಕೋಕಾ ಕೋಲ ಹಾಗೂ ವೀರಮಾದೇವಿ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ.
  Published by:zahir
  First published: