ಖ್ಯಾತ ನಿರ್ದೇಶಕ ಮಹೇಶ ಭಟ್ (Director Mahesh Bhat) ಅವರ ಆಶಿಕಿ ಚಿತ್ರ (Ashiqui Cinema) ನಿಮಗೆ ನೆನಪಿರಬೇಕು. 1990 ರಲ್ಲಿ ಬಿಡುಗಡೆಯಾಗಿದ್ದ ಈ ಬ್ಲಾಕ್ ಬಸ್ಟರ್ ಚಿತ್ರದ ಹೀರೋಯಿನ್ ಅನು ಅಗರ್ವಾಲ್ (Anu Aggarwal )ಆ ಕಾಲದ ಜನಪ್ರಿಯ ನಟಿ. ತಮಗಾದ ಅಪಘಾತದ ನಂತರ ಚಿತ್ರರಂಗದಿಂದ ದೂರವೇ ಉಳಿದ ಅನು ಅಗರ್ವಾಲ್ ಇತ್ತೀಚಿಗೆ ತಾವು ಸನ್ಯಾಸಿಯಂತೆ ಬದುಕಿದ್ದಾಗಿನ ಅನುಭವೊಂದನ್ನು ಹಂಚಿಕೊಂಡಿದ್ದಾರೆ. ಆಶಿಕಿ ನಟಿ ಅನು ಅಗರ್ವಾಲ್ (Anu Aggarwal Interview) ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮೈಕೊರೆಯುವ ಚಳಿಯಲ್ಲಿ ಕೇವಲ ಎರಡು ಸೆಟ್ ಬಟ್ಟೆಗಳೊಂದಿಗೆ ಸನ್ಯಾಸಿಯಂತೆ ಬದುಕಿದ ಸಮಯವನ್ನು ನೆನಪಿಸಿಕೊಂಡರು.
2 ಸೆಟ್ ಬಟ್ಟೆ 1 ಸ್ವೆಟರ್ ಮಾತ್ರ ಇತ್ತು!
“ಆಗ ನಾನು ಸನ್ಯಾಸಿಯಂತೆ ಬದುಕುತ್ತಿದ್ದೆ. ಪರ್ವತಗಳ ತಪ್ಪಲಿನಲ್ಲಿ ಧ್ಯಾನ ಯೋಗಗಳನ್ನು ಅಭ್ಯಾಸ ಮಾಡುತ್ತಿದ್ದೆ. ಆಗ ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನವಾಗಿತ್ತು” ಎಂಬುದಾಗಿ ಅವರು ಯೂಟ್ಯೂಬರ್ ಸಿದ್ಧಾರ್ಥ್ ಕಣ್ಣನ್ ಅವರ ಜೊತೆ ಹಂಚಿಕೊಂಡಿದ್ದಾರೆ.
ಆ ಸಮಯದಲ್ಲಿ ನಾವು ವಾಸಿಸುತ್ತಿದ್ದ ಸ್ಥಳದ ತಾಪಮಾನ ಕೇವಲ 5 ಡಿಗ್ರಿ ಯಷ್ಟಿರುತ್ತಿತ್ತು. ಅಲ್ಲಿ ಗೀಸರ್ ಆಗಲಿ ಬಿಸಿ ನೀರಾಗಲಿ ಇರುತ್ತಿರಲಿಲ್ಲ. ಅಲ್ಲದೇ ನನ್ನ ಬಳಿ ಕೇವಲ ಎರಡು ಸೆಟ್ ಬಟ್ಟೆಗಳಿದ್ದವು ಜೊತೆಗೆ ಒಂದು ಸ್ವೆಟರ್ ಮಾತ್ರ ಇತ್ತು. ಇಷ್ಟರಲ್ಲೇ ನಾನು ಹಲವು ವರ್ಷಗಳನ್ನು ಕಳೆದಿದ್ದೇನೆ ಎಂದು ಹೇಳಿದರು.
ನಮ್ಮ ಮೊದಲ ತರಗತಿ ಬೆಳಗಿನ ಜಾವ 4:30 ಕ್ಕೆ ಆರಂಭವಾಗುತ್ತಿತ್ತು. ಅದಕ್ಕಾಗಿ ನಾವು ಎದ್ದು ಸ್ನಾನ ಮಾಡಿ ಬಟ್ಟೆ ಒಗೆದು ಒಣಗಲು ಹಾಕಬೇಕಿತ್ತು. ನನಗೆ 2:30ಕ್ಕೇ ಎಚ್ಚರವಾಗುತ್ತಿತ್ತು. ಹಾಗಾಗಿ ನಾನು ಎಲ್ಲಾ ಕಾರ್ಯಗಳನ್ನು ಬೇಗನೇ ಮುಗಿಸುತ್ತಿದ್ದೆ ಎಂಬುದಾಗಿ ಹೇಳಿದ್ದಾರೆ.
ಮೈಕೊರೆಯುವ ಚಳಿಯಲ್ಲಿ ತಣ್ಣೀರ ಸ್ನಾನ!
ಅಲ್ಲಿಯ ಮೈಕೊರೆಯುವ ವಾತಾವರಣದಲ್ಲಿ ತಿಂಗಳುಗಟ್ಟಲೆ ಕೈಕಾಲು ಹೆಪ್ಪುಗಟ್ಟಿದಂಥ ಅನುಭವವನ್ನು ಅನು ಅಗರ್ವಾಲ್ ನೆನಪಿಸಿಕೊಂಡರು. “ನಾವು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದೆವು. ನಮ್ಮ ಬಟ್ಟೆಗಳನ್ನು ತಣ್ಣೀರಿನಲ್ಲಿಯೇ ಒಗೆಯುತ್ತಿದ್ದೆವು. ತಿಂಗಳುಗಟ್ಟಲೆ ನನ್ನ ಕೈಕಾಲು ಹೆಪ್ಪುಗಟ್ಟಿದಂತಾಗುತ್ತಿತ್ತು. ನನ್ನ ತಲೆ ಬೋಳಾಗಿದ್ದರಿಂದ ನನ್ನ ಬಳಿ ಒಂದು ಉಣ್ಣೆಯ ಕ್ಯಾಪ್ ಇತ್ತು. ಆದ್ರೆ ಇವೆಲ್ಲವುಗಳ ಹೊರತಾಗಿಯೂ ಇಡೀ ದಿನ ಅತ್ಯಂತ ಶಾಂತವಾಗಿರುತ್ತಿತ್ತು ಎಂಬುದಾಗಿ ಅನು ಹೇಳಿದರು.
ಇದನ್ನೂ ಓದಿ: ಸ್ವಂತ ಹಣ ಖರ್ಚು ಮಾಡೋಕೂ ಬೇಕು ಹೆಂಡ್ತಿ ಪರ್ಮಿಷನ್, ಈ ನಟನ ಪಾಡು, ಅಯ್ಯೋ ಪಾಪ!
ಈ ಮಧ್ಯೆ ತಾನು ಐಷಾರಾಮಿ ಜೀವನದಿಂದ ಸಂಪೂರ್ಣ ದೂರವಾಗಿರುವುದಾಗಿ ಅನು ಹೇಳಿಕೊಂಡರು. ಕೆಲವು ವರ್ಷಗಳ ಹಿಂದೆ ಅವರು ಚಿತ್ರ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು. ಆದ್ರೆ ಆ ಬದುಕಿಗಿಂತ ಸಂಪೂರ್ಣವಾಗಿ ವಿರುದ್ಧ ಬದುಕನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿಕೊಂಡರು. ಅಲ್ಲದೇ ಒಮ್ಮೆ ಮುಂಬೈನ ಮೆರೈನ್ ಡ್ರೈವ್ನಲ್ಲಿ ನಡೆದ ಘಟನೆಯನ್ನು ಅವರು ನೆನಪಿಸಿಕೊಂಡರು.
ನಟಿಯ ಕಾರ್ ಗುರುತಿಸಿದ ಅಭಿಮಾನಿಗಳು
“ಜನರು ನನ್ನ ಕಾರನ್ನು ಗುರುತಿಸಿದ ನಂತರ ಮರೈನ್ ಡ್ರೈವ್ನಲ್ಲಿ ಭಾರೀ ಜಾಮ್ ಆಗಿತ್ತು. ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗಿತು ಆದರೆ ಯಾವುದೇ ಕಾರುಗಳು ಮುಂದೆ ಸಾಗಲಿಲ್ಲ. ಜನರು ತಮ್ಮ ಕಾರುಗಳನ್ನು ಬಿಟ್ಟು ನನ್ನ ಕಡೆಗೆ ಓಡಿ ಬಂದಿದ್ದರು. ಅಲ್ಲದೇ ಅವರು ನನ್ನ ಕಾರ್ ಕಿಟಕಿಗಳನ್ನು ಬಡಿಯಲು ಪ್ರಾರಂಭಿಸಿದರು.
ಅಂದು ನನ್ನ ಕಾರ್ ಡ್ರೈವರ್ ಇಲ್ಲದೇ ಹೋಗಿದ್ದರಿಂದ ನಾನೇ ಡ್ರೈವ್ ಮಾಡಿಕೊಂಡು ಬಂದಿದ್ದೆ. ನಾನು ಭಯ ಪಡುವ ವ್ಯಕ್ತಿತ್ವದವಳಲ್ಲ. ಆದ್ರೆ ಆ ದಿನ ಮಾತ್ರ ಜೀವನದಲ್ಲಿ ಮೊದಲ ಬಾರಿಗೆ ನಿಜವಾದ ಭಯವನ್ನು ಅನುಭವಿಸಿದೆ ಎಂದು ಅನು ಹೇಳಿಕೊಂಡರು.
ಇದನ್ನೂ ಓದಿ: Avatar 2: ಬಹುನಿರೀಕ್ಷಿತ ಚಿತ್ರ 'ಅವತಾರ್ 2' ರಿಲೀಸ್ ಡೇಟ್ ಫಿಕ್ಸ್, 160 ಭಾಷೆಗಳಲ್ಲಿ ಬರ್ತಿದೆ ಪ್ಯಾನ್ ವರ್ಲ್ಡ್ ಸಿನಿಮಾ!
ಆ ಜನರು ಕಾರ್ ಗೆ ಹಾಗೂ ತನಗೆ ಹಾನಿ ಮಾಡುತ್ತಾರೆಂದು ತುಂಬಾ ಭಯಪಟ್ಟೆ. ಅಂದು ಸಾವಿರಾರು ಜನರು ಅನು.. ಅನು ಎಂದು ಕಿರುಚುತ್ತಾ ಕಾರ್ ಅನ್ನು ಬಡಿಯುತ್ತಿದ್ದರು. ನಾನೇನಾದರೂ ಅವರ ಕೈಗೆ ಸಿಕ್ಕಿದ್ದರೆ ಏನಾಗುತ್ತಿದ್ದೇನೋ ಗೊತ್ತಿಲ್ಲ ಎಂಬುದಾಗಿ ಅವರು ಹೇಳಿದರು.
ಈ ಮಧ್ಯೆ ಅನು ಅಗರ್ವಾಲ್ ಇತ್ತೀಚೆಗೆ ಇಂಡಿಯನ್ ಐಡಲ್ ಶೋನಲ್ಲಿ ನಲ್ಲಿ ತನ್ನ ಆಶಿಕಿ ಕಾಸ್ಟ್ಮೇಟ್ಗಳೊಂದಿಗೆ ಕಾಣಿಸಿಕೊಂದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ