Karthik Aryan Ashiqui-3: ಬಾಲಿವುಡ್ ಆಶಿಕಿ-3 ಚಿತ್ರಕ್ಕೆ ಇನ್ನೂ ಸಿಕ್ಕಿಲ್ಲ ನಾಯಕಿ!

ಬಾಲಿವುಡ್​ ನ ಆಶಿಕಿ-3 ಚಿತ್ರಕ್ಕೆ ಇನ್ನೂ ನಾಯಕಿನೇ ಸಿಕ್ಕಿಲ್ಲ. ಸಿನಿಮಾ ತಂಡವೂ ಅದೇ ಹುಡುಕಾಟದಲ್ಲಿಯೇ ಇದೆ. ಶೀಘ್ರದಲ್ಲಿಯೇ ಆಶಿಕಿ-3 ಚಿತ್ರದ ನಾಯಕಿ ಯಾರು ಅನ್ನೋದನ್ನ ಹೇಳ್ತಿವಿ ಅಂತಲೇ ಪ್ರೋಡಕ್ಷನ್ ಹೌಸ್ ಹೇಳಿದೆ.

ಬಾಲಿವುಡ್ ಆಶಿಕಿ-3 ಚಿತ್ರಕ್ಕೆ ಮುಗಿಯದ ನಾಯಕಿ ಹುಡುಕಾಟ

ಬಾಲಿವುಡ್ ಆಶಿಕಿ-3 ಚಿತ್ರಕ್ಕೆ ಮುಗಿಯದ ನಾಯಕಿ ಹುಡುಕಾಟ

 • Share this:
  ಬಾಲಿವುಡ್ ಸಿನಿಮಾರಂಗದಲ್ಲಿ ಆಶಿಕಿ ಸಿನಿಮಾ (Ashiqui) ಮಾಡಿರೋ ಮೋಡಿ ಇನ್ನೂ ಇದೆ. ಆಶಿಕಿ ಹೆಸರಲ್ಲಿ ಸರಣಿ ರೂಪದಲ್ಲಿಯೆ ಬರ್ತಿರೋ ಈ ಚಿತ್ರದ ಮೂರನೇ ಭಾಗದ ಸಿನಿಮಾ (Ashiqui-3 Cinema)ಈಗಾಗಲೇ ಅನೌನ್ಸ್ (Announce) ಆಗಿದೆ. ಆದರೆ ಈ ಆಶಿಕಿ ಚಿತ್ರಕ್ಕೆ ನಾಯಕಿ ಹುಡುಕಾಟವೇ ಒಂದು ದೊಡ್ಡ ಸವಾಲ್ ಆಗಿದೆ. ಇನ್ನೂ ವರೆಗೂ ನಾಯಕಿಯ ಫೈನಲ್ ಆಗಿಯೇ ಇಲ್ಲ. ನಿರ್ಮಾಣ ಸಂಸ್ಥೆ (Production House) ಕೂಡ ಅದೇ ಹಂತದಲ್ಲಿಯೇ ಇದೆ. ಆದರೂ ಈ ನಾಯಕಿ ಹೆಸರನ್ನ ಶೀಘ್ರದಲ್ಲಿಯೇ ಅನೌನ್ಸ್ ಮಾಡೋದಾಗಿಯೇ ಸಿನಿಮಾ ತಂಡ ಈಗ ಹೇಳಿಕೊಂಡಿದೆ.

  ಆಶಿಕಿ ಸಿನಿಮಾ ಒಂದು ಮ್ಯೂಸಿಕಲ್ ರೋಮ್ಯಾಂಟಿಕ್ ಲವ್ ಸಿನಿಮಾ. ಕಾಲ ಕಾಲಕ್ಕೆ ಅನ್ನೋ ಹಾಗೆ ಆಶಿಕಿ ಸರಣಿ ಸಿನಿಮಾ ಬರ್ತಾನೆ ಇದೆ. ಆದರೆ, ವರ್ಷಕ್ಕೊಂದು ಕಥೆ ಅಂತ ಆಶಿಕಿ ಸಿನಿಮಾ ರಿಲೀಸ್ ಏನೂ ಆಗುತ್ತಿಲ್ಲ. 1990 ರಲ್ಲಿ ಮೊದಲ ಆಶಿಕಿ ರಿಲೀಸ್ ಆಗಿತ್ತು. ಸಖತ್ ಹಿಟ್ ಆಗಿಯೇ ಪ್ರೇಕ್ಷಕರ ದಿಲ್ ಕದ್ದಿತ್ತು. ಇದರಲ್ಲಿ ರಾಹುಲ್ ರಾಯ್ ಮತ್ತು ಅನು ಅಗರವಾಲ್ ಈ ಮೂಲಕ ಯುವ ಪ್ರೇಮಿಗಳ ಹಾಟ್​ ಫೇವರಿಟ್ ಆಗಿ ಬಿಟ್ಟಿದ್ದರು.
  ಆಶಿಕಿ ಮೊದಲ ಸಿನಿಮಾ ಬಂದು ಹೆಚ್ಚು ಕಡಿಮೆ 23 ವರ್ಷದ ಬಳಿಕ ಆಶಿಕಿ-2 ಸಿನಿಮಾ ರಿಲೀಸ್ ಆಯಿತು.ಈ ಚಿತ್ರ ಕೂಡ ಸೂಪರ್ ಹಿಟ್ ಆಯಿತು. ನಾಯಕ ಆದಿತ್ಯ ರಾಯ್ ಕಪೂರ್ ನಾಯಕರಾಗಿ ಇಷ್ಟ ಆದರು. ಶೃದ್ಧಾ ಕಪೂರ್ ಎಲ್ಲರ ದಿಲ್​ ಕದ್ದು ಬಿಟ್ಟರು.

  Ashiqui-3 Film Hero Karthik Aryan
  ಆಶಿಕಿ-3 ಚಿತ್ರದ ಹೀರೋ ಕಾರ್ತಿಕ್ ಆರ್ಯನ್


  ಆಶಿಕಿ-3 ಚಿತ್ರಕ್ಕೆ ಇನ್ನು ಸಿಕ್ಕಿಯೇ ಇಲ್ಲ ನಾಯಕ ನಟಿ 
  ಬಾಲಿವುಡ್​ ನ ಆಶಿಕಿ ಸಿನಿಮಾ ಸಂಗೀತ ಪ್ರೇಮಿಗಳಿಗೂ ಇಷ್ಟವಾದ ಸಿನಿಮಾ. ಪ್ರೀತಿ-ಪ್ರೇಮ ಅಂತ ಓಡಾಡೋರಿಗೂ ಹಿಂದಿಯ ಈ ಆಶಿಕಿ ಇಷ್ಟ. ಇಂತಹ ಈ ಚಿತ್ರಕ್ಕೆ ಕಥೆಯಷ್ಟೇ ನಾಯಕ ಮತ್ತು ನಾಯಕಿ ಮುಖ್ಯ ಆಗುತ್ತಾರೆ. ಅದರಂತೆ ಈಗಾಗಲೇ ಆಶಿಕಿ ಚಿತ್ರದ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ನಾಯಕನ ಆಯ್ಕೆನೂ ಆಗಿದೆ.ಇದು ಇಡೀ ಬಾಲಿವುಡ್​ಗೂ ಗೊತ್ತಿದೆ.

  ಕಾರ್ತಿಕ್ ಆರ್ಯನ್ ಆಶಿಕಿ-3 ಚಿತ್ರಕ್ಕೆ ರೋಮ್ಯಾಂಟಿಕ್ ಹೀರೋ
  ಬಾಲಿವುಡ್​ ನಲ್ಲಿ ಬೇಡಿಕೆ ಹೆಚ್ಚಿಕೊಳ್ತಿರೋ ಕಾರ್ತಿಕ್ ಆರ್ಯನ್ ಈ ಸಲದ ಆಶಿಕಿ-3 ಚಿತ್ರದ ನಾಯಕ ನಟ. ಈಗಾಗಲೇ ಕಾರ್ತಿಕ್ ಆರ್ಯನ್ ಆಯ್ಕೆ ಫೈನಲ್ ಆಗಿದೆ. ಆದರೆ, ಈ ನಾಯಕನ ಜೋಡಿಯಾಗಿ ನಾಯಕಿನೇ ಸಿಕ್ಕಿಲ್ಲ. ಯಾರು ಅನ್ನೋ ಕುತೂಹಲ ಇದ್ದೇ ಇದೆ. ಆದರೆ, ಪ್ರೋಡಕ್ಷನ್ ಹೌಸ್ ಕೂಡ ಈ ಬಗ್ಗೆ ಮಾಹಿತಿಕೊಟ್ಟಿದೆ. ಅತಿ ಶೀಘ್ರದಲ್ಲಿಯೇ ಆಶಿಕಿ ಸಿನಿಮಾ ಪ್ರೇಮಿಗಳಿಗೆ ಆಶಿಕಿ-3 ಚಿತ್ರದ ನಾಯಕಿ ಯಾರು ? ಅನ್ನೋದನ್ನ ತಿಳಿಸುತ್ತೇವೆ ಅಂತಲೇ ಹೇಳಿಕೊಂಡಿದೆ.

  Who is Ashiqui-3 film Heroin
  ಆಶಿಕಿ-3 ಚಿತ್ರದ ನಿರ್ಮಾಣ ಸಂಸ್ಥೆ ಶೀಘ್ರದಲ್ಲಿಯೇ ನಾಯಕಿ ಹೆಸರು ಘೋಷಿಸಲಿದೆ.


  ಈ ಸಲ ಆಶಿಕಿ-3 ಚಿತ್ರವನ್ನ ಯಾರು ಡೈರೆಕ್ಟ್ ಮಾಡ್ತಿದ್ದಾರೆ ?
  ಆಶಿಕಿ ಸರಣಿ ಚಿತ್ರವನ್ನ ಬೇರೆ ಬೇರೆ ನಿರ್ದೇಶಕರೇ ಡೈರೆಕ್ಟ್ ಮಾಡಿದ್ದಾರೆ. ಆಶಿಕಿ ಮೊದಲ ಭಾಗದ ಚಿತ್ರವನ್ನ ಮಹೇಶ್ ಭಟ್ ಅವರು ನಿರ್ದೇಶನ ಮಾಡಿದ್ದರು.ಬಳಿಕ ಬಂದ ಆಶಿಕಿ-2 ಚಿತ್ರ ಮೋಹಿತ್ ಸೂರಿ ಡೈರೆಕ್ಷನ್​ನಲ್ಲಿಯೇ ಬಂತು. ಈಗ ಆಶಿಕಿ-3 ಚಿತ್ರವನ್ನ ಅನುರಾಗ್ ಬಾಸು ಡೈರೆಕ್ಟ್ ಮಾಡುತ್ತಿದ್ದು ಪ್ರೀತಂ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ.ಸಂಗೀತದಿಂದಲೇ ಚಿತ್ರ ಪ್ರೇಮಿಗಳ ಮನಸ್ಸು ಕದ್ದಿರೋ ಈ ಹಿಂದಿನ ಮೊದಲ ಭಾಗಕ್ಕೆ ನದೀಮ್ ಶ್ರವಣ ಸಂಗೀತ ಕೊಟ್ಟಿದ್ದರು.​ಆಶಿಕಿ-2 ಚಿತ್ರಕ್ಕೆ ಜೀತ್ ಗಂಗೂಲಿ ಸೇರಿದಂತೆ ಮೂವರು ಸಂಗೀತ ಕೊಟ್ಟಿದ್ದರು.ಸದ್ಯಕ್ಕೆ ಈ ಚಿತ್ರದ ನಾಯಕಿಯ ಹುಡುಕಾಟ ಮುಂದುವರೆದಿದೆ.
  First published: