9 ಕೋಟಿ ವೀಕ್ಷಣೆ ಪಡೆದ KGF Chapter 2 Teaser: ಟೀಸರ್​ ನೋಡಿ ಮೆಚ್ಚಿಕೊಂಡ ಪರಭಾಷಾ ಸೆಲೆಬ್ರಿಟಿಗಳು..!

Yash: ಕೆಜಿಎಫ್​2 ಟೀಸರ್​ ನೋಡಿದ ಪರಭಾಷೆಯ ಸೆಲೆಬ್ರಿಟಿಗಳೂ ಸಹ ವಾಹ್​ ಎನ್ನುತ್ತಿದ್ದಾರೆ. ಸಖತ್ ಪವರ್​ಫುಲ್​ ಟೀಸರ್​ ಎಂದು ಕೊಂಡಾಡುತ್ತಿದ್ದಾರೆ. ಬಾಲಿವುಡ್​ ನಟ ಹೃತಿಕ್​ ರೋಷನ್​, ಟಾಲಿವುಡ್​ ನಿರ್ದೇಶಕ ಪೂರಿ ಜಗನ್ನಾಥ್​, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್​ ಸೇರಿದಂತೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್​ ಚಾಪ್ಟರ್ 2 ಟೀಸರ್​

ಕೆಜಿಎಫ್​ ಚಾಪ್ಟರ್ 2 ಟೀಸರ್​

  • Share this:
ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್​ ಚಾಪ್ಟರ್​ 2 ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್​ನಲ್ಲಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ KGF Chapter 2 ನದ್ದೇ ಸುದ್ದಿ. ಯಶ್ ಹುಟ್ಟುಹಬ್ಬದಂದು KGF Chapter 2 Teaser ರಿಲೀಸ್​ ಮಾಡುವ ಪ್ಲಾನ್​ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಒಂದು ದಿನ ಮುಂಚಿತವಾಗಿಯೇ ಆಘಾತ ಕಾದಿತ್ತು. ಟೀಸರ್ ರಿಲೀಸ್​ಗೂ ಮುನ್ನವೇ ಯಾರೋ ಅದನ್ನು ಹ್ಯಾಕ್​ ಮಾಡಿ ಲೀಕ್ ಮಾಡಿದ್ದರು. ಇದೇ ಕಾರಣದಿಂದ ರಾತ್ರಿ ಅಂದರೆ ಜ.7ರಂದು ರಾತ್ರಿ 9.29ಕ್ಕೆ ಚಿತ್ರತಂಡ ಟೀಸರ್ ರಿಲೀಸ್​ ಮಾಡಿದ್ದರು. ಇದರಿಂದ ಚಿತ್ರತಂಡ ಹಾಗೂ ನಟ ಯಶ್ ಬೇಸರಗೊಂಡಿದ್ದರಾದರೂ, ಅವರಿಗೆ ಅಂದು ರಾತ್ರಿಯೇ ಖುಷಿಯ ಸಂಗತಿಯೊಂದು ಕಾದಿತ್ತು. ಅದೇ ಟೀಸರ್​ ಮಾಡಿದ ದಾಖಲೆ. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಟೀಕ್​ ಮಾಡಲಾಗಿತ್ತಾದರೂ, ಚಿತ್ರತಂಡ ರಿಲೀಸ್​ ಮಾಡಿರುವ ಟೀಸರ್​ಗೆ ಯೂಟ್ಯೂಬ್​ನಲ್ಲಿ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜೊತೆಗೆ KGF Chapter 2 Teaser ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. 

ಭಾರತದ ಚಿತ್ರರಂಗದಲ್ಲಿ ಕೆಜಿಎಫ್​2 ಟೀಸರ್​ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಗೊಂಡ 24 ಗಂಟೆಗಳಲ್ಲಿ ಈ ಟೀಸರ್​ 78 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಪಡೆದ ಸಿನಿಮಾ ಟೀಸರ್​ ಇದಾಗಿದೆ. ಜೊತೆಗೆ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟೀಸರ್​ ಎಂಬ ಖ್ಯಾತಿಗೂ ಪಾತ್ರವಾಗಿದೆ. ಟೀಸರ್​ ಈ ಮಟ್ಟದ ದಾಖಲೆ ಮಾಡಿರುವುದಕ್ಕೆ ಯಶ್​ ಸೇರಿದಂತೆ ಇಡೀ ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.





ಇನ್ನು ಟೀಸರ್​ಗೆ ಸಿಗುತ್ತಿರುವ ವೀಕ್ಷಣೆ ಹಾಗೂ ಲೈಕ್ಸ್​ ಹೆಚ್ಚುತ್ತಲೇ ಇದೆ. ಸದ್ಯಕ್ಕೆ 9 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, 51 ಲಕ್ಷ  ಲೈಕ್ಸ್​ ಸಿಕ್ಕಿದೆ ಈ ಫವರ್ ಫುಲ್​ ಟೀಸರ್​ಗೆ. ಜೊತೆಗೆ ಈ ಟೀಸರ್ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನದಲ್ಲಿದೆ.



ಇನ್ನು ಕೆಜಿಎಫ್​2 ಟೀಸರ್​ ನೋಡಿದ ಪರಭಾಷೆಯ ಸೆಲೆಬ್ರಿಟಿಗಳೂ ಸಹ ವಾಹ್​ ಎನ್ನುತ್ತಿದ್ದಾರೆ. ಸಖತ್ ಪವರ್​ಫುಲ್​ ಟೀಸರ್​ ಎಂದು ಕೊಂಡಾಡುತ್ತಿದ್ದಾರೆ. ಬಾಲಿವುಡ್​ ನಟ ಹೃತಿಕ್​ ರೋಷನ್​, ಟಾಲಿವುಡ್​ ನಿರ್ದೇಶಕ ಪೂರಿ ಜಗನ್ನಾಥ್​, ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್​ ಸೇರಿದಂತೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.















ಧೂಳೆಬ್ಬಿಸುತ್ತಿರುವ ಕೆಜಿಎಫ್ ಚಾಪ್ಟರ್-2 ಟೀಸರ್ ರಾಕಿ ಭಾಯ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇನ್ನು ಸಿನಿಮಾ ಟ್ರೇಲರ್​ ಹಾಗೂ ರಿಲೀಸ್​ ದಿನಾಂಕದ ಪ್ರಕಟಣೆಗಾಗಿ ಕಾರತದಿಂದ ಕಾಯುವಂತೆ ಮಾಡಿದೆ ಈ ಟೀಸರ್​ ಎಂದರೆ ತಪ್ಪಾಗದು.
Published by:Anitha E
First published: