ಲಕ್ಷ್ಮಿ ಬಾಂಬ್‌ ಅಲ್ಲ, ಲಕ್ಷ್ಮಿ ಅಷ್ಟೇ!; ಹಿಂದು ಪರ ಸಂಘಟನೆಗಳ ಬೇಡಿಕೆಗೆ ಮಣಿದ ಚಿತ್ರತಂಡ!

Laxmi Bomb: ಹಿಂದೂ ಆರ್ಮಿ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ಚಿತ್ರದ ವಿರುದ್ಧ ಭುಗಿಲೆದ್ದವು. ಚಿತ್ರತಂಡದವರು ನಾಯಕನಿಗೆ ಆಸಿಫ್‌, ನಾಯಕಿಗೆ ಪ್ರಿಯಾ ಯಾದವ್‌ ಎಂದು ಬೇಕಂತಲೇ ಹೆಸರಿಟ್ಟಿದ್ದು, ಆ ಮೂಲಕ ಲವ್‌ ಜಿಹಾದ್‌ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

news18-kannada
Updated:October 29, 2020, 11:12 PM IST
ಲಕ್ಷ್ಮಿ ಬಾಂಬ್‌ ಅಲ್ಲ, ಲಕ್ಷ್ಮಿ ಅಷ್ಟೇ!; ಹಿಂದು ಪರ ಸಂಘಟನೆಗಳ ಬೇಡಿಕೆಗೆ ಮಣಿದ ಚಿತ್ರತಂಡ!
ಲಕ್ಷ್ಮೀ ಬಾಂಬ್
  • Share this:
ಲಕ್ಷ್ಮೀ ಬಾಂಬ್‌, ಬಾಲಿವುಡ್‌ ಖಿಲಾಡಿ ಅಕ್ಷಯ್‌ ಕುಮಾರ್‌ ನಾಯಕನಾಗಿರುವ ಸಿನಿಮಾ. ತಮಿಳಿನ ಕಾಂಚನಾ ಹಿಂದಿ ರಿಮೇಕ್‌ ಆಗಿರುವ ಲಕ್ಷ್ಮೀ ಬಾಂಬ್‌ ಚಿತ್ರಕ್ಕೆ ಕಾಲಿವುಡ್‌ ಸ್ಟಾರ್‌ ರಾಘವ ಲಾರೆನ್ಸ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ದಾಖಲೆ ಬೆಲೆಗೆ ಓಟಿಟಿ ರೈಟ್ಸ್‌ ಮಾರಾಟವಾಗಿದ್ದು, ಕೆಲವೇ ದಿನಗಳಲ್ಲಿ ನೇರವಾಗಿ ಡಿಜಿಟಲ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ.

ಸಿನಿಮಾ ಪ್ರಾರಂಭವಾದಾಗಿನಿಂದಲೂ ಸಾಕಷ್ಟು ಕುತೂಹಲ, ನಿರೀಕ್ಷೆಗಳಿದ್ದವು. ಅದರಲ್ಲಂತೂ ಅಕ್ಷಯ್‌ ಕುಮಾರ್‌ ಅವರ ಮಂಗಳಮುಖಿ ಲುಕ್‌ ರಿವೀಲ್‌ ಆಗಿದ್ದೇ ತಡ ಅವರ ಫ್ಯಾನ್ಸ್‌ ಫುಲ್‌ ದಿಲ್‌ಖುಷ್‌ ಆಗಿದ್ದರು. ಆದರೆ ಯಾವಾಗ ಚಿತ್ರದ ಟ್ರೈಲರ್‌ ರಿಲೀಸ್‌ ಆಯಿತೋ, ಆಗ ವಿವಾದಗಳು ಭುಗಿಲೆದ್ದವು. ಹಿಂದೂಪರ ಸಂಘಟನೆಗಳು ಚಿತ್ರವನ್ನು ವಿರೋಧಿಸತೊಡಗಿದವು.

ಹಿಂದೂ ಆರ್ಮಿ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ಚಿತ್ರದ ವಿರುದ್ಧ ಭುಗಿಲೆದ್ದವು. ಚಿತ್ರತಂಡದವರು ನಾಯಕನಿಗೆ ಆಸಿಫ್‌, ನಾಯಕಿಗೆ ಪ್ರಿಯಾ ಯಾದವ್‌ ಎಂದು ಬೇಕಂತಲೇ ಹೆಸರಿಟ್ಟಿದ್ದು, ಆ ಮೂಲಕ ಲವ್‌ ಜಿಹಾದ್‌ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮಾತ್ರವಲ್ಲದೆ, ಚಿತ್ರಕ್ಕೆ  ಲಕ್ಷ್ಮೀ ಬಾಂಬ್‌ ಎಂದು ನಾಮಕರಣ ಮಾಡಿರುವುದನ್ನೂ ವಿರೋಧಿಸಿದರು.ಚಿತ್ರಕ್ಕೆ ಹಿಂದೂ ದೇವತೆಯ ಹೆಸರಿಟ್ಟು, ಅದರ ಮುಂದೆ ಬಾಂಬ್‌ ಅಂತ ಸೇರಿಸಿ ಅವಹೇಳನ ಮಾಡಲಾಗುತ್ತಿದೆ. ಆ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ  ಪ್ರಕಾಶ್‌ ಜಾವ್ಡೇಕರ್‌ ಅವರಿಗೆ ಪತ್ರ ಬರೆದರು. ಹಾಗೇ ಈ ಸಿನಿಮಾ ತಂಡದ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನೂ ನೀಡಿದರು. ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿರುವಂತೆಯೇ ಎಚ್ಚೆತ್ತ ಚಿತ್ರತಂಡ ಈಗ ಸಿನಿಮಾ ಟೈಟಲ್‌ ಬದಲಿಸಿದೆ. ಲಕ್ಷ್ಮೀ ಬಾಂಬ್‌ ಬದಲಾಗಿ ಕೇವಲ ಲಕ್ಷ್ಮೀ ಎಂದಷ್ಟೇ ಸಿನಿಮಾಗೆ ಮರುನಾಮಕರಣ ಮಾಡಿದೆ.ಅಕ್ಷಯ್‌ ಕುಮಾರ್‌ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ, ಅರ್ಥಾತ್‌ ಆಸಿಫ್‌ ಹಾಗೂ ಲಕ್ಷ್ಮೀ ಎಂಬ ಮಂಗಳಮುಖಿ ಪಾತ್ರದಲ್ಲಿ ಮಿಂಚಿದ್ದು, ಅವರಿಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತುಷಾರ್‌ ಕಪೂರ್‌, ಶರದ್‌ ಕೇಲ್ಕರ್‌, ತರುಣ್‌ ಅರೋರಾ, ಮನು ರಿಷಿ ಪ್ರಮುಖ ತಾರಾಬಳಗದಲ್ಲಿದ್ದಾರೆ. ಲಕ್ಷ್ಮೀ ಇದೇ ನವೆಂಬರ್‌ 9ರಂದು ಓಟಿಟಿಯಲ್ಲಿ ರಿಲೀಸ್‌ ಆಗಲಿದೆ.
Published by: Harshith AS
First published: October 29, 2020, 11:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading