ಮುಂಬೈ ಪೊಲೀಸರಿಗೆ ನಟ ಅಕ್ಷಯ್ ಕುಮಾರ್​​ ಕಡೆಯಿಂದ ಮತ್ತೊಂದು ಗಿಫ್ಟ್​​; ರಿಸ್ಟ್​ ಬ್ಯಾಂಡ್​ ನೀಡಿದ ಬಾಲಿವುಡ್ ಕಿಲಾಡಿ​

ಕೊರೋನಾ ವಿರುದ್ಧ ಮುಂಬೈ ಪೊಲೀಸರು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ. ಹಾಗಾಗಿ ಕೊರೋನಾ ಬಗ್ಗೆ ಹೆಚ್ಚು ಜಾಗೃತೆ ವಹಿಸಲು ಮತ್ತು ತಾಂತ್ರಿಕವಾಗಿ ರೋಗದ ಲಕ್ಷಣವನ್ನು ಪತ್ತೆ ಹಚ್ಚುವಂತಹ ಬ್ಯಾಂಡ್​ ಅನ್ನು ಅಕ್ಷಯ್​​ ಕುಮಾರ್​ ಮುಂಬೈ ಪೊಲೀಸ್​ ಸಿಬ್ಬಂಧಿಗೆ ವಿತರಿಸಿದ್ದಾರೆ. ಕೈಗೆ ಕಟ್ಟುವ ಬ್ಯಾಂಡ್​ ಇದಾಗಿದ್ದು, ಸುಮಾರು 1 ಸಾವಿರಕ್ಕೂ ಅಧಿಕ ಸಾಧನವನ್ನು ಅವರಿಗೆ ವಿತರಿಸಿದ್ದಾರೆ.

​ ಅಕ್ಷಯ್ ಕುಮಾರ್

​ ಅಕ್ಷಯ್ ಕುಮಾರ್

 • Share this:
  ಇತ್ತೀಚೆಗೆ ಕೊರೋನಾ ವಿರುದ್ಧ ಹೋರಾಟದ ಸಲುವಾಗಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಮುಂಬೈ ಪೊಲೀಸ್​ ಫೌಂಡೇಷನ್​ಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವ ಬ್ಯಾಂಡ್​ವೊಂದನ್ನು ಮುಂಬೈ ಪೊಲೀಸರಿಗೆ ವಿತರಿಸಿದ್ದಾರೆ.

  ಕೊರೋನಾ ವಿರುದ್ಧ ಮುಂಬೈ ಪೊಲೀಸರು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ. ಹಾಗಾಗಿ ಕೊರೋನಾ ಬಗ್ಗೆ ಹೆಚ್ಚು ಜಾಗೃತೆ ವಹಿಸಲು ಮತ್ತು ತಾಂತ್ರಿಕವಾಗಿ ರೋಗದ ಲಕ್ಷಣವನ್ನು ಪತ್ತೆ ಹಚ್ಚುವಂತಹ ಬ್ಯಾಂಡ್​ ಅನ್ನು ಅಕ್ಷಯ್​​ ಕುಮಾರ್​ ಮುಂಬೈ ಪೊಲೀಸ್​ ಸಿಬ್ಬಂಧಿಗೆ ವಿತರಿಸಿದ್ದಾರೆ. ಕೈಗೆ ಕಟ್ಟುವ ಬ್ಯಾಂಡ್​ ಇದಾಗಿದ್ದು, ಸುಮಾರು 1 ಸಾವಿರಕ್ಕೂ ಅಧಿಕ ಸಾಧನವನ್ನು ಅವರಿಗೆ ವಿತರಿಸಿದ್ದಾರೆ.

  ಅಕ್ಷಯ್​ ಕುಮಾರ್​ ನೀಡಿರುವ ಬ್ಯಾಂಡ್​​​ ಜರ್ಮನ್​ ಮೂಲದ್ದಾಗಿದ್ದು, ಅಲ್ಲಿನ ಸ್ಟಾರ್ಟ್ಅಪ್​​ ಕಂಪೆನಿಯೊಂದು ರಿಸ್ಟ್​ ಬ್ಯಾಂಡ್​ ಅನ್ನು ತಯಾರಿಸಿದೆ. ಈ ಬ್ಯಾಂಡ್​​​​ ಜಿಒಕ್ಯೂಐಐ ಜತೆಗೆ ಪಾಲುದಾರಿಕೆಯನ್ನು ಹೊಂದಿದೆ. ಅಕ್ಷಯ್​ ಕುಮಾರ್​ ಜಿಒಕ್ಯೂಐಐ ಸಂಸ್ಥೆಯ ರಾಯಭಾರಿಯಾಗಿದ್ದಾರೆ. ಹಾಗಾಗಿ ಮುಂಬೈ ಪೊಲೀಸ್​ ಸಿಬ್ಬಂಧಿಗಳ ಆರೋಗ್ಯದ ವಿಚಾರವಾಗಿ ಮತ್ತು ಕೊರೋನಾ ಸೋಂಕನ್ನು ಪತ್ತೆ ಹಚ್ಚುವ ಸಲುವಾಗಿ ರಿಸ್ಟ್​ ಬ್ಯಾಂಡ್​ ಅನ್ನು ನೀಡಿದ್ದಾರೆ.

  ಇನ್ನು ಅಕ್ಷಯ್​ ಕುಮಾರ್​ ನೀಡಿರುವ ಈ ಸಾಧನದ ಮೂಲಕ ವ್ಯಕ್ತಿಯ ದೇಹದ ಉಷ್ಣತೆ, ಹೃದಯ ಬಡಿತ, ರಕ್ತದ ಒತ್ತಡ, ಕ್ಯಾಲೊರಿ ಬಗ್ಗೆ ಮಾಹಿತಿಯನ್ನು ನೀಡಲಿದೆ. ಕೊರೋನಾ ರೋಗದ ಲಕ್ಷಣ ಕಂಡು ಬಂದರೆ ಈ ರಿಸ್ಟ್​ ಬ್ಯಾಂಡ್​ ಮೂಲಕ ಗೊತ್ತಾಗಲಿದೆ.

  ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುವ ಮೂಲಕ ಅಕ್ಷಯ್​ ಕುಮಾರ್​ ಪಿಎಂ ಕೇರ್ಸ್​ಗೆ 25 ಕೋಟಿ ರೂಪಾಯಿಯನ್ನು ದೇಣಿಯಾಗಿ ನೀಡಿದ್ದರು. ಮುಂಬೈ ಮುನಿಸಿಪಾಲಿಟಿಗೆ 3 ಕೋಟಿ ರೂಪಾಯಿಯನ್ನು, ಮುಂಬೈ ಪೊಲೀಸ್​ ಫೌಂಡೇಷನ್​ಗೆ 2 ಕೋಟಿ ರೂಪಾಯಿಯನ್ನು ನೀಡಿದ್ದರು. ಇದೀಗ ಪೊಲೀಸ್​ ಸಿಬ್ಬಂಧಿಗಾಗಿ 1000ಕ್ಕೂ ಅಧಿಕ ರಿಸ್ಟ್​ ಬ್ಯಾಂಡ್​ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

  PayTM: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹಣ; ನೂತನ ಕಾರ್ಯಕ್ಕೆ ಮುಂದಾದ ಪೇಟಿಎಂ
  First published: