• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Aishwarya - Hrithik: ಆನ್ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡ ಐಶ್ವರ್ಯಾ-ಹೃತಿಕ್ ಹಳೆಯ ಜಾಹೀರಾತು, ಇದನ್ನು ನೋಡಿದ ಫ್ಯಾನ್ಸ್ ಫುಲ್‌ ಖುಷಿ!

Aishwarya - Hrithik: ಆನ್ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡ ಐಶ್ವರ್ಯಾ-ಹೃತಿಕ್ ಹಳೆಯ ಜಾಹೀರಾತು, ಇದನ್ನು ನೋಡಿದ ಫ್ಯಾನ್ಸ್ ಫುಲ್‌ ಖುಷಿ!

ಹೃತಿಕ್ ರೋಷನ್ ಮತ್ತು ನಟಿ ಐಶ್ವರ್ಯಾ ರೈ

ಹೃತಿಕ್ ರೋಷನ್ ಮತ್ತು ನಟಿ ಐಶ್ವರ್ಯಾ ರೈ

ಇದುವರೆಗೆ ನಟ ಹೃತಿಕ್ ರೋಷನ್ ಮತ್ತು ನಟಿ ಐಶ್ವರ್ಯಾ ರೈ ಒಟ್ಟಿಗೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವೆಲ್ಲವೂ ಐದು ವರ್ಷಗಳ ಅವಧಿಯಲ್ಲಿಯೇ ಬಿಡುಗಡೆಯಾಗಿದ್ದವು ಅಂತ ಹೇಳಬಹುದು.

  • Share this:

ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಟ ಅಥವಾ ನಟಿಯರಾಗುವ ಮೊದಲು ಟಿವಿಯಲ್ಲಿ ಬರುವ ಜಾಹೀರಾತುಗಳಲ್ಲಿ ನಟಿಸಿರುವುದನ್ನು ನಾವು ನೋಡಿರುತ್ತೇವೆ. ಅನೇಕ ಜನ ನಟರು ಈ ರೀತಿಯಾಗಿ ಜಾಹೀರಾತುಗಳಲ್ಲಿ (Advertisements)ಮತ್ತು ಅನೇಕ ರೀತಿಯ ಚಿಕ್ಕ ಪುಟ್ಟ ಕಿರು ಚಿತ್ರಗಳಲ್ಲಿಯೂ ಸಹ ನಟಿಸಿರುತ್ತಾರೆ ಅಂತ ಹೇಳಬಹುದು. ನಾವು ಇದರ ಬಗ್ಗೆ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಇಲ್ಲಿಯೂ ಸಹ ಜನಪ್ರಿಯ ನಟ ಮತ್ತು ನಟಿಯ ಒಂದು ಹಳೆಯ ಜಾಹೀರಾತು ಈಗ ಮತ್ತೆ ಆನ್ಲೈನ್ ನಲ್ಲಿ (Online) ಕಾಣಿಸಿಕೊಂಡಿದೆ. ಎಂದರೆ ಅಭಿಮಾನಿಗಳು ಅದನ್ನು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.


ಇದು ಹೃತಿಕ್ ಮತ್ತು ಐಶ್ವರ್ಯಾ ನಟನೆಯ ಹಳೆಯ ಜಾಹೀರಾತು..


ಇದುವರೆಗೆ ನಟ ಹೃತಿಕ್ ರೋಷನ್ ಮತ್ತು ನಟಿ ಐಶ್ವರ್ಯಾ ರೈ ಒಟ್ಟಿಗೆ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವೆಲ್ಲವೂ ಐದು ವರ್ಷಗಳ ಅವಧಿಯಲ್ಲಿಯೇ ಬಿಡುಗಡೆಯಾಗಿದ್ದವು ಅಂತ ಹೇಳಬಹುದು. ಅವರು 2006 ರಲ್ಲಿ ತೆರೆಕಂಡ ‘ಧೂಮ್ 2’ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ನಂತರ 2008 ರಲ್ಲಿ ‘ಜೋಧಾ ಅಕ್ಬರ್’ ಚಿತ್ರದಲ್ಲಿ ಮತ್ತೆ ಈ ಜೋಡಿ ಒಂದಾಯಿತು ಮತ್ತು 2010 ರಲ್ಲಿ ‘ಗುಜಾರಿಶ್’ ಎಂಬ ಚಿತ್ರದಲ್ಲಿ ಮತ್ತೊಮ್ಮೆ ಈ ಜೋಡಿ ನಟಿಸಿ ಅಭಿಮಾನಿಗಳನ್ನು ರಂಜಿಸಿತು ಅಂತ ಹೇಳಬಹುದು.


ಇವರಿಬ್ಬರು ಹಿಂದೊಮ್ಮೆ ತಂಪು ಪಾನೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು, ಅದರಲ್ಲಿ ಅವರು ಕಾಲೇಜು ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸುವ ಕಾಲೇಜು ವಿದ್ಯಾರ್ಥಿಗಳ ಪಾತ್ರವನ್ನು ನಿರ್ವಹಿಸಿದ್ದರು.


ಇದನ್ನೂ ಓದಿ: ಹೆಚ್ಚಾಗ್ತಾ ಇರುವ ಬಿಸಿಲಿನಿಂದ ನಾಶವಾಗ್ತಿದೆ ಸಾವಿರಾರು ಗಿಡಗಳು, ವರದಿ ಬಿಚ್ಚಿಟ್ಟ ರಹಸ್ಯ ಇದು!


ರೆಡ್ಡಿಟ್ ಬಳಕೆದಾರರೊಬ್ಬರು ಇತ್ತೀಚೆಗೆ ಈ ಹಳೆಯ ಜಾಹೀರಾತನ್ನು ಮತ್ತೆ ಹಂಚಿಕೊಂಡಿದ್ದಾರೆ ಮತ್ತು ಈ ಇಬ್ಬರ ನಟರ ಅಭಿಮಾನಿಗಳು ಇದನ್ನು ನೋಡಿ ಫುಲ್ ಖುಷ್ ಆಗಿದ್ದಾರೆ. ಆದರೆ ತಮ್ಮ ನೆಚ್ಚಿನ ನಟರನ್ನು ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾಗಿ ನೋಡಬೇಕೆಂಬ ಹಂಬಲ ಅಭಿಮಾನಿಗಳದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಹಳೆಯ ಜಾಹೀರಾತಿನಲ್ಲಿ ಕಾಲೇಜು ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡ ನಟರು


ಈ ಹಳೆಯ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಅವರನ್ನು ಸ್ಟೈಲಿಶ್ ಕಾಲೇಜು ವಿದ್ಯಾರ್ಥಿಗಳಾಗಿ ತೋರಿಸಲಾಗಿದೆ ಮತ್ತು ಅವರ ನಡುವಿನ ಸ್ಪರ್ಧೆಯ ಹೊರತಾಗಿಯೂ ಇಬ್ಬರು ಉತ್ತಮ ಸ್ನೇಹಿತರು ಎಂದು ಪರಿಚಯಿಸುತ್ತದೆ. ಐಶ್ವರ್ಯಾ ಹಳದಿ ಟಾಪ್ ಮತ್ತು ಕೆಂಪು ಮಿನಿ ಸ್ಕರ್ಟ್ ನಲ್ಲಿ ಕಾಣಿಸಿಕೊಂಡಿದ್ದರೆ, ಹೃತಿಕ್ ನೀಲಿ ಟೀ ಶರ್ಟ್ ಮತ್ತು ಡೆನಿಮ್ ನಲ್ಲಿ ಕಾಣಿಸಿಕೊಂಡಿದ್ದರು.
ಈ ಜಾಹೀರಾತಿನಲ್ಲಿ, ಹೃತಿಕ್ ತಮ್ಮ ಡ್ಯಾನ್ಸ್ ಕೌಶಲ್ಯದಿಂದ ಕಾಲೇಜು ವಿದ್ಯಾರ್ಥಿಗಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಐಶ್ವರ್ಯಾ ತನ್ನ ಗ್ಲಾಮರ್ ನಿಂದಾಗಿ ಅವರನ್ನು ಆಕರ್ಷಿಸಲು ಪ್ರಯತ್ನಿಸುತ್ತಾಳೆ. ಮತದಾನದ ದಿನದಂದು, ಹೃತಿಕ್ ಎದುರಾಳಿ ಐಶ್ವರ್ಯಾಗೆ ಮತ ಚಲಾಯಿಸುತ್ತಾರೆ. ಮತ ಎಣಿಕೆಯ ಸಮಯದಲ್ಲಿ ಅವರಿಬ್ಬರ ನಡುವೆ ಟೈ ಆಗಿರುವುದರಿಂದ ಅವರು ಮತ್ತೆ ಒಂದಾಗುತ್ತಾರೆ ಮತ್ತು ಒಟ್ಟಿಗೆ ನಡೆಯುತ್ತಾರೆ.


ಹಳೆಯ ಜಾಹೀರಾತನ್ನು ಮತ್ತೆ ಇಷ್ಟಪಟ್ಟ ಅಭಿಮಾನಿಗಳು..


ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಈ ಹಳೆಯ ಜಾಹೀರಾತನ್ನು ತುಂಬಾನೇ ಇಷ್ಟಪಟ್ಟಿದ್ದು, ರೆಡ್ಡಿಟ್ ಬಳಕೆದಾರರೊಬ್ಬರು ವೀಡಿಯೋಗೆ "ತುಂಬಾನೇ ಚೆನ್ನಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. "ನಾವು ಈ ಜೋಡಿಯಿಂದ ಬರೀ ಮೂರು ಚಲನಚಿತ್ರಗಳನ್ನು ಪಡೆದಿರುವುದು ನಿರಾಶೆಯಾಗಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ. "ಇವರು ಒಟ್ಟಿಗೆ ನಟಿಸಿರುವ ಮೂರು ಚಲನಚಿತ್ರಗಳು ಸಂಪೂರ್ಣವಾಗಿ ಭಿನ್ನವಾಗಿವೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಅಭಿಮಾನಿ "ಅವರು ಈ ರೀತಿಯ ಜಾಹೀರಾತುಗಳನ್ನು ಇನ್ನಷ್ಟು ಮಾಡಬೇಕೆಂದು ನಾನು ಬಯಸುತ್ತೇನೆ. ನೋಡೋದಕ್ಕೆ ತುಂಬಾನೇ ಖುಷಿ ಅಂತ ಅನ್ನಿಸುತ್ತದೆ" ಎಂದು ಬರೆದಿದ್ದಾರೆ.

First published: