ಬಾಲಿವುಡ್​ ಹಿರಿಯ ನಟಿ ವಿದ್ಯಾ ಸಿನ್ಹಾ ಇನ್ನಿಲ್ಲ...

ಶ್ವಾಸಕೋಸ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾ ಸಿನ್ಹಾ ಅವರು ಮುಂಬೈನ ಕ್ರಿಟಿಕೇರ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಜುಲೈ 10ರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿನ್ಹಾ ಅವರಿಗೆ 71 ವರ್ಷ ವಯಸ್ಸಾಗಿತ್ತು. ಇಂದು ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ.

Latha CG | news18
Updated:August 15, 2019, 5:30 PM IST
ಬಾಲಿವುಡ್​ ಹಿರಿಯ ನಟಿ ವಿದ್ಯಾ ಸಿನ್ಹಾ ಇನ್ನಿಲ್ಲ...
ನಟಿ ವಿದ್ಯಾ ಸಿನ್ಹಾ
  • News18
  • Last Updated: August 15, 2019, 5:30 PM IST
  • Share this:
ಮುಂಬೈ,(ಆ.15): ಹಲವು ದಿನಗಳಿಂದ ಶ್ವಾಸಕೋಸ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟಿ ವಿದ್ಯಾ ಸಿನ್ಹಾ ಇಂದು ಕೊನೆಯುಸಿರೆಳೆದಿದ್ದಾರೆ.

ಶ್ವಾಸಕೋಸ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾ ಸಿನ್ಹಾ ಅವರು ಮುಂಬೈನ ಕ್ರಿಟಿಕೇರ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಜುಲೈ 10ರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿನ್ಹಾ ಅವರಿಗೆ 71 ವರ್ಷ ವಯಸ್ಸಾಗಿತ್ತು. ಇಂದು ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕುಟುಂಬದಲ್ಲೇ ಸಿನ್ಹಾ ಜನಿಸಿದ್ದರು. ಅವರ ತಂದೆ ಪ್ರತಾಪ್​ ರಾಣಾ ಸಿನಿಮಾ ನಿರ್ಮಾಪಕರಾಗಿದ್ದರು. ಹೀಗಾಗಿ ಸಿನಿಮಾ ಕ್ಷೇತ್ರ ಅವರನ್ನು ಸೆಳೆದಿತ್ತು. ಸಿನ್ಹಾ ತಮ್ಮ 18ನೇ ವಯಸ್ಸಿನಲ್ಲೇ ಮಾಡೆಲಿಂಗ್​ ಕ್ಷೇತ್ರದಲ್ಲಿ ಮಿಂಚಿದ್ದವರು.

ಬಳಿಕ ಹಲವಾರು ಹಿಟ್​ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ರಜನಿಗಂಧ, ಚೋಟಿ ಸಿ ಬಾತ್, ಪತಿ, ಪತ್ನಿ ಔರ್ ವೋ ಚಿತ್ರಗಳು ಇವರಿಗೆ ಹೆಸರು ತಂದು ಕೊಟ್ಟಿದ್ದವು.  2011 ರಲ್ಲಿ ತೆರೆಕಂಡ ಬಾಡಿಗಾರ್ಡ್ ಸಿನಿಮಾದಲ್ಲೂ ಕೂಡ ಸಿನ್ಹಾ ನಟಿಸಿದ್ದರು. ಇಷ್ಟೇ ಅಲ್ಲದೇ, ಟಿವಿ ಶೋಗಳಲ್ಲೂ ವಿದ್ಯಾ ಸಿನ್ಹಾ ಕಾಣಿಸಿಕೊಂಡಿದ್ದರು. ಏಕ್ತಾ ಕಪೂರ್ ರ ಕಾವ್ಯಾಂಜಲಿ, ಕುಲ್ಫಿ ಕುಮಾರ್ ಬಾಜೇವಾಲಾ ಸೀರಿಯಲ್ ನಲ್ಲಿಯೂ ಸಿನ್ಹಾ ಬಣ್ಣ ಹಚ್ಚಿದ್ದಾರೆ.
First published: August 15, 2019, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading