ವಿದ್ಯಾ ಬಾಲನ್ ಮತ್ತು ಶೆಫಾಲಿ ಷಾ ಅಭಿನಯದ ಡ್ರಾಮಾ ಥ್ರಿಲ್ಲರ್ 'ಜಲ್ಸಾ' OTT ಯಲ್ಲಿ ತನ್ನ ವರ್ಲ್ಡ್ ಪ್ರೀಮಿಯರ್ ಅನ್ನು ಹೊಂದಲು ಸಿದ್ಧವಾಗಿದೆ. ಈ ಚಿತ್ರವನ್ನು ಸುರೇಶ್ ತ್ರಿವೇಣಿ ನಿರ್ದೇಶಿಸಿದ್ದು ಮತ್ತು ಹೆಚ್ಚು ಮೆಚ್ಚುಗೆ ಪಡೆದ 'ತುಮ್ಹಾರಿ ಸುಲು' ಚಿತ್ರದ ನಂತರ ವಿದ್ಯಾ ಬಾಲನ್ ಅವರೊಂದಿಗೆ ‘ಜಲ್ಸಾ’ ಚಿತ್ರವು ಎರಡನೇ ಸಹಯೋಗವಾಗಿದೆ ಎಂದು ತಿಳಿದುಬಂದಿದೆ.
ಮಾರ್ಚ್ 18 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೇರವಾಗಿ ಬರಲು ಸಿದ್ಧವಾಗಿರುವ ಈ ಚಿತ್ರದಲ್ಲಿ ಮಾನವ್ ಕೌಲ್, ರೋಹಿಣಿ ಹಟ್ಟಂಗಡಿ, ಇಕ್ಬಾಲ್ ಖಾನ್, ವಿಧಾತ್ರಿ ಬಂಡಿ, ಶ್ರೀಕಾಂತ್ ಮೋಹನ್ ಯಾದವ್, ಶಫೀನ್ ಪಟೇಲ್ ಮತ್ತು ಸೂರ್ಯ ಕಾಶಿಭಟ್ಲ - ಮುಂತಾದವರ ತಾರಾ ಬಳಗವನ್ನು ಒಳಗೊಂಡಿದೆ.‘ಜಲ್ಸಾ’ ಚಿತ್ರವನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ (ಟಿ-ಸೀರೀಸ್), ವಿಕ್ರಮ್ ಮಲ್ಹೋತ್ರಾ ಹಾಗೂ ಶಿಖಾ ಶರ್ಮಾ (ಅಬುಂಡಾಂಟಿಯಾ ಎಂಟರ್ಟೈನ್ಮೆಂಟ್) ಮತ್ತು ಸುರೇಶ್ ತ್ರಿವೇಣಿ ಜಂಟಿಯಾಗಿ ನಿರ್ಮಿಸಿದ್ದಾರೆ.
ಇನ್ನು, ಈ ಚಲನಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯ ಕುರಿತು ಪ್ರತಿಕ್ರಿಯಿಸಿದ ಟಿ-ಸೀರೀಸ್ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಭೂಷಣ್ ಕುಮಾರ್, ‘ಜಲ್ಸಾ ನಾವು ಟಿ-ಸೀರೀಸ್ನಲ್ಲಿ ಭಾಗವಾಗಿರುವ ಕಥೆಯಲ್ಲಿ ಅತ್ಯಂತ ಹಿಡಿತ ಹೊಂದಿರುವ ಮತ್ತು ಮನರಂಜನಾ ಚಲನಚಿತ್ರಗಳಲ್ಲಿ ಒಂದು. ಮತ್ತು ಇದರಲ್ಲಿ ನಮ್ಮ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾದ ಅಬುಂಡಾಂಟಿಯಾ ಎಂಟರ್ಟೈನ್ಮೆಂಟ್ನ ಪಾಲುದಾರಿಕೆ ಇದೆ ಎಂಬುದರಿಂದಲೂ ಸಹ ನಾನು ರೋಮಾಂಚನಗೊಂಡಿದ್ದೇನೆ’’ ಎಂದು ಹೇಳಿದರು.
ಈ ಹಿಂದೆ 'ಏರ್ಲಿಫ್ಟ್', 'ಶೇರ್ನಿ' ಮತ್ತು 'ಚೋರಿ' ಯಂತಹ ಚಲನಚಿತ್ರಗಳನ್ನು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲು ಭೂಷಣ್ ಕುಮಾರ್ ಸಹಕರಿಸಿದ್ದಾರೆ. ಈ ಬಗ್ಗೆಯೂ ಹೇಳಿದ ಭೂಷಣ್ ಕುಮಾರ್, ‘ನಾವು ಈ ಹಿಂದೆ 'ಏರ್ಲಿಫ್ಟ್', 'ಶೇರ್ನಿ' ಮತ್ತು 'ಚೋರಿ'ಯಂತಹ ಚಲನಚಿತ್ರಗಳೊಂದಿಗೆ ಅತ್ಯಂತ ಯಶಸ್ವಿ ಸಹಯೋಗವನ್ನು ಹೊಂದಿದ್ದೇವೆ. ಜಲ್ಸಾದೊಂದಿಗೆ ಅದೇ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ