Virat Kohli: ಕೊಹ್ಲಿಯನ್ನ ಮುದ್ದಾಡಿದ ಮಾದಕ ಚೆಲುವೆ: ಅದನ್ನ ನೋಡಿ ಕಿಡಿಕಾರಿದ್ರಾ ಅನುಷ್ಕಾ ಶರ್ಮಾ..?

ಒಂದೂವರೆ ವರ್ಷದಿಂದ ನಮ್ಮ ಸಂಸಾರ ಆನಂದ ಸಾಗರ ಅಂತ, ಹಾಡಿಕೊಂಡಿದ್ದ ವಿರುಷ್ಕಾ ಜೋಡಿಯ ನಡುವೆ ಮತ್ತೊಬ್ಬ ಬಾಲಿವುಡ್ ಸುಂದರಿಯ ಪರೋಕ್ಷವಾಗಿ ಎಂಟ್ರಿಯಾಗಿದ್ದಾರೆ. ಮತ್ತೊಬ್ಬ ನಟಿಯ ಈ ಅನಿರೀಕ್ಷಿತ ಆಗಮನ ಈಗ ಅನುಷ್ಕಾರ ನಿದ್ದೆಗೆಡಿಸಿದೆ.

ವಿರಾಟ್​ರನ್ನ ಅಪ್ಪಿಕೊಂಡ ನಟಿ ಊರ್ವಶಿ

ವಿರಾಟ್​ರನ್ನ ಅಪ್ಪಿಕೊಂಡ ನಟಿ ಊರ್ವಶಿ

  • News18
  • Last Updated :
  • Share this:
ಬಾಲಿವುಡ್ ಗ್ಲಾಮರಸ್ ಬ್ಯೂಟಿ ಊರ್ವಶಿ ರೌಟೆಲಾ ಕಣ್ಣು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೇಲೆ ಬಿದ್ದಿದೆ. ಅವರಿಗೆ  ಮದುವೆ ಆಗಿದೆ ಅನ್ನೋದನ್ನೂ ಲೆಕ್ಕಿಸದೇ ಊರ್ವಶಿ, ಕೊಹ್ಲಿಯನ್ನು ಅಪ್ಪಿ ಮುದ್ದಾಡಿದ್ದಾರೆ. ಇದು ಕೊಹ್ಲಿ ಪತ್ನಿ ಅನುಷ್ಕಾರ ಕಣ್ಣು ಕೆಂಪಾಗುವಂತೆ ಮಾಡಿದೆ.

ಅದು 2017ರ ಡಿಸೆಂಬರ್ 11. ಭಾರತದ ಲಕ್ಷಾಂತರ ಹುಡುಗರು ಹಾಗೂ ಹುಡುಗಿಯರ ಹಾರ್ಟ್ ಬ್ರೇಕ್ ಆದ ದಿನ. ಕಾರಣ ಟೀಂ ಇಂಡಿಯ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬಬ್ಲಿ ನಟಿ ಅನುಷ್ಕಾ ಶರ್ಮಾ ಮದುವೆಯಾದ ದಿನ. ಒಂದೂವರೆ ವರ್ಷದಿಂದ ನಮ್ಮ ಸಂಸಾರ ಆನಂದ ಸಾಗರ ಅಂತ, ಹಾಡಿಕೊಂಡಿದ್ದ ಈ ಜೋಡಿಯ ನಡುವೆ ಮತ್ತೊಬ್ಬ ಬಾಲಿವುಡ್ ಸುಂದರಿಯ ಪರೋಕ್ಷವಾಗಿ ಎಂಟ್ರಿಯಾಗಿದ್ದಾರೆ. ಮತ್ತೊಬ್ಬ ನಟಿಯ ಈ ಅನಿರೀಕ್ಷಿತ ಆಗಮನ ಈಗ ಅನುಷ್ಕಾರ ನಿದ್ದೆಗೆಡಿಸಿದೆ.

ನಟಿ ಊರ್ವಶಿ ರೌಟೆಲಾ


ಹೌದು, ಕೊಹ್ಲಿಯನ್ನಪ್ಪಿರುವ ಬಾಲಿವುಡ್ ಮಾದಕ ಚೆಲುವೆ ಊರ್ವಶಿ ರೌಟೆಲಾ ಫೋಟೋ ನೋಡಿ ನೀವು ಕನ್‍ಫ್ಯೂಸ್ ಆಗಬಹುದು. ವಿಶ್ವ ಕಪ್‍ನಲ್ಲಿ ತಮ್ಮ ತಂಡವನ್ನು ಮುನ್ನಡೆಸುವಲ್ಲಿ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ ಬಳಿ ಇದಕ್ಕೆಲ್ಲ ಸಮಯ ಎಲ್ಲಿಂದ ಬರಬೇಕು ಅನ್ನೋ ಪ್ರಶ್ನೆ ಮೂಡಬಹುದು. ಆದ್ರೆ ಇಲ್ಲಿ ಊರ್ವಶಿ ಅಪ್ಪಿಕೊಂಡಿರೋದು ವಿರಾಟ್ ಕೊಹ್ಲಿಯನ್ನಲ್ಲ, ಬದಲಾಗಿ ಅವರ ಮೇಣದ ಪ್ರತಿಮೆಯನ್ನ.

#INDvsPAK #INDIAVsPAKISTAN #CWC19 @cricketworldcup 🇮🇳🇮🇳🇮🇳🇮🇳🇮🇳🇮🇳(tag 5 cricket lovers)



ಕನ್ನಡದಲ್ಲಿ 'ಐರಾವತ' ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಊರ್ವಶಿ, ಚಾಲೆಂಜಿಂಗ್ ಸ್ಟಾರ್ ಜತೆ ಕುಣಿದು ಕುಪ್ಪಳಿಸಿದ್ದರು. ನಂತರ ಬಾಲಿವುಡ್‍ನಲ್ಲೇ ಬ್ಯುಸಿಯಾದ ಕಾರಣ ಅವರು ಮತ್ತೆ ಕನ್ನಡದಲ್ಲಿ ನಟಿಸಿಲ್ಲವಾದ್ರೂ, ಊರ್ವಶಿಗೆ ಕನ್ನಡದಲ್ಲೂ ಅಭಿಮಾನಿಗಳಿದ್ದಾರೆ. ಮೊದಲಿಂದಲೂ ಕ್ರಿಕೆಟ್ ಅಭಿಮಾನಿಯಾದ ಊರ್ವಶಿ, ಈ ಬಾರಿ ವಿಶ್ವಕಪ್​ ಮಿಸ್​ ಮಾಡಿಕೊಳ್ಳುವ ಮೂಡ್‍ನಲ್ಲಿರಲಿಲ್ಲ.

ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವ ಕಪ್ ಟೂರ್ನಮೆಂಟ್‍ನಲ್ಲಿ ಟೀಂ ಇಂಡಿಯಾ ಆಡುವ ಮ್ಯಾಚ್‍ಗಳನ್ನು ಕಣ್ತುಂಬಿಕೊಂಡು, ನಮ್ಮ ಹುಡುಗರನ್ನ ಹುರಿದುಂಬಿಸಲು ಊರ್ವಶಿ ಕೂಡ ಇಂಗ್ಲೆಂಡ್‍ಗೆ ಹೋಗಿದ್ದಾರೆ. ಅದೇ ಸಮಯದಲ್ಲಿ ಲಂಡನ್‍ನಲ್ಲಿರುವ ಮೇಡಂ ಟುಸ್ಸಾಡ್ಸ್ ಮೇಣದ ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್‍ರ ಮೇಣದ ಪ್ರತಿಮೆಯನ್ನ ನೋಡಿದ್ದೇ ತಡ, ಖುಷಿಯಿಂದ ಪ್ರತಿಮೆಯ ಹೆಗಲ ಮೇಲೆ ತಮ್ಮೆರಡೂ ಕೈಗಳನ್ನು ಸುತ್ತಿ, ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಫೋಟೋ ವೈರಲ್ ಆಗಿದೆ.











ಇನ್ನು ಫೋಟೋ ನೋಡಿ ಅನುಷ್ಕಾ ಸುಮ್ಮನಿದ್ದರೂ, ಅವರ ಅಭಿಮಾನಿಗಳು ಊರ್ವಶಿಯನ್ನು ಟ್ರಾಲ್ ಮಾಡುತ್ತಿದ್ದಾರೆ. ಅನುಷ್ಕಾ ನಿಮ್ಮನ್ನು ಕೊಲ್ತಾರಷ್ಟೇ ಅಂತ ಕಾಲೆಳೆದಿದ್ದಾರೆ. ಮುಂದಿನ ಮ್ಯಾಚ್ ವಿರಾಟ್ ಬೇಗ ಔಟ್ ಆದ್ರೆ, ನೀನೇ ಕಾರಣ ಅಂತೆಲ್ಲ ಕ್ಲಾಸ್ ತಗೊಂಡಿದ್ದಾರೆ.



ಆದರೆ ಊರ್ವಶಿ ಅದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಊರ್ವಶಿ ಅಪ್ಪಿಕೊಂಡಿರೋದು ಮೇಣದ ಪ್ರತಿಮೆಯನ್ನಷ್ಟೇ ಅಲ್ವಾ ಅಂತ ಅನುಷ್ಕಾ ಕೂಡ ಸುಮ್ಮನಾಗಿದ್ದಾರೆ. ಇನ್ನು ಸದ್ಯ, ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್, ಡ್ರಿಂಕ್ ಕ್ರಿಕೆಟ್​ ಅಂತ ವಿಶ್ವ ಕಪ್ ಧ್ಯಾನದಲ್ಲಿರುವ ವಿರಾಟ್ ಕೊಹ್ಲಿಗೆ ಈ ವಿಷಯವೇ ಗೊತ್ತಿಲ್ಲ.

Urvashi Rautela Hot Photos: ದಾಸ ದರ್ಶನ್​ರ ಬೋಲ್ಡ್ ಬೇಬಿ ಊರ್ವಶಿ ರೌಟೆಲಾರ ಹಾಟ್​ ಲುಕ್​..!



 
First published: