• Home
  • »
  • News
  • »
  • entertainment
  • »
  • Kantara Movie: ಕಾಂತಾರ ಸಿನಿಮಾ ನೋಡಿ ಕಲಿಯಿರಿ ಎಂದ ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್

Kantara Movie: ಕಾಂತಾರ ಸಿನಿಮಾ ನೋಡಿ ಕಲಿಯಿರಿ ಎಂದ ರಂಗೀಲಾ ಬೆಡಗಿ ಊರ್ಮಿಳಾ ಮಾತೋಂಡ್ಕರ್

ಕಾಂತಾರ ಕಂಡ ರಂಗೀಲಾ ಬೆಡಗಿ ಹೇಳಿದ್ದೇನು ಗೊತ್ತೇ?

ಕಾಂತಾರ ಕಂಡ ರಂಗೀಲಾ ಬೆಡಗಿ ಹೇಳಿದ್ದೇನು ಗೊತ್ತೇ?

ಸೃಜನಶೀಲತೆ ಹಾಗೂ ಒಳ್ಳೆ ವಿಷಯಕ್ಕೆ ಯಾವುದೇ ಗಡಿಯಿಲ್ಲ ಅನ್ನೋದನ್ನ ಈ ಚಿತ್ರ ತೋರಿದೆ. ಸಿನಿಮಾ ಮೇಕರ್ಸ್​​ಗೆ ಕಾಂತಾರ ಸಿನಿಮಾವೊಂದು ಒಳ್ಳೆ ಲೆಸನ್ ಆಗಿದೆ ಎಂದು ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ (Kannada Industry) ಹೆಸರು ಈಗ ಮತ್ತೆ ಎಲ್ಲೆಡೆ ಕೇಳಿ ಬರುತ್ತಿದೆ. ಕೆಜಿಎಫ್​ (KGF Cinema) ಸಿನಿಮಾ ಬಂದಾಗ, ಇದೇ ರೀತಿಯ ಹವಾ ಇತ್ತು. ಆಗ ಎಲ್ಲೆಡೆ ಕೆಜಿಎಫ್ ತನ್ನ ಹೊಸ ಹವಾ ಕ್ರಿಯೇಟ್ ಮಾಡಿತ್ತು. ಅದಾದ ಮೇಲೆ (Vikrant Rona) ವಿಕ್ರಾಂತ್ ರೋಣ ಒಂದು ಹಂತಕ್ಕೆ ರೀಚ್ ಆಯಿತು. ಚಾರ್ಲಿ-777 ಎಲ್ಲರ ಮನದಲ್ಲೂ ಸದ್ದು ಮಾಡಿತ್ತು. ಇಷ್ಟೆಲ್ಲ ಸಿನಿಮಾ ಆದ್ಮೇಲೆ ಮತ್ಯಾವ ಸಿನಿಮಾ ಈ ಲೆವಲ್​ಗೆ ರೀಚ್ ಆಗುತ್ತದೆ ಅನ್ನೋ ಹೊತ್ತಿಗೆ, ತುಳುನಾಡಿನಿಂದ ಕಾಂತಾರ (Kantara Cinema) ಸಿನಿಮಾ ಬಂದೇ ಬಿಡ್ತು. ಇದು ಈಗ ಟಾಕ್ ಆಫ್​ ದಿ ಟೌನ್ ಆಗಿದೆ. ಎಲ್ಲಿ ನೋಡಿದ್ರೂ ಅಲ್ಲಿ ಕಾಂತಾರ ಅನ್ನೋರೇ ಹೆಚ್ಚು. ಹಿಂದಿ ಭಾಷೆಯಲ್ಲಿ ಡಬ್ ಆಗಿರೋ ಕನ್ನಡದ ಕಾಂತಾರ ಕಂಡ ಒಂದು ಕಾಲದ ಸೂಪರ್ ಹೀರೋಯಿನ್ ಊರ್ಮಿಳಾ ಮಾತೋಂಡ್ಕರ್ ಕೂಡ ಕನ್ನಡದ ಕಾಂತಾರದವನ್ನ ಮನಸಾರೆ ಕೊಂಡಾಡಿದ್ದಾರೆ. ಈ ಸಿನಿಮಾ ನೋಡಿ ಎಲ್ಲರೂ ಕಲಿಯಬೇಕು ಅಂತಲೂ ಸಲಹೆ ಕೊಟ್ಟಿದ್ದಾರೆ.


ಕಾಂತಾರ ಸಿನಿಮಾ ರಂಗಕ್ಕೆ ಒಂದು ಹೊಸ ಪಾಠ


ಕಾಂತಾರ ಸಿನಿಮಾ ನಿಜಕ್ಕೂ ಸಿನಿಮಾ ಮೇಕರ್ಸ್​ ಗೆ ಒಂದು ಒಳ್ಳೇ ಸಿನಿಮಾನೇ ಆಗಿದೆ. ಸಿನಿಮಾ ವಿದ್ಯಾರ್ಥಿಗಳಿಗೂ ಇದು ಒಂದು ಒಳ್ಳೆ ಸ್ಟಡಿ ಮೆಟೀರಿಯಲ್​ ಆಗಿದೆ. ಚಿತ್ರವನ್ನ ಒಮ್ಮೆ ನೋಡಿದ್ರೆ, ಹೀಗೂ ಮಾಡಬಹುದು ಅನ್ನುವ ಹೊಸ ಐಡಿಯಾ ಸಿಗುತ್ತದೆ.




ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ದಂತ ಕಥೆ ಕೇಳಿದ್ದಾರೆ. ಆ ಕಥೆಗೆ ತಮ್ಮದೇ ಆದ ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ. ಆ ಕಾರಣಕ್ಕೇನೇ ಕಾಂತಾರ ಸಿನಿಮಾದಲ್ಲಿ ಒಂದು ಸೆಳೆತ ಕ್ರಿಯೆಟ್ ಆಗಿದೆ. ಭಕ್ತಿ-ಭಾವದ ಒಂದು ಲಹರಿ ಕೂಡ ಇಲ್ಲಿ ಹರೆದು ಬರ್ತಾನೇ ಹೋಗುತ್ತದೆ.


Bollywood Actress Urmila Matondkar watch Kantara Movie
ಕಾಂತಾರ ಸಿನಿಮಾ ರಂಗಕ್ಕೆ ಒಂದು ಹೊಸ ಪಾಠ


ಕಾಂತಾರ ಕಂಡ ರಂಗೀಲಾ ಬೆಡಗಿ ಹೇಳಿದ್ದೇನು ಗೊತ್ತೇ?
ಕಾಂತಾರ ಬಾಲಿವುಡ್ ಪ್ರೇಕ್ಷಕರ ಮನಸ್ಸನ್ನ ಗೆದ್ದಿದೆ. ಬಾಲಿವುಡ್ ಅನ್ನೋದು ದೊಡ್ಡ ಸಾಗರವೇ ಸರಿ. ಆದರೆ ಇಲ್ಲಿಯ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ದಕ್ಷಿಣದ ಸಿನಿಮಾಗಳನ್ನ ಇವರೂ ಒಪ್ಪಿಕೊಳ್ಳುತ್ತಿದ್ದಾರೆ. ಅದನ್ನ ಅರ್ಥ ಮಾಡಿಕೊಂಡೇ ಈಗ ಇಲ್ಲಿ ಸಿನಿಮಾ ರಿಲೀಸ್ ಆಗುತ್ತಿವೆ.


ಇದನ್ನೂ ಓದಿ: Kantara Movie: ಒಂದೇ ಥಿಯೇಟರ್​​ನಲ್ಲಿ ಕಾಂತಾರದ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೇಲ್! ಹೊಸ ದಾಖಲೆ


ಕನ್ನಡದ ಕಾಂತಾರ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಒಳ್ಳೆ ರೆಸ್ಪಾನ್ಸ್ ಬಂದ್ಮೇಲೆ ಕಾಂತಾರ ಹಿಂದಿ ಸೇರಿ ಇತರ ಭಾಷೆಯಲ್ಲೂ ಡಬ್ ಆಗಿ ರಿಲೀಸ್ ಆಯಿತು.
ಇಂತಹ ಈ ಸಿನಿಮಾವನ್ನ ಬಾಲಿವುಡ್​ ನ ರಂಗೀಲಾ ಚಿತ್ರ ಖ್ಯಾತಿಯ ನಟಿ ಊರ್ಮಿಳಾ ಮಾತೋಂಡ್ಕರ್ ಮೆಚ್ಚಿಕೊಂಡಿದ್ದಾರೆ. ಕೊಂಡಾಡುತ್ತಲೇ ಸಿನಿಮಾ ಮೇಕರ್ಸ್ ಗೆ ಒಂದಷ್ಟು ಸಲಹೆಯನ್ನೂ ಕೊಟ್ಟಿದ್ದಾರೆ.



ಊರ್ಮಿಳಾ ಮಾತೋಂಡ್ಕರ್ ಹೇಳಿರೋ ಪ್ರತಿ ಮಾತು ಸತ್ಯನೇ ಆಗಿವೆ. ಕಾಂತಾರ ಸಿನಿಮಾ ನೋಡಿರೋ ಪ್ರತಿಯೊಬ್ಬರಿಗೂ, ಇಂತಹ ಒಂದು ಅನುಭವ ಆಗ್ತಾನೇ ಇದೆ. ಅದಕ್ಕೆ ಹೊಸ ಸೇರ್ಪಡೆ ಅನ್ನೋ ಹಾಗೆ, ಕಾಂತಾರ ಚಿತ್ರ ವೀಕ್ಷಿಸಿದ ಊರ್ಮಿಳಾ ಮಾತೋಂಡ್ಕರ್ ಮನಸಾರೆ ಕನ್ನಡದ ಚಿತ್ರವನ್ನ ಈಗ ಹೊಗಳಿದ್ದಾರೆ.


ಇದನ್ನೂ ಓದಿ: Urfi Javed: ಕ್ಯಾಸೆಟ್ ರೀಲ್​ನಲ್ಲಿ ಉರ್ಫಿ ಅವತಾರ! ನಿಮ್ಮನೆಯಲ್ಲಿದ್ಯಾ ಹಳೆ ಕ್ಯಾಸೆಟ್?


ಉಳಿದಂತೆ ಕನ್ನಡದ ಕಾಂತಾರ ಸಿನಿಮಾ ಯಶಸ್ವಿಯಾಗಿಯೇ ಮುನ್ನುಗ್ಗುತ್ತಿದ್ದು, ಬಾಲಿವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್​ ನಲ್ಲೂ ತನ್ನ ಯಶಸ್ವಿ ಓಟವನ್ನ ಮುಂದುವರೆಸಿದೆ.

First published: