Babli Bouncer Tamannaah: ಬಬ್ಲಿ ಬೌನ್ಸರ್ ಚಿತ್ರದಲ್ಲಿ ತಮನ್ನಾ ಭಾಟಿಯಾ; ಏನ್ ಸಖತ್ ರಗಢ್ ಗುರೂ!

ಬಾಹುಬಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ Tamannaah Bhatia ಈಗೊಂದು ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗ ಸೂಪರ್ ಆಗಿಯೇ ಇದೆ.ಇದು ಆಮೀರ್ ಖಾನ್ ದಂಗಲ್ ಸಿನಿಮಾವನ್ನ ನೆನಪಿಸುತ್ತದೆ.

ತಮನ್ನಾ ಭಾಟಿಯಾ ಈಗ ಬಬ್ಲಿ ಬೌನ್ಸರ್

ತಮನ್ನಾ ಭಾಟಿಯಾ ಈಗ ಬಬ್ಲಿ ಬೌನ್ಸರ್

  • Share this:
ಬಾಹುಬಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia)ಈಗೊಂದು ಪ್ರಯೋಗ ಮಾಡಿದ್ದಾರೆ. ಈ ಪ್ರಯೋಗ ಸೂಪರ್ ಆಗಿಯೇ ಇದೆ.ಇದು ಆಮೀರ್ ಖಾನ್ ದಂಗಲ್ ಸಿನಿಮಾವನ್ನ ನೆನಪಿಸುತ್ತದೆ. ಅದಕ್ಕೂ ಹೆಚ್ಚಾಗಿಯೇ ಮಿಲ್ಕಿ ಬ್ಯೂಟಿ ಇಲ್ಲಿ ನೀವು ನಿರೀಕ್ಷೆ (Expectation) ಮಾಡದೇ ಇರೋ ರೀತಿಯಲ್ಲಿಯೇ ಖಡಕ್ ಆಗಿದ್ದಾರೆ. ಸಖತ್ ಆಕ್ಷನ್ (Action)ಮಾಡೋ ಮೂಲಕ ಮಿಲ್ಕಿ ಬ್ಯೂಟಿ ಫ್ಯಾನ್ಸ್ ಗೆ ಚೋಕ್ ಕೊಟ್ಟಿದ್ದಾರೆ. ಸದಾ ರೋಮ್ಯಾಂಟಿಕ್,ಗ್ಲಾಮರ್ ರೋಲ್​ ಗಳಲ್ಲಿಯೇ ಮಿಂಚಿದ್ದ ತಮನ್ನಾ ಭಾಟಿಯಾ ಇಲ್ಲಿ ಪ್ರೇಕ್ಷಕರಿಗೆ ಬೇರೆ ರೀತಿಯ ಎಂಟರಟೈನಮೆಂಟ್ ಕೊಡ್ತಾಯಿದ್ದಾರೆ. ಇದರ ಝಲಕ್ ನೋಡಬೇಕು ಅಂದ್ರೆ ನೀವು ಬಬ್ಲಿ ಬೌನ್ಸರ್ (Babli Bouncer) ಸಿನಿಮಾ ಟ್ರೈಲರ್ ನೋಡಲೇಬೇಕು.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರೋಲ್ ಜೊತೆಗೆ ಪ್ರಯೋಗ
ಮಾಡೋದು ಕಡಿಮೇನೆ. ಮಿಲ್ಕಿ ಬ್ಯೂಟಿ ಅಲ್ವೇ? ಜನ ಈ ಬೆಡಗಿಯನ್ನ ಹಾಗೆ ನೋಡಲು ಇಷ್ಟ ಪಡ್ತಾರೆ. ಆದರೆ, ಈ ನಟಿಯ ಈ ಒಂದು ಪ್ರಯೋಗ ಇಂಟ್ರಸ್ಟಿಂಗ್ ಆಗಿಯೇ ಇದೆ. ಈ ಹಿಂದೆ ಎಂದೂ ಕಾಣದೇ ಇರೋ ರೋಲ್ ನಲ್ಲಿಯೇ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ. ಸಾಫ್ಟ್ ರೋಲ್​ ಮೂಲಕವೇ ಪ್ರೇಕ್ಷಕರ್ ದಿಲ್ ಕದಿಯುತ್ತಿದ್ದ ತಮನ್ನಾ ಭಾಟಿಯಾ ಈ ಸಲ ರಗಢ್ ಆಗಿದ್ದಾರೆ.

Tamannaah Bhatia now babli Baouncer
ತಮನ್ನಾ ಭಾಟಿಯಾ ಈಗ ಬಬ್ಲಿ ಬೌನ್ಸರ್


ಬಬ್ಲಿ ಬೌನ್ಸರ್ ಆಗಿ ಆವಾಜ್ ಹಾಗ್ತಿದ್ದಾರೆ ತಮನ್ನಾ ಭಾಟಿಯಾ
ಬಬ್ಲಿ ಬೌನ್ಸರ್ ಒಂದು ಕಾಮಿಡಿ ಟಚ್ ಇರೋ ಒಂದು ಡ್ರಾಮ್ಯಾಟಿಕ್ ಮೂವೀನೇ ಆಗಿದೆ. ಈ ಚಿತ್ರಕ್ಕಾಗಿಯೇ ತಮನ್ನಾ ಭಾಟಿಯಾ ಕಂಪ್ಲೀಟ್ ಬದಲಾಗಿದ್ದಾರೆ. ತಮ್ಮ ಈ ಹಿಂದಿನ ಯಾವುದೇ ಪಾತ್ರದ ರೋಮ್ಯಾಂಟಿಕ್ ನೆರಳು ಇಲ್ಲಿ ಕಾಣಿಸೋದೇ ಇಲ್ಲ. ರಗಢ್ ಫೀಲ್​ ನಲ್ಲಿಯೇ ಖಡಕ್ ಆಗಿಯೇ ಆವಾಜ್ ಹಾಕುತ್ತಾರೆ.

ಬಬ್ಲಿ ಬೌನ್ಸರ್ ಚಿತ್ರಕ್ಕೆ ಆಮೀರ್ ದಂಗಲ್ ಸ್ಪೂರ್ತಿನೇ ?
ಹೌದು. ಈ ಒಂದು ಪ್ರಶ್ನೆ ಚಿತ್ರದ ಟ್ರೈಲರ್ ನೋಡಿದಾಕ್ಷಣ ಅನಿಸಿಬಿಡುತ್ತದೆ. ಸಲ್ಮಾನ್ ಸುಲ್ತಾನ್ ಚಿತ್ರದಲ್ಲಿದ್ದ ಅಖಾಡ ಹಾಗೂ ಪೈಲ್ವಾನರ ಕಸರತ್ತು, ಹೀಗೆ ಎಲ್ಲವೂ ಇಲ್ಲಿ ಕಾಣಿಸುತ್ತದೆ. ತಮನ್ನಾ ಭಾಟಿಯಾ ತಂದೆಯ ಪಾತ್ರಧಾರಿ ಒಂದು ರೀತಿ ದಂಗಲ್ ಚಿತ್ರದ ಆಮೀರ್ ಖಾನ್ ಪಾತ್ರವನ್ನೇ ನೆನಪಿಸುತ್ತದೆ.

ಬಬ್ಲಿ ಬೌನ್ಸರ್ ಮಧುರ್ ಭಂಡಾರ್ಕರ್ ನಿರ್ದೇಶನದ ಸಿನಿಮಾ
ಮಧುರ ಭಂಡಾರ್ಕರ್ ಮಾಡೋ ಸಿನಿಮಾಗಳೆಲ್ಲ ವಿವಾದಿತ ಸಿನಿಮಾಗಳೇ. ಆದರೆ, ಬಬ್ಲಿ ಬೌನ್ಸರ್ ಮಧುರ್ ಚಿತ್ರ ಬದುಕಿನ ಬೇರೆ ರೀತಿಯ ಸಿನಿಮಾ ಅನಿಸುತ್ತದೆ. ಈ ಚಿತ್ರದಲ್ಲಿ ಮಧುರ್ ಭಂಡಾರ್ಕರ್ ಲೇಡಿ ಬೌನ್ಸರ್ ಕಥೆ ಹೇಳುತ್ತಿದ್ದಾರೆ. ಊರಲ್ಲಿ ಆವಾಜ್ ಹಾಕಿಕೊಂಡು ತಿರುಗುತ್ತಿರೋ ಹುಡುಗಿ ಹೇಗೆ ಸಿಟಿಗೆ ಬಂದು ಬೌನ್ಸರ್ ಆಗ್ತಾಳೆ ಅನ್ನೋದೇ ಈ ಕಥೆ ಅಂತಲೂ ಈಗಲೇ ಗೆಸ್ ಮಾಡಬಹುದು.

ಬಹು ಭಾಷೆಯಲ್ಲಿ ಬಬ್ಲಿ ಬೌನ್ಸರ್ ಸಿನಿಮಾ ರಿಲೀಸ್
ಬಬ್ಲಿ ಬೌನ್ಸರ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ಚಿತ್ರವನ್ನ ಇದೇ ತಿಂಗಳು 23 ರಂದು ತೆರೆಗೆ ತರೋ ಪ್ಲಾನ್ ಆಗಿದ್ದು , ಇದು ಕೇವಲ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಾಗಿ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಬ್ಲಿ ಬೌನ್ಸರ್ ರಿಲೀಸ್ ಆಗುತ್ತಿದೆ. ಅಮಿತ್ ಜೋಶಿ ಜೊತೆಗೆ ಈ ಕಥೆಯನ್ನ ಮಧುರ್ ಭಂಡಾರ್ಕರ್ ಬರೆದು ಡೈರೆಕ್ಟ್ ಮಾಡಿದ್ದು ಓಟಿಟಿ ಮೂಲಕವೇ ಈ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಗಮನಸ ಸೆಳೆದಿದೆ.
First published: