Actress Tabu: ನಟಿ ಟಬು ಇನ್ನೂ ಒಂಟಿಯಾಗಿರುವುದಕ್ಕೆ ಕಾರಣ ಇವರೇ ಅಂತೆ

ಟಬು ತಾನು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಾನು ಈ ಉದ್ಯಮದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಅಜಯ್ ತನ್ನ ಆಪ್ತರಲ್ಲಿ ಒಬ್ಬರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ನಟಿ ಟಬು

ನಟಿ ಟಬು

  • Share this:
ನೀವು 90ರ ದಶಕದಲ್ಲಿ ಹಿಂದಿ ಚಲನಚಿತ್ರಗಳನ್ನು (Hindi Movies) ನೋಡಿದ್ದರೆ, ಒಂದು ಜೋಡಿ ಮಾತ್ರ ನಿಮ್ಮನ್ನು ತುಂಬಾನೇ ಮೋಡಿ ಮಾಡಿರುತ್ತದೆ. ಆ ಜೋಡಿ ಯಾವುದು ಅಂತ ನಿಮಗೆ ಹೇಳುವ ಮುಂಚೆಯೇ ಬಹುತೇಕರು ಆ ಜೋಡಿ ನಟ ಅಜಯ್ ದೇವಗನ್ (Ajay Devgn) ಮತ್ತು ನಟಿ ಟಬು (Tabu) ಅವರದ್ದು ಅಂತ ಊಹಿಸಿರುತ್ತೀರಿ. ಅದರಲ್ಲೂ 1994 ರಲ್ಲಿ ಬಿಡುಗಡೆಯಾದ 'ವಿಜಯಪಥ್' (Vijayapath) ಚಿತ್ರ ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ, ಆ ಸುಮಧುರವಾದ ಹಾಡುಗಳು, ಚಿತ್ರದ ಕಥೆ ಮತ್ತು ಅಜಯ್ ಮತ್ತು ಟಬು ನ ಜೋಡಿ ಯಾವುದನ್ನೂ ಅಭಿಮಾನಿಗಳು (Fans) ಇವತ್ತಿಗೂ ಮರೆತಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

90ರ ದಶಕದ ಐಕಾನಿಕ್ ಆನ್-ಸ್ಕ್ರೀನ್ ಜೋಡಿ
ನಟ ಅಜಯ್ ಮತ್ತು ನಟಿ ಟಬುವಿನ ಜೋಡಿ 90ರ ದಶಕದ ಐಕಾನಿಕ್ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿತ್ತು. ಇವರಿಬ್ಬರು ಒಟ್ಟಿಗೆ ಹಲವಾರು ಬ್ಲಾಕ್‌ಬಸ್ಟರ್‌ಗಳಲ್ಲಿ ನಟಿಸಿದ್ದಾರೆ ಮತ್ತು ನಿಕಟ ಸ್ನೇಹವನ್ನು ಸಹ ಹಂಚಿ ಕೊಂಡಿದ್ದಾರೆ. ಅಜಯ್ ದೇವಗನ್ ಅವರೊಂದಿಗೆ, ಟಬು ವಿಜಯಪಥ್ (1994), ಹಕೀಕತ್ (1995), ತಕ್ಷಕ್ (1999), ದೃಶ್ಯಮ್ (2015), ಗೋಲ್ಮಾಲ್ ಎಗೇನ್ (2017) ಮತ್ತು ದೇ ದೇ ಪ್ಯಾರ್ ದೇ (2019) ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರು ತಾರೆಗಳು ಇದೀಗ ಮತ್ತೆ ದೃಶ್ಯಂ 2 ಚಿತ್ರ ಮತ್ತು ಭೋಲಾ, ತಮಿಳಿನ ಕೈತಿ ಚಿತ್ರದ ರೀಮೇಕ್ ಆಗಿರುವ ಆಕ್ಷನ್-ಡ್ರಾಮಾದಲ್ಲಿ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.

ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ದಿನಗಳನ್ನು ನೆನಪಿಸಿಕೊಂಡ ನಟಿ
ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ, ಟಬು ತಾನು ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಾನು ಈ ಉದ್ಯಮದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಅಜಯ್ ತನ್ನ ಆಪ್ತರಲ್ಲಿ ಒಬ್ಬರಾಗಿದ್ದರು ಎಂದು ಹೇಳಿಕೊಂಡಿದ್ದಾರೆ. "ಅವರು ನನ್ನ ಸೋದರ ಸಂಬಂಧಿ ಸಮೀರ್ ಆರ್ಯ ಅವರ ನೆರೆಹೊರೆಯವರು ಮತ್ತು ನಿಕಟ ಸ್ನೇಹಿತ ಕೂಡ ಆಗಿದ್ದಾರೆ.

ಇದನ್ನೂ ಓದಿ:  Jaggesh: ಐ ತೇರಿ ಲಕಡಿ ಪಕಡಿ ಜುಮ್ಮ! ಜಗ್ಗೇಶಣ್ಣನ​ ಯೋಗ ಸೂಪರೋ ಸೂಪರ್

ಅಜಯ್ ದೇವಗನ್ ಬಗ್ಗೆ ನಟಿ ಹೇಳಿದ್ದು ಹೀಗೆ
ನಾನು ಚಿತ್ರೋದ್ಯಮದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಸಮೀರ್ ಮತ್ತು ಅಜಯ್ ನನ್ನ ಮೇಲೆ ಸದಾ ಒಂದು ಕಣ್ಣಿಡುತ್ತಿದ್ದರು, ನನ್ನನ್ನು ಹಿಂಬಾಲಿಸುತ್ತಿದ್ದರು ಮತ್ತು ನನ್ನೊಂದಿಗೆ ಮಾತನಾಡುವಾಗ ಸಿಕ್ಕಿಬಿದ್ದ ಹುಡುಗರನ್ನು ಹೊಡೆಯುವುದಾಗಿ ಬೆದರಿಕೆ ಸಹ ಹಾಕುತ್ತಿದ್ದರು. ಅವರು ದೊಡ್ಡ ರೌಡಿಗಳಂತೆ ವರ್ತಿಸುದ್ದರು ಮತ್ತು ನಾನು ಇಂದು ಒಬ್ಬಂಟಿಯಾಗಿದ್ದೇನೆ ಎಂದರೆ ಅದಕ್ಕೆ ಅಜಯ್ ಮುಖ್ಯವಾದ ಕಾರಣ. ಅವನು ಪಶ್ಚಾತ್ತಾಪ ಪಡುತ್ತಾನೆ ಮತ್ತು ಅವನು ಮಾಡಿದ್ದಕ್ಕೆ ವಿಷಾದಿಸುತ್ತಾನೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದರು.

ತನ್ನ ಮದುವೆಗೆ ಯಾರನ್ನಾದರೂ ಒಳ್ಳೆಯ ಹುಡುಗನನ್ನು ಹುಡುಕಿಕೊಡಿ ಎಂದು ಅವರಲ್ಲಿ ಕೇಳಿಕೊಂಡಿದ್ದೆ ಎಂದು ಹೇಳಿದ್ದಾರೆ. "ನಾನು ಯಾರನ್ನಾದರೂ ನಂಬುತ್ತೇನೆ ಎಂದರೆ ಅದು ಅಜಯ್‍ನನ್ನು ಎಂದು ಹೇಳಬಹುದು. ಅವನು ಮಗುವಿನಂತೆ ಮತ್ತು ತನ್ನ ಜೊತೆಯಲ್ಲಿ ಇರುವವರನ್ನು ಸದಾ ರಕ್ಷಿಸುತ್ತಾನೆ. ಅವರು ಇರುವಾಗ ಸೆಟ್‌ನಲ್ಲಿ ವಾತಾವರಣವು ಒತ್ತಡ ರಹಿತವಾಗಿರುತ್ತದೆ. ನಾವು ಅನನ್ಯ ಸಂಬಂಧ ಮತ್ತು ಬೇಷರತ್ತಾದ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ:  Pavitra Lokesh Marriage: ನಟಿ ಪವಿತ್ರಾ ಲೋಕೇಶ್-ನಟ ನರೇಶ್ ಮದುವೆ; ಹೊರಬಿತ್ತು ಸ್ಪಷ್ಟನೆ

ನಂತರ ಆರ್‌ಜೆ ಸಿದ್ಧಾರ್ಥ್ ಕಾನನ್ ಅವರೊಂದಿಗೆ ಮಾತನಾಡಿದ ಅವರು, ಅಜಯ್ ದೇವಗನ್ ತನ್ನನ್ನು ಮದುವೆಯಾಗಿ ನೆಲೆಸುವಂತೆ ಎಂದಿಗೂ ಹೇಳಿಲ್ಲ ಎಂದು ಹೇಳಿದರು. "ಅವರು ನನ್ನ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ನನಗೆ ಯಾವುದು ಒಳ್ಳೆಯದು ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ” ಟಬುಗೆ ಯಾವುದು ಒಳ್ಳೆಯದು ಎಂದು ಸಿದ್ಧಾರ್ಥ್ ಅಜಯ್ ಅವರನ್ನು ಕೇಳಿದಾಗ "ನಾವೇ ಆಕೆಗೆ ಒಳ್ಳೆಯವರು" ಎಂದು ಅಜಯ್ ಉತ್ತರಿಸಿದರು. ಬಾಲ್ಯದಿಂದಲೂ ಅವರು ಹೀಗೆಯೇ ಇದ್ದಾರೆ” ಎಂದು ಹೇಳಿದರು. ನಟ ಅಜಯ್ ದೇವಗನ್ ಮತ್ತು ನಟಿ ಟಬು ಅವರ ಮುಂಬರುವ ಚಿತ್ರ ದೃಶ್ಯಂ 2 ನವೆಂಬರ್ 18, 2022 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Published by:Ashwini Prabhu
First published: