Taapsee Pannu: ವರದಿಗಾರರ ಮುಂದೆ ತಾಳ್ಮೆ ಕಳೆದುಕೊಂಡ ನಟಿ ತಾಪ್ಸಿ ಪನ್ನು! ಸಿಟ್ಟಿನಲ್ಲಿ ಹೀಗಾ ಮಾತಾಡೋದು?

ನಟಿ ತಾಪ್ಸಿ ಪನ್ನು ಇತ್ತೀಚೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ವರದಿಗಾರರೊಬ್ಬರು ನಟಿಯನ್ನು ಇತ್ತೀಚೆಗೆ ಬಿಡುಗಡೆಯಾದ ‘ದೋಬಾರಾ’ ಚಿತ್ರದ ವಿರುದ್ಧ ನಡೆದ ನಕಾರಾತ್ಮಕ ಅಭಿಯಾನದ ಆರೋಪದ ಬಗ್ಗೆ ಕೇಳಿದಾಗ ನಟಿಗೆ ಸಿಕ್ಕಾಪಟ್ಟೆ ಕೋಪ ಬಂದಿತು.

ತಾಪ್ಸಿ ಪನ್ನು

ತಾಪ್ಸಿ ಪನ್ನು

  • Share this:
ಕೆಲವೊಮ್ಮೆ ಈ ಚಲನಚಿತ್ರೋದ್ಯಮದ ನಟ ಮತ್ತು ನಟಿಯರು ಈ ಮಾಧ್ಯಮಗಳ ವರದಿಗಾರರು (Media Reporters) ಕೇಳುವ ಪ್ರಶ್ನೆಗಳಿಗೆ ತುಂಬಾನೇ ಸಮಾಧಾನದಿಂದ ಉತ್ತರಿಸಿದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಅವರ ಮೇಲೆ ತುಂಬಾನೇ ಕೋಪ ಮಾಡಿಕೊಂಡು ಅವರಿಗೆ ಮರು ಪ್ರಶ್ನೆ (Question) ಮಾಡುವುದನ್ನು ಅಥವಾ ಕೋಪದಿಂದ ಬೈಯ್ಯುವುದನ್ನು ನಾವು ನೋಡಿರುತ್ತೇವೆ. ಇಲ್ಲೊಬ್ಬ ನಟಿ ಈಗ ಇದೇ ರೀತಿಯಾಗಿ ವರದಿಗಾರನ ಮೇಲೆ ಕೋಪ ಮಾಡಿಕೊಂಡಿದ್ದಾರೆ ನೋಡಿ. ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ತನ್ನ ನೇರ ವರ್ತನೆ ಮತ್ತು ಖಾರವಾದ ಪ್ರತಿಕ್ರಿಯೆಗಳಿಗೆ ಹೆಸರುವಾಸಿಯಾಗಿದ್ದಾರೆ, ಇದಕ್ಕಾಗಿ ನಟಿಯನ್ನು ಆಗಾಗ್ಗೆ ಅವರ ಅಭಿಮಾನಿಗಳು (Fans) ಹೊಗಳುತ್ತಾರೆ, ಆದರೆ ಇದು ಕೆಲವೊಮ್ಮೆ ಅವರಿಗೆ ಸಮಸ್ಯೆ ಸಹ ಆಗುತ್ತದೆ.

ದೋಬಾರಾ ಚಿತ್ರದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ನಟಿ 
ನಟಿ ತಾಪ್ಸಿ ಪನ್ನು ಇತ್ತೀಚೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ವರದಿಗಾರರೊಬ್ಬರು ನಟಿಯನ್ನು ಇತ್ತೀಚೆಗೆ ಬಿಡುಗಡೆಯಾದ ‘ದೋಬಾರಾ’ ಚಿತ್ರದ ವಿರುದ್ಧ ನಡೆದ ನಕಾರಾತ್ಮಕ ಅಭಿಯಾನದ ಆರೋಪದ ಬಗ್ಗೆ ಕೇಳಿದಾಗ ನಟಿಗೆ ಸಿಕ್ಕಾಪಟ್ಟೆ ಕೋಪ ಬಂದಿತು.

ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ "ಯಾವ ಚಲನ ಚಿತ್ರ ಈ ರೀತಿಯ ಅಭಿಯಾನವನ್ನು ಎದುರಿಸಲಿಲ್ಲ? ನೀವು ಮೊದಲು ನನ್ನ ಪ್ರಶ್ನೆಗೆ ಉತ್ತರಿಸಿ. ನಂತರ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಯಾವ ಚಿತ್ರ ಅದನ್ನು ಎದುರಿಸಲಿಲ್ಲ ಹೇಳಿ" ಅಂತ ತಾಪ್ಸಿ ಸಿಟ್ಟಿನಿಂದ ಕೇಳಿದರು.

ಸಿಟ್ಟಿನಿಂದ ಈಕೆ ಹೇಳಿದ್ದೇನು ನೋಡಿ 
ವಿಮರ್ಶಕರು ಸಹ ನಕಾರಾತ್ಮಕ ಅಭಿಯಾನದ ಭಾಗವಾಗಿದ್ದಾರೆ ಎಂದು ವರದಿಗಾರರು ಹೇಳಿದರು, ಇದಕ್ಕೆ ತಾಪ್ಸಿ "ಯಾವುದೇ ಪ್ರಶ್ನೆಯನ್ನು ಕೇಳುವ ಮೊದಲು ದಯವಿಟ್ಟು ವಿಷಯದ ಬಗ್ಗೆ ಸ್ವಲ್ಪ ತಿಳಿದುಕೊಂಡು ಬನ್ನಿ" ಎಂದು ಅವರು ಹೇಳಿದರು, "ನಂತರ ಈ ಜನರು ನಟರಿಗೆ ಯಾವುದೇ ಶಿಷ್ಟಾಚಾರಗಳಿಲ್ಲ ಎಂದು ಹೇಳುತ್ತಾರೆ" ಎಂದು ಹೇಳಿದರು. ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು, ಅದಕ್ಕೆ 79,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ ಮತ್ತು 600 ಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ ಅಂತ ಹೇಳಬಹುದು.

ಇದನ್ನೂ ಓದಿ: Alia Bhatt Baby Shower: ಆಲಿಯಾ ಭಟ್ ಸೀಮಂತಕ್ಕೆ ಭರದ ಸಿದ್ಧತೆ! ಮನೆಮಂದಿ ಖುಷ್

ಪಾಪರಾಜಿಗಳೊಂದಿಗಿನ ತನ್ನ ವಾದಕ್ಕೆ ತಾಪ್ಸಿ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ
ನಟಿ ತಾಪ್ಸಿ ಅವರು ಮಾಧ್ಯಮಗಳೊಂದಿಗೆ ವಾಗ್ವಾದಕ್ಕೆ ಇಳಿದಿರುವುದು ಇದೇನು ಮೊದಲನೇ ಘಟನೆಯಲ್ಲ. ಈ ಹಿಂದೆಯೂ ತಮ್ಮ ‘ದೋಬಾರಾ’ ಚಿತ್ರದ ಪ್ರಚಾರದ ಸಮಯದಲ್ಲಿ, ತಾಪ್ಸಿ ಪಾಪರಾಜಿಗಳೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರು, ಅವರು ಕಾರ್ಯಕ್ರಮದಲ್ಲಿ ತಡವಾಗಿ ತಲುಪಿದ್ದಕ್ಕಾಗಿ ನಟಿಯ ಬಗ್ಗೆ ಮಾತಾಡಿದ್ದರು.




ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ದೋಬಾರಾ’ ಚಿತ್ರದ ನಟಿ ತಾಪ್ಸಿ ತಮ್ಮ ಚಿತ್ರದ ಪ್ರಚಾರದ ಸಮಯದಲ್ಲಿ ಪಾಪರಾಜಿಗಳೊಂದಿಗೆ ತಮ್ಮ ವೈರಲ್ ವಾಗ್ವಾದದ ಬಗ್ಗೆ ತೆರೆದಿಟ್ಟರು. ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಪಾಪರಾಜಿಗಳನ್ನು ಎಂದಿಗೂ ಕರೆಯುವುದಿಲ್ಲ ಎಂದು ತಾಪ್ಸಿ ಹೇಳಿದರು. ಅವರು ಪಾಪ್ ಗಳನ್ನು ತಮ್ಮ ದೋಬಾರಾ ಚಿತ್ರದ ತಂಡವು ಆಹ್ವಾನಿಸಿದೆ ಎಂದು ಹೇಳಿದರು. "ಪಾಪ್ ಗಳು ಕೆಲವೊಮ್ಮೆ ಮಾತನಾಡುವ ಆ ಟೋನ್ ಅನ್ನು ನೀವು ಕೇಳಬೇಕು. ಅದು ನಮಗೆ ತುಂಬಾನೇ ಅವಮಾನಕರವಾಗಿರುತ್ತದೆ" ಎಂದು ಹೇಳಿದರು.

ಇದನ್ನೂ ಓದಿ: Vidya Balan: ಮಹೇಶ್ ಭಟ್ ಅವರ ಒಂದು ಫೋನ್ ಕಾಲ್ ನಿಂದಾಗಿ ವಿದ್ಯಾ ಬಾಲನ್ ತುಂಬಾ ಅತ್ತಿದ್ರಂತೆ! ಕಾರಣ ಏನು ಗೊತ್ತಾ?

ತನ್ನ ಅತೃಪ್ತಿಯನ್ನು ತೋರಿಸುತ್ತಾ ತಾಪ್ಸಿ "ನಾವು ಮೂರ್ಖರಲ್ಲ. ವಿನಾಕಾರಣ ವಿಡಿಯೋಗಳಲ್ಲಿ ನಮ್ಮ ತಾಳ್ಮೆಯನ್ನು ಕಳೆದುಕೊಳ್ಳಲು ನಾವು ಅನಕ್ಷರಸ್ಥರಲ್ಲ. ನಾನು ಒಬ್ಬರಿಗೆ ಅಗೌರವ ತೋರಿದ್ದೇನೆ ಎಂದು ಒಪ್ಪಿಕೊಳ್ಳಲು ನಾನು ನಿರಾಕರಿಸುತ್ತೇನೆ" ಎಂದು ಖಡಕ್ ಆಗಿ ಹೇಳಿದರು.

ತಾಪ್ಸಿಯವರ ಇತ್ತೀಚಿನ ಸಿನೆಮಾಗಳು 
ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ ‘ದೋಬಾರಾ’ ದಲ್ಲಿ ತೃಪ್ತಿದಾಯಕ ಅಭಿನಯವನ್ನು ನೀಡಿದರು, ಆದಾಗ್ಯೂ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನವನ್ನು ನೀಡಲಿಲ್ಲ. ತಾಪ್ಸಿ ಜೊತೆಗೆ ರಾಜ್ ಕುಮಾರ್ ಹಿರಾನಿ ಅವರ ಬಹುನಿರೀಕ್ಷಿತ ಚಿತ್ರ ಡಂಕಿಯಲ್ಲಿ ನಟ ಶಾರುಖ್ ಖಾನ್ ಅವರೊಂದಿಗೆ ಶೀಘ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.
Published by:Ashwini Prabhu
First published: