ತಾಯ್ತನ (Motherhood) ಎನ್ನುವುದು ಹೆಣ್ಣಿಗೆ (Woman life) ತುಂಬಾ ಅದ್ಭುತ ಅನುಭವ. ಅದರಲ್ಲೂ ಗರ್ಭಧಾರಣೆಯ (Delivery) ಸಮಯದಲ್ಲಿ ಆಕೆ ಹಲವಾರು ಹಂತಗಳನ್ನು ದಾಟಿ ಮುನ್ನಡೆಯಬೇಕು. ಇದರಲ್ಲಿ ಪ್ರಮುಖವಾಗಿ ಆಕೆಯಲ್ಲಿ ಆಗುವಂತಹ ದೈಹಿಕ ಹಾಗೂ ಮಾನಸಿಕ (Physical And Mentally Changes) ಬದಲಾವಣೆ ಪ್ರಮುಖವಾಗಿದೆ. ಇಷ್ಟು ಮಾತ್ರವಲ್ಲದೆ ಗರ್ಭಿಣಿ ಮಹಿಳೆಯರಿಗೆ (Pregnant) ಮುಂಜಾನೆಯ ಸಮಯ ವಾಂತಿ ಬರೋದು, ತುಂಬಾ ಸುಸ್ತು ಅನಿಸೋದು ಇತ್ಯಾದಿ ಸಹಜ.
ಅದರಲ್ಲೂ ಸಿನಿಮಾ ಸ್ಟಾರ್ಗಳು ಹೇಗೆ ತಮ್ಮ ತಾಯ್ತನವನ್ನು ನಿಭಾಯಿಸುತ್ತಾರೆ ಅನ್ನೋದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅದರಲ್ಲಿ ಇತ್ತಿಚೀಗೆ ತಾಯ್ತನದ ಮಧುರ ಅನುಭವ ಪಡೆಯುತ್ತಿರುವ ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತಮ್ಮ ತಾಯ್ತನದ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ತಾಯ್ತನದ ಖುಷಿಯಲ್ಲಿರುವ ಸೋನಮ್ ಕಪೂರ್
ಇತ್ತೀಚೆಗಷ್ಟೇ ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತಾಯಿಯಾದರು. ಡೆಲಿವರಿ ಆಗುವ ಸಮಯ ಅವರ ಪತಿ ಆನಂದ್ ಅಹುಜಾ ಸೋನಮ್ ಕಪೂರ್ ಜೊತೆಯೇ ಇದ್ದರು. ಅವರೊಂದಿಗೆ ಮೊದಲ ಮಗು ಗಂಡು ಮಗುವಿಗೆ ಜನ್ಮ ನೀಡಿದರು.
ಹೊಸ ಅಮ್ಮ ತನ್ನ ಪುಟ್ಟ ಮಗು ವಾಯು ಕಪೂರ್ ಅಹುಜಾ ತಮ್ಮ ಜೀವನದಲ್ಲಿ ತಂದ ವಿವಿಧ ಬದಲಾವಣೆಗಳ ಬಗ್ಗೆ ವಿವರಿಸುತ್ತಾರೆ. ಅದರ ಜೊತೆಗೆ ಅವರು ಮಗುವಿನ ಪ್ರತಿ ಕ್ಷಣವನ್ನು ಆನಂದಿಸುತ್ತಿರುವಂತೆ ತೋರುತ್ತಿದೆ.
ನಟಿ ಇತ್ತೀಚೆಗೆ ತನ್ನ ಅಭಿಮಾನಿಗಳಿಗೆ ಬೇಬಿ ವಾಯುವಿನ ಜಂಗಲ್-ಥೀಮಿನ ನರ್ಸರಿಯಲ್ಲಿ ಸ್ನೀಕ್ ಪೀಕ್ ಇರೋ ಪೋಟೊವನ್ನು ಪೋಸ್ಟ್ ಮಾಡಿದ್ದರು. ಅವರು ಈ ಪೋಟೊವನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡದೇ, ಅವರು ತಮ್ಮ ಪ್ರಸವಪೂರ್ವ ಪ್ರಯಾಣ, ಹೆರಿಗೆ, ಸ್ತನ್ಯಪಾನ ಮತ್ತು ಇನ್ನು ಹೆಚ್ಚಿನ ಮಾಹಿತಿಯನ್ನು ಸಹ ಇನ್ಸ್ಟಾಗ್ರಾಮ್ ಸ್ಟೋರಿಗಳ ಸರಣಿಯಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನಾರ್ಮಲ್ ಡೆಲಿವರಿ ನನ್ನ ಆದ್ಯತೆ ಆಗಿತ್ತು - ಸೋನಮ್ ಕಪೂರ್
ಸೋನಮ್ ಕಪೂರ್ ಅವರು ಗರ್ಭ ಧರಿಸಿದ ಸಮಯದಲ್ಲಿಯೇ ಹೆರಿಗೆ ಆದ್ರೆ ಅದು ನಾರ್ಮಲ್ ಡೆಲಿವರಿ ಅಂದ್ರೆ ಸಹಜ ಹೆರಿಗೆ ಆಗಬೇಕೆಂದು ಮುಂಚೆಯೇ ಗಟ್ಟಿಯಾಗಿ ನಿರ್ಧರಿಸಿದ್ದರು.
ನಾರ್ಮಲ್ ಡೆಲಿವರಿ ನನ್ನ ಮೊದಲ ಆದ್ಯತೆ ಆಗಿತ್ತು. ಅದಕ್ಕಾಗಿ ಅವರು ʼಜೆಂಟಲ್ ಬರ್ತ್ ಮೆಥಡ್ʼ ಅಥವಾ ʼಸೌಮ್ಯ ಜನ್ಮ ವಿಧಾನ'ದ ಮೂಲಕ ಮಗುವಿಗೆ ಜನ್ಮ ನೀಡಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಜೆಂಟಲ್ ಬರ್ತ್ ಮೆಥಡ್
"ನನ್ನ ಪ್ರಸವಪೂರ್ವ ಪ್ರಯಾಣವು ಬಹಳಷ್ಟು ವಿಭಿನ್ನವಾಗಿತ್ತು. ನಾನು ಸಾಧ್ಯವಾದಷ್ಟು ಸಹಜ ಹೆರಿಗೆ ಕಡೆ ಗಮನವನ್ನು ನೀಡಿದ್ದೆ. ಆದ್ದರಿಂದ ನಾನು ಡಾ.ಗೌರ ಮೋಥಾ ಅವರ ಬಳಿ ʼಜೆಂಟಲ್ ಬರ್ತ್ ಮೆಥಡ್ʼ ಅಥವಾ 'ಸೌಮ್ಯ ಜನ್ಮ ವಿಧಾನ'ದ ಸಹಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.
ಪ್ರಸವಪೂರ್ವ ಪ್ರಯಾಣವನ್ನು ಹೇಗೆ ಎದುರಿಸಬೇಕೆಂದು ವಿವರಿಸುವ ಜೆಂಟಲ್ ಬರ್ತ್ ಮೆಥಡ್ ಎಂಬ ಸುಂದರವಾದ ಪುಸ್ತಕವನ್ನು ಅವರು ಬರೆದಿರುವುದು ಇನ್ನು ವಿಶೇಷ. ನಾನು ಸಹ ಆ ಪುಸ್ತಕವನ್ನು ಓದಿ, ಅದರಲ್ಲಿ ಇರೋ ಸಲಹೆಗಳನ್ನು ಒಂದೊಂದಾಗಿ ಅಳವಡಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.
ಉತ್ತಮ ಆಹಾರ ಸೇವನೆ ಬಹಳ ಮುಖ್ಯ
“ಲಂಡನ್ನಲ್ಲಿ ಒಬ್-ಜಿನ್ ಅಭ್ಯಾಸ ಮಾಡುತ್ತಿರುವ ನನ್ನ ವೈದ್ಯರು ಬಹಳಷ್ಟು ಆಯುರ್ವೇದ ಅಭ್ಯಾಸಗಳು, ಸೃಜನಾತ್ಮಕ ಚಿಕಿತ್ಸೆ ಮತ್ತು ಹೋಮಿಯೋಪತಿ ಚಿಕಿತ್ಸಾ ವಿಧಾನಗಳನ್ನು ಸಹ ಬಳಸುತ್ತಾರೆ” ಎಂದು ಸೋನಮ್ ಸೇರಿಸಿದ್ದಾರೆ.
"ನಾನು ನನ್ನ ವೈದ್ಯರನ್ನು ಹೇಳುವ ಸಲಹೆಗಳನ್ನು ಬಲವಾಗಿ ನಂಬಿದೆ. ಯಾವುದಕ್ಕೂ ಪ್ರಶ್ನೆ ಮಾಡಲು ಹೋಗಲಿಲ್ಲ. ಗರ್ಭಿಣಿಯು ಈ ಸಮಯದಲ್ಲಿ ವೈದ್ಯರು ಹೇಳೊದನ್ನ ಚಾಚು ತಪ್ಪದೇ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.
ಇದನ್ನೂ ಓದಿ: Actress Ramya: ಫ್ಲೋಟಿಂಗ್ ಫ್ಲವರ್ ಗಾರ್ಡನ್ನಲ್ಲಿ ರಮ್ಯಾ, ಶುಭಕೋರಿದವರಿಗೆ ಧನ್ಯವಾದ ಎಂದ್ರು ಮೋಹಕ ತಾರೆ
ಒಳ್ಳೆಯ ಆಹಾರ ಸೇವನೆ
ವೈದ್ಯರ ಎಲ್ಲಾ ಸಲಹೆಗಳಿಗೆ ಧನ್ಯವಾದಗಳು ಮತ್ತು ನಾನು ಈಗ ಅವರ ಸಲಹೆ ಮೇರೆಗೆ ತುಂಬಾ ಸುಲಭವಾಗಿ ಸ್ತನ್ಯಪಾನ ಮಾಡುತ್ತಿದ್ದೇನೆ. ನನಗೆ ಯಾವುದೇ ಸ್ಟ್ರೆಚ್ ಮಾರ್ಕ್ಗಳಿಲ್ಲ " ಎಂದು ಸೋನಮ್ ಬರೆದಿದ್ದಾರೆ.
“ನಾನು ಗರ್ಭಿಣಿ ಇರುವ ಸಮಯ ಸಾಕಷ್ಟು ಆಹಾರ ಸೇವನೆ ಮಾಡುತ್ತಿದ್ದೆ. ಪ್ರತಿದಿನ ನನಗೂ ಮತ್ತು ನನ್ನ ಮಗುವಿಗೆ ಬೇಕಾಗುವಷ್ಟು ಪ್ರೋಟಿನ್, ವಿಟಮಿನ್, ವಿಟಮಿನ್ ಸಿ ಇರುವಂತಹ ಆಹಾರಗಳನ್ನು ಹೆಚ್ಚು ಸೇವಿಸುತ್ತಿದ್ದೆ" ಎಂದು ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Prabhas-Kriti Sanon: ಪ್ರಭಾಸ್ ಜೊತೆ ಎಂಗೇಜ್ಮೆಂಟ್? ಕೃತಿ ಸನೋನ್ ಹೇಳಿದ್ದೇನು?
ಸೋನಮ್ ಕಪೂರ್ ಅವರ ವೃತ್ತಿಜೀವನ
ಸೋನಮ್ ಕಪೂರ್ ಕೊನೆಯದಾಗಿ ಅನಿಲ್ ಕಪೂರ್, ಅನುರಾಗ್ ಕಶ್ಯಪ್ ಮತ್ತು ಹರ್ಷವರ್ಧನ್ ಕಪೂರ್ ಅವರ ʼಎಕೆ ವರ್ಸಸ್ ಎಕೆʼ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ʼಶೋಮ್ ಮಖಿಜಾ ಅವರ ಬ್ಲೈಂಡ್ʼನಲ್ಲಿ ಕಾಣಿಸಿಕೊಂಡರು, ಇದರಲ್ಲಿ ಪುರಬ್ ಕೊಹ್ಲಿ, ವಿನಯ್ ಪಾಠಕ್ ಮತ್ತು ಲಿಲ್ಲೆಟ್ ದುಬೆ ಕೂಡ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ