ತುಳುನಾಡ ಬೆಡಗಿ ಸ್ನೇಹಾ ಉಲ್ಲಾಳ್ ಎಲ್ಲಿ (Actress Sneha ullal New Photo) ಹೋದ್ರೋ ಏನೋ ? ಹೀಗೆ ಅಂದುಕೊಳ್ಳುವ ಹೊತ್ತಿಗ ಸ್ನೇಹಾ ಭಯಂಕರ್ ಎಕ್ಸಪೋಸ್ ಇರೋ ಫೋಟೋಗಳನ್ನ ಪೋಸ್ಟ್ ಮಾಡಿ ಪಡ್ಡೆಗಳ ನಿದ್ದೆ ಹಾಳು ಮಾಡ್ತಾನೆ ಇರ್ತಾರೆ. ಬಾಲಿವುಡ್‌ನಿಂದ (Bollywood Actress Sneha ullal) ಬಹುತೇಕ ದೂರವೇ ಉಳಿದಂತೆನೂ ಕಾಣಿಸುತ್ತಿದೆ. ಅಥವಾ ಆಫರ್‌ಗಳು ಇಲ್ಲ ಅಂತಲೋ ಏನೋ ? ಮಾದಕ ಫೋಟೋಗಳನ್ನ ಪೋಸ್ಟ್ ಮಾಡ್ತಿದ್ದಾರೋ ಏನೋ. ಈ ಬಗ್ಗೆ ಸದ್ಯ ಏನೂ (New Photo got Now Viral) ಐಡಿಯಾ ಇಲ್ಲ. ಆದರೆ ಸ್ನೇಹಾ ಉಲ್ಲಾಳ್ ಸದ್ಯ ಒಂದು ಪೋಟೋ ತುಂಬಾನೇ ಬೋಲ್ಡ್ ಆಗಿದೆ. ಅಷ್ಟೇ ಸುಂದರವಾಗಿಯೇ ತೆಗೆಯಲಾಗಿದೆ. ಈ ಫೋಟೋ ನೋಡಿದ್ರೆ ಬೆಳಗಿನ ಒಂದು ಸುಂದರ ದೃಶ್ಯ ಕಂಡ ಅನುಭವ ಕೂಡ ಆಗುತ್ತದೆ.
ಈ ಫೋಟೋದೊಂದಿಗೆ ಸ್ನೇಹಾ (Bollywood Film Updates) ಉಲ್ಲಾಳ್ ಒಂದಷ್ಟು ಹೊಸ ಮಾಹಿತಿ ಇಲ್ಲಿದೆ ಓದಿ.
ಸಲ್ಮಾನ್ ಪರಿಚಯಿಸಿದ ಸುಂದರಿ ಸ್ನೇಹಾ ಉಲ್ಲಾಳ್ ಏನ್ ಮಾಡ್ತವ್ರೆ
ಸ್ನೇಹಾ ಉಲ್ಲಾ ಹೆಚ್ಚು ಪರಿಚಯ ಆದ ಸಿನಿಮಾ ಯಾವುದು ? ಈ ಒಂದು ಪ್ರಶ್ನೆಗೆ ಒಂದು ಉತ್ತರ ಇದೆ. ಆ ಉತ್ತರದಲ್ಲಿ ಸಲ್ಮಾನ್ ಖಾನ್ ಹೆಸರು ಬರುತ್ತದೆ. ಸಲ್ಮಾನ್ ಖಾನ್ ಅಭಿನಯದ ಆ ಒಂದು ಸಿನಿಮಾದಲ್ಲಿ ಸ್ನೇಹಾ ಉಲ್ಲಾಳ್ ಅಭಿನಯಿಸಿದ್ದರು.
ಐಶ್ವರ್ಯ ರೈ ರೀತಿ ಕಾಣಿಸೋ ಹೀರೋಯಿನ್ ಸ್ನೇಹಾ ಉಲ್ಲಾಳ್
ಅದನ್ನ ನೋಡಿದ ಅನೇಕರು ಈ ಹುಡುಗಿ ಐಶ್ವರ್ಯ ರೈ ರೀತಿನೇ ಇದ್ದಾಳೆ ಅಂತಲೇ ಹೇಳಿದ್ದರು. ಅದು ನಿಜ ಅನ್ನೋ ರೀತಿಯಲ್ಲಿಯೇ ಸ್ನೇಹಾ ಉಲ್ಲಾಳ್ ಕಾಣಿಸಿಕೊಂಡರು. ನ್ಯಾಚ್ಯೂರಲಿ ಸ್ನೇಹಾ ಕಣ್ಣು ಮತ್ತು ಮುಖ ಚಹರೆ ಐಶ್ವರ್ಯ ರೈ ಅನ್ನ ಹೋಲುತ್ತವೆ.
ಸ್ನೇಹಾ ಉಲ್ಲಾಳ್ ಅಭಿನಯದ ಆ ಸಲ್ಮಾನ್ ಸಿನಿಮಾ ಯಾವುದು ಗೊತ್ತೇ ? Lucky: No Time for Love ಅನ್ನೋ ಈ ಸಿನಿಮಾದಲ್ಲಿ ಸ್ನೇಹಾ ಉಲ್ಲಾಳ್ ತುಂಬಾ ಸುಂದರವಾಗಿಯೇ ಕಾಣಿಸಿಕೊಂಡಿದ್ದರು.
ಸಲ್ಮಾನ್ ಕಿಂತಲೂ ಸ್ನೇಹಾ ಈ ಚಿತ್ರದಲ್ಲಿ ಹೆಚ್ಚು ಚರ್ಚೆಗೆ ಬಂದ್ರು. ಐಶ್ವರ್ಯ ರೈ ರೀತಿನೇ ಇದ್ದಾರೆ ಅನ್ನೋದೇ ಆ ಚರ್ಚೆಯ ಪ್ರಮುಖ ವಿಷಯವಾಗಿತ್ತು.
18 ವರ್ಷ ಸಿನಿ ಜೀವನದಲ್ಲಿ 20 ಚಿತ್ರದಲ್ಲಿ ಸ್ನೇಹಾ ನಟನೆ
ಸ್ನೇಹಾ ಉಲ್ಲಾಳ್ ಒಟ್ಟು ಸಿನಿಮಾ ಜೀವನದಲ್ಲಿ ಹೆಚ್ಚು ಕಡಿಮೆ 20 ಸಿನಿಮಾ ಮಾಡಿದ್ದಾರೆ. 2005 ರಿಂದ 2022 ರ ವರೆಗೂ ತೆಲುಗು, ಹಿಂದಿ, ಬೆಂಗಾಲಿ, ಇಂಗ್ಲೀಷ್ ಸಿನಿಮಾಗಳಲ್ಲಿ ಸ್ನೇಹಾ ಅಭಿನಯಿಸಿದ್ದಾರೆ.
ಕನ್ನಡದ ದೇವಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಇದುವೇ ಸ್ನೇಹಾ ಮೊದಲ ಕನ್ನಡ ಸಿನಿಮಾ ಆಗಿದೆ. ಇದಾದ್ಮೇಲೆ ಕನ್ನಡದಲ್ಲಿ ಸ್ನೇಹಾ ಮತ್ತೆ ಯಾವ ಸಿನಿಮಾ ಮಾಡಿರೋ ಹಾಗೆ ಕಾಣೋದಿಲ್ಲ ಬಿಡಿ.
ಸ್ನೇಹಾ ಉಲ್ಲಾಳ್ ಸಿನಿಮಾರಂಗದಿಂದ ದೂರ ಉಳಿದ್ರೆ ?
ಸ್ನೇಹಾ ಉಲ್ಲಾಳ್ ಅದ್ಯಾಕೋ ಏನೋ, ಸಿನಿಮಾ ರಂಗದಿಂದ ದೂರವೇ ಉಳಿದಂತಿದೆ. 2022 ವರ್ಷವೇ ಕೊನೆ ನೋಡಿ,ಇದಾದ್ಮೇಲೆ ಬೇರೆ ಚಿತ್ರ ಒಪ್ಪಿದ ಸುದ್ದಿ ಎಲ್ಲೂ ಕೇಳಿ ಬಂದಿಲ್ಲ.
ಆದರೆ ಸ್ನೇಹಾ ಉಲ್ಲಾಳ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಸ್ಪೆಷಲ್ ಫೋಟೋಗಳನ್ನ ಪೋಸ್ಟ್ ಮಾಡ್ತಾನೇ ಇರ್ತಾರೆ.
ಸ್ನೇಹಾ ಉಲ್ಲಾಳ್ ಹೊಸ ಫೋಟೋ ಸಿಕ್ಕಾಪಟ್ಟೆ ಮಸ್ತ್ ಆಗಿದೆ !
ಈಗೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಇದು ತುಂಬಾ ಸುಂದರವಾಗಿಯೇ ಇದೆ. ಆಗ ತಾನೇ ನಿದ್ದೆಯಿಂದ ಎದ್ದು ಬಂದು, ಕಿಟಕಿಯ ಮುಂದೆ ನಿಂತು ಕಾಫಿ ಕುಡಿಯೋ ಫೋಟೋ ಇದಾಗಿದೆ.
ಇದು ನಿಜಕ್ಕೂ ಸ್ಪೆಷಲ್ ಅನಿಸುತ್ತದೆ. ಜೊತೆಗೆ ಈ ಒಂದು ಫೋಟೋಗೆ ಸ್ಪೆಷಲ್ ಲೈನ್ ಕೂಡ ಸ್ನೇಹಾ ಬರೆದುಕೊಂಡಿದ್ದಾರೆ. ಈ ಲೈನ್ ತುಂಬಾನೇ ಚೆನ್ನಾಗಿವೆ. ನಿನಗೆ ನೆನಪಿದಿಯಾ ? ಒಂದ್ ಒಳ್ಳೆ ಬೆಳಕನ್ನ ನೀನು ನೋಡಿದಾಗ, ಮಲಗಿದ್ದ ನನ್ನ ನೀ ಎಳೆದು ತಂದು ಕಿಟಕಿಯ ಮುಂದೆ ನಿಲ್ಲಿಸಿದ್ದು ? ಆ ಸವಿ ನೆನಪು ನನಗೆ ಮತ್ತೆ ಬೇಕು ಅನಿಸುತ್ತಿದೆ.
ಆ ದಿನಗಳನ್ನ ನೆನಪಿಸಿಕೊಂಡ ಬಾಲಿವುಡ್ ನಟಿ ಸ್ನೇಹಾ ಉಲ್ಲಾಳ್
ಹೀಗೆ ಈ ಒಂದು ಫೋಟೋಗೆ ಸ್ನೇಹಾ ಉಲ್ಲಾಳ್ ಬರೆದುಕೊಂಡು ಆ ದಿನಗಳನ್ನ ಮತ್ತೊಮ್ಮೆ ನೆನಪಿಸಿಕೊಂಡಂತಿದೆ. ಈ ಫೋಟೋ ಬೋಲ್ಡ್ ಅನಿಸಿದ್ರು ಸುಂದರವಾಗಿಯೇ ಇದೆ. ಇದನ್ನ ನೋಡಿದ ಅಭಿಮಾನಿಗಳು ನಾವು ನಿಮ್ಮನ್ನ ಬಾಲಿವುಡ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತಲೇ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Ragini Dwivedi: ರಾಗಿಣಿಗಾಗಿಯೇ ಸೆಟ್ಟೇರ್ತಿದೆ ಹೊಸ ಸಿನಿಮಾ!
ಇನ್ನುಳಿದಂತೆ ಸ್ನೇಹಾ ಉಲ್ಲಾಳ್ ಸದ್ಯಕ್ಕೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿಯೇ ಅತಿ ಹೆಚ್ಚು ಬ್ಯುಸಿ ಇರ್ತಾರೆ. ಅಲ್ಲಿಯೇ ಎಲ್ಲ ರೀತಿಯ ಫೋಟೋ ಶೇರ್ ಮಾಡ್ತಾನೇ ಇರ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ