ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೂಪರ್ (Shilpa Shetty KD Poster) ಬಿಡಿ. ಈಗಲೂ ತಮ್ಮ ಫಿಟ್ನೆಸ್ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಯುಗಾದಿ ಹಬ್ಬದ ದಿನ ಶಿಲ್ಪಾ ಶೆಟ್ಟಿ ಅವರ ಕೆಡಿ ಸಿನಿಮಾದ ಪೋಸ್ಟರ್ (KD Movie Updates) ರಿಲೀಸ್ ಆಗಿದೆ. ಇದನ್ನ ಕಂಡ ಸಿನಿ ಪ್ರಿಯರು ವ್ಹಾವ್ ಅಂದ್ರು. ರೆಟ್ರೋ ಲುಕ್ ಅಲ್ಲಿ ಶಿಲ್ಪಾ ಕಾಣಿಸಿಕೊಂಡು ಕಿಚ್ಚು ಹಚ್ಚಿದ್ದಾರೆ. ಸೀರೆಯುಟ್ಟು (Satyavati Poster Release) ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇನೋ ಸರಿ ಬಿಡಿ. ಬಾಲಿವುಡ್ ನಾಯಕಿ ಅಂದ್ಮೇಲೆ ಇಷ್ಟು ಇರದೇ ಇದ್ರೇನೂ ಅನ್ನುವ ಮಾತು ಕೂಡ ಬರಬಹುದು. ಆದರೆ ಇದೇ ಬುದ್ದಿವಂತ ಶಿಲ್ಪಾ ಶೆಟ್ಟಿ (Satyavati Poster Viral) ಅವರ ಆ ಒಂದು ಯಡವಟ್ಟಿಗೆ ಕನ್ನಡ ಸಿನಿಪ್ರಿಯರು ಗರಂ ಆಗಿದ್ದಾರೆ.
ಸತ್ಯವತಿ ಶಿಲ್ಪಾ ಶೆಟ್ಟಿ ಏನಿದು ನಿಮ್ಮ ಎಡವಟ್ಟು?
ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಚಿತ್ರದ ಸತ್ಯವತಿ ಶಿಲ್ಪಾ ಶೆಟ್ಟಿ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದರು. ಹಬ್ಬದ ದಿನ ಈ ಒಂದು ಪೋಸ್ಟರ್ ನೋಡಿದ ಸಿನಿಪ್ರೇಮಿಗಳು ಸೂಪರ್ ಅಂದ್ರು. ಎಲ್ಲೆಡೆ ಅಷ್ಟೇ ಖುಷಿಯಲ್ಲಿ ಶೇರ್ ಮಾಡಿಕೊಂಡರು.
ಕೆಡಿ ಚಿತ್ರದ ಸತ್ಯವತಿ ಇವರೇ ನೋಡಿ ಅಂತಲೇ ಸಾರಿ ಸಾರಿ ಹೇಳಿದರು. ರಾಣಿ ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಸೂಪರ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. 17 ವರ್ಷದ ಬಳಿಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಬಂದಿರೋದು ವಿಶೇಷವೇ ಸರಿ ಬಿಡಿ.
ಶಿಲ್ಪಾ ಶೆಟ್ಟಿ ಮಾಡಿಕೊಂಡ ಎಡವಟ್ಟು ಏನು ಗೊತ್ತೇ?
ಆದರೆ ಶಿಲ್ಪಾ ಶೆಟ್ಟಿ ಅವರಿಗೆ ಕನ್ನಡ ಮತ್ತು ತೆಲುಗು ನಡುವಿನ ವ್ಯತ್ಯಾಸವೇ ಗೊತ್ತಿಲ್ಲವೇ? ಈ ಒಂದು ಪ್ರಶ್ನೆ ಈಗ ಎದ್ದಿದೆ. ಹೀಗೆ ಈ ಒಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವೂ ಇದೆ. ಆ ಕಾರಣ ಬೇರೆ ಯಾರೋ ಅಲ್ಲ. ಸ್ವತಃ ಶಿಲ್ಪಾ ಶೆಟ್ಟಿ ಅವರೇ ಆಗಿದ್ದಾರೆ.
ಹೌದು, ಶಿಲ್ಪಾ ಶೆಟ್ಟಿ ಅವರ ಇನ್‌ಸ್ಟಾಗ್ರಾಮ್ ಪೇಜ್‌ಗೆ ನೀವು ಹೋದ್ರೆ ಸಾಕು, ಅಲ್ಲಿ ಶಿಲ್ಪಾ ಶೆಟ್ಟಿ ಅವರ ಎಡವಟ್ಟು ಕಣ್ಣಿಗೆ ಬೀಳುತ್ತದೆ. ನಿಜ, ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟ್ರಾಗ್ರಾಮ್ ಪೇಜ್ ಅಲ್ಲಿ ಕೆಡಿ ಚಿತ್ರದ ತಮ್ಮ ಸತ್ಯವತಿ ಪಾತ್ರದ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ-ತೆಲುಗು ಭಾಷೆ ವ್ಯತ್ಯಾಸ ಶಿಲ್ಪಾ ಶೆಟ್ಟಿಗೆ ಗೊತ್ತಿಲ್ವೇ?
ಇಷ್ಟೇ ಆಗಿದ್ದರೇ ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ ಅನಿಸುತ್ತದೆ. ಆದರೆ ಪೋಸ್ಟರ್ ಜೊತೆಗೆ ಶಿಲ್ಪಾ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ದುರಂತ ಅಂದ್ರೆ ಅದು ತೆಲುಗುದಲ್ಲಿ ಅನ್ನೋದು ಅಷ್ಟೇ ಸ್ಪಷ್ಟ. ಆ ಸಾಲುಗಳು ಹಿಂಗಿವೆ ನೋಡಿ.
Ugadi subhakankshalu. ಹೀಗೆ ತೆಲುಗು ಭಾಷೆಯಲ್ಲಿ ಹಬ್ಬದ ಶುಭಾಶಯ ತಿಳಿಸಿದ ಶಿಲ್ಪಾ ಶೆಟ್ಟಿ
Gudi Padwyachya hardik shubheccha ಅಂತ ಮರಾಠಿಯಲ್ಲೂ ಯುಗಾದಿ ಹಬ್ಬದ ಶುಭಾಷಯ ತಿಳಿಸಿದ್ದಾರೆ.
ಯುಗಾದಿ ಹಬ್ಬದ ದಿನ ಶಿಲ್ಪಾ ಶೆಟ್ಟಿ ಎಡವಟ್ಟು!
ಆದರೆ ಕನ್ನಡದಲ್ಲಿಯೂ ಈ ರೀತಿ ಶುಭಾಶಯ ತಿಳಿಸಬಹುದಿತ್ತಲ್ಲವೇ ಅನ್ನುವ ಪ್ರಶ್ನೆ ಕನ್ನಡ ಸಿನಿಪ್ರೇಮಿಗಳದ್ದೇ ಆಗಿದೆ. ಕನ್ನಡದ ಕೆಡಿ ಚಿತ್ರ ಮಾಡುತ್ತಿದ್ದಾರೆ. ಆದರೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಷಯ ತಿಳಿಸಿದ್ರೆ ಚೆನ್ನಾಗಿರುತ್ತಿತ್ತು ಅಂತಲೇ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಶಿಲ್ಪಾ ಅವರ ಫೋಟೋಗೆ ಇನ್ನೂ ಒಂದು ಕಾಮೆಂಟ್ ಬಂದಿದೆ. ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಆದರೆ ತೆಲುಗುದಲ್ಲಿ ಯುಗಾದಿ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ವೇ? ಅಂತಲೂ ಪ್ರಶ್ನೆ ಕೇಳಿರೋ ಆ ಕಮೆಂಟ್ ಬಾಕ್ಸ್ ನಲ್ಲಿ ಕನ್ನಡ ಭಾಷೆಗೆ ಗೌರವ ಕೊಡಿ ಅಂತಲೂ ಕೇಳಿದ್ದಾರೆ.
ಶಿಲ್ಪಾ ಶೆಟ್ಟಿ ಅವರಿಗೆ ಕನ್ನಡದ ಪರಿಚಯವೇ ಇಲ್ವೇ?
ಶಿಲ್ಪಾ ಶೆಟ್ಟಿ ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ ಎರಡು ಸಿನಿಮಾ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಆಟೋ ಶಂಕರ್ ಸಿನಿಮಾದಲ್ಲೂ ಅಭಿನಯಸಿ ಹೋಗಿದ್ದಾರೆ. ಈ ಚಿತ್ರ ಆದ್ಮೇಲೆ ಇದೀಗ 17 ವರ್ಷದ ಬಳಿಕ ಕೆಡಿ ಮೂಲಕ ಕನ್ನಡಕ್ಕೆ ಬಂದಿದ್ದಾರೆ.
ಇದನ್ನೂ ಓದಿ: Leelavathi Movie: ಯುಗಾದಿ ಹಬ್ಬಕ್ಕೂ ನಟಿ ಲೀಲಾವತಿ ಅವರಿಗೂ ಇದೆ ವಿಶೇಷ ನಂಟು!
ಆದರೆ ಹಬ್ಬದ ದಿನ ಯುಗಾದಿ ಹಬ್ಬಕ್ಕೆ ಶುಭಾಶಯ ತಿಳಿಸಲು ಹೋಗಿ, ಕನ್ನಡ ಸಿನಿ ಪ್ರೇಮಿಗಳ ಕೆಂಗಣ್ಣಿಗೂ ಗುರಿ ಆಗಿದ್ದಾರೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ