Shilpa Shetty: ಯಾವ 5 ಸ್ಟಾರ್​ ಹೋಟೆಲ್​ ರೂಮ್​ಗೂ ಕಡಿಮೆ ಇಲ್ಲ ಶಿಲ್ಪಾ ಶೆಟ್ಟಿ ವ್ಯಾನಿಟಿ ವ್ಯಾನ್, ಏನೇನಿದೆ ಇದರ ಒಳಗಡೆ?

ಬಾಲಿವುಡ್​ನ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಇತ್ತೀಚೆಗೆ ಹೊಸ ವ್ಯಾನಿಟಿ ವ್ಯಾನ್ ಅನ್ನು ಖರೀದಿಸಿದ್ದಾರೆ. ಸದ್ಯ ಈ ವ್ಯಾನಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

  • Share this:
ಬಾಲಿವುಡ್ (Bollywood) ನಟ - ನಟಿಯರ ಲೈಫ್ ಸ್ಟೈಲ್ ವಿಷಯಗಳು ಅಭಿಮಾನಿಗಳಿಗೆ ಸದಾ ಕುತೂಹಲಕಾರಿಯಾಗಿರುತ್ತದೆ. ನಟ - ನಟಿಯರ ಕಾರುಗಳು, ಬಟ್ಟೆಗಳು, ಬಂಗಲೆಗಳು, ಆಭರಣಗಳು ಹೀಗೆ ಹಲವಾರು ವಿಷಯಗಳು ಸದಾ ಚರ್ಚೆಯಲ್ಲಿರುತ್ತವೆ. ಇದರಲ್ಲಿ ಸೆಲಬ್ರಿಟಿಗಳ ವ್ಯಾನಿಟಿ ವ್ಯಾನ್ (Vanity Van) ಅಥವಾ ಕ್ಯಾರವಾನ್ (Caravan) ಸಹ ಒಂದು ಪ್ರಮುಖ ವಿಷಯವಾಗಿದೆ. ಈ ಸೆಲೆಬ್ರಿಟಿ ವ್ಯಾನಿಟಿಗಳು ಐಷಾರಾಮಿ ಫ್ಲಾಟ್ ಇದ್ದಂತೆ ಇರುತ್ತದೆ. ಒಂದು ಕ್ಯಾರವಾನ್​ ಒಳಗೆ ಬಾತ್​ರೂಂ, ಬೆಡ್ ​ರೂಂ, ಅಡಿಗೆ ಮನೆ, ಹಾಲ್ ಹೀಗೆ ಎಲ್ಲವೂ ಇರುತ್ತದೆ. ಅದೇ ರೀತಿ ಐಷಾರಾಮಿ ಕ್ಯಾರವಾನ್ ಹೊಂದಿರುವ ನಟಿಯ ಬಗ್ಗೆ ಇದೀಗ ಎಲ್ಲಡೆ ಸಖತ್ ಚರ್ಚೆಯಾಗುತ್ತಿದೆ. ಹೌದು, ಬಾಲಿವುಡ್​ನ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty) ಇತ್ತೀಚೆಗೆ ಹೊಸ ವ್ಯಾನಿಟಿ ವ್ಯಾನ್ ಅನ್ನು ಖರೀದಿಸಿದ್ದಾರೆ. ಸದ್ಯ ಈ ವ್ಯಾನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಇದೇನು ಕ್ಯಾರವಾನ್​ ಅಥವಾ 5 ಸ್ಟಾರ್​ ಹೋಟೆಲ್​​ ರೂಂ ಆಗಿದೆಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಐಷಾರಾಮಿ ವ್ಯಾನಿಟಿ ವ್ಯಾನ್ ಖರೀದಿಸಿದ ಶಿಲ್ಪಾ ಶೆಟ್ಟಿ:

ಹೌದು, ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸದ್ಯ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಇಂದಿಗೂ ತನ್ನ ಖ್ಯಾತಿಯನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ. ಅಲ್ಲದೇ ಅವರ ಯೋಗದ ವಿಡಿಯೋಗಳು ಸಖತ್ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇದೀಗ ಶಿಲ್ಪಾ ಶೆಟ್ಟಿ ಹೊಸ ವ್ಯಾನಿಟಿ ವ್ಯಾನ್ ಖರೀದಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


ಶಿಲ್ಪಾ ಶೆಟ್ಟಿ ಜನ್ಮದಿನದಂದು ಗಂಡ ರಾಜ್​ ಕುಂದ್ರ ಅವರು ಪತ್ನಿಗಾಗಿ ಹೊಸ ವ್ಯಾನಿಟಿ ವ್ಯಾನ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಅದೇ ಕ್ಯಾರವಾನ್​ ನ ವಿಡಿಯೋ ಇಂದು ಹೊರಬಿದ್ದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವ್ಯಾನಿಟಿ ವ್ಯಾನ್ ಅನ್ನು ನೋಡಿದ ನಂತರ, ಇದು ವ್ಯಾನ್ ಎಂದು ನಿಮಗೆ ಅನಿಸುವುದಿಲ್ಲ. ಈ ಕ್ಯಾರಾವಾನ್​ ಒಳಗಡೆ, 1 ಮೀಟಿಂಗ್ ರೂಮ್‌, ವಾಶ್‌ರೂಮ್‌ಗಳು, ಖಾಸಗಿ ಚೇಂಬರ್‌, ಐಷಾರಾಮಿ ಅಡಿಗೆಮನೆ, ಐಷಾರಾಮಿ ಬೆಡ್​ ರೂಂ, ಬಟ್ಟೆಗಳಿಡಲು ಸುಂದರವಾದ ಕಪಾಟುಗಳು ಮತ್ತು ಯೋಗಕ್ಕಾಗಿ ಯೋಗ ಡೆಸ್ಕ್ ಅನ್ನು ಸಹ ಹೊಂದಿದ್ದು, ಒಂದು 5 ಸ್ಟಾರ್​ ಹೋಟೆಲ್​ ನ ಒಳಗಡೆ ಏನೆಲ್ಲಾ ಇರುತ್ತದೆಯೋ ಅದೇ ರೀತಿ ಹೊಂದಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ವೈರಲ್ ಭಯಾನಿ ಎಂಬ ಫೇಜ್​ ಹಂಚಿಕೊಂಡಿದೆ.

ಇದನ್ನೂ ಓದಿ: Rashmika Mandanna: ರೆಡ್​ ಹಾಟ್​ ಡ್ರೆಸ್​ನಲ್ಲಿ ಮಿಂಚಿದ ರಶ್ಮಿಕಾ, ಏನಮ್ಮಾ ನಿನ್ನ ಅವತಾರ ಎಂದ ಫ್ಯಾನ್ಸ್!

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ:

ಶಿಲ್ಪಾ ಶೆಟ್ಟಿ ಸದ್ಯ ವೆಬ್​ ಸಿರೀಸ್ ಮತ್ತು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಅಭಿಮನ್ಯು ಹಾಗೂ ಶೆರ್ಲಿ ಸೆಟಿಯಾ ಜೊತೆ ನಿಕಮ್ಮಾ ಸಿನಿಮಾದ ನಂತರ ಇದೀಗ, ರೋಹಿತ್ ಶೆಟ್ಟಿಯ ಇಂಡಿಯನ್ ಪೊಲೀಸ್ ಫೋರ್ಟ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:Adah Sharma: ತರಕಾರಿ ಮಾರುತ್ತಾಳೆ, ಎಲೆಯಲ್ಲೇ ಮೈ ಮುಚ್ಚಿಕೊಂಡಿದ್ದಾಳೆ! ಪುನೀತ್ ಜೊತೆ ನಟಿಸಿದ್ದ ಈ ನಟಿಗೆ ಅದೇನಾಯ್ತಪ್ಪಾ?

ಶಿಲ್ಪಾ ಶೆಟ್ಟಿ ಸಿನಿ ಜೀವನ:

1993 ರಲ್ಲಿ ಬಾಜಿಗರ್ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಶಿಲ್ಪಾ ಶೆಟ್ಟಿ ಶಿಲ್ಪಾ ಮೇನ್ ಕಿಲಾಡಿ ತು ಅನಾರಿ, ಆವೋ ಪ್ಯಾರ್ ಕರೇನ್, ಹಿಮ್ಮತ್, ಇನ್ಸಾಫ್, ಧಡ್ಕನ್, ಜಂಗ್, ಇಂಡಿಯನ್, ರಿಶ್ಟೇ, ವೆಪನ್, ಫಾರೆಬ್, ಲೈಫ್ ಇನ್ ಮೆಟ್ರೋ, ಅಪ್ನೆ, ದೋಸ್ತಾನ, ಡಸ್, ಗರ್ವ್ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು, ಇನ್ನು 2009ರಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿಗೆ ವಿಹಾನ್​ ಮತ್ತು ಸಮೀಶಾ ಎಂಬಿಬ್ಬರು ಮಕ್ಕಳಿದ್ದಾರೆ.
Published by:shrikrishna bhat
First published: