ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ (Dhruva Sarja) ಸರ್ಜಾ ಅಭಿನಯದ ಕೆಡಿ ಚಿತ್ರಕ್ಕೆ ಸಂಬಂಧಿಸಿದಂತೆ ದಿನವೂ ಒಂದೊದು ಹೊಸ ಸುದ್ದಿ ಹೊರ ಬೀಳುತ್ತದೆ. ಇದರ ಸುತ್ತ ಹತ್ತು ಹಲವು ಕುತೂಹಲಗಳು ಮೂಡುತ್ತವೆ. ಆದರೆ ಚಿತ್ರದ ಡೈರೆಕ್ಟರ್ (Director) ಎಲ್ಲೂ ಈ ಬಗ್ಗೆ ಹೇಳಿಕೊಳ್ಳೋದಿಲ್ಲ. ಇದರಿಂದ ಕೆಡಿ (KD Cinema) ಸಿನಿಮಾದ ಒಂದೊಂದು ನ್ಯೂಸ್ ಕೂಡ ಇನ್ನಷ್ಟು ಮತ್ತಷ್ಟು ಅನ್ನೋ ಹಾಗೆ ಕ್ಯೂರಿಯೋಸಿಟಿ (Curiosity) ಮೂಡಿಸುತ್ತಲೇ ಇವೆ. ಹರಿದಾಡುತ್ತಿರೋ ಸುದ್ದಿ ಕೂಡ ಇಂಟ್ರಸ್ಟಿಂಗ್ ಆಗಿಯೇ ಇದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್ ಕೂಡ ಈ ಚಿತ್ರದ ಬಗ್ಗೆ ಅಷ್ಟೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್ ಅಂತಲೂ ಬೇಜಾನ್ ವೈರಲ್ ಆಗಿದೆ. ಇನ್ನುಳಿದಂತೆ ಈಗೀನ ಸುದ್ದಿಯ ಇನ್ನಷ್ಟು ವಿಷಯ ಇಲ್ಲಿದೆ ಓದಿ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನದ ಕೆಡಿ ಚಿತ್ರಕ್ಕೆ ಆ ನಟಿ ಬರ್ತಾರೆ?
ಕನ್ನಡದ ಕೆಡಿ ಸಿನಿಮಾ ಭಾರೀ ಕ್ರೇಜ್ ಕ್ರಿಯೇಟ್ ಮಾಡಿದೆ. ಒಂದೇ ಒಂದು ಟೈಟಲ್ ಟೀಸರ್ ಭಾರೀ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಮೂಲಕ ಪ್ರೇಕ್ಷಕರಿಗೆ ಇನ್ನಿಲ್ಲದಂತೆ ಕುತೂಹಲ ಕೂಡ ಮೂಡಿಸುತ್ತಲೇ ಇದ್ದಾರೆ.
ಧ್ರುವ ಸರ್ಜಾ ಅಭಿನಯದ ಈ ಚಿತ್ರಕ್ಕೆ ಡೈರೆಕ್ಟರ್ ಜೋಗಿ ಪ್ರೇಮ್ ಡೈರೆಕ್ಷನ್ ಮಾಡುತ್ತಿದ್ದಾರೆ. ಆದರೆ ಎಲ್ಲೂ ತಮ್ಮ ಈ ಚಿತ್ರದ ಬಗ್ಗೆ ಏನೂ ಬಿಟ್ಟುಕೊಟ್ಟಿಲ್ಲ. ಡೈರೆಕ್ಟರ್ ಜೋಗಿ ಪ್ರೇಮ್ ಹಾಗೇ ಅಲ್ವೇ? ತಮ್ಮ ಚಿತ್ರದ ಕುರಿತು ಇನ್ನಿಲ್ಲದಂತೆ ಕ್ಯೂರಿಯೋಸಿಟಿ ಕ್ರಿಯೇಟ್ ಮಾಡುತ್ತಾರೆ. ಕೆಡಿ ವಿಚಾರದಲ್ಲಿ ಅದು ಮುಂದುವರೆದಿದೆ.
ಕನ್ನಡಕ್ಕೆ ಮತ್ತೆ ಬರ್ತಾರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ?
ಜೋಗಿ ಪ್ರೇಮ್ ತಮ್ಮ ಈ ಕೆಡಿ ಚಿತ್ರದ ಮೂಲಕ ಹೊಸದನ್ನೇ ಮಾಡೋಕೆ ಹೊರಟ್ಟಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಚಿತ್ರದಲ್ಲಿ ಬಾಲಿವುಡ್ ನ ನಾಯಕ ನಟ ಸಂಜಯ್ ದತ್ ಕೂಡ ಅಭಿನಯಿಸ್ತಾರೆ ಅನ್ನೋ ಸುದ್ದಿ ಇದೆ. ಆದರೆ ಡೈರೆಕ್ಟರ್ ಜೋಗಿ ಪ್ರೇಮ್ ಇಲ್ಲಿವರೆಗೂ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ.
ಕೆಡಿ ಚಿತ್ರದ ಈಗೀನ ವೈರಲ್ ನ್ಯೂಸ್ ಏನ್ ಗೊತ್ತೇ? ಹೌದು, ಕನ್ನಡಕ್ಕೆ ಕೆಡಿ ಚಿತ್ರದ ಮುಖಾಂತರ ಶಿಲ್ಪಾ ಶೆಟ್ಟಿ ಮತ್ತೆ ಬರ್ತಿದ್ದಾರೆ ಅನ್ನೋ ಸುದ್ದಿ ಇದೆ. ಇದರಲ್ಲಿ ಶಿಲ್ಪಾ ಶೆಟ್ಟಿ ಪಾತ್ರ ಹೇಗಿರುತ್ತದೆ ಅನ್ನೋ ಕುತೂಹಲ ಕೂಡ ಈಗಲೇ ಮೂಡಿದೆ.
ಡೈರೆಕ್ಟರ್ ಜೋಗಿ ಪ್ರೇಮ್ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಇಲ್ವೇ?
ಮಾಲಾಶ್ರೀ ಪುತ್ರಿ ರಾಧನಾ ರಾಮ್ ಕೂಡ ಈ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಜೋಡಿ ಆಗುತ್ತಿದ್ದಾರೆ. ಹಾಗೇನೆ ಶಿಲ್ಪಾ ಶೆಟ್ಟಿ ಕೂಡ ಈ ಚಿತ್ರದಲ್ಲಿ ಇರುತ್ತಾರೆ ಅನ್ನೋ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಡೈರೆಕ್ಟರ್ ಜೋಗಿ ಪ್ರೇಮ್ ಎಲ್ಲೂ ಈ ಕುರಿತು ಹೇಳಿಕೊಂಡೇ ಇಲ್ಲ. ಈ ಬಗ್ಗೆ ಈಗಲೂ ಏನೂ ಹೇಳೋಕೆ ಇಷ್ಟಪಡ್ತಿಲ್ಲ ಅಂತಲೇ ಹೇಳಬಹುದು.
ಶಿಲ್ಪಾ ಶೆಟ್ಟಿ ಈ ಹಿಂದೇನೆ ಮೂರು ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪ್ರೀತ್ಸೋದ ತಪ್ಪಾ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಬಂದ್ರು. ಇದಾದ್ಮೇಲೆ ಒಂದಾಗೋಣ ಬಾ ಸಿನಿಮಾದಲ್ಲೂ ಶಿಲ್ಪಾ ಶೆಟ್ಟಿ ಇದ್ದರು. ಆಟೋ ಶಂಕರ್ ಚಿತ್ರದಲ್ಲಿ ಉಪ್ಪಿ ಜೊತೆಗೂ ಶಿಲ್ಪಾ ಶೆಟ್ಟಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Nenapirali Prem's Daughter: ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನೆನಪಿರಲಿ ಪ್ರೇಮ್ ಮಗಳು! ಯಾವ ಸಿನಿಮಾ ಗೊತ್ತಾ?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗೆ ಶಿಲ್ಪಾ ಶೆಟ್ಟಿ ಅಭಿನಯಸಿದ್ರೇ, ಅಲ್ಲಿಗೆ ಕನ್ನಡಕ್ಕೆ ನಾಲ್ಕನೆ ಬಾರಿ ಶಿಲ್ಪಾ ಶೆಟ್ಟಿ ಬಂದಿರೋ ಹಾಗೆ ಆಗುತ್ತದೆ. ಆದರೆ ಅಧಿಕೃತವಾಗಿ ಎಲ್ಲೂ ಈ ಬಗ್ಗೆ ಮಾಹಿತಿ ಹೊರ ಬಂದಿಲ್ಲ.
ಕಿಡಿ ಇಲ್ಲದೇ ಹೊಗೆ ಆಡೋದಿಲ್ಲ ಅನ್ನೋ ಮಾತಿದೆ. ಶಿಲ್ಪಾ ಶೆಟ್ಟಿ ಕನ್ನಡಕ್ಕೆ ಬರ್ತಿರೋ ಸುದ್ದಿ ನಿಜವೂ ಆಗಿರಬಹುದು. ವೇಟ್ ಮಾಡಿ ನೋಡೋಣ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ