Shenaz Treasury: ವಿಚಿತ್ರ ಕಾಯಿಲೆಗೆ ತುತ್ತಾದ ಬಾಲಿವುಡ್​ ನಟಿ, ಯಾರ ಮುಖವೂ ನೆನಪಿರುವುದಿಲ್ಲವಂತೆ!

ನಟಿ ಶೆನಾಜ್ ಟ್ರೆಜರಿ (Shenaz Treasury) ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾಯಿಲೆಯೊಂದಕ್ಕೆ ತುತ್ತಾಗಿದ್ದಾರೆ. ಈ ಕುರಿತು ಸ್ವತಃ ಶೆನಾಜ್ ಟ್ರೆಜರಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾನು 'ಪ್ರೊಸೊಪಾಗ್ನೋಸಿಯಾ' (Prosopagnosia) ನಿಂದ ಬಳಲುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ಶೆನಾಜ್ ಟ್ರೆಜರಿ

ಶೆನಾಜ್ ಟ್ರೆಜರಿ

  • Share this:
ಬಾಲಿವುಡ್​ ಎಂದಾಕ್ಷಣ ಒಂದು ಕ್ಷಣ ಆ ರಂಗಿನ ಲೋಕವೇ ನೆನಪಾಗುತ್ತದೆ. ಈ ರಂಗಿನ ಲೋಕದಲ್ಲಿ ಮಿಂಚಲು ಬಂದಿದ್ದ ಖ್ಯಾತ ನಟಿಯೊಬ್ಬರು ಇದೀಗ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೌದು, 2003ರಲ್ಲಿ ಶಾಹಿದ್ ಕಪೂರ್ (Shahid Kapoor) ಅವರ 'ಇಷ್ಕ್ ವಿಷ್ಕ್' (Ishq Vishk) ಚಿತ್ರದ ಮೂಲಕ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿದ ನಟಿ ಶೆನಾಜ್ ಟ್ರೆಜರಿ (Shenaz Treasury) ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾಯಿಲೆಯೊಂದಕ್ಕೆ ತುತ್ತಾಗಿದ್ದಾರೆ. ಈ ಕುರಿತು ಸ್ವತಃ ಶೆನಾಜ್ ಟ್ರೆಜರಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾನು 'ಪ್ರೊಸೊಪಾಗ್ನೋಸಿಯಾ' (Prosopagnosia) ನಿಂದ ಬಳಲುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯಿಂದಾಗಿ ಯಾರ ಮುಖವನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ನಟಿ ಹೇಳಿದ್ದಾರೆ.

ವಿಚಿತ್ರ ಕಾಯಿಲೆಗೆ ತುತ್ತಾದ ಬಾಲಿವುಡ್​ ನಟಿ:

ಶೆನಾಜ್ ತನ್ನ ಇನ್ಸ್ಟಾಗ್ರಾಮ್ ಕಥೆಯಲ್ಲಿ ತನ್ನ ಅನಾರೋಗ್ಯದ ಬಗ್ಗೆ ಹೇಳುವ ಹಲವಾರು ಪೋಸ್ಟ್ ಗಳನ್ನು ಬರೆದುಕೊಂಡಿದ್ದಾರೆ. ತಮ್ಮ ಅನಾರೋಗ್ಯವನ್ನು ಅಭಿಮಾನಿಗಳಿಗೆ ವಿವರಿಸುತ್ತಾ, "ನಾನು ಪ್ರೊಸೊಪಾಗ್ನೋಸಿಯಾ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ಎಲ್ಲಾ ಮುಖಗಳನ್ನು ಏಕೆ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಈಗ ಅರ್ಥವಾಗಿದೆ. ಇದೊಂದು ಅಸ್ವಸ್ಥತೆ. ಇದನ್ನು ಮುಖ ಕುರುಡುತನ ಎಂದೂ ಕರೆಯುತ್ತಾರೆ. ಇದರರ್ಥ ನೀವು ಜನರ ಮುಖಗಳನ್ನು ಗುರುತಿಸುವುದಿಲ್ಲ. ಅವಳ ಮುಖವನ್ನೂ ಗುರುತಿಸುವುದಿಲ್ಲ ಆದರೆ ಧ್ವನಿಗಳನ್ನು ಗುರುತಿಸು ಸಾಮರ್ಥ್ಯವಿದೆ‘ ಎಂದು ಅವರು ಹೇಳಿದ್ದಾರೆ.

ಪ್ರೊಸೊಪಾಗ್ನೋಸಿಯಾದ ಲಕ್ಷಣಗಳು:

ನಟಿ ತನ್ನ ಎರಡನೇ Instagram ಸ್ಟೋರಿಯಲ್ಲಿ ಪ್ರೊಸೊಪಾಗ್ನೋಸಿಯಾದ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿಸಿದ್ದು, "ಈ ಕಾಯಿಲೆಯಿಂದ ಬಳಲುತ್ತಿರುವ ನಂತರ, ಜನರು ತಮ್ಮ ಆಪ್ತ ಸ್ನೇಹಿತರು ಅಥವಾ ಕುಟುಂಬದ ಮುಖಗಳನ್ನು ಗುರುತಿಸುವುದಿಲ್ಲ. ಹೌದು ಇದು ನಾನೇ. ಅವರನ್ನು ನೆನಪಿಸಿಕೊಳ್ಳಲು ನನಗೆ ಕೆಲವು ನಿಮಿಷಗಳು ಬೇಕಾಗುತ್ತವೆ. ಟಿವಿ ಅಥವಾ ಚಲನಚಿತ್ರಗಳ ಪಾತ್ರಗಳು ಒಂದೇ ರೀತಿ ನೋಡಿದರೂ ಅವರನ್ನು ಗುರುತಿಸುವುದಿಲ್ಲ‘ ಎಂದು ನಟಿ ಬಹಿರಂಗಪಡಿಸಿದ್ದಾರೆ. ಇದು ಮೆದುಳಿನ ಸಮಸ್ಯೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pooja Hegde: ತನ್ನ ವೃತ್ತಿ ಜೀವನದ ಕೆಟ್ಟ ಸಿನಿಮಾ ಯಾವುದೆಂದು ತಿಳಿಸಿದ ಪೂಜಾ, ಶಾಕಿಂಗ್ ಕಾಮೆಂಟ್ ಮಾಡಿದ ಟಾಲಿವುಡ್​ ಬ್ಯೂಟಿ

ವೈದ್ಯಲೋಕ ಏನು ಹೇಳುತ್ತದೆ:

ಇನ್ನು, ಈ ಕಾಯಿಲೆ ಕುರಿತು ಈವರೆಗೂ ಯಾವುದೇ ಸ್ಪಷ್ಟ ಮೆಡಿಸಿನ್ ಅಥವಾ ಚಿಕಿತ್ಸೆಗಳು ಇಲ್ಲವೆಂದು ಹೇಳಲಾಗುತ್ತದೆ. ಈ ಕುರಿತು ನರವಿಜ್ಞಾನಿ ಆಲಿವರ್ ಸಾಕ್ಸ್ ಅವರ ಪುಸ್ತಕದ ಪ್ರಕಾರ , ಇದು ಅಪರೂಪದಲ್ಲೇ ಅಪರೂಪದ ಕಾಯಿಲೆಯಾಗಿದ್ದು, ಸುಮಾರು 50 ಜನರಲ್ಲಿ ಒಬ್ಬರು ಈ ವಿಚಿತ್ರ ಕಾಯಿಲೆಯ ವಿವಿಧ ಹಂತಗಳಲ್ಲಿ ಬಳಲುತ್ತಿದ್ದಾರೆಂದು ನಂಬಲಾಗಿದೆ. ವೈದ್ಯರು ಕೂಡ ಈ ಸ್ಥಿತಿಯ ಬಗ್ಗೆ ವಿರಳ ಮಾಹಿತಿ ಹೊಂದಿದ್ದಾರೆ. ಆದರೆ ಇದು ಜನ್ಮದತ್ತವಾಗಿ ಅಥವಾ ಮೆದುಳಿನ ಒಂದು ಭಾಗದಲ್ಲಿನ ಹಾನಿಯಿಂದ ಉಂಟಾಗುತ್ತದೆ ಎಂದು ವೈದ್ಯಲೋಕ ನಂಬಿದೆ.

ಇದನ್ನೂ ಓದಿ: Vikram: ಕನ್ನಡದಲ್ಲೂ ನೋಡಿ ಕಮಲ್ ಹಾಸನ್ ‘ವಿಕ್ರಮ್‘ ಚಿತ್ರ, OTT ರಿಲೀಸ್ ಡೇಟ್​ ಅನೌನ್ಸ್

ಇಂದು ಶೆನಾಜ್ ಜನ್ಮದಿನ:

ಹೌದು, ಇಂದು ನಟಿ ಶೆನಾಜ್ ಅವರ ಜನ್ಮದಿನ. ಅವರು ಇಂದು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ತಮ್ಮ ಕಾಯಿಲೆ ಬಗ್ಗೆ ನಟಿ ಪೋಸ್ಟ್ ಮಾಡುತ್ತಿದ್ದಂತೆ, ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಇದರಿಂದಾಗಿ ಶೆನಾಜ್ ಬಾಲಿವುಡ್‌ನಿಂದ ಬಹಳ ಸಮಯದಿಂದ ದೂರವಾಗಿದ್ದರು, ಆದರೆ ಅವರು ತಮ್ಮ ಸುಂದರವಾದ ಫೋಟೋಗಳು ಮತ್ತು ವೀಡಿಯೊಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಶೆನಾಜ್ ಇತ್ತೀಚಿನ ದಿನಗಳಲ್ಲಿ ಪ್ರವಾಸ ಲೇಖನಗಳನ್ನು ಬರೆಯುತ್ತಾರೆ. ಅವರು ಈಗ ಟ್ರಾವೆಲ್ ವ್ಲಾಗರ್ ಆಗಿ ಪ್ರಸಿದ್ಧರಾಗಿದ್ದಾರೆ.
Published by:shrikrishna bhat
First published: