Sara Ali Khan: ಬರೀ ಸಿನಿಮಾದಿಂದ ಮಾತ್ರ ಹಣ ಸಂಪಾದಿಸ್ತಿಲ್ಲ ಸಾರಾ.. ಬೇರೆ ಕಡೆಯಿಂದಲೂ ಬರುತ್ತೆ ಕೋಟಿ ಕೋಟಿ!

ನಟಿಯ ಬಗ್ಗೆ ಇನ್ನೊಂದು ವಿಷಯ ಬಹಿರಂಗವಾಗಿದೆ ನೋಡಿ. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಬಹಿರಂಗಪಡಿಸದ ಮೊತ್ತವನ್ನು ಕ್ಯಾಶುವಲ್ ವೇರ್ ಮತ್ತು ಉಡುಪುಗಳ ಬ್ರ್ಯಾಂಡ್ ಆಗಿರುವ ‘ದಿ ಸೋಲ್ಡ್ ಸ್ಟೋರ್’ ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು  ಬಹಿರಂಗಗೊಂಡಿದೆ.

ಸಾರಾ ಅಲಿ ಖಾನ್​

ಸಾರಾ ಅಲಿ ಖಾನ್​

  • Share this:
ಬಾಲಿವುಡ್ ನಟ ಸೈಫ್ ಅಲಿ ಖಾನ್ (Bollywood Actor Saif Ali Khan) ಮತ್ತು ನಟಿ ಅಮೃತಾ ಸಿಂಗ್ (Amritha Singh) ಅವರ ಪುತ್ರಿಯಾಗಿರುವ ಮತ್ತು ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಕಳೆದ ವಾರವಷ್ಟೇ ಅವರಿಗೆ ಅಭಿಮಾನಿಗಳು ಟ್ರೋಲ್ (Troll) ಮಾಡಿದ್ದು ಮತ್ತು ಅದಕ್ಕೆ ಸಾರಾ ಖಡಕ್ ಆಗಿ ಉತ್ತರ ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ‘ಸಾರಾ ಅಲಿ ಖಾನ್ ಅವರು ಸುಮ್ಮನಿರದೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ‘ಆಸ್ಕ್ ಮಿ ಎನಿಥಿಂಗ್’ (Ask Me Anything) ಸೆಷನ್ ಅನ್ನು ಶುರು ಮಾಡಿ ನೀವು ನನಗೆ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂದು ಅಭಿಮಾನಿಗಳಿಗೆ ಹೇಳಿ ಬರೆದುಕೊಂಡಿದ್ದರು. ಆಗ ಅಭಿಮಾನಿಗಳು ತಮ್ಮ ಪ್ರಶ್ನೆಗಳ ಸುರಿಮಳೆಯನ್ನು ಶುರು ಮಾಡಿದ್ದು, ನಿಮ್ಮ ಶಾಯರಿಗಳು ಕೆಟ್ಟದಾಗಿ ಇರುತ್ತೆ ಎಂದು ಹೇಳಿಯೇ ಬಿಟ್ಟರು.

ಇದನ್ನು ಕೇಳಿ ಸಾರಾಗೆ ತುಂಬಾನೇ ಕೋಪ ಬಂದು “ಆ ಶಾಯರಿಯಿಂದ ನಾನು ನಿಮ್ಮಂತಹ ಜನರನ್ನು ಹುಚ್ಚನನ್ನಾಗಿ ಮಾಡುತ್ತೇನೆ. ನಿಮ್ಮ ಈ ರೀತಿಯ ಕಾಮೆಂಟ್‌ಗಳು ನನಗೆ ಯಾವುದೇ ನೋವನ್ನು ಉಂಟು ಮಾಡುವುದಿಲ್ಲ” ಎಂದು ಹೇಳಿದ್ದರು.

ಸಾರಾ ಅಲಿ ಖಾನ್ ಹಣ ಹೂಡಿಕೆ ಮಾಡಿದ್ದು ಎಲ್ಲಿ ಗೊತ್ತಾ?

ಅರೆ ಈಗೇಕೆ ಈ ಮಾತು ನೆನಪಿಸಿಕೊಂಡಿದ್ದು ಅಂತೀರಾ..? ಈಗ ಈ ನಟಿಯ ಬಗ್ಗೆ ಇನ್ನೊಂದು ವಿಷಯ ಬಹಿರಂಗವಾಗಿದೆ ನೋಡಿ. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಬಹಿರಂಗಪಡಿಸದ ಮೊತ್ತವನ್ನು ಕ್ಯಾಶುವಲ್ ವೇರ್ ಮತ್ತು ಉಡುಪುಗಳ ಬ್ರ್ಯಾಂಡ್ ಆಗಿರುವ ‘ದಿ ಸೋಲ್ಡ್ ಸ್ಟೋರ್’ ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು  ಬಹಿರಂಗಗೊಂಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಎಲಿವೇಶನ್ ಕ್ಯಾಪಿಟಲ್ ನೇತೃತ್ವದ ಸೀರಿಸ್‌-ಬಿ ಫಂಡಿಂಗ್ ಸುತ್ತಿನಲ್ಲಿ ಸ್ಟಾರ್ಟ್ ಅಪ್ 75 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು.

‘ದಿ ಸೋಲ್ಡ್​ ಸೋರ್​​’ನಲ್ಲಿ ಹೂಡಿಕೆ ಮಾಡಿರುವ ಸಾರಾ!

ನಟಿ ಸಾರಾ ಅವರ ಹೂಡಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಸೋಲ್ಡ್ ಸ್ಟೋರ್ ಸಹ-ಸಂಸ್ಥಾಪಕ ರೋಹಿನ್ ಸಂಟಾನಿ ಅವರು "ಅವರ ಪ್ರಯೋಗಾತ್ಮಕ ಸ್ಟೈಲಿಂಗ್ ನಮ್ಮ ಬ್ರ್ಯಾಂಡ್ ಇಮೇಜ್ ಅನ್ನು ಇನ್ನಷ್ಟು ಉತ್ತಮವಾಗಿ ಪ್ರತಿಬಿಂಬಿಸುತ್ತದೆ. ನಮಗೆ ಇವರಿಗಿಂತಲೂ ಉತ್ತಮವಾದ ಹೂಡಿಕೆದಾರರು ಮತ್ತು ಪಾಲುದಾರರು ಸಿಗುವುದು ಸಾಧ್ಯವಿಲ್ಲ. ಈ ಸಹಯೋಗವು ಇನ್ನೂ ಮುಂದೆ ದೊಡ್ಡ ಮಟ್ಟದ ವ್ಯವಹಾರಕ್ಕೆ ದಾರಿ ಮಾಡಿಕೊಡಲಿ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: ಅಬ್ಬಬ್ಬಾ ಲಾಟ್ರಿ.. `ವಂಡರ್​ ವುಮೆನ್​’ ಜೊತೆ ಹಾಲಿವುಡ್​ ಸಿನಿಮಾದಲ್ಲಿ ನಟಿಸ್ತಿದ್ದಾರೆ ರೀ ಆಲಿಯಾ!

ಈ ಸೋಲ್ಡ್ ಸ್ಟೋರ್ ಬ್ರ್ಯಾಂಡ್‌ನೊಂದಿಗಿನ ತನ್ನ ಒಡನಾಟದ ಬಗ್ಗೆ ಮಾತಾಡುತ್ತಾ ನಟಿ ಸಾರಾ ಅವರು “ಅಲ್ಪಾವಧಿಯಲ್ಲಿಯೇ ದಿ ಸೋಲ್ಡ್ ಸ್ಟೋರ್ (ಟಿಎಸ್ಎಸ್) ಕ್ಯಾಶುಯಲ್ ವೇರ್ ವ್ಯವಹಾರದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ” ಎಂದು ನಟಿ ಹೇಳಿದರು. "ಒಬ್ಬ ಉತ್ಕಟ ಪಾಪ್-ಸಂಸ್ಕೃತಿ ಪ್ರೇಮಿಯಾಗಿರುವುದರಿಂದ ಮತ್ತು ಸ್ವಂತಿಕೆ ಹಾಗೂ ಕಂಫರ್ಟ್‌ನಲ್ಲಿ ದೃಢವಾದ ನಂಬಿಕೆಯುಳ್ಳ ಮತ್ತು ನನಗೆ ಫ್ಯಾಷನ್‌ನಷ್ಟೇ ಮುಖ್ಯವಾಗಿರುವುದರಿಂದ, ನಾನು ಈ ಬ್ರ್ಯಾಂಡ್‌ನಲ್ಲಿ ಹೂಡಿಕೆ ಮಾಡುವುದು ತುಂಬಾನೇ ಸೂಕ್ತ ಎಂದು ನನಗೆ ಅನ್ನಿಸಿತು. ನಾನು ಟಿಎಸ್ಎಸ್ ಕುಟುಂಬದ ಭಾಗವಾಗಿರಲು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ಪ್ರಭಾಸ್​ ಸಿನಿಮಾ​.. ಮೆಟಾವರ್ಸ್​ನಲ್ಲಿ ರಾಧೆ-ಶ್ಯಾಮ್​ ಟ್ರೈಲರ್​ ಲಾಂಚ್​!

ಬಟ್ಟೆ ಮೂಲಕವೂ ಸಂಪಾದಿಸ್ತಿದ್ದಾರೆ ಸಾರಾ ಖಾನ್​!

ಪ್ರಾಥಮಿಕವಾಗಿ ಆನ್‌ಲೈನ್ ಬ್ರ್ಯಾಂಡ್ ಆಗಿರುವ ಟಿಎಸ್ಎಸ್‌ನ ಪ್ರಸ್ತುತ ಉತ್ಪನ್ನ ಪೋರ್ಟ್ ಫೋಲಿಯೋ ಪುರುಷರು ಮತ್ತು ಮಹಿಳೆಯರಿಗೆ ಎಲ್ಲಾ ರೀತಿಯ ಉಡುಪುಗಳು, ಒಳ ಉಡುಪುಗಳು ಮತ್ತು ಆ್ಯಕ್ಟೀವ್‌ ವೇರ್ ಅನ್ನು ಒಳಗೊಂಡಿದೆ. ಇದು ಡಿಸ್ನಿ, ವಾರ್ನರ್ ಬ್ರದರ್ಸ್, ಡಬ್ಲ್ಯೂಡಬ್ಲ್ಯೂಇ, ಐಪಿಎಲ್ ಮತ್ತು ವಯಾಕಾಮ್18 ಸೇರಿದಂತೆ 180 ಕ್ಕೂ ಹೆಚ್ಚು ಪರವಾನಗಿಗಳನ್ನು ಹೊಂದಿದೆ.
Published by:Vasudeva M
First published: