ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ಸೈರಾ ಬಾನು

ಸೈರಾ ಬಾನು ಅವರ ಆರೋಗ್ಯ ಸ್ಥಿರವಾಗಿದ್ದು, ರಕ್ತದೊತ್ತಡ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲವಂತೆ. ಆಕ್ಸಿಜನ್​ ಮಟ್ಟ ಇನ್ನೂ ಕಡಿಮೆಯೇ ಇದೆಯಂತೆ. ಇದರಿಂದಾಗಿ ಸೈರಾ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದೂ ಹೇಳಲಾಗುತ್ತಿದೆ.

ನಟ ದಿಲೀಪ್ ಕುಮಾರ್​ ಜತೆ ಸೈರಾ ಬಾನು

ನಟ ದಿಲೀಪ್ ಕುಮಾರ್​ ಜತೆ ಸೈರಾ ಬಾನು

  • Share this:
ಬಾಲಿವುಡ್​ನ (Bollywood) ಟ್ರಾಜಿಕ್​ ಹೀರೋ ದಿಲೀಪ್ ಕುಮಾರ್​ (Dilip Kumar)ಅವರು ಕೊನೆಯುಸಿರೆಳೆಯುವ ತನಕ ಜೊತೆಗಿದ್ದ ಅವರ ಮಡದಿ ಸೈರಾ ಬಾನು (Saira Banu) ಅವರ ಆರೋಗ್ಯ ಹದಗೆಟ್ಟಿದೆ. ಅವರನ್ನು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ದಿಲೀಪ್ ಕುಮಾರ್ ಅವರು ಅಗಲಿ ಎರಡು ತಿಂಗಳ ನಂತರ ಸೈರಾ ಬಾನು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ವರದಿಗಳ ಪ್ರಕಾರ ಕಳೆದ ಮೂರು ದಿನಗಳಿಂದ ಸೈರಾ ಬಾನು ಅವರು ಹಿಂದೂಜಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ರಕ್ತದೊತ್ತಡದಲ್ಲಿ ಏರುಪೇರಾದ ಕಾರಣದಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸೈರಾ ಬಾನು ಅವರ ಆರೋಗ್ಯ ಸ್ಥಿರವಾಗಿದ್ದು, ರಕ್ತದೊತ್ತಡ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲವಂತೆ. ಆಕ್ಸಿಜನ್​ ಮಟ್ಟ ಇನ್ನೂ ಕಡಿಮೆಯೇ ಇದೆಯಂತೆ. ಇದರಿಂದಾಗಿ ಸೈರಾ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಸದ್ಯಕ್ಕೆ ವೈದ್ಯರು ಅಗತ್ಯ ಪರೀಕ್ಷೆಗಳನ್ನು ಮಾಡಿಸುತ್ತಿದ್ದಾರಂತೆ. ಪರೀಕ್ಷೆಗಳ ವರದಿ ಬಂದ ನಂತರವಷ್ಟೇ ಆರೋಗ್ಯ ಹದಗೆಡಲು ಕಾರವೇನೆಂದು ಸ್ಪಷ್ಟವಾಗಿ ತಿಳಿಯಲಿದೆಯಂತೆ.

Dilip Kumar 2nd marriage with Hyderabads Asma Rahman both retune to their first marriage
ಅಸ್ಮಾ ಖಾನ್​, ಸಾಹಿರಾ ಬಾನು ಜೊತೆ ದಿಲೀಪ್​ ಕುಮಾರ್​


76 ವರ್ಷದ ನಟಿ ಸೈರಾ ಬಾನು 54 ವರ್ಷದಿಂದ ಪತಿ ದಿಲೀಪ್​ ಕುಮಾರ್ ಅವರ ಜತೆಯಲ್ಲೇ ಅವರ ನೆರಳಿನಿಂತೆ ಇದ್ದರು. ಪತಿಯ ಅಗಲಿಕೆಯ ನಂತರ ಸೈರಾ ತುಂಬಾ ಒಂಟಿಯಾಗಿದ್ದಾರೆ. ಎರಡು ತಿಂಗಳ ಮೊದಲು ಅಂದರೆ ಜುಲೈ 7ರಂದು ದಿಲೀಪ್ ಕುಮಾರ್​ ಅವರು ಇಹಲೋಕ ತ್ಯಜಿಸಿದ್ದರು. ದಿಲೀಪ್ ಕುಮಾರ್​ ಅವರ ಅಗಲಿಕೆ ನಂತರ ಸೈರಾ ಬಾನು ಏಕಾಂಗಿಯಾಗಿದ್ದು, ಅವರು ಬೇರೆಯವರ ಜತೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲವಂತೆ. ಅಭಿಮಾನಿಗಳು ಹಿರಿಯ ನಟಿ ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಮರಳಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

ನಟಿ ಸಾಹಿರಾ ಬಾನು , ದಿಲೀಪ್​ ಕುಮಾರ್​ ಅವರದ್ದು 55 ವರ್ಷಗಳ ದಾಂಪತ್ಯ. ಸೈರಾ ಹಾಗೂ ದಿಲೀಪ್​ ಅವರ ಮಧ್ಯೆ 22 ವರ್ಷಗಳ ವಯಸ್ಸಿನ ಅಂತರವಿದ್ದರೂ ಪ್ರೀತಿಯಿಂದ ಬದುಕಿದ್ದರು. ದಿಲೀಪ್​ ಅವರು 98 ವರ್ಷ ಜೀವನ ಸವೆಸಿದ್ದರಲ್ಲಿ ಸೈರಾ ಪಾತ್ರ ದೊಡ್ಡದಿದೆ. ಇಂಥ ಮಾದರಿ ದಾಂಪತ್ಯದ ಮಧ್ಯೆಯೂ ಒಂದು ಬಿರುಗಾಳಿ ಎದ್ದಿತ್ತು.

1966ರ ಅ.11ರಂದು ತಮಗಿಂತ 22 ವರ್ಷ ಚಿಕ್ಕವರಾದ ಸೈರಾರನ್ನು ದಿಲೀಪ್​ ಕುಮಾರ್​ ಮದುವೆಯಾಗಿದ್ದರು. ಅನೋನ್ಯವಾಗಿದ್ದಾಗಲೇ ದಿಲೀಪ್​ ಅವರು 1981ರಲ್ಲಿ ಗುಟ್ಟಾಗಿ 2ನೇ ಮದುವೆಯಾಗಿದ್ದರು. ಹೈದ್ರಾಬಾದ್​ ಮೂಲದ ಅಸ್ಮಾ ಖಾನ್​ ಎಂಬುವರೊಂದಿಗೆ ನಿಖಾ ಮಾಡಿಕೊಂಡಿದ್ದರು. ಅಸ್ಮಾ ಅವರಿಗೂ ಇದು 2ನೇ ಮದುವೆಯಾಗಿತ್ತು. 3 ಮಕ್ಕಳ ತಾಯಿಯಾಗಿದ್ದ ಅಸ್ಮಾ ಹೈದ್ರಾಬಾದ್​ನಲ್ಲಿ ಕ್ರಿಕೆಟ್​ ನೋಡುವಾಗ ಮೈದಾನದಲ್ಲಿ ದಿಲೀಪ್​ ಅವರಿಗೆ ಪರಿಚಯವಾಗಿದ್ದರು. ಪರಿಚಯ ಸಲಗೆಗೆ ತಿರುಗಿ ಏಕಾಏಕಿ ಗುಟ್ಟಾಗಿ ಮದುವೆಯಾಗಿ ಬಿಟ್ಟಿದ್ದರು.

ಇದನ್ನೂ ಓದಿ: Raghavendra: ಕೃಷ್ಣನ ವೇಷದಲ್ಲಿ ಮಿಂಚಿದ ಮಜಾ ಭಾರತದ ಅದ್ಭುತ ಪ್ರತಿಭೆ ರಾಗಿಣಿ

2ನೇ ಮದುವೆ ಮೂರೇ ವರ್ಷಗಳಿಗೆ ಮುರಿದು ಬಿದ್ದಿತ್ತು. ಅಸ್ಮಾ ಖಾನ್​ರಿಂದ ದಿಲೀಪ್​ ದೂರವಾಗಿದ್ದರು. ಈ ಬಗ್ಗೆ ದಿಲೀಪ್​ ಅವರು ಆತ್ಮಕಥೆಯಲ್ಲಿ ಬರೆದುಕೊಂಡಿದ್ದು, ಅದೊಂದು ವಿಷಯವನ್ನು ನಾನು ನನ್ನ ಜೀವನದಲ್ಲಿ ಮರೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. 2ನೇ ಮದುವೆ ನನ್ನ ಜೀವನದ ದೊಡ್ಡ ತಪ್ಪು ಎಂದು ಬರೆದುಕೊಂಡಿದ್ದಾರೆ. 2ನೇ ಮದುವೆ ಮುರಿದುಕೊಂಡ ದಿಲೀಪ್, ​ ಮೊದಲ ಪತ್ನಿ ಸೈರಾ ಬಾನು ಅವರ ಬಳಿ ಮರಳಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: